ವಾಷಿಂಗ್ಟನ್( ಅಮೆರಿಕ): ಕೋವಿಡ್ ವೇಳೆ ಪ್ರಂಟ್ಲೈನ್ ಕಾರ್ಯಕರ್ತರಾಗಿ ದುಡಿದವರಿಗೆ ಮಾನಸಿಕ ಆರೋಗ್ಯ ಚಿಕಿತ್ಸೆ ಅವಶ್ಯಕವಾಗಿದೆ ಎಂದು ಇಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ಸಂಶೋಧನೆ ತಿಳಿಸಿದೆ. ಕೋವಿಡ್ ಚಿಕಿತ್ಸೆ ವೇಳೆ ಅವರು ಸಾಕಷ್ಟು ಒತ್ತಡ ಮತ್ತು ಆಘಾತ ಅನುಭವಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ನರ್ಸ್ಗಳು ಮನೆಯಲ್ಲಿ ರೋಗಿಗಳಿಗೆ ಆರೈಕೆ ಮಾಡುವಾಗ ಯಾವುದೇ ರೀತಿಯಲ್ಲಿ ಈ ಪರಿಸ್ಥಿತಿಗೆ ಮಾನಸಿಕವಾಗಿ ಸಿದ್ದರಾಗಿರಲಿಲ್ಲ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಸಾಂಕ್ರಾಮಿಕದ ವೇಳೆ ಅವರು ಆಘಾತ ಮತ್ತು ನೈತಿಕ ಸಂಕಟವನ್ನು ಅನುಭವಿಸಿದ್ದಾರೆ. ಅವರು ಮಾನಸಿಕವಾಗಿ ಗುಣವಾಗುವಂತೆ ಚಿಕಿತ್ಸೆ ಬೇಕಾಗಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.
ಕೋವಿಡ್ 19 ಸಾಂಕ್ರಾಮಿಕತೆ ವೇಳೆ ಊಹೆ ಮಾಡದಂತಹ ಪರಿಸ್ಥಿತಿಯನ್ನು ಕೇರ್ ಹೋಮ್ ನರ್ಸ್ಗಳು ತಮ್ಮ ಕೆಲಸದ ವೇಳೆ ಅನುಭವಿಸಿದ್ದಾರೆ. ಅನಾರೋಗ್ಯದ ಪರಿಸ್ಥಿತಿಯಲ್ಲಿರುವಂತಹ ಜನರೊಂದಿಗೆ ಇದ್ದ ಹೋಮ್ ಕೇರ್ ನರ್ಸ್ಗಳು, ಸೋಂಕಿನ ಜೊತೆ ಪದೇ ಪದೆ ಬದಲಾಗುತ್ತಿದ್ದ ಮಾರ್ಗಸೂಚಿ ಮತ್ತು ನಿಯಮಿತ ವೃತ್ತಿಪರರ ಬೆಂಬಲದಿಂದ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ. ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸಿಬ್ಬಂದಿ ಕೂಡ ಇದರಿಂದ ಗುಣಮುಖರಾಗುತ್ತಿದ್ದಾರೆ.
ಸಾಂಕ್ರಾಮಿಕತೆ ಸಮಯದಲ್ಲಿ ಆದಂತಹ ಆಘಾತದಿಂದ ಹೊರಬರಲು ಅವರಿಗೆ ಮಾನಸಿಕ ಆರೋಗ್ಯದ ಬೆಂಬಲ ಜೊತೆ ಸಮಾಲೋಚನೆ ಕೂಡ ಅಗತ್ಯವಾಗಿದೆ. ಅವರಿಗೆ ತನ್ನ ಕೆಲಸದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಇದು ಅವಶ್ಯಕವಾಗಿದೆ ಎಂದು ಎಂದು ಸಂಶೋಧನೆಯ ಮುಖ್ಯಸ್ಥರಾದ ಡೈನ್ ಬುನ್ ತಿಳಿಸಿದರು.
ಈ ಸಂಶೋಧನೆ ಸಂಬಂಧ ತಂಡ, ಇಂಗ್ಲೆಂಡ್ ಮತ್ತು ಸ್ಕ್ಟ್ಲ್ಯಾಂಡ್ನಲ್ಲಿ ಹೋಮ್ ಕೇರ್ ನರ್ಸ್ ಆಗಿ ಸೇವೆ ಸಲ್ಲಿಸಿದವರ ವಿವರವಾದ ಸಂದರ್ಶನ ನಡೆಸಿದೆ. ಈ ವೇಳೆ, ಅವರು ಪ್ರಮುಖವಾಗಿ ನರ್ಸ್ಗಳ ಮಾನಸಿಕ ಯೋಗಕ್ಷೇಮ ಮತ್ತು ಸ್ಥಿತಿಸ್ಥಾಪಕದ ಕಡೆ ಗಮನ ಹರಿಸಿದ್ದಾರೆ. ಈ ಅಧ್ಯಯನ ನರ್ಸ್ಗಳು ಈ ಅನುಭವದಿಂದ ಹೊರಬಂದು ಭವಿಷ್ಯದ ಸಾಂಕ್ರಾಮಿಕತೆಗೆ ಉತ್ತಮ ಸಿದ್ದತೆ ಕುರಿತು ಬೆಳಕು ಚೆಲ್ಲಲಿದೆ.
ಕೇರ್ ಹೋಮ್ ನರ್ಸ್ಗಳಿಗೆ ವಿಶಾಲ ವೃತ್ತಿಪರತೆ ಮತ್ತು ಸರ್ಕಾರದ ಮಾನ್ಯತೆ ಅಗತ್ಯ ಕೌಶಲ್ಯ ಬೇಕು ಎಂಬುದನ್ನು ಈ ಅಧ್ಯಯನ ತಿಳಿಸುತ್ತದೆ. ಭವಿಷ್ಯದ ಸಾಂಕ್ರಾಮಿಕತೆ ಮತ್ತು ವಿಪತ್ತಿಗೆ ಉತ್ತಮವಾಗಿ ಸ್ಪಂದಿಸುವ ವಾತಾವರಣವನ್ನು ಇದು ಸೃಷ್ಟಿಸಿದೆ
ಇದನ್ನೂ ಓದಿ: ಮಕ್ಕಳಲ್ಲಿ ದೀರ್ಘಕಾಲದ ಕೋವಿಡ್ ಲಕ್ಷಣಗಳು ಕಾಲಾಂತರದಲ್ಲಿ ಬದಲು: ಅಧ್ಯಯನ