ETV Bharat / sukhibhava

ತೂಕ ಹೆಚ್ಚಳವಾದರೆ ಪ್ರಾಸ್ಟೇಟ್​ ಕ್ಯಾನ್ಸರ್​ ಅಪಾಯ: ಅಧ್ಯಯನ

ಜಾಗತಿಕವಾಗಿ ಪುರುಷರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವ ಕ್ಯಾನ್ಸರ್​ನಲ್ಲಿ ಪ್ರಾಸ್ಟೇಟ್​ ಕ್ಯಾನ್ಸರ್ ಒಂದಾಗಿದೆ.

Risk of prostate cancer with weight gain

author img

By

Published : May 17, 2023, 4:53 PM IST

ವಾಷಿಂಗ್ಟನ್​: ಹದಿಹರೆಯದ ವಯಸ್ಸಿನ ಮುಕ್ತಾಯದ ವೇಳೆ ಮತ್ತು 20ವರ್ಷಕ್ಕಿಂತ ಮುಂಚೆ ವ್ಯಕ್ತಿಯ ತೂಕ ಹೆಚ್ಚಳ ಆಗಿದ್ದರೆ ಪ್ರಾಸ್ಟೆಟ್​ ಕ್ಯಾನ್ಸರ್​ನಿಂದ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಐರ್ಲೆಂಡ್​ನ ಡುಬ್ಲಿನ್​ನ ಯುರೋಪಿಯನ್​ ಕಾಂಗ್ರೆಸ್​ ಆನ್​ ಒಬೆಸಿಟಿ (ಇಸಿಒ) ಈ ಕುರಿತು ಸಂಶೋಧನೆ ನಡೆಸಿದೆ. ಪುರುಷನ ಜೀವನದಲ್ಲಿ ತೂಕ ಹೆಚ್ಚಳವೂ ಪ್ರಾಸ್ಟೇಟ್​ ಕ್ಯಾನ್ಸರ್​ ಹಾಗೂ ಆಕ್ರಮಣಕಾರಿ ಮತ್ತು ಮರಣಾಂತಿಕ ಕ್ಯಾನ್ಸರ್​​ನೊಂದಿಗೆ ಸಂಬಂಧ ಹೊಂದಿದೆ. ಇದಕ್ಕಗಿ 2,50,00 ಸ್ವೀಡನ್​ ಪುರುಷರ ದತ್ತಾಂಶವನ್ನು ಪರೀಶಿಲಿಸಲಾಗಿದೆ.

17ರಿಂದ 29 ವಯಸ್ಸಿನ ಯುವಕರಲ್ಲಿನ ತೂಕ ಹೆಚ್ಚಳ ಆಕ್ರಮಣಕಾರಿ ಮತ್ತು ಮತ್ತು ಮಾರಾಣಾಂತಿಕ ಕ್ಯಾನ್ಸರ್​ ಹೆಚ್ಚಳದೊಂದಿಗೆ ಸಂಬಂಧ ಹೊಂದಿದೆ. ಜಾಗತಿಕವಾಗಿ ಪುರುಷರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವ ಕ್ಯಾನ್ಸರ್​ನಲ್ಲಿ ಪ್ರಾಸ್ಟೇಟ್​ ಕ್ಯಾನ್ಸರ್ ಒಂದಾಗಿದ್ದು, ವಾರ್ಷಿಕವಾಗಿ 1.4 ಮಿಲಿಯನ್​ ಜನರಲ್ಲಿ ಇದು ಪತ್ತೆಯಾಗುತ್ತಿದೆ. ಸ್ವೀಡನ್​ ಪುರುಷರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಕ್ಯಾನ್ಸರ್​ ಇದಗಿದ್ದು, ವರ್ಷದಲ್ಲಿ 10 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದು, 2 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ. ​

ಯುಕೆಯಲ್ಲಿ ಕೂಡ ಪುರಷರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಕ್ಯಾನ್ಸರ್​ ಆಗಿದ್ದು, ವಾರ್ಷಿಕ 52 ಸಾವಿರ ಪ್ರಕರಣಗಳು ಇದಾಗಿದ್ದು, 12 ಸಾವಿರ ಮಂದಿ ಇದರಿಂದ ಸಾವನ್ನಪ್ಪುತ್ತಿದ್ದಾರೆ. ಈ ಪ್ರಾಸ್ಟೇಸ್​ ಕ್ಯಾನ್ಸರ್​ ಕಾರಣದ ಅಂಶವನ್ನು ಪತ್ತೆ ಮಾಡುವುದಕ್ಕಿಂತ ಇದನ್ನು ತಡೆಯುವುದು ಮುಖ್ಯವಾಗಿದೆ ಎಂದು ಡಾ ಮರಿಸ ಡಾ ಸಿಲ್ವಾ ತಿಳಿಸಿದ್ದಾರೆ. ವಯಸ್ಸಾಗುವಿಕೆ, ಕುಟುಂಬದಲ್ಲಿನ ಸಾವನ್ನಪ್ಪಿದವರ ಇತಿಹಾಸ, ಅನೇಕ ವಂಶವಾಶಿ ಗುರುತು, ಬದಲಾಯಿಸಲು ಸಾಧ್ಯವಾಗದ ಅಪಾಯಕಾರಿ ಅಂಶಗಳನ್ನು ಗುರುತಿಸಲು ಇರುವ ಅತ್ಯವಶ್ಯಕವಾಗಿದೆ.

ಪ್ರಾಸ್ಟೇಟ್​ ಕ್ಯಾನ್ಸರ್​ ನಿಧಾನಗತಿ ಬೆಳವಣಿಗೆ ಹೊಂದಿದ್ದು, ತಮ್ಮ ಜೀವಿತಾವಧಿಯಲ್ಲಿ ಯಾವುದೇ ಹಾನಿಯನ್ನು ಮಾಡದಿದ್ದರೂ ಅದು ಆಕ್ರಮಣಕಾರಿಯಾಗಿರುತ್ತದೆ. ಇದು ಬಲುಬೇಗ ಹರಡುವುದರ ಜೊತೆಗೆ ಅದಕ್ಕೆ ಚಿಕಿತ್ಸೆ ನೀಡುವುದು ಕೂಡ ಕಷ್ಟವಾಗುತ್ತದೆ. ಅವರಿಗೆ ಒಂದೇ ರೀತಿಯ ಅಥವಾ ವಿವಿಧ ಅಪಾಯದ ಅಂಶ ಇದೆಯಾ ಎಂಬುದನ್ನು ಪತ್ತೆ ಮಾಡುವುದು ಮುಖ್ಯವಾಗಿದೆ.

ಈ ಹಿಂದಿನ ಸಂಶೋಧನೆಯಲ್ಲಿ ಹೆಚ್ಚಿನ ದೇಹದ ಕೊಬ್ಬು ಈ ಕ್ಯಾನ್ಸರ್​ ಬೆಳವಣಿಗೆ ಕಾರಣ ಎಂಬ ಸಾಕ್ಷ್ಯ ಒದಗಿಸಿದೆ. ದೇಹದ ತೂಕ ಪ್ರಾಸ್ಟೇಟ್​ ಕ್ಯಾನ್ಸರ್​​ನೊಂದಿಗೆ ಸಂಬಂಧ ಹೊಂದಿರುವ ಕುರಿತು ಸಾಕ್ಷಿ ಇದೆ. ಆದಾಗ್ಯೂ ಇದು ಅಸ್ಪಷ್ಟವಾಗಿದೆ. ಜೊತೆಗೆ ಈ ಅಧ್ಯಯನವೂ ದೇಹದ ಕೊಬ್ಬಿನ ಅಂಶವನ್ನು ಒಳಗೊಂಡಿದ್ದು, ಆಕ್ರಮಣಶೀಲತೆ ನಿರ್ಣಯಿಸಿಲ್ಲ.

ತೂಕ ಮತ್ತು ಪ್ರಾಸ್ಟೇಟ್​ ಕ್ಯಾನ್ಸರ್​ ಸಂಬಂಧವನ್ನು ತಿಳಿಯಬೇಕಿದೆ. ಈ ಹಿನ್ನೆಲೆ 2,58,477 ಪುರುಷರ ದತ್ತಾಂಶ ವಿಶ್ಲೇಷಣೆ ನಡೆಸಲಾಗುವುದು. 17ರಿಂದ 60 ವರ್ಷಗಳ ವಯೋಮಿತಿ ಮಂದಿಯನ್ನು ಮೂರು ಬಾರಿ, ಸ್ಥೂಲಕಾಲ ಮತ್ತು ರೋಗ ಅಭಿವೃದ್ಧಿ ಸ್ವೀಡನ್​ ಅಧ್ಯಯನ ನಡೆಸಿದೆ.

ತೂಕ ಹೆಚ್ಚಳ ಪ್ರಾಸ್ಟೇಟ್​ ಕ್ಯಾನ್ಸರ್​ ಮತ್ತು ಅದರ ಆಕ್ರಮಣಕಾರಿ ಅಭಿವೃದ್ಧಿ ಸಂಬಂಧ ಹೊಂದಿದೆ. ತೂಕ ಹೆಚ್ಚಾಗುವುದನ್ನು ತಡೆಯುವುದರಿಂದ ಆಕ್ರಮಣಕಾರಿ ಮತ್ತು ಮಾರಣಾಂತಿಕ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ಕಡಿಮೆ ವಿಟಮಿನ್​ ಡಿ ಪ್ರಮಾಣದಿಂದ ದೀರ್ಘ ಕೋವಿಡ್​ ಅಪಾಯ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.