ETV Bharat / sukhibhava

ತಾಪಮಾನದ ಹೆಚ್ಚಳ ಎಸಿಯಲ್ಲಿ ಕುಳಿತು ಕೆಲಸ ಮಾಡುವವವರ ಮೇಲೂ ಪರಿಣಾಮ

ವಿವಿಧ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರನ್ನು ಈ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಾಗಿತ್ತು.

temperature-rises-impact-productivity-who-works-in-ac-room

author img

By ETV Bharat Karnataka Team

Published : Nov 6, 2023, 2:31 PM IST

Updated : Nov 6, 2023, 2:38 PM IST

ವಾತಾವರಣದಲ್ಲಿನ ತಾಪಮಾನ ಏರಿಕೆಯು ಹಲವು ಜಾಗತಿಕ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಹವಾಮಾನದ ಹೊರತಾಗಿಯೂ ಇದು ವ್ಯಕ್ತಿಯ ಉತ್ಪಾದಕತೆ ಮೇಲೆ ಕೂಡ ಪರಿಣಾಮವನ್ನು ಬೀರುತ್ತದೆ. ಬಿಸಿಲಿ ಹೊರತಾಗಿ ಹವಾನಿಯಂತ್ರಿಕ (ಎಸಿ) ಫ್ಯಾಕ್ಟರಿಗಳಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರ ಮೇಲೆ ಕೂಡ ತಾಪಮಾನದ ಏರಿಕೆ ಪರಿಣಾಮ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. ಚೀನಾದ ಎಕ್ಸೆಟರ್​ ಯುನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ ಪರಿಸರದ ತಾಪಮಾನ ಒಂದು ಡಿಗ್ರಿ ಏರಿಕೆಯಾದರೂ ಅದು ಕೆಲಸದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಲೇಖಕರು ತಿಳಿಸಿದ್ದಾರೆ.

ಉತ್ಪಾದಕತೆ ಕುಸಿತ: ರಾತ್ರಿ ಸಮಯದಲ್ಲಿ ತಾಪಮಾನ ಏರಿಕೆಯಾಗುವುದರಿಂದಲೂ ಅದು ನಿದ್ರೆ ಅಥವಾ ಕೆಲಸದ ಮೇಲೆ ಪರಿಣಾಮ ಬೀರಲಿದೆ. ಕಚೇರಿಯ ಹೊರಗೆ ಕೆಲಸ ಮಾಡುವವರಿಗೆ ತಾಪಮಾನದ ಹೆಚ್ಚಳ ಪರಿಣಾಮ ಬೀರುವುದು ಸಹಜ. ಆದರೆ, ಹವಾನಿಯಂತ್ರಿತ ಕಚೇರಿಗಳಲ್ಲಿ ಕೆಲಸ ಮಾಡುವವರ ಉತ್ಪಾದಕತೆ ಕುಗ್ಗಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. 35 ಸಾವಿರ ಕೆಲಸಗಾರರು ವಿವಿಧ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಲ್ಲಿ ಈ ಕುರಿತು ಪರಿಶೀಲನೆ ನಡೆಸಲಾಗಿದ್ದು, ಇದು ಅವರ ಉತ್ಪಾದಕತೆ ಮೇಲೆ ಪರಿಣಾಮ ಬೀರಿದೆ ಎಂದು ತೋರಿಸಿದೆ. ಹೊರಗಿನ ವಾತಾವರಣದಲ್ಲಿ ಒಂದು ಡಿಗ್ರಿ ತಾಪಮಾನ ಹೆಚ್ಚಳ ಉತ್ಪಾದಕತೆ ಸಾಧನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಪ್ರಪಂಚದಾದ್ಯಂತ ಏರುತ್ತಿರುವ ತಾಪಮಾನವು ಮಾನವೀಯತೆಯ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತದೆ.

ರಾತ್ರಿ ಸಮಯದಲ್ಲಿನ ತಾಪಮಾನದ ಏರಿಕೆಯು ನಿದ್ರೆಯಲ್ಲಿ ಉಂಟಾಗುವ ಅಡ್ಡಿಯಿಂದ ಬೆಳಗಿನ ಹೊತ್ತು ಉತ್ಪಾದಕತೆ ಕುಸಿಯುವಂತೆ ಮಾಡುತ್ತದೆ. ಆದರೆ, ಬೆಳಗಿನ ಹೊತ್ತಿನ ತಾಪಮಾನದ ಏರಿಕೆಯೂ ಕೂಡ ಎಸಿಯಲ್ಲಿ ಕೆಲಸ ಮಾಡುವವರ ಉತ್ಪಾದಕತೆ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮವನ್ನು ಹೊಂದಿದೆ ಎಂದು ಅಧ್ಯಯನ ತೋರಿಸಿದೆ.

ಹವಾ ನಿಯಂತ್ರಿತ ಫ್ಯಾಕ್ಟರಿಗಳಲ್ಲಿ ತಾಪಮಾನದ ಏರಿಕೆ ಕೆಲಸಗಾರರ ಮೇಲೆ ಬೀರುವ ಪರಿಣಾಮ ಆರ್ಥಿಕತೆ ಮೇಲೆ ಕೂಡ ಪರಿಣಾಮ ಹೊಂದಿದೆ ಎಂದು ಪುರಾವೆಗಳು ತೋರಿಸಿದೆ. ಹವಾನಿಯಂತ್ರಕ ಫ್ಯಾಕ್ಟರಿಗಳಿಂದಾಗಿ ತಾಪಮಾನ ಏರಿಕೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ನೀತಿ ನಿರೂಪಕರು ಮತ್ತು ಉದ್ಯಮಿ ನಾಯಕರು ತಪ್ಪಾಗಿ ಭಾವಿಸಿದ್ದಾರೆ. ನಮ್ಮ ಅಧ್ಯಯನದಲ್ಲಿ ಹೊರಗಿನ ತಾಪಮಾನದ ಪರಿಣಾಮಗಳಿಂದ ಫ್ಯಾಕ್ಟರಿಗಳನ್ನು ಪ್ರತ್ಯೇಕಿಸಲು, ಅದರ ಮೇಲೆ ಪರಿಣಾಮ ಬೀರದಂತೆ ಕಾಪಾಡಲು ಹವಾಮಾನ ನಿಯಂತ್ರಣದ ಸಾಮರ್ಥ್ಯವೂ ಸಾಕಾಗುವುದಿಲ್ಲ ಎಂದು ಫಲಿತಾಂಶದಲ್ಲಿ ತೋರಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಮತ್ತಷ್ಟು ಹದಗೆಟ್ಟ ವಾಯು ಗುಣಮಟ್ಟ; ಟ್ರಕ್​ಗಳಿಗೆ ನಿರ್ಬಂಧ, ವರ್ಕ್​ ಫ್ರಂ ಹೋಮ್​ ಮೊರೆ

Last Updated : Nov 6, 2023, 2:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.