ETV Bharat / sukhibhava

ಹಲ್ಲಿನ ಆರೋಗ್ಯಕ್ಕೆ ಗಮನ ಹರಿಸದಿದ್ದರೆ ಇದು ಅಲ್ಝಮೈರಾ ಅಪಾಯಕ್ಕೆ ಕಾರಣವಾದೀತು ಜೋಕೆ

author img

By

Published : Jul 6, 2023, 4:16 PM IST

ಈ ಅಧ್ಯಯನವೂ ಒಸಡಿನ ಕಾಯಿಲೆ ಮತ್ತು ಹಲ್ಲಿನ ನಷ್ಟವೂ ಅಲ್ಝಮೈರ್​​ ರೋಗಕ್ಕೆ ಕಾರಣವಾಗುತ್ತದೆ ಎಂದು ಸಾಬೀತು ಮಾಡಿಲ್ಲ. ಇದು ಕೇವಲ ಸಂಬಂಧವನ್ನು ತೋರಿಸಿದೆ.

Not maintaining dental health can lead to the risk of Alzheimer's

ಟೋಕಿಯೋ: ಕಳಪೆ ಹಲ್ಲಿನ ಆರೋಗ್ಯವೂ ಮಿದುಳಿನ ಮೌಲ್ಯವನ್ನು ಕಡಿಮೆ ಮಾಡುವ ಮೂಲಕ ಅಲ್ಝಮೈರಾ ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ. ಜರ್ನಲ್​ ನ್ಯೂರೋಲಾಜಿ ಅಧ್ಯಯನದಲ್ಲಿ ಇದನ್ನು ಪ್ರಕಟಿಸಲಾಗಿದೆ.

ಒಸಡು ಕಾಯಿಲೆ ಮತ್ತು ಹಲ್ಲಿನ ನಷ್ಟವೂ ಮೆದುಳು ಕುಗ್ಗಿವಿಕೆಯೊಂದಿಗೆ ಸಂಬಂಧ ಹೊಂದಿದೆ. ಇದು ಸ್ಮರಣಾಶಕ್ತಿ ಮತ್ತು ಮರೆವಿನ ರೋಗದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಅಧ್ಯಯನವೂ ಒಸಡಿನ ಕಾಯಿಲೆ ಮತ್ತು ಹಲ್ಲಿನ ನಷ್ಟವೂ ಅಲ್ಝಮೈರ್​​ ರೋಗಕ್ಕೆ ಕಾರಣವಾಗುತ್ತದೆ ಎಂದು ಸಾಬೀತು ಮಾಡಿಲ್ಲ. ಇದು ಕೇವಲ ಸಂಬಂಧವನ್ನು ತೋರಿಸಿದೆ ಎಂದಿದ್ದಾರೆ ಸಂಶೋಧಕರು.

ಹಲ್ಲಿನ ನಷ್ಟ ಮತ್ತು ಒಸಡಿನ ಕಾಯಿಲೆಗೆ ಪ್ರಮುಖ ಕಾರಣ ಹಲ್ಲಿನ ಸುತ್ತಲಿನ ಟಿಶ್ಯೂನ ಊರಿಯೂತವಾಗಿದ್ದು, ಇದು ಒಸಡನ್ನು ಕುಗ್ಗಿಸಿ, ಹಲ್ಲು ಹಾಳಾಗುವಂತೆ ಮಾಡುತ್ತದೆ. ಇದು ಸಾಮಾನ್ಯ ಪರಿಸ್ಥಿತಿಯಾಗಿದೆ. ಇದು ಡೆಮಾನ್ಶಿಯಾದೊಂದಿಗೆ ಕೂಡ ಸಂಬಂಧ ಹೊಂದಿದೆ ಎಂದು ಜಪಾನ್​ನ ತೊಹೊಕು ಯುನಿವರ್ಸಿಟಿಯ ಸಂತೋಷಿ ಯಮಗುಚಿ ತಿಳಿಸಿದ್ದಾರೆ.

ನಮ್ಮ ಅಧ್ಯಯನವೂ ಈ ಪರಿಸ್ಥಿತಿಗಳು ಮಿದುಳಿನ ಯೋಜನೆಗಳ ನಿಯಂತ್ರಣ ಮತ್ತು ಸ್ಮರಣೆ ಮೇಲೆ ಪ್ರಮುಖ ಪಾತ್ರವಿದೆ ಎಂದು ತೋರಿಸಿದೆ. ಈ ಹಿನ್ನಲೆ ಜನರು ತಮ್ಮ ಹಲ್ಲಿನ ಕಾಳಜಿವಹಿಸಲು ಮತ್ತೊಂದು ಕಾರಣವನ್ನು ನೀಡಿದೆ. ಈ ಅಧ್ಯಯನಕ್ಕೆ ಸರಾಸರಿ 67 ವಯೋಮಾನದ 172 ಜನರನ್ನು ಒಳಪಡಿಸಲಾಗಿದೆ. ಈ ಜನರು ಆರಂಭದಲ್ಲಿ ಯಾವುದೆ ಸ್ಮರಣೆ ಸಮಸ್ಯೆಯನ್ನು ಹೊಂದಿರಲಿಲ್ಲ.

ಭಾಗಿದಾರರು ಆರಂಭದಲ್ಲಿ ಹಲ್ಲಿನ ಪರೀಕ್ಷೆ ಮತ್ತು ಸ್ಮರಣೆಯ ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ ಹಿಪೊಕ್ಯಾಪಸ್​ ಮೌಲ್ಯ ಅಳೆಯಲು ಮೆದುಳಿನ ಸ್ಕ್ಯಾನ್​ಗೆ ಒಳಪಡಿಸಲಗಿದೆ. ನಾಲ್ಕು ವರ್ಷದ ಬಳಿಕ ಮತ್ತೆ ಪರೀಕ್ಷೆಯನ್ನು ಪುನರಾವರ್ತನೆ ಮಾಡಲಾಗಿದೆ. ಸಂಶೋಧಕರು ಈ ವೇಳೆ ಹಲ್ಲು ಮತ್ತು ಒಸಡಿನ ಕಾಯಿಲೆಗಳು ಮೆದುಳಿನ ಎಡ ಹಿಪ್ಪೊಕ್ಯಾಪಸ್​ನಲ್ಲಿ ಬದಲಾವಣೆಯನ್ನು ಪತ್ತೆ ಮಾಡಿದ್ದಾರೆ.

ಸಾಧಾರಣ ಒಸಡಿನ ಸಮಸ್ಯೆ ಹೊಂದಿರುವರಲ್ಲಿ ಮೆದುಳಿನ ಎಡ ಹಿಪ್ಪೊಕ್ಯಾಂಪಸ್​ ಸಂಕುಚಿತಗೊಳ್ಳುವ ದರ ವೇಗವಾಗಿದೆ. ಆದಾಗ್ಯೂ ಗಂಭೀರ ಒಸಡಿನ ಸಮಸ್ಯೆಗಳು ಮಿದುಳಿನ ಪ್ರದೇಶವನ್ನು ವೇಗವಾಗಿ ಸಂಕುಚಿತಗೊಳಿಸಲಿದೆ. ಮತ್ತೊಂದು ಅಧ್ಯಯನದಲ್ಲಿ ರಾತ್ರಿಯ ಹಲ್ಲಿನ ಶುಚಿತ್ವ ತಪ್ಪಿಸುವುದು ಕೂಡ ಹೃದಯ ಸಮಸ್ಯೆ ಅಪಾಯ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ. ಈ ಫಲಿತಾಂಶಗಳು ಹಲ್ಲಿನ ಆರೋಗ್ಯ ರಕ್ಷಣೆಗೆ ಪ್ರಾಧಾನ್ಯತೆ ನೀಡುವುದಕ್ಕೆ ಒತ್ತು ನೀಡಿದೆ ಎಂದು ಯಮಗುಚಿ ತಿಳಿಸಿದ್ದಾರೆ. ತೀವ್ರವಾದ ಒಸಡು ಕಾಯಿಲೆ ಇರುವವರಿಗೆ ಇನ್ನೂ ಒಂದು ಹಲ್ಲಿನ ಕಾರಣದಿಂದ ಮೆದುಳಿನ ಕುಗ್ಗುವಿಕೆಯ ಹೆಚ್ಚಳವು 1.3 ವರ್ಷಗಳ ಮೆದುಳಿನ ವಯಸ್ಸಿಗೆ ಸಮನಾಗಿರುತ್ತದೆ.

ಈ ಫಲಿತಾಂಶಗಳು ಹಲ್ಲುಗಳ ಆರೋಗ್ಯವನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತವೆ. ಬಾಯಿಯ ಆರೋಗ್ಯ ಮತ್ತು ಒಸಡಿನ ರೋಗದ ನಿಯಂತ್ರಣಕ್ಕೆ ನಿಯಮಿತವಾಗಿ ವೈದ್ಯರ ಭೇಟಿ ನೀಡುವುದು ಕೂಡ ನಿರ್ಣಾಯಕವಾಗಲಿದೆ. ಗಂಭೀರ ಒಸಡು ಮತ್ತು ಹಲ್ಲಿನ ಸಮಸ್ಯೆಗಳನ್ನು ಸೂಕ್ತ ಸಾಧನಗಳನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Obesity in India: ಮಧುಮೇಹ, ಅಧಿಕ ರಕ್ತದೊತ್ತಡ ಬೆನ್ನಲ್ಲೇ ಭಾರತೀಯರನ್ನು ಕಾಡುತ್ತಿದೆ ಸ್ಥೂಲಕಾಯದ ಸಮಸ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.