ETV Bharat / state

60 ಮೀಟರ್ ದೂರ ಬೈಕ್​ ಎಳೆದೊಯ್ದ ಕಾರು!: ಎದೆ ಝಲ್ ಅನ್ನಿಸುವ ವಿಡಿಯೋ - TERRIBLE ACCIDENT IN CHIKKAMAGALURU

ಚಿಕ್ಕಮಗಳೂರಿನಲ್ಲಿ ಕಾರಿಗೆ ಸಿಲುಕಿದ ಬೈಕ್​ ಅನ್ನು 60 ಮೀಟರ್ ಎಳೆದೊಯ್ದ ಘಟನೆ ನಡೆದಿದೆ. ಕಾರು ಉಜ್ಜಿಕೊಂಡು ಹೋಗುವ ರಭಸಕ್ಕೆ ಬೆಂಕಿಯ ಕಿಡಿ ಹಾರಿದೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

TERRIBLE ACCIDENT IN CHIKKAMAGALURU
ಬೈಕ್​ ಎಳೆದುಕೊಂಡು ಹೋಗುತ್ತಿರುವ ದೃಶ್ಯ (ETV Bharat)
author img

By ETV Bharat Karnataka Team

Published : Jan 16, 2025, 7:27 PM IST

ಚಿಕ್ಕಮಗಳೂರು: ಅಪಘಾತದ ಬಳಿಕ ಕಾರಿನ ಕೆಳಗೆ ಸಿಲುಕಿದ ಬೈಕ್​ 60 ಮೀಟರ್ ದೂರ ಎಳೆದುಕೊಂಡು ಹೋಗಿರುವಂತಹ ಘಟನೆ ನಗರದ ಬೈಪಾಸ್ ಸಮೀಪದ ಕುರುವಂಗಿ ರಸ್ತೆಯಲ್ಲಿ ಜರುಗಿದೆ. ಬೈಕ್​ನಿಂದ ಬೆಂಕಿಯ ಕಿಡಿ ಬರುತ್ತಿದ್ದರೂ ಅದನ್ನು ಲೆಕ್ಕಿಸದೇ, ರಭಸದಿಂದ ಸಾಗಿರುವ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ ಅನ್ನಿಸುವಂತಿದೆ.

ಬೈಕ್ ಉಜ್ಜಿಕೊಂಡು ಹೋಗುವ ರಭಸಕ್ಕೆ ಬೆಂಕಿ ಕಿಡಿ ಹಾರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ರಾಜಶೇಖರ್ ಎಂಬುವರಿಗೆ ಸೇರಿದ ಬೈಕ್ ಇದಾಗಿದ್ದು, ರೇಷನ್ ಅಂಗಡಿ ಕೆಲಸಗಾರ ಇವರು ಕೆಲಸ ಮುಗಿಸಿ ಹೋಗುವಾಗ ಈ ಅಪಘಾತ ನಡೆದಿದೆ.

ಬೈಕ್​ ಎಳೆದುಕೊಂಡು ಹೋಗುತ್ತಿರುವ ದೃಶ್ಯ (ETV Bharat)

ಅಪಘಾತದ ಬಳಿಕ ಕಾರು ನಿಲ್ಲಿಸಿದೇ ಕಾರು ಚಾಲಕ ಹಾಗೆಯೇ ಹೋಗಿದ್ದಾನೆ. ಪರಿಣಾಮ ಬೈಕ್ ಚಾಲಕ ರಾಜಶೇಖರ್​​ಗೆ ಸೊಂಟದ ಮೂಳೆ ಸಂಪೂರ್ಣವಾಗಿ ಮುರಿದು ಹೋಗಿದೆ. ಕೂಡಲೇ ಸಾರ್ವಜನಿಕರು ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕಿಡಿ ಲೆಕ್ಕಿಸದೇ ಬೈಕ್​ ಅನ್ನು 2 ಕಿ.ಮೀ ಎಳೆದೊಯ್ದ ಬೊಲೆರೊ ವಾಹನ; ವೈರಲ್​ ಆಯ್ತು ಭಯಾನಕ ಅಪಘಾತ ದೃಶ್ಯ - ROAD ACCIDENT IN SAMBHAL

ETV Bharat Logo

Copyright © 2025 Ushodaya Enterprises Pvt. Ltd., All Rights Reserved.