ETV Bharat / sukhibhava

ಇದು ಎಕ್ಸಾಂ ಸಮಯ.. ಪರೀಕ್ಷೆ ಮುಂಚೆ ಚೆನ್ನಾಗಿ ನಿದ್ದೆ ಮಾಡಬೇಕೆಂಬುದಕ್ಕೆ ಇವೆ 6 ಕಾರಣ

ಪರೀಕ್ಷೆ ಸಮಯದಲ್ಲಿ ಅನೇಕರು ನಿದ್ದೆಗೆಟ್ಟು ಓದುತ್ತಾರೆ. ಈ ರೀತಿ ನಿದ್ದೆ ತೊರೆದು ಓದುವುದರಿಂದ ಆರೋಗ್ಯದ ಮೇಲೆ ಜೊತೆಗೆ ಪರೀಕ್ಷೆ ವೇಳೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

author img

By

Published : Mar 15, 2023, 3:43 PM IST

These are the 6 reasons why you should sleep well before the exam

ಪರೀಕ್ಷೆ ಸಮಯ ಎಂದರೆ ಅದು ಒತ್ತಡದ ಅವಧಿ ಎಂದರೂ ತಪ್ಪಾಗಲಾರದು. ಪರೀಕ್ಷೆಯ ಭಯ, ಒತ್ತಡಗಳನ್ನು ನಿಭಾಯಿಸಲು ಅನೇಕ ವೇಳೆ ಕೆಲವು ವಿದ್ಯಾರ್ಥಿಗಳು ವಿಫಲ ಕೂಡ ಆಗುತ್ತಾರೆ. ಇನ್ನು, ಈ ಪರೀಕ್ಷೆಯ ಒತ್ತಡದ ಜೊತೆಗೆ ಆರೋಗ್ಯವನ್ನು ಕಾಯ್ದುಕೊಳ್ಳುವುದು ಈ ಸಮಯದಲ್ಲಿ ಅತ್ಯಗತ್ಯವಾಗಿದೆ. ಎಲ್ಲ ರೀತಿಯ ಸಿದ್ಧತೆ ನಡೆಸಿ, ಆರೋಗ್ಯ ಹದಗೆಟ್ಟರೇ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಈ ಸಮಯದಲ್ಲಿ ವಿದ್ಯಾರ್ಥಿಗಳು ಉತ್ತಮ ನಿದ್ರೆ, ಆಹಾರ ಸೇವನೆಗೆ ಒತ್ತು ನೀಡಬೇಕು.

ಅದರಲ್ಲೂ ನಿದ್ರೆಯಂತೂ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಸಕಾರಾತ್ಮಕ ಪರಿಣಾಮ ಹೊಂದಿರುತ್ತದೆ. ಆದರೆ, ಅನೇಕರು ಈ ನಿದ್ದೆ ಆರೋಗ್ಯಕ್ಕೆ ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂಬುದನ್ನು ನಿರ್ಲಕ್ಷಿಸಿ, ಪ್ರಾಮುಖ್ಯತೆ ವಿಷಯವಾಗಿ ಪರಿಗಣಿಸುವುದಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಮಧ್ಯ ರಾತ್ರಿಯವರೆಗೆ ಎಚ್ಚರವಿರುವುದು, ಪಾಠಗಳ ಪುನರಾವರ್ತನೆ ಮಾಡುವುದರಿಂದ ಬೆಳಗ್ಗೆ ಪರೀಕ್ಷೆಗೆ ಸಹಾಯಕವಾಗುತ್ತದೆ ಎಂದು ಬಹುತೇಕರು ನಂಬಿರುತ್ತಾರೆ. ಆದರೆ, ಈ ರೀತಿ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪರೀಕ್ಷೆಗೆ ಒಂದು ತಿಂಗಳು ಬಾಕಿ ಇರುವ ಸಮಯದಿಂದಲೂ ವಿದ್ಯಾರ್ಥಿಗಳು ಉತ್ತಮ ನಿದ್ರೆ ಹೊಂದುವುದು ಅತ್ಯವಶ್ಯಕವಾಗಿದೆ.

ನಿದ್ದೆ ಅವಶ್ಯಕತೆ ಯಾಕೆ?

  • ನಿದ್ದೆಯ ಅವಧಿಗಳು ವಯಸ್ಸಿಗೆ ತಕ್ಕಂತೆ ವಿಭಿನ್ನವಾಗಿರುತ್ತದೆ. ಮಕ್ಕಳಿಗೆ ಹೆಚ್ಚಿನ ನಿದ್ದೆ ಅವಶ್ಯಕತೆ ಇದೆ. ಸಸಾಸರಿಯಾಗಿ 8ರಿಂದ 9ಗಂಟೆಗಳ ನಿದ್ದೆ ಉತ್ತಮವಾಗಿದ್ದು, ದೇಹದ ಕಾರ್ಯಚಟುವಟಿಕೆ ಕ್ರಿಯಾಶೀಲವಾಗಿಡಲು ಸಹಕಾರಿಯಾಗುತ್ತದೆ.
  • ಉತ್ತಮ ನಿದ್ರೆ, ಹಾರ್ಮೋನ್​ಗಳ ಸ್ಥಿರತೆಗೆ ಅವಶ್ಯವಾಗಿದೆ. ರಕ್ತದ ಸಕ್ಕರೆ ಮಟ್ಟ, ಇನ್ಸುಲಿನ್​ ಮಟ್ಟ, ಕೊಲೆಸ್ಟ್ರಾಲ್​, ಲೆಪ್ಟಿನ್​, ಮತ್ತು ಕೊರ್ಟಿಸೊಲ್​ ಮಟ್ಟ ಕಾಪಾಡಲು ಪ್ರಮುಖವಾಗಿದೆ. ಇದು ದೇಹದ ಕಾರ್ಯಚಟವಟಿಕೆಗೆ ಪ್ರಮುಖವಾದ ಹಾರ್ಮೊನ್​ಗಳಾಗಿದೆ.
  • ನಿದ್ದೆ ಕಡಿಮೆ ಮಾಡಿವುದರಿಂದ ಲೆಪ್ಟಿನ್​ ತೊಂದರೆಗೆ ಒಳಗಾಗುತ್ತದೆ. ಇದು ಹಸಿವಿನ ಹಾರ್ಮೊನ್​ ಅನ್ನು ಹೆಚ್ಚಿಸುವಂತೆ ಮಾಡುತ್ತದೆ. ಪರಿಣಾಮವಾಗಿ, ಅಧಿಕ ಹಸಿವಿನಿಂದಾಗಿ ಸಿಹಿ ಅಥವಾ ಉಪ್ಪಿನ ಆಹಾರ ತಿನ್ನಲು ಮನಸಾಗುತ್ತದೆ. ಪರಿಣಾಮ ತೂಕ ಹೆಚ್ಚಳಗೊಳ್ಳುತ್ತದೆ.
  • ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಣೆ ಮಾಡದಿದ್ದರೆ, ಇನ್ಸುಲಿನ್​ ಮಟ್ಟ ಹೆಚ್ಚಾಗುತ್ತದೆ. ಇದು ಸಣ್ಣ ವಯಸ್ಸಿನಲ್ಲೇ ಡಯಾಬೀಟಿಸ್​ಗೆ ಕಾರಣವಾಗುತ್ತದೆ.
  • ನಿದ್ರೆಯ ಕೊರತೆಯು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅನಾರೋಗ್ಯದ ಸ್ಥಿತಿಯಿಂದ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ
  • ಕಾರ್ಟಿಸೋಲ್​ ಮಟ್ಟವನ್ನು ಹೆಚ್ಚಳದಿಂದ ಅರಿವಿನ ಮತ್ತು ಸ್ಮರಣಾ ಶಕ್ತಿಯನ್ನು ಕುಗ್ಗಿಸುತ್ತದೆ. ಇದರಿಂದ ಗೊಂದಲ, ಮರೆಯುವಿಕೆಗೆ ಕಾರಣವಾಗುತ್ತದೆ. ಜೊತೆಗೆ ಆತಂಕ, ಭಯ, ಒತ್ತಡವನ್ನು ಹೆಚ್ಚಿಸುವಂತೆ ಮಾಡುತ್ತದೆ.

ಈ ಹಿನ್ನೆಲೆ ನಿದ್ದೆ ಎಂಬುದು ಆರೋಗ್ಯಕ್ಕೆ ಪ್ರಮುಖವಾಗಿದೆ. ಉತ್ತಮ ನಿದ್ರೆ ದೇಹದ ಸೆಲ್ಯುಲಾರ್ ಪುನರುತ್ಪಾದನೆ ಸಹಾಯ ಮಾಡುತ್ತದೆ. ಜೊತೆಗೆ, ದೇಹದ ಎಲ್ಲಾ ಅಂಗಗಳು ಮತ್ತು ವ್ಯವಸ್ಥೆಗಳು ಏಕರೂಪವಾಗಿ ಮತ್ತು ಸಾಧ್ಯವಾದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮಾನಸಿಕ ಸ್ಥಿತಿಯೊಂದಿಗೆ ಆರೋಗ್ಯಕರ ದೇಹವನ್ನು ಸೃಷ್ಟಿಸುತ್ತದೆ. ನಿದ್ರೆ ಬೆಳವಣಿಗೆ, ಅಭಿವೃದ್ಧಿ ಮತ್ತು ಪರೀಕ್ಷೆಗಳು ಸೇರಿದಂತೆ ಜೀವನದ ಎಲ್ಲಾ ಸವಾಲುಗಳನ್ನು ಎದುರಿಸಲು ನಿರ್ಣಾಯಕವಾಗಿದೆ.

ಇದನ್ನೂ ಓದಿ: ಮಿದುಳಿನ ಕೆಲಸ ಚುರುಕಾಗಲು ಸಹಾಯ ಮಾಡುತ್ತೆ ಸ್ಲೀಪ್​ ಮಾಸ್ಕ್​: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.