ETV Bharat / sukhibhava

ಪೋಷಕರು ಮಗುವಿಗೆ ಹೆಚ್ಚು ಗಮನ ನೀಡಬೇಕೇ? ಏನನ್ನುತ್ತದೆ ಅಧ್ಯಯನ? - ಮಗುವಿನ ಭವಿಷ್ಯದ ಯಶಸ್ಸು

ಇಂದು ಪೋಷಕರು ಮಗುವಿನ ಬೆಳವಣಿಗೆಯ ವಿಚಾರದಲ್ಲಿ ಹೆಚ್ಚು ತೊಡಗಿಸಿಕೊಂಡರೂ ಅವರಲ್ಲಿ ಅಭದ್ರತೆಯ ಭಾವ ಇದ್ದೇ ಇದೆ.

Should parents give more attention to the child?; What is study?

author img

By

Published : Jul 3, 2023, 10:45 AM IST

ಹಿಂದಿಗಿಂತಲೂ ಇಂದು ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಈ ರೀತಿ ಹೆಚ್ಚು ಸಮಯ ತೊಡಗಿಸಿಕೊಳ್ಳುವುದು ತಮ್ಮ ಮಗುವಿನ ಭವಿಷ್ಯದ ಯಶಸ್ಸು ಮತ್ತು ಯೋಗಕ್ಷೇಮಕ್ಕೆ ಹಾನಿಯೆಂದು ತಮ್ಮ ಹಿಂದಿನ ತಲೆಮಾರಿಗಿಂತ ಹೆಚ್ಚು ಚಿಂತಿಸುತ್ತಾರೆ. ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಾಮಾಜಿಕ ಒತ್ತಡಗಳು ಹೆಚ್ಚಿರುವುದರಿಂದ ಕೂಡ ಮಗುವಿನೊಂದಿಗೆ ತಂದೆಗಿಂತ ಹೆಚ್ಚಾಗಿ ತಾಯಿ ತೊಡಗಿಸಿಕೊಂಡಿದ್ದಾರೆ. ಇದು ತಾಯಿಯ ಯೋಗಕ್ಷೇಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೋವಿಡ್​ ಬಳಿಕ ಮನೆ ಶಿಕ್ಷಣ ಇದನ್ನು ಹೆಚ್ಚಿಸಿದೆ.

ಮಗುವಿನೊಂದಿಗೆ ಹೆಚ್ಚು ತೊಡಗಿಸಿಕೊಂಡರೂ ಪೋಷಕರನ್ನು ಕೆಲವು ಪ್ರಶ್ನೆಗಳು ಸದಾ ಕಾಡುತ್ತವೆ. ಮಕ್ಕಳಿಗೆ ಎಷ್ಟು ಗಮನ ನೀಡಬೇಕು? ಮಗುವನ್ನು ಅವರ ಪಾಡಿಗೆ ಸಾಧನಗಳಲ್ಲಿ ತೊಡಗಿಸಿಕೊಳ್ಳಲು ಬಿಡುವುದು ಹಾನಿಕಾರಕವೇ? ನಾವು ಮಕ್ಕಳನ್ನು ನಿರ್ಲಕ್ಷ್ಯ ಮಾಡಿದ್ದೇವಾ? ನಾವು ಮಕ್ಕಳೊಂದಿಗೆ ಹೆಚ್ಚು ತೊಡಗಿಸಿಕೊಂಡೆವಾ? ಹೀಗೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಬಾಂಧವ್ಯ ಅಭಿವೃದ್ಧಿ: ಮಗುವಿನ ಬೆಳವಣಿಗೆಯಲ್ಲಿ ಪೋಷಕರ ಬೆಂಬಲ ಪ್ರಮುಖವಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಅಟ್ಯಾಚ್​ಮೆಂಟ್​ ಥಿಯರಿ (ಬಾಂಧವ್ಯದ ಥಿಯರಿ) ಹೇಳುವಂತೆ, ಮಗುವಿನ ಅವಶ್ಯಕತೆಯನ್ನು ಪೋಷಕರು ಸರಿಯಾದ ಹಾದಿಯಲ್ಲಿ ಪೂರ್ಣ ಮಾಡಿದಾಗ, ಅವರು ಆ ವ್ಯಕ್ತಿಯೊಂದಿಗೆ ರಕ್ಷಣಾ ಭಾಂಧವ್ಯದ ಭಾವವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ಇದು ಅವರಲ್ಲಿ ಜಗತ್ತನ್ನು ಧೈರ್ಯವಾಗಿ ಎದುರಿಸುವ ಆತ್ಮವಿಶ್ವಾಸ ನೀಡುವುದರ ಜೊತೆಗೆ ಸಕಾರಾತ್ಮಕ ಅರಿವು, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ತಾಯಿ ಮತ್ತು ತಂದೆ ತಮ್ಮ ಮಕ್ಕಳೊಂದಿಗೆ ಹೆಚ್ಚು ಸಂಪರ್ಕ ಹೊಂದಿದಾಗ ಮತ್ತು ಅವರೊಂದಿಗೆ ತೊಡಗಿಸಿಕೊಂಡಾಗ, ಸಾಮಾಜಿಕ ಮತ್ತು ಭಾವನಾತ್ಮಕ ಫಲಿತಾಂಶಗಳು ಸುಧಾರಿಸುತ್ತವೆ ಎಂದು ಅಧ್ಯಯನ ಕಂಡುಕೊಂಡಿದೆ. ಮಕ್ಕಳ ಆರಂಭಿಕ ವರ್ಷಗಳಲ್ಲಿ ಅವರೊಂದಿಗೆ ಮಾತನಾಡುವುದು ಮತ್ತು ಓದುವುದು ಭಾಷೆ ಮತ್ತು ಸಾಕ್ಷರತೆಯ ಕೌಶಲ್ಯಗಳಿಗೆ ವಿಶೇಷವಾಗಿ ಮುಖ್ಯ. ಮಕ್ಕಳು ತಮ್ಮ ಸ್ವಂತ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿಯಂತ್ರಿಸಲು ಕಲಿಯಲು ಆಲಿಸುವುದು ಮತ್ತು ಬೆಂಬಲಿಸುವುದು ನಂತರದ ಭಾವನಾತ್ಮಕ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಸಹ ಮುಖ್ಯವಾಗಿದೆ.

ಕುತೂಹಲ, ಆತ್ಮವಿಶ್ವಾಸ ಮತ್ತು ನಾರ್ಸಿಸಮ್​: ಮಕ್ಕಳು ತಮ್ಮ ಸ್ವಂತ ಬೆಳವಣಿಗೆ ಮತ್ತು ಅಭಿವೃದ್ಧಿಗೆ ತಾವೇ ಕೆಲವು ವೇಳೆ ಮುಂದಾಗಬೇಕಾಗುತ್ತದೆ. ಹೆಚ್ಚಿನ ಗಮನವಿರುವ ಪೋಷಕರು, ಮಕ್ಕಳು ಚಟುವಟಿಕೆಯನ್ನು ಸ್ವತಃ ನಿಭಾಯಿಸಲು ಬಿಡಬೇಕು. ಹದಿಹರೆಯದವರು ಮತ್ತು ಯುವ ವಯಸ್ಕರಾದಾಗ ಮಕ್ಕಳಲ್ಲಿ ಆತಂಕ ಮತ್ತು ಕಳಪೆ ನಿಭಾಯಿಸುವ ಕೌಶಲ್ಯಗಳ ಅಪಾಯವನ್ನು ವಾಸ್ತವವಾಗಿ ಹೆಚ್ಚಿಸಬಹುದು.

ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳಿಗೆ ತಮ್ಮ ತಪ್ಪಿನಿಂದ ಕಲಿಯುವ ಅವಕಾಶವನ್ನು ನೀಡಬೇಕು. ವಯಸ್ಸಿಗೆ ಅನುಗುಣವಾಗಿ ಆಟವಾಡುವಾಗ, ಚಟುವಟಿಕೆ ನಡೆಸುವಾಗ ಆಗುವ ಅಪಾಯವನ್ನು ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸುವ ಕೌಶಲ್ಯವನ್ನು ಅವರೆ ಕಲಿಯುವಂತೆ ಆಗಬೇಕು. ಚಟುವಟಿಕೆ ಮತ್ತು ಕ್ರಿಯಾತ್ಮಕ ಆಟಗಳು ಮಕ್ಕಳಲ್ಲಿ ದೈಹಿಕ, ಅರಿವಿನ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಜೊತೆಗೆ ಇದು ಮಕ್ಕಳಲ್ಲಿನ ಕುತೂಹಲ ಹೆಚ್ಚಿಸುತ್ತದೆ.

ಬದಲಾವಣೆ ಮತ್ತು ಹೊಂದಿಕೊಳ್ಳುವಿಕೆ: ಸಮಯ ಕಳೆದಂತೆ ಮಕ್ಕಳೊಂದಿಗೆ ಎಷ್ಟರ ಮಟ್ಟಿಗೆ ತೊಡಗಿಸಿಕೊಳ್ಳಬೇಕು ಎಂಬುದು ಗೊತ್ತಾಗುತ್ತದೆ. ಮಗು ಮತ್ತು ಮಕ್ಕಳು ದೈಹಿಕ ಮತ್ತು ಭಾವನಾತ್ಮಕ ಅಭಿವೃದ್ಧಿಯ ಬದಲಾವಣೆ ಉತ್ತಮ ಫಲಿತಾಂಶಕ್ಕೆ ಪೋಷಕರು ಇದನ್ನು ಒಪ್ಪಿಕೊಳ್ಳಬೇಕು. ಹಾಗೆಂದ ಮಾತ್ರಕ್ಕೆ ಮಗುವನ್ನು ಸಣ್ಣ ವಯಸ್ಸಿನಲ್ಲಿ ಸ್ವತಂತ್ರವಾಗಿ ಬೆಳೆಯುವಂತೆ ಪ್ರೋತ್ಸಾಹ ನೀಡುವುದಲ್ಲ. ಇದು ಮಕ್ಕಳಲ್ಲಿ ಮಿದುಳಿನ ಅಭಿವೃದ್ಧಿಯಲ್ಲಿ ಒತ್ತಡದ ಹಾರ್ಮೋನ್​ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಮಗುವಿನ ಅವಶ್ಯಕತೆಗಳಿಗೆ ಪ್ರತಿಕ್ರಿಯಿಸುವುದು ಮುಖ್ಯ. ಮಕ್ಕಳ ಕಲಿಯುವಿಕೆಗೆ ಕಾಯಬೇಕಾಗುತ್ತದೆ. ನಿಮ್ಮ ಮಗುವಿನೊಂದಿಗೆ ತೊಡಗಿಸಿಕೊಳ್ಳಲು ನೀವು ಎಷ್ಟು ಸಮಯವನ್ನು ಕಳೆದರೂ ಆ ಭಾವನೆಗಳು ನಿಜವಾಗಿಯೂ ದೂರವಾಗುವುದಿಲ್ಲ ಎಂದು ಸೂಚಿಸುತ್ತದೆ. ನಮ್ಮ ಮಕ್ಕಳಿಗೆ ಸಾಕಷ್ಟು ಗಮನ ಸಿಗುತ್ತದೆಯೇ ಎಂದು ಚಿಂತಿಸುವುದರಲ್ಲಿ ಆ ಶಕ್ತಿಯನ್ನು ವ್ಯಯಿಸುವ ಬದಲು ಅದನ್ನು ಸವಾಲು ರೂಪಿಸಬೇಕಿದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಕಲೆಗಳ ಪ್ರದರ್ಶನದಿಂದ ಆತಂಕ ಮತ್ತು ಒತ್ತಡ ನಿಭಾಯಿಸಲು ಸಾಧ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.