ETV Bharat / sukhibhava

ಹಿಮೋಗ್ಲೋಬಿನ್​ ಕೊರತೆಯಿಂದ ಅನೇಕ ಗಂಭೀರ ಸಮಸ್ಯೆ; ಈ ಆಹಾರ ಹೆಚ್ಚು ಸೇವಿಸಿ..

ರಕ್ತದ ಹಿಮೋಗ್ಲೋಬಿನ್​ ಗಣನೀಯವಾಗಿ ಕಡಿಮೆಯಾದರೆ, ಇದು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

Many serious problems due to lack of hemoglobin; Eat more of these foods

author img

By

Published : Jul 11, 2023, 5:38 PM IST

ಹೈದರಾಬಾದ್​: ನಮ್ಮ ದೇಹದ ಪ್ರತಿರೋಧಕ ವ್ಯವಸ್ಥೆ ಮತ್ತು ಇತರೆ ಕ್ರಿಯೆಗಳು ಸರಾಗವಾಗಿ ನಡೆಯಲು ಆಹಾರದಲ್ಲಿನ ಪೋಷಕಾಂಶಗಳು ಪ್ರಮುಖವಾಗಿವೆ. ಈ ಹಿನ್ನೆಲೆ ಅಗತ್ಯ ಪ್ರಮಾಣಕ್ಕೆ ಅನುಗುಣವಾಗಿ ಆರೋಗ್ಯಯುತ ಮತ್ತು ಪೌಷ್ಟಿಕಾಂಶಯುಕ್ತ ಆಹಾರಗಳ ಸೇವನೆ ಮಾಡಬೇಕು ಎಂದು ವೈದ್ಯರು ಮತ್ತು ತಜ್ಞರು ಸಲಹೆ ನೀಡುತ್ತಾರೆ. ನಮ್ಮ ದೇಹದ ಆಂತರಿಕ ವ್ಯವಸ್ಥೆ ಸರಾಗವಾಗಿ ನಡೆಯಲು ಮತ್ತು ಆರೋಗ್ಯಯುತವಾಗಿರಲು ಕಬ್ಬಿಣ, ಪ್ರೋಟಿನ್​, ವಿಟಮಿನ್​ ಮತ್ತು ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ಮುಖ್ಯ ಪಾತ್ರ ವಹಿಸುತ್ತವೆ.

ಹಿಮೋಗ್ಲೋಬಿನ್​ ಎಂಬ ಪ್ರೋಟಿನ್​ ಕೆಂಪು ರಕ್ತ ಕಣದಲ್ಲಿ ಪತ್ತೆಯಾಗುತ್ತದೆ. ಇದರ ಪ್ರಮಾಣ ಕಡಿಮೆಯಾದರೆ, ರಕ್ತ ಹೀನತೆ ಉಂಟಾಗುತ್ತದೆ. ರಕ್ತದ ಹಿಮೋಗ್ಲೋಬಿನ್​ ಗಣನೀಯವಾಗಿ ಕಡಿಮೆಯಾದರೆ, ಇದು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದೇ ಕಾರಣಕ್ಕೆ ಅಗತ್ಯ ಪ್ರಮಾಣದ ಹಿಮೋಗ್ಲೋಬಿನ್​ ನಮ್ಮ ರಕ್ತದಲ್ಲಿ ಇರಬೇಕು.

ಇಡೀ ವ್ಯವಸ್ಥೆಗೆ ಆಧಾರ: ಈ ಕುರಿತು ಮಾತನಾಡಿರುವ ದೆಹಲಿಯ ಪೋಷಕಾಂಶ ತಜ್ಞೆ ಡಾ ದಿವ್ಯಾ ಶರ್ಮಾ, ಕೆಂಪು ರಕ್ತ ಕೋಶದಲ್ಲಿ ಕಂಡುಬರುವ ಪ್ರಮುಖ ಪ್ರೋಟಿನ್​ ಹಿಮೋಗ್ಲೋಬಿನ್​ ಆಗಿದೆ. ಇದು ರಕ್ತದ ಮೂಲಕ ಇಡೀ ದೇಹಕ್ಕೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ನಮ್ಮ ದೇಹದಲ್ಲಿ ಹಿಮೊಗ್ಲೋಬಿನ್​ ಕಡಿಮೆ ಆದರೆ ದೇಹದ ಅಂಗಾಂಶ, ಟಿಶ್ಯೂ ಮತ್ತು ಕೋಶಗಳ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಇದು ಅನೇಕ ರೋಗ ಮತ್ತು ಸಮಸ್ಯೆಗೆ ಕಾರಣವಾಗುತ್ತದೆ.

ಈ ಹಿಮೋಗ್ಲೋಬಿನ್​ ಅಂಶ ಪುರುಷರು, ಮಹಿಳೆಯರು ಮತ್ತು ಮಕ್ಕಳಲ್ಲಿ ವಿವಿಧ ಮಟ್ಟದಲ್ಲಿ ಕಂಡು ಬರುತ್ತದೆ. ನವಜಾತ ಶಿಶುಗಳಲ್ಲಿ ಹಿಮೋಗ್ಲೋಬಿನ್​ ಮಟ್ಟ 17.22 ಜಿ/ಡಿಎಲ್​, ಮಕ್ಕಳಲ್ಲಿ 11.13 ಜಿ/ಡಿಎಲ್​ ಇರುತ್ತದೆ. ಮತ್ತೊಂದೆಡೆ, ವಯಸ್ಕ ಪುರುಷರಲ್ಲಿ 14 ರಿಂದ 18 ಜಿ/ಡಿಎಲ್​ ಮತ್ತು ಮಹಿಳೆಯರಲ್ಲಿ 12 ರಿಂದ 16 ಜಿ/ಡಿಎಲ್​ ಇರುತ್ತದೆ. ಪುರುಷರಲ್ಲಿ ಎರಡು ಅಂಕಿಮಟ್ಟ ಕೆಳಗೆ ಇಳಿಯುವುದು ಕೂಡ ತುಂಬಾ ಗಂಭೀರ ಸಮಸ್ಯೆಯಾಗುತ್ತದೆ. ಇದು ಕಾಳಜಿ ವಿಷಯವಾಗಿದ್ದು, ತಕ್ಷಣಕ್ಕೆ ವೈದ್ಯರ ಭೇಟಿ ಮಾಡಬೇಕಾಗುತ್ತದೆ.

ರಕ್ತದಲ್ಲಿ ಹಿಮೋಗ್ಲೋಬಿನ್​ ಮಟ್ಟ ಕುಸಿತ ಅನೇಕ ಮಾನಸಿಕ ಮತ್ತು ದೈಹಿಕ ಸಮಸ್ಯೆಗೆ ಕಾರಣವಾಗುತ್ತದೆ. ಅವುಗಳೆಂದರೆ,

  • ಆಗಾಗ್ಗೆ ತಲೆನೋವು
  • ಉಸಿರಾಟ ಸಮಸ್ಯೆ ಮತ್ತು ಆಲಸ್ಯ
  • ಆಯಾಸ ಮತ್ತು ಸುಸ್ತು
  • ದೇಹದಲ್ಲಿ ಜಡತ್ವ
  • ಕಡಿಮೆ ರಕ್ತದೊತ್ತಡ
  • ದೇಹದ ಶಕ್ತಿ ಕುಗ್ಗುವಿಕೆ
  • ಕಿರಿಕಿರಿ ಮತ್ತು ಆತಂಕ
  • ಎದೆ ನೋವು
  • ಹೃದಯ ಬಡಿತ ಹೆಚ್ಚುವುದು
  • ರಕ್ತಹೀನತೆ
  • ಅಂಗೈ ಮತ್ತು ಪಾದದಲ್ಲಿ ಚಳಿ ಹೆಚ್ಚುವುದು
  • ಏಕಾಗ್ರತೆ ಕಡಿಮೆಯಾಗುವುದು
  • ಮೂಳೆಯ ಸಾಮರ್ಥ್ಯ ಕಡಿಮೆ
  • ದುರ್ಬಲ ಪ್ರತಿರೋಧಕ ಶಕ್ತಿ
  • ಋತುಚಕ್ರದ ವೇಳೆ ಭಾರಿ ನೋವು ಮುಂತಾದವು..

ಡಾ ದಿವ್ಯಾ ವಿವರಿಸುವಂತೆ, ದೇಹಕ್ಕೆ ಅಗತ್ಯ ಪೋಷಕಾಂಶ ಕೊರತೆ ಎದುರಾಗುವುದು ಕೇವಲ ರಕ್ತದಲ್ಲಿನ ಹಿಮೋಗ್ಲೋಬಿನ್​ ಕೊರತೆಯಿಂದ ಮಾತ್ರವಲ್ಲ. ಇದಕ್ಕೆ ಕೆಲವು ವಂಶವಾಹಿನಿ, ಸಿಕಲ್​ ಸೆಲ್​ ಅನಿಮಿಯ, ಕ್ಯಾನ್ಸರ್​, ತಲಸ್ಸೆಮಿಯಾ, ಮೂತ್ರಪಿಂಡ ಸಮಸ್ಯೆ, ಯಕೃತ್​, ದೀರ್ಘ ಆರೋಗ್ಯ ಸಮಸ್ಯೆಗಳು ಕಾರಣವಾಗುತ್ತದೆ. ಇದು ಕೂಡ ಹಿಮೋಗ್ಲೋಬಿನ್​ ಮಟ್ಟ ಕಡಿಮೆಯಾಗಲು ಕಾರಣವಾಗಿದೆ. ಇದರ ಹೊರತಾಗಿ, ಖಿನ್ನತೆ, ಮಂಪರು, ಕಿರಿಕಿರಿ ಮತ್ತು ಅರಿವಿನ ಕುಸಿತ, ಚಿಂತನೆ ಸಾಮರ್ಥ್ಯ ಕೂಡ ಹಿಮೋಗ್ಲೋಬಿನ್​ ಸಂಖ್ಯೆ ಕುಸಿಯಲು ಕಾರಣವಾಗಿದೆ.

ರಕ್ತ ಹೀನತೆ ಆಗದಂತೆ ತಡೆಯಲು ರಕ್ತದಲ್ಲಿನ ಹಿಮೋಗ್ಲೋಬಿನ್​ ಸರಿಯಾದ ಪ್ರಮಾಣದಲ್ಲಿ ಇರುವುದು ಪ್ರಮುಖವಾಗಿದೆ. ಆದಾಗ್ಯೂ ಅನೇಕ ಮಹಿಳೆಯರಲ್ಲಿ ಪ್ರತಿ ವಯಸ್ಸಿನಲ್ಲೂ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಗರ್ಭಿಣಿ ಮಹಿಳೆಯರು, ಬೆಳೆಯುವ ಮಕ್ಕಳು, ವಯಸ್ಕರಲ್ಲಿ ಇದು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರ ಸಲಹೆ ಪ್ರಮುಖವಾಗಿದೆ. ಇದಕ್ಕೆ ಸರಿಯಾದ ಆಹಾರ ಪದ್ಧತಿ ಹೊಂದುವುದು ಅಗತ್ಯವಾಗಿದೆ.

ಕಬ್ಬಿಣ, ವಿಟಮಿನ್​ ಸಿ, ವಿಟಮಿನ್​ ಬಿ ಮತ್ತು ಫೋಲಿಕ್​ ಆಸಿಡ್​ನಂತಹ ಆಹಾರವನ್ನು ಸೇವಿಸುವುದರಿಂದ ರಕ್ತಹೀನತೆ ನಿಯಂತ್ರಿಸಬಹುದು. ಇವುಗಳ ಕೊರತೆಯೇ ರಕ್ತ ಹೀನತೆ ಕಾರಣವಾಗುತ್ತದೆ.

ಈ ಆಹಾರ ಸೇವಿಸಿ: ಹಸಿರು ಎಲೆ, ಪಾಲಕ್​, ಬೀನ್ಸ್​, ಬೀಟ್​ರೋಟ್​, ಕ್ಯಾರೆಟ್​, ಸಿಹಿ ಗೆಣಸು, ದಾಳಿಂಬೆ, ಕಲ್ಲಂಗಡಿ, ಸ್ಟ್ರಾಬೆರಿ, ಸಿಬೆಹಣ್ಣು, ಕಿವಿ ಫ್ರೂಟ್​, ಪಪ್ಪಾಯ, ಬಾಳೆಹಣ್ಣು, ಬ್ರಾಕೋಲಿ, ಧಾನ್ಯ, ಅಕ್ಕಿ, ಬೆಳೆ, ಪುದಿನಾ, ತುಳಸಿ, ಕಿತ್ತಳೆ ಮಾಂಸ, ಮೊಸರು, ಒಣಹಣ್ಣು, ಕುಂಬಳಕಾಯಿ ಬೀಜ, ಖರ್ಜುರ, ಕಡಲೆಬೀಜ, ಮೊಳಕೆಕಾಳು ನಿಮ್ಮ ಆಹಾರದಲ್ಲಿರುವಂತೆ ಮಾಡಬೇಕು. ಇವುಗಳಲ್ಲಿ ಯಥೇಚ್ಛ ಮಟ್ಟದಲ್ಲಿ ಕಬ್ಬಿಣ, ಫೋಲಿಕ್​ ಆಸಿಡ್​, ಪ್ರೋಟಿನ್​, ಕಾರ್ಬೋಹೈಡ್ರೇಟ್​​, ಫೈಬರ್​, ಕ್ಯಾಲ್ಸಿಯಂ, ಪೋಟಾಶಿಯಂ ಇರುತ್ತದೆ. ಇದು ಕೆಂಪು ರಕ್ತ ಕಣ ಹೆಚ್ಚಲು ಸಹಾ ಮಾಡುತ್ತದೆ.

ಇದನ್ನೂ ಓದಿ: ಹೆಚ್ಚು ಕೊಬ್ಬಿನಾಂಶದಿಂದ ಕೂಡಿರುವ ಡೈರಿ ಆಹಾರ ಸೇವನೆ ಕಡಿಮೆ ಮಾಡಿ: ಜಾಗತಿಕ ಅಧ್ಯಯನ ವರದಿ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.