ಬೆಂಗಳೂರು: ಡಿಸೆಂಬರ್ನಲ್ಲಿ ಭಾರತದಲ್ಲಿ ಅನೇಕ ಪ್ರದೇಶದಲ್ಲಿ ತಾಪಮಾನ ಕುಸಿತಗೊಳ್ಳುತ್ತದೆ. ಈ ವೇಳೆ, ಏನಾದರೂ ತಿನ್ನಬೇಕು ಎಂಬ ಹಂಬಲ ಕೂಡ ಹೆಚ್ಚುತ್ತದೆ. ಚಳಿಗಾಲದಲ್ಲಿ ಸಂಜೆಯಲ್ಲಿ ಬಿಸಿ ಬಿಸಿಯಾದ ಪಾನೀಯಗಳು ಸೇವಿಸುವುದು ದೇಹಕ್ಕೆ ಹಿತ ಅನುಭವ ನೀಡುತ್ತದೆ. ಅದರಲ್ಲೂ ಮನೆಯ ಮೂಲೆಯಲ್ಲಿ ನಿಮ್ಮ ನೆಚ್ಚಿನ ಪಾನೀಯಗಳನ್ನು ಸೇವಿಸುವುದರ ಮುಂದೆ ಯಾವುದು ಸುಖ ಇರುವುದಿಲ್ಲ. ಕುಡಿಯುವ ಬಿಸಿ ಪಾನೀಯಗಳು ಮಾತ್ರವಲ್ಲದೇ ಕೆಲವು ಅಭ್ಯಾಸಗಳು ನಿಮಗೆ ಆರಾಮ ನೀಡುವ ಜೊತೆ ಆರೋಗ್ಯಕ್ಕೂ ಉತ್ತಮವಾಗಿರಬೇಕು. ಚಳಿಗಾಲದ ಋತುಮಾನದ ವಿರುದ್ಧ ನಿಮ್ಮನ್ನು ಕಾಪಾಡುವಲ್ಲಿ ಆಹಾರಗಳು ಪ್ರಮುಖವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಕೆಮ್ಮು ಮತ್ತು ನೆಗಡಿಯಂತಹ ಸಮಸ್ಯೆಗಳಿಂದ ದೂರವಿರುವುದು ಅವಶ್ಯ.
ಮಸಾಲಾ ಚಾಯ್: ಅನೇಕ ಮಂದಿಗೆ ಟೀ ಇಲ್ಲದೇ ದಿನವೇ ಸಾಗುವುದಿಲ್ಲ. ಅದರಲ್ಲೂ ಚಳಿಗಾಲದಲ್ಲಿ ಅದು ಸಾಮಾನ್ಯಕ್ಕಿಂತ ಮಸಾಲಾ ಟೀ ಆದರೆ, ಒಳ್ಳೆಯದು. ಭಾರತ ಮಸಾಲಾ ಪದಾರ್ಥಗಳಿಂದ ಮತ್ತು ತುಳಸಿ ಎಲೆಗಳಿಂದ ಈ ಚಹಾವನ್ನು ಮಾಡಿರುವ ಹಿನ್ನೆಲೆ ನಿಮ್ಮ ದೇಹವನ್ನು ಇದು ಬೆಚ್ಚಗಿರಿಸುವಲ್ಲಿ ಸಹಾಯ ಮಾಡುತ್ತದೆ.
ಹಳದಿ ಹಾಲು: ಹಳದಿ ಹಾಲು ಕೂಡ ನಿಮ್ಮನ್ನು ಬೆಚ್ಚಗಿರಿಸುವ ಜೊತೆಗೆ ದೇಹದ ರೋಗ ನಿರೋಧಕತೆ ಹೆಚ್ಚಿಸುತ್ತದೆ. ಅಲ್ಲದೇ, ಚಳಿಗಾಲದಲ್ಲಿ ಕಾಡುವ ಕೆಮ್ಮು, ಶೀತವನ್ನು ತಡೆಗಟ್ಟುತ್ತದೆ. ನೋವು ಕಡಿಮೆ ಮಾಡಿ, ದೇಹದ ಉಷ್ಣತೆ ಕಾಪಾಡುತ್ತದೆ.
ಕಾಶ್ಮೀರಿ ಖಹ್ವಾ: ಅನೇಕ ಪೋಷಕಾಂಶಗಳಿಂದ ಕೂಡಿದ, ರುಚಿಕರ ಪಾನೀಯ ಇದಾಗಿದೆ. ಚಳಿಗಾಲದಲ್ಲಿ ಅಗತ್ಯ ಕುಡಿಯುವ ಪಾನೀಯದಲ್ಲಿ ಇದು ಒಂದಾಗಿದೆ. ಇದು ಕೂಡ ಹಲವು ರುಚಿಗಳಲ್ಲಿ ಲಭ್ಯವಿದೆ. ಅವು ಏಲಕ್ಕಿ, ಚಕ್ಕೆ ಮತ್ತು ಕೇಸರಿ.
ರಸಂ: ಚಳಿ ಹೆಚ್ಚಿದಾಗ ಬಿಸಿ ಬಿಸಿಯಾಗಿ ಕೂಡವ ಪಾನೀಯ ಮತ್ತಷ್ಟು ರುಚಿಕರವಾಗಿದ್ದು, ನಿಮಗೆ ಉತ್ತಮ ಆರೋಗ್ಯ ನೀಡಬೇಕು ಎಂದರೆ, ರಸಂ ಸೇವಿಸಿ. ತೇಳುವಾದ ಮಸಾಲೆ, ಗಿಡಮೂಲಿಕೆಗಳ ಮಿಶ್ರಣದ ದಕ್ಷಿಣ ಭಾರತೀಯ ರಸಂ ಕೂಡ ಚಳಿಗಾಲದ ಸಮಸ್ಯೆಗಳಾದ ಶೀತ ಮತ್ತು ಜ್ವರದ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಸೂಪ್ಗಳು: ಚಳಿಗಾದಲ್ಲಿ ಸೂಪ್ಗಳು ನೀಡುವ ಅನುಭೂತಿ ಬೇರೆಯ ಮಟ್ಟದಲ್ಲೇ ಇರುತ್ತದೆ. ಬಿಸಿ ಬಿಸಿಯಾದ ಉಪ್ಪು, ಹುಳಿ, ಖಾರ ಮಿಶ್ರಿತ ಸೂಪ್ಗಳು ಬಾಯಿಚಪ್ಪರಿಸುವಂತೆ ಮಾಡುತ್ತದೆ. ಇದು ಕೂಡ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮಕ್ಕಳಿಗೆ ಹೆಚ್ಚಾಗಿ ಬ್ರೆಡ್ನಂತಹ ಬೇಕರಿ ತಿಂಡಿಗಳನ್ನು ತಿನ್ನಲು ಕೊಡ್ತೀರಾ ; ಹಾಗಾದರೆ ಎಚ್ಚರ!