ಸೂರತ್: ಹಲ್ಲಿನ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಅನೇಕ ಬಾರಿ ವೈದ್ಯರ ಸಲಹೆಯಂತೆ ದಂತಪಕ್ತಿ ಅಳವಡಿಕೆ ಮಾಡಿಕೊಳ್ಳುತ್ತಾರೆ. ಈ ರೀತಿ ಕೃತಕ ಹಲ್ಲಿನ ಅಳವಡಿಕೆ ಅಥವಾ ಇಪ್ಲಾಂಟ್ ಮಾಡಿಸಿ ಕೊಂಡಾಗ ಅದರ ಬಳಕೆಯಲ್ಲೂ ಕೂಡ ಜಾಗ್ರತೆ ವಹಿಸಬೇಕಾಗಿರುವುದು ಅತ್ಯಗತ್ಯ. ಇದಕ್ಕೆ ಅಳವಡಿಸಿರುವ ಸಣ್ಣ ಸಾಧನಗಳು ಅನೇಕ ಬಾರಿ ತಿಳಿದು ತಿಳಿಯದೇ ನುಂಗಿ ಬಿಡುತ್ತಾರೆ ಅನೇಕರು. ಇಂತಹ ವಿಷಯಗಳನ್ನು ನಿರ್ಲಕ್ಷಿಸಿದರೆ, ಜೀವಕ್ಕೆ ಕುತ್ತು ತರುತ್ತದೆ ಎಂಬ ಘಟನೆಯೊಂದು ಗುಜರಾತ್ನ ಸೂರತ್ನಲ್ಲಿ ನಡೆದಿದೆ.
ಇಲ್ಲಿನ ಸ್ಥಳೀಯ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಇತ್ತೀಚೆಗೆ ಹಲ್ಲಿನ ಇಪ್ಲಾಂಟ್ಗೆ ಒಳಗಾಗಿದ್ದಾರೆ. ಈ ಹಲ್ಲಿನ ಸೆಟ್ ಅಳವಡಿಕೆ ಸಂದರ್ಭದಲ್ಲಿ ಅಳವಡಿಸುವ ಸಾಧನವನ್ನು ಅವರು ತಿಳಿಯದೆ ನುಂಗಿದ್ದಾರೆ. ಅದು ಅನ್ನನಾಳದ ಮೂಲಕ ಅವರ ಶ್ವಾಸಕೋಶ ಸೇರಿದ್ದು, ಜೀವಕ್ಕೆ ಕುತ್ತು ತಂದಿದೆ. ಕಡೆಗೆ ವೈದ್ಯರು ಎರಡು ಗಂಟೆಗಳ ಕಾಲ ದೀರ್ಘಕಾಲದ ಶಸ್ತ್ರಚಿಕಿತ್ಸೆ ಬಳಿಕ ಅದನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಘಟನೆ?: 52 ವರ್ಷದ ವ್ಯಕ್ತಿ ಹಲ್ಲಿನ ಚಿಕಿತ್ಸೆಗೆ ಒಳಗಾದ ಹಲವು ದಿನಗಳ ನಂತರ ಅವರಿಗೆ ಎದೆ ನೋವು ಬರಲು ಆರಂಭಿಸಿದೆ. ಇದರಿಂದಾಗಿ ಅವರಿಗೆ ಉಸಿರಾಟ ಕೂಡ ಕಷ್ಟವಾಗಿದ್ದು, ತಕ್ಷಣಕ್ಕೆ ವೈದ್ಯರ ಮೊರೆ ಹೋಗಿದ್ದಾರೆ. ಈ ವೇಳೆ, ವೈದ್ಯರ ಸಲಹೆಯಂತೆ ಎಕ್ಸ್ರೇಗೆ ಒಳಗಾಗಿದ್ದು, ಅವರ ಶ್ವಾಸಕೋಶದಲ್ಲಿ ಹಲ್ಲಿನ ಸಾಧನ ಇರುವುದು ಕಂಡು ವೈದ್ಯರು ಕೂಡ ಶಾಕ್ ಆಗಿದ್ದಾರೆ. ಜೊತೆಗೆ ತಕ್ಷಣಕ್ಕೆ ಅವರು ಚಿಕಿತ್ಸೆಯನ್ನು ಆರಂಭಿಸಲು ಮುಂದಾಗಿದ್ದಾರೆ.
ಶ್ವಾಸಕೋಶದಲ್ಲಿ ಸಿಲುಕಿದ ಸಾಧನ: ಹಲ್ಲಿನ ಸೆಟ್ ಅಳವಡಿಕೆ ಬಳಿಕ ಗೊತ್ತಿಲ್ಲದಂತೆ ಅವರು ಇದನ್ನು ನುಂಗಿದ್ದಾರೆ. ಒಂದು ವಾರ ಆರಾಮವಾಗೇ ಇದ್ದ ಅವರಿಗೆ ವಾರದ ಬಳಿಕ ಎದೆಯಲ್ಲಿ ನೋವು ಶುರುವಾಗಿದೆ. ಪದೇ ಪದೆ ಎದೆ ನೋವು ಕಾಣಿಸಿಕೊಂಡು, ಅವರಿಗೆ ಉಸಿರಾಡಲು ಕಷ್ಟವಾಗಿದೆ. ಬಳಿಕ ಅವರು ನಮ್ಮ ಬಳಿಗೆ ಎದೆ ನೋವಿನ ಸಮಸ್ಯೆ ಹಿನ್ನೆಲೆ ಚಿಕಿತ್ಸೆಗೆ ಬಂದಿದ್ದಾರೆ ಎಂದು ಚೆಸ್ಟ್ ಫಿಸಿಷಿಯನ್ ಡಾ ಸಮಿರ್ ಗಾಮಿ ತಿಳಿಸಿದ್ದಾರೆ.
ಉಸಿರಾಡಲು ಕಷ್ಟ: ಆಹಾರ ನುಂಗುವ ಸಂದರ್ಭದಲ್ಲಿ ಅನ್ನನಾಳದ ಜೊತೆಗೆ ಈ ಸಾಧನ ಕೂಡ ನುಂಗಿದ್ದು, ಅದು ಶ್ವಾಸಕೋಶದಲ್ಲಿ ಹೋಗಿ ಸಿಲುಕಿದೆ. ಶ್ವಾಸಕೋಶದಲ್ಲಿ ಸಿಲುಕಿದ್ದ ಈ ಸಾಧನ ಸುಲಭವಾಗಿ ಹೊರ ಬರುವಂತೆ ಕಾಣಲಿಲ್ಲ. ಜೊತೆಗೆ ರೋಗಿ ಕೂಡ ಉಸಿರಾಟದ ಸಮಸ್ಯೆ ಹಾಗೂ ನೋವಿನ ಸಮಸ್ಯೆ ಹೆಚ್ಚು ಅನುಭವಿಸಲು ಶುರು ಮಾಡದರು. ಇದರಿಂದಾಗಿ ಅವರಿಗೆ ಬ್ರೊನ್ಕೊಸ್ಕೊಪಿ ನಡೆಸಲಾಯಿತು. ಎರಡು ಗಂಟೆಗಳ ಈ ಶಸ್ತ್ರ ಚಿಕಿತ್ಸೆಯಲ್ಲಿ ಈ ಸಾಧನವನ್ನು ತೆಗೆಯಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇದೀಗ ಚಿಕಿತ್ಸೆ ಬಳಿಕ ರೋಗಿ ಆರಾಮವಾಗಿದ್ದು, ಯಾವುದೇ ರೀತಿಯ ಎದೆ ನೋವು ಚಿಕಿತ್ಸೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ
ಇದನ್ನೂ ಓದಿ: ಮಧ್ಯ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಯಶಸ್ವಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ