ETV Bharat / state

ಕಾಲ್ ಮಾಡಿ ಒಟಿಪಿ ಕೇಳ್ತಾರೆ, ನಿಮ್ಮ ದುಡ್ಡು ಹೊಡಿತಾರೆ: ಬಾಣಂತಿಯರೇ ಎಚ್ಚರ, ಎಚ್ಚರ! - Cyber Case - CYBER CASE

ಬಿಪಿಎಲ್ ಕಾರ್ಡ್ ಹೊಂದಿರುವ ಬಾಣಂತಿಯರನ್ನು ಗುರಿಯಾಗಿಸಿಕೊಂಡು ಸೈಬರ್ ಕಳ್ಳರು ವಂಚಿಸಿರುವ ಪ್ರಕರಣಗಳು ಬೆಳಗಾವಿ ಸೈಬರ್ ಠಾಣೆಯಲ್ಲಿ ದಾಖಲಾಗಿವೆ.

ಬೆಳಗಾವಿ ಸೈಬರ್ ಪೊಲೀಸ್ ಠಾಣೆ
ಬೆಳಗಾವಿ ಸೈಬರ್ ಪೊಲೀಸ್ ಠಾಣೆ (ETV Bharat)
author img

By ETV Bharat Karnataka Team

Published : Oct 5, 2024, 5:41 PM IST

ಬೆಳಗಾವಿ: ಗರ್ಭಿಣಿಯರು ಮತ್ತು ಬಾಣಂತಿಯರನ್ನೇ ಗುರಿಯಾಗಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಹೆಸರಲ್ಲಿ ಸೈಬರ್ ವಂಚನೆ ಪ್ರಕರಣಗಳು ಬೆಳಗಾವಿಯಲ್ಲಿ ಬೆಳಕಿಗೆ ಬಂದಿರುವುದು ಆತಂಕ‌ ಸೃಷ್ಟಿಸಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ(ಪೋಷಣ ಅಭಿಯಾನ) ಹೆಸರನ್ನು ಬಳಸಿ ಬಾಣಂತಿಯರಿಗೆ ವಂಚಿಸಿದ ಕುರಿತು ಇಲ್ಲಿನ ಸೈಬರ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ. 'ಪೋಷಣ ಅಭಿಯಾನ ಯೋಜನೆಯಡಿಯಲ್ಲಿ ನಿಮ್ಮ ಖಾತೆ ಹಣ ಬರುತ್ತದೆ ಎಂದು ಬಾಣಂತಿಯರಿಗೆ ಕರೆ ಮಾಡುತ್ತಾರೆ. ಬಳಿಕ ಅವರ ಗೂಗಲ್ ಪೇ ಮತ್ತು ವಾಟ್ಸಾಪ್‌ಗೆ ಒಂದು ಲಿಂಕ್ ಕಳಿಸಿ, ಅದರ ಮೇಲೆ ಕ್ಲಿಕ್ ಮಾಡಿ, ಒಟಿಪಿ ಹೇಳಿ ಅಂತಾ ಸೂಚಿಸುತ್ತಾರೆ. ಲಿಂಕ್ ಕ್ಲಿಕ್ ಮಾಡಿ ಒಟಿಪಿ ಹೇಳುತ್ತಿದ್ದಂತೆ ಬಾಣಂತಿಯರ ಖಾತೆಯಲ್ಲಿನ ಎಲ್ಲಾ ಹಣ ಆ ಖದೀಮರ ಪಾಲಾಗಿದೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಬೆಳಗಾವಿ ಸಿಇಎನ್ ಠಾಣೆಗೆ ಐವರು ಬಾಣಂತಿಯರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ (ETV Bharat)

ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಐವರು ಮಹಿಳೆಯರು ಒಟ್ಟು 82,080 ರೂ. ಹಣವನ್ನು ಕಳೆದುಕೊಂಡಿದ್ದಾರೆ. ಇನ್ನು ಇತ್ತಿಚಿಗೆ ಹೆರಿಗೆ ಆಗಿರುವ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರ ವಿವರವನ್ನು ಕಲೆ ಹಾಕಿರುವ ಆರೋಪಿಗಳು, ಈ ರೀತಿಯ ಕೃತ್ಯ ಎಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಆರೋಪಿಗಳಿಗೆ ಬಾಣಂತಿಯರ ಹೆಸರು, ಮೊಬೈಲ್ ನಂಬರ್ ಹೇಗೆ ಸಿಕ್ಕಿತು? ಯಾರು ಕೊಟ್ಟಿದ್ದಾರೆ ಎಂಬ ಕುರಿತು ಹೆಚ್ಚಿನ ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.

ಕಳೆದ ಎರಡ್ಮೂರು ವರ್ಷಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಸುಳ್ಳು ಮೆಸೇಜ್​​ಗಳು ಬಂದಾಗ ಅದನ್ನು ನಂಬಬಾರದು. ಅಪರಿಚಿತರದಿಂದ ಬಂದ ಲಿಂಕ್​ಗಳನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಬಾರದು. ಈ ರೀತಿ ಫೋನ್ ಕರೆಗಳು ಬಂದಾಗ ಪರೀಕ್ಷಿಸಬೇಕು. ಸಂಶಯ ಬಂದರೆ ತಕ್ಷಣ ಬ್ಯಾಂಕ್​​ಗೆ ತಿಳಿಸಬೇಕು. ಅದೇ ರೀತಿ ಪೊಲೀಸರನ್ನು ಸಂಪರ್ಕಿಸಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರೆ ಇಂತಹ ಮೋಸಗಳಿಂದ ಪಾರಾಗಬಹುದು. ಹಾಗಾಗಿ, ಜನರು ಎಚ್ಚರಿಕೆ ಮತ್ತು ಜಾಗೃತಿ ವಹಿಸಬೇಕು ಎಂದು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕಿವಿಮಾತು ಹೇಳಿದರು.

ಬ್ಯಾಂಕ್ ಮತ್ತು‌ ವಿವಿಧ ಇಲಾಖೆಗಳು ಫೋನ್ ಕರೆ ಮಾಡಿ ಒಟಿಪಿ ಕೇಳುವುದಿಲ್ಲ. ಹೀಗೆ ಯಾರಾದ್ರೂ ಕೇಳಿದರೆ ಯಾರೂ ಕೂಡ ತಮ್ಮ ಒಟಿಪಿ ನಂಬರ್ ಕಳಿಸಬೇಡಿ‌. ನೇರವಾಗಿ ಸಂಬಂಧಿಸಿದ ಬ್ಯಾಂಕ್ ಮತ್ತು ಇಲಾಖೆ ಕಚೇರಿಗೆ ಹೋಗಿ ಮಾಹಿತಿ ಹಂಚಿಕೊಳ್ಳಿ ಎಂದು ಪೊಲೀಸ್ ಆಯುಕ್ತರು ಕೋರಿದರು.

ಇದನ್ನೂ ಓದಿ: ಸೈಬರ್​ ಅಪರಾಧಗಳ ಹಿಂದೆ ಚೀನಿ ಗ್ಯಾಂಗ್​ಗಳು: ಆನ್​ಲೈನ್​ ವಂಚನೆಯ ಹೊಸ ಮುಖಗಳು - Cyber Invasion by Chinese Gangs

ETV Bharat Logo

Copyright © 2024 Ushodaya Enterprises Pvt. Ltd., All Rights Reserved.