ETV Bharat / sukhibhava

ಹೀಟ್​​ಸ್ಟ್ರೋಕ್​ ಮತ್ತು ಹೃದಯ ವೈಫಲ್ಯದ ನಡುವೆ ಸಂಬಂಧ.. ಹೃದಯಪಾರ್ಶ್ವವಾಯುನಿಂದ ಬಚಾವ್​ ಆಗೋದು ಹೇಗೆ? - ಸ್ನಾಯು ಸಮಸ್ಯೆಯಂತಹ ದೀರ್ಘಕಾಲದ ಪರಿಣಾಮ

ಬಿಸಿಲಿನ ತಾಪಮಾನ ಹೆಚ್ಚಿನ ಜನರಲ್ಲಿ ಹೃದಯದ ಸಮಸ್ಯೆ ಹೆಚ್ಚಿಸುತ್ತದೆ. ಈ ಹಿನ್ನೆಲೆ ದೇಹ ಅಧಿಕ ತಾಪಮಾನಕ್ಕೆ ಒಡ್ಡಿಕೊಳ್ಳದಂತೆ ನೋಡಿಕೊಳ್ಳುವುದು ಅವಶ್ಯಕ.

The relationship between heatstroke and heart failure

author img

By

Published : Jun 14, 2023, 10:32 AM IST

Updated : Jun 14, 2023, 10:43 AM IST

ಅತಿ ಹೆಚ್ಚಿನ ತಾಪಮಾನ ಹೃದಯ, ಮಿದುಳು, ಕಿಡ್ನಿ ಮತ್ತು ಸ್ನಾಯು ಸಮಸ್ಯೆಯಂತಹ ದೀರ್ಘಕಾಲದ ಪರಿಣಾಮ ಹೊಂದಿರುವ ಜನರಲ್ಲಿ ಆರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಬಿಸಿಲು ಹೆಚ್ಚಾದಂತೆ ನಮ್ಮ ದೇಹದಲ್ಲಿ ಹೆಚ್ಚಿನ ಶಾಖದಿಂದ ಹೃದಯಪಾರ್ಶ್ವವಾಯುಗೆ ಗುರಿ ಮಾಡುತ್ತದೆ. ಸಾಮಾನ್ಯವಾಗಿ ಅಧಿಕ ತಾಪಮಾನಕ್ಕೆ ದೇಹ ಒಡ್ಡಿಕೊಂಡಾಗ ಇದು ಹೆಚ್ಚಳವಾಗುತ್ತದೆ. ಬೇಸಿಗೆಯಲ್ಲಿ ಇದು ಸಾಮಾನ್ಯವಾಗಿದೆ.

ಬಿಸಿಲಿನ ಹವಾಮಾನದಿಂದ ಹೃದಯಾಘಾತ, ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯುನಂತಹ ಪ್ರಕರಣಗಳು ಹೆಚ್ಚಾಗುತ್ತದೆ. ಹೃದಯಾಘಾತ ಮತ್ತು ಸ್ಟ್ರೋಕ್​ ಹೃದಯ ಅಥವಾ ಮೆದುಳಿಗೆ ರಕ್ತದ ಸಾಮಾನ್ಯ ಹರಿವಿನಲ್ಲಿ ಅಡಚಣೆಗಳಿಂದ ಉಂಟಾಗುತ್ತದೆ. ಹೃದಯದ ಸಮಸ್ಯೆ ಹೊಂದಿರುವ ರೋಗಿಗಳು ಹೆಚ್ಚಿನ ಶಾಖದ ಪರಿಣಾಮಕ್ಕೆ ಒಳಗಾಗಬಹುದು.

ಮಿದುಳಿನ ಮೇಲೆ ಶಾಖದ ಪರಿಣಾಮ?: ಶಾಖಕ್ಕೆ ಹೆಚ್ಚಾಗಿ ಒಡ್ಡಿಕೊಳ್ಳುವುದು ಕೇವಲ ಶಾಖದ ಪಾಶ್ವವಾಯುವಿನ ಅಪಾಯವನ್ನು ಹೊಂದಿರುವುದಿಲ್ಲ. ಇದು ಹೃದಯವನ್ನು ಅಪಾಯಕ್ಕೆ ದೂಡುತ್ತದೆ. ಶಾಖ ಹೃದಯದ ವ್ಯವಸ್ಥೆಯನ್ನು ಒತ್ತಡಕ್ಕೆ ಗುರಿಪಡಿಸಿ, ಕೆಲಸವನ್ನು ಕಷ್ಟಗೊಳಿಸುತ್ತದೆ. ಬಿಸಿಲುನ ಹವಾಮಾನದಿಂದ ನಮ್ಮ ಸಂಪೂರ್ಣ ದೇಹವೂ ಉಳಿದ ದಿನಗಳಿಗಿಂತ ಹೆಚ್ಚು ಕಷ್ಟಪಡುತ್ತದೆ. ಇದು ಹೃದಯ, ಶ್ವಾಸಕೋಶ ಮತ್ತು ಕಿಡ್ನಿ ಮೇಲೆ ಹೆಚ್ಚಿನ ಪರಿಣಾಮ ಹೊಂದಿದೆ.

ಶಾಖದ ಪಾರ್ಶ್ವವಾಯುವು ಮಿದುಳು ಮತ್ತು ಇನ್ನಿತರ ಅಂಗಾಂಗಳು ಊದಿಕೊಳ್ಳಲು ಕಾರಣವಾಗಬಹುದು. ಇದು ಶಾಶ್ವತ ಹಾನಿ ಮಾಡುವ ಸಾಧ್ಯತೆಯೂ ಇದೆ. ಈ ಹಿನ್ನೆಲೆ ಶಾಖದ ಪಾರ್ಶ್ವವಾಯು ಸಾಕಷ್ಟು ಮಾರಣಾಂತಿಕವಾಗಬಹುದು

ಹೀಟ್​ ಸ್ಟ್ರೋಕ್​ ಲಕ್ಷಣ: ಹೀಟ್​ ಸ್ಟ್ರೋಕ್​ ಅಥವಾ ಶಾಖದ ಪಾರ್ಶ್ವಾಯುವಿನಿಂದಾಗಿ ದೇಹದ ತಾಪಮಾನ ಹೆಚ್ಚಬಹುದು. ಮಾನಸಿಕ ಆರೋಗ್ಯ ಅಥವಾ ನಡುವಳಿಕೆ ಮೇಲೆ ಪರಿಣಾಮ ಬೀರಬಹುದು. ತಲೆತಿರುಗುವುದು. ಆಲಸ್ಯ, ಸ್ನಾಯು ಸೆಳೆತ, ವೇಗದ ಉಸಿರಾಟ, ದದ್ದು, ಬೆವರುವಿಕೆ ಅಥವಾ ತಲೆನೋವು ಕಾಣಿಸಬಹುದು. ಹೆಚ್ಚುವರಿಯಾಗಿ ಚರ್ಮ ಕೆಂಪಾಗುವುದು ಪಾದದ ಬಳಿಕ ಊತದಂತಹ ಲಕ್ಷಣ ಕಾಣಿಸಿಕೊಳ್ಳಬಹುದು. ಹೀಟ್​ ಸ್ಟ್ರೋಕ್​ನ ಪ್ರಮುಖ ಲಕ್ಷಣ ಎಂದರೆ ದೇಹದ ತಾಪಮಾನ 104 ಫ್ಯಾರನ್​ಹಿಟ್​ಗಿಂತ ಹೆಚ್ಚಾಗುವುದು.

ಪತ್ತೆ: ಸಾಮಾನ್ಯವಾಗಿ ಹೀಟ್​ ಸ್ಟ್ರೋಕ್​ ವೈದ್ಯರಿಗೆ ಸ್ಪಷ್ಟವಾಗಿ ಕಂಡು ಬರುತ್ತದೆ. ನಿಮಗೆ ಪತ್ತೆಯಾಗಲಿಲ್ಲ ಎಂದರೆ, ಪ್ರಯೋಗಾಲಯದ ಮೂಲಕ ಪತ್ತೆ ಮಾಡಬಹುದು. ಜೊತೆಗೆ ಇದರ ಲಕ್ಷಣ, ಅಂಗಾಂಗಗಳಿಗೆ ಹಾನಿ ಮೂಲಕ ತಿಳಿಯಬಹುದು.

ದೇಹದ ತಾಪಮಾನ: ದೇಹದ ಉಷ್ಣತೆಯನ್ನು ಪರೀಕ್ಷಿಸಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಗುದನಾಳದ ಉಷ್ಣತೆಯು ಬಾಯಿ ಅಥವಾ ಹಣೆಯ ತಾಪಮಾನಕ್ಕಿಂತ ಹೆಚ್ಚು ನಿಖರವಾಗಿದೆ. ದೇಹದ ಉಷ್ಣತೆ ನಿರ್ಧರಿಸಲು ಇದು ಅತ್ಯಂತ ನಿಖರವಾದ ಮಾರ್ಗವಾಗಿದೆ.

ರಕ್ತ ಪರೀಕ್ಷೆ: ರಕ್ತದ ಮೂತ್ರಪಿಂಡದ ಕಾರ್ಯ, ಸೀರಮ್ ಎಲೆಕ್ಟ್ರೋಲೈಟ್ ಮಟ್ಟಗಳು ಮತ್ತು ನಿಮ್ಮ ರಕ್ತದಲ್ಲಿನ ಅಪಧಮನಿಯ ಅನಿಲಗಳ ವಿಷಯವನ್ನು ಪರೀಕ್ಷಿಸಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ.

ಮೂತ್ರ ಪರೀಕ್ಷೆ: ಹೀಟ್ ಸ್ಟ್ರೋಕ್‌ನಿಂದ ಪ್ರಭಾವಿತವಾಗಬಹುದಾದ ಮೂತ್ರದ ಬಣ್ಣ, ನಿರ್ದಿಷ್ಟ ಗುರುತ್ವಾಕರ್ಷಣೆ ಮತ್ತು ಸೂಕ್ಷ್ಮ ವಿಷಯಗಳನ್ನು ಪರೀಕ್ಷಿಸಲು ಇದನ್ನು ಮಾಡಲಾಗುತ್ತದೆ. ಇದರ ಹೊರತಾಗಿ ಇಸಿಜಿ ಮತ್ತು ಎಕೋಕಾರ್ಡಿಯೊಗ್ರಾಪಿ ಮೂಲಕ ಪತ್ತೆ ಮಾಡಬಹುದು. ಜೊತೆಗೆ ಮಿದುಳಿನ ಸಿಟಿ ಮತ್ತು ಎಂಆರ್​ಐ ಸ್ಕ್ಯಾನ್​ ಮೂಲಕವೂ ಪರೀಕ್ಷೆ ಮಾಡಿಕೊಳ್ಳಬಹುದು.

ಚಿಕಿತ್ಸೆ: ಹೀಟ್​ಸ್ಟ್ರೋಕ್​ ಆದಾಗ ದೇಹವನ್ನು ತಣ್ಣಗೆ ಮಾಡುವುದು ಮುಖ್ಯ. ಈ ಮೂಲಕ ಮುಂದೆ ಆಗಬಹುದಾದ ಹಾನಿ ತಡೆಯಬಹುದು. ಇದಕ್ಕಾಗಿ ಕೆಲವು ಚಿಕಿತ್ಸೆ ಹಂತ ಇದೆ. ತಣ್ಣೀರಿನ ಸ್ನಾನ ಮಾಡುವುದು, ಕೂಲಿಂಗ್​ ತಂತ್ರ ಅನುಸರಣೆ, ಐಸ್​ ಮತ್ತು ಕೂಲಿಂಗ್​ ಹೊದಿಕೆಗೊಳೊಂದಿಗೆ ದೇಹವನ್ನು ಪ್ಯಾಕ್​ ಮಾಡುವುದು, ಔಷಧಿಗಳ ಬಳಕೆ, ಹೀಟ್​ ಸ್ಟ್ರೋಕ್​ ಆದಾಗ ಮನೆಯ ಚಿಕಿತ್ಸೆ ಇದಕ್ಕೆ ಸಾಕಾಗುವುದಿಲ್ಲ. ತಕ್ಷಣಕ್ಕೆ ಅಥವಾ ತುರ್ತು ವೈದ್ಯಕೀಯ ಸಹಾಯ ಪಡೆಯಬಹುದು.

ಇದನ್ನೂ ಓದಿ: ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಜಂಕ್​ ಫುಡ್​: ವೈದ್ಯರು

Last Updated : Jun 14, 2023, 10:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.