ಬಳ್ಳಾರಿಯಲ್ಲಿ ಸತತ ನಾಲ್ಕು ತಾಸು ಸುರಿದ ಮಳೆ; ನೂರಾರು ಮೈನ್ಸ್ ಲಾರಿಗಳು ಜಲಾವೃತ - Heavy Rain - HEAVY RAIN
🎬 Watch Now: Feature Video
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 5, 2024, 5:17 PM IST
ಬಳ್ಳಾರಿ: ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಮಳೆ ಆರ್ಭಟಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಶುಕ್ರವಾರ ರಾತ್ರಿ ಮಳೆ ಸತತ ನಾಲ್ಕು ತಾಸುಗಳ ಕಾಲ ಬಿಟ್ಟು ಬಿಡದೇ ಸುರಿದಿದೆ. ಪರಿಣಾಮ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಇಡೀ ರಾತ್ರಿ ಪರದಾಡುವಂತಾಯಿತು.
ಭಾರೀ ಮಳೆಯ ಪರಿಣಾಮ ಸಂಡೂರಿನ ನಂದಿಹಳ್ಳಿ ವಾಶಿಂಗ್ ಪ್ಲಾಂಟ್ ಬಳಿ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರಿನಲ್ಲಿ ನೂರಾರು ಗಣಿ ಲಾರಿಗಳು ಭಾಗಶಃ ಮುಳುಗಡೆಯಾಗಿವೆ. ಲಾರಿಗಳು ಜಲಾವೃತಗೊಂಡ ಹಿನ್ನೆಲೆ ಚಾಲಕರು ಸಹ ಇಡೀ ರಾತ್ರಿ ಪರದಾಡಿದ್ದಾರೆ.
ಕುಮಾರಸ್ವಾಮಿ ಬೆಟ್ಟದಲ್ಲಿ ಸುರಿದ ಮಳೆಯಿಂದ ಈ ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದಾಗಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣ, ಹಳೇ ತಾಲೂಕು ಕಚೇರಿ ಆವರಣ, ಶಾಲೆ, ಕಾಲೇಜುಗಳು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಬಳ್ಳಾರಿಯ ಕೊಳಗೇರಿಗಳಲ್ಲಿ ಚರಂಡಿಗಳು ತುಂಬಿ ತ್ಯಾಜ್ಯದ ನೀರು ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ರಾತ್ರಿಯೆಲ್ಲ ನಿದ್ದೆಗೆಟ್ಟು ಚರಂಡಿ ನೀರನ್ನು ಮನೆಯಿಂದ ಹೊರಗೆ ಚೆಲ್ಲುವಂತಾಯಿತು.
ಇದನ್ನೂ ಓದಿ: ಗಂಗಾವತಿ: ಮಳೆಗೆ ಮನೆ ಮೇಲ್ಛಾವಣಿ ಕುಸಿತ; ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ - House collapse