ETV Bharat / sukhibhava

ಹಿಂದಿನ ಭಯಾನಕ ಘಟನೆಗಳು ಮೆದುಳಿನಲ್ಲಿ ಹಾಗೆ ಇರುತ್ತವೆ:ಹೇಗೆ ಗೊತ್ತಾ? - brains prefrontal cortex

ಮೆದುಳಿನಲ್ಲಿ ಸಂಗ್ರಹವಾಗಿರುತ್ತವೆ ಭಯಾನಕ ಘಟನೆಗಳು - ಮೆಮೊರಿ ನ್ಯೂರಾನ್‌ಗಳ ನಡುವೆ ಇರುತ್ತವೆ ನೆನಪುಗಳು - ಇದನ್ನು ರಿಮೋಟ್ ಫಿಯರ್​ ಮೆಮೊರೀಸ್ ಎಂದು ಕರೆಯಲಾಗುತ್ತದೆ.

Old fears are stored in the brain
Old fears are stored in the brain
author img

By

Published : Dec 26, 2022, 1:51 PM IST

ಲಾಸ್ ಏಂಜಲೀಸ್: ಹಿಂದೆ ನಡೆದ ಆಘಾತಕಾರಿ ಘಟನೆಗಳ ನೆನಪನ್ನು ಮೆದುಳು ಹೇಗೆ ಸಂಗ್ರಹ ಮಾಡಿ ಇಟ್ಟುಕೊಳ್ಳುತ್ತದೆ ಎಂಬುದನ್ನು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಆ ನೆನಪುಗಳನ್ನು ಹೇಗೆ ಮರುಪಡೆಯಬಹುದು ಎಂಬುದನ್ನು ಸಹ ಅವರು ಕಂಡು ಹಿಡಿದಿದ್ದಾರೆ. ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ (PFC) ನಲ್ಲಿರುವ ಮೆಮೊರಿ ನ್ಯೂರಾನ್‌ಗಳ ನಡುವೆ ಅವು ಶಾಶ್ವತವಾಗಿ ಸಂಗ್ರಹವಾಗಿರುತ್ತವೆ ಎಂಬುದನ್ನು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ.

ಕೆಲವು ತಿಂಗಳುಗಳು ಅಥವಾ ದಶಕಗಳ ಹಿಂದೆ ಸಂಭವಿಸಿದ ದುರಂತ ಮತ್ತು ಭಯಾನಕ ಘಟನೆಗಳಿಗೆ ಸಂಬಂಧಿಸಿದ ನೆನಪುಗಳನ್ನು 'ರಿಮೋಟ್ ಫಿಯರ್​ ಮೆಮೊರೀಸ್​​' ಎಂದು ಕರೆಯಲಾಗುತ್ತದೆ. ಈ ಘಟನೆಗಳ ನಂತರ ಪ್ರಿಫ್ರಂಟಲ್ ಮೆಮೊರಿ ಸರ್ಕ್ಯೂಟ್‌ಗಳು ಕ್ರಮೇಣ ಬಲಗೊಳ್ಳುತ್ತವೆ ಎಂದು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ.

ಇದನ್ನೂ ಓದಿ: ನಿದ್ರೆಯಲ್ಲಿದ್ದಾಗ ಮೆದುಳು ಚಲನಾತ್ಮಕ ಸ್ಮರಣೆಯನ್ನು ಸಂಗ್ರಹಿಸುತ್ತದೆ: ಸಂಶೋಧನೆ

ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ನಲ್ಲಿ ಕಹಿ ನೆನಪುಗಳ ಶಾಶ್ವತ ಸಂಗ್ರಹಣೆಯಲ್ಲಿ ಈ ಪ್ರಕ್ರಿಯೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಿಂದಿನ ಸಂಶೋಧನೆಯು ಸೆರೆಬ್ರಲ್ ಕಾರ್ಟೆಕ್ಸ್‌ನಲ್ಲಿರುವ PFC ಹಳೆಯ ನೆನಪುಗಳನ್ನು ಕ್ರೂಢೀಕರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂಬುದನ್ನು ತೋರಿಸಿದೆ.

ಭಯದ ಘಟನೆ ಸಂಭವಿಸಿದಾಗ ಮತ್ತು ಅದರ ಬಗ್ಗೆ ಮತ್ತೊಮ್ಮೆ ಯೋಚಿಸಿದಾಗ ಈ ಪ್ರದೇಶದಲ್ಲಿ ಮೆಮೊರಿ ನ್ಯೂರಾನ್‌ಗಳು ಸಕ್ರಿಯಗೊಳ್ಳುತ್ತವೆ ಎಂದು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ. ಆ ಕಹಿ ಘಟನೆಗಳನ್ನು ತಪ್ಪಿಸಬಹುದೇ ಎಂದು ವಿಜ್ಞಾನಿಗಳು ತನಿಖೆ ನಡೆಸಿದ್ದಾರೆ. ಪಿಎಫ್‌ಸಿಯಲ್ಲಿನ ಈ ಮೆಮೊರಿ ನ್ಯೂರಾನ್‌ಗಳನ್ನು ಜಾಣ್ಮೆಯಿಂದ ನಿರ್ವಹಿಸಿದಾಗ, ಪ್ರಾಣಿಗಳು ಸಹ ತಮ್ಮ ಹಳೆಯ ಕಹಿ ನೆನಪುಗಳನ್ನು ಮರುಪಡೆಯಲು ಸಾಧ್ಯವಾಗಿಲ್ಲ ಎಂಬುದನ್ನು ಅವರು ಕಂಡು ಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.