ವಾಷಿಂಗ್ಟನ್: ಸಂಶೋಧಕರು B ಜೀವಕೋಶದ ಆ್ಯಂಟಿಜೆನ್ ರೆಸಿಪ್ಟರ್ನ ಮೂರು ಆಯಾಮದ ರಚನೆಯನ್ನು ಗುರುತಿಸಿದ್ದು, ಇದನ್ನು ಪ್ರಕಟಿಸಲಾಗಿದೆ. ಇದು ಅದರ ಸಂಯೋಜನೆಯ ಮೇಲೆ ಹೊಸ ಬೆಳಕು ಚೆಲ್ಲುತ್ತದೆ. B ಜೀವಕೋಶದ ಆ್ಯಂಟಿಜೆನ್ ರೆಸಿಪ್ಟರ್ ಜೀವಕೋಶದ ಪೊರೆಗೆ ಪ್ರತಿಕಾಯವಾದ Ig ಆಲ್ಫಾ ಮತ್ತು Ig ಬೀಟಾ ಎಂಬ ಎರಡು ಸಣ್ಣ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಈ ಚಿಕ್ಕ ಉಪಘಟಕಗಳು B ಕೋಶದಲ್ಲಿನ ರೋಗವನ್ನು ಪತ್ತೆ ಹಚ್ಚಿದ ನಂತರ ಒಳಭಾಗಕ್ಕೆ ಸೂಚನೆಯನ್ನು ರವಾನಿಸುತ್ತದೆ.
ಈ ಸಿಗ್ನಲಿಂಗ್ ಉಪಘಟಕಗಳು ಇಮ್ಯುನೊಗ್ಲಾಬ್ಯುಲಿನ್‌ನೊಂದಿಗೆ ಹೇಗೆ ಸಂಪರ್ಕಗೊಂಡಿವೆ ಎಂಬುದು ತಿಳಿದಿಲ್ಲ ಎಂದು ಫ್ರೈಬರ್ಗ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಪ್ರೊ.ಡಾ.ಮೈಕೆಲ್ ರೆಥ್ ಹೇಳುತ್ತಾರೆ. ಇವರು 30 ವರ್ಷಗಳಿಂದ ರೆಸಿಪ್ಟರ್ನ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಮೂಲತಃ ಅದರ ಸಿಗ್ನಲಿಂಗ್ ಉಪಘಟಕಗಳನ್ನು ಕಂಡುಹಿಡಿದಿದ್ದಾರೆ. ಅವರು ಕ್ಲಸ್ಟರ್ ಆಫ್ ಎಕ್ಸಲೆನ್ಸ್ CIBSS - ಸೆಂಟರ್ ಫಾರ್ ಇಂಟಿಗ್ರೇಟಿವ್ ಬಯೋಲಾಜಿಕಲ್ ಸಿಗ್ನಲಿಂಗ್ ಸ್ಟಡೀಸ್‌ನ ಸದಸ್ಯರಾಗಿದ್ದಾರೆ. ಕ್ಲಸ್ಟರ್ ಆಫ್ ಎಕ್ಸಲೆನ್ಸ್ BIOSS ನ ಸಹ ನಿರ್ದೇಶಕರಾಗಿದ್ದಾರೆ.
ಇಷ್ಟು ದಿನ ಮೆಂಬರೇನ್ ಪ್ರೊಟೀನ್‌ಗಳ ನಿಖರವಾದ ರಚನೆ ಬಗ್ಗೆ ಅಧ್ಯಯನ ಮಾಡಲು ಬೇಕಾಗುವ ತಾಂತ್ರಿಕ ಸಾಧ್ಯತೆಗಳನ್ನು ನಾವು ಹೊಂದಿರಲಿಲ್ಲ. ಆದ್ರೆ ಈಗ ಕ್ರಯೋ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯು B ಸೆಲ್ ರಿಸೆಪ್ಟರ್‌ನ ಹೆಚ್ಚಿನ ರೆಸಲ್ಯೂಶನ್ ಚಿತ್ರವನ್ನು ತೆಗೆಯಲು ನಮಗೆ ಅನುವು ಮಾಡಿಕೊಟ್ಟಿದೆ ಎಂದು ರೆಥ್ ಹೇಳುತ್ತಾರೆ.
ಕಡಿಮೆ ತಾಪಮಾನದಲ್ಲಿ ಅಧ್ಯಯನ: ಮೈನಸ್ 183 C ತಾಪಮಾನದಲ್ಲಿ ಕ್ರಯೋ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯೊಂದಿಗೆ, ಅಧ್ಯಯನ ಮಾಡಬೇಕಾಗುತ್ತದೆ. ಇದು ಅಣುಗಳ ನೈಸರ್ಗಿಕ ಚಲನೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರೋಟೀನ್ ರಚನೆಯನ್ನು ನಾಶಪಡಿಸುವ ಸಣ್ಣ ಐಸ್ ಸ್ಫಟಿಕಗಳ ರಚನೆಯನ್ನು ತಡೆಯುತ್ತದೆ. ಈ ರೀತಿಯಾಗಿ ಇತರ ಎಲೆಕ್ಟ್ರಾನ್ ಮೈಕ್ರೋಸ್ಕೋಪಿಕ್ ವಿಧಾನಗಳಿಗಿಂತ ಇದರಲ್ಲಿ ಹೆಚ್ಚಿನ ಫಲಿತಾಂಶವನ್ನು ಸಾಧಿಸಲು ಸಾಧ್ಯವಿದೆ.
ಪ್ರಸ್ತುತ ಅಧ್ಯಯನದಲ್ಲಿ, ಸಂಶೋಧಕರು 3.3 ಆಂಗ್‌ಸ್ಟ್ರೋಮ್‌ಗಳನ್ನು ಕಂಡುಕೊಂಡಿದ್ದಾರೆ. ಇದು ಕೆಲವೇ ಪರಮಾಣುಗಳ ರೂಪವಾಗಿದೆ. ಮೂರು ಆಯಾಮದಲ್ಲಿರುವ ಗಮನಾರ್ಹವಾದ ವಿಷಯವೆಂದರೆ ಕೇವಲ ಒಂದು ಬದಿಯಲ್ಲಿ ಮಾತ್ರ Ig ಆಲ್ಫಾ ಮತ್ತು Ig ಬೀಟಾಗೆ ಇದೆ. ಹೀಗಾಗಿ ಇದು ಅಸಿಮ್ಮೆಟ್ರಿಯು T ಸೆಲ್ ರಿಸೆಪ್ಟರ್ ಅನ್ನು ಹೋಲುತ್ತದೆ.
ಇದನ್ನೂ ಓದಿ: ಮೇದೋಜೀರಕ ಗ್ರಂಥಿ ಕ್ಯಾನ್ಸರ್ ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲಿ ವೈಫಲ್ಯಗಳಿವೆ: ಸಂಶೋಧನೆ
ಮತ್ತೊಂದು ಪ್ರಮುಖ ಅಂಶವೆಂದರೆ, ರೆಸೆಪ್ಟರ್ನ ಮತ್ತೊಂದು ರಚನೆಯನ್ನು 2019 ರಲ್ಲಿ ಮೊದಲ ಬಾರಿಗೆ ಕಂಡುಹಿಡಿಯಲಾಗಿತ್ತು. ಎರಡೂ ವಿಧದ ರೆಸೆಪ್ಟರ್ಗಳು ಒಂದಕ್ಕೊಂಡು ಹೊಂದುವುದಿಲ್ಲ ಎಂಬುದು ಆಶ್ಚರ್ಯಕರವಾಗಿದೆ ಎಂದು ರೆಥ್ ವಿವರಿಸುತ್ತಾರೆ. ಇದು ಈಗ ಸ್ಪಷ್ಟಪಡಿಸಲಾದ ರಚನೆಯು ದೊಡ್ಡ ರೆಸಿಪ್ಟರ್ ಸಂಕೀರ್ಣದ ಭಾಗವಾಗಿದೆ ಮತ್ತು ಇದು B ಕೋಶ ಮೇಲ್ಮೈಯಲ್ಲಿ ಇನ್ನೂ ಇತರ ಅಣುಗಳೊಂದಿಗೆ ಸಂವಹನ ನಡೆಸುತ್ತದೆ ಎಂದು ತೀರ್ಮಾನಿಸಲಾಗಿದೆ.