ETV Bharat / sukhibhava

ಬಾಯಿ ಚಪ್ಪರಿಸಿ ತಿನ್ನುವ ಚಾಕೊಲೆಟ್​ನಲ್ಲಿ ಸೀಸ, ಕ್ಯಾಡ್ಮಿಯಂ ಅಂಶ ಪತ್ತೆ! ವರದಿಯಲ್ಲಿ ಬಹಿರಂಗ

ಚಾಕೊಲೆಟ್​ ಉತ್ಪನ್ನಗಳ ಏಳು ವರ್ಗಗಳ ಪೈಕಿ 48 ಉತ್ಪನ್ನಗಳನ್ನು ಪರೀಕ್ಷೆ ಮಾಡಲಾಗಿದ್ದು, 16 ಉತ್ಪನ್ನಗಳಲ್ಲಿ ಅಧಿಕ ಮಟ್ಟದ ಸೀಸ ಮತ್ತು ಕ್ಯಾಡ್ಮಿಯಂ ಪತ್ತೆಯಾಗಿದೆ.

author img

By ETV Bharat Karnataka Team

Published : Oct 26, 2023, 4:37 PM IST

lead and cadmium in the chocolate
lead and cadmium in the chocolate

ಸ್ಯಾನ್​​ಫ್ರಾನ್ಸಿಸ್ಕೋ: ಗ್ರಾಹಕ ವರದಿಗಳ ಪರೀಕ್ಷೆಯ ವೇಳೆ ಜನಪ್ರಿಯ ಚಾಕೊಲೆಟ್​​ ಬ್ರ್ಯಾಂಡ್​ಗಳಲ್ಲಿ ವಿಷಕಾರಿ ಸೀಸ ಮತ್ತು ಕ್ಯಾಡ್ಮಿಯಂ ಅಂಶಗಳು ಸಿಕ್ಕಿವೆ ಎಂದು ಅಮೆರಿಕದ ಲಾಭರಹಿತ ಗುಂಪು ತಿಳಿಸಿದೆ. ಆದರೆ, ಇದರಲ್ಲಿರುವ ಚಾಕೊಲೆಟ್​ ಮತ್ತು ಕೊಕೊ ತಿನ್ನಲು ಸುರಕ್ಷಿತವಾಗಿದೆ ಎಂದು ಎನ್​ಸಿಎ ಸ್ಪಷ್ಟಪಡಿಸಿದೆ.

ಫೋರ್ಬ್ಸ್​​ ವರದಿ ಪ್ರಕಾರ, ಚಾಕೊಲೆಟ್​ ಉತ್ಪನ್ನದ ಏಳು ವರ್ಗದಲ್ಲಿ 48 ಉತ್ಪನ್ನಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 16 ಉತ್ಪನ್ನಗಳಲ್ಲಿ ಅಧಿಕ ಮಟ್ಟದ ಸೀಸ ಮತ್ತು ಕ್ಯಾಡ್ಮಿಯಂ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ. ಡಾರ್ಕ್​ ಚಾಕೊಲೇಟ್​ ಬಾರ್​ ಮತ್ತು ವಾಲ್​ಮಾರ್ಟ್​​ ಅವರ ಚಾಕೊಲೆಟ್​ ಮಿಶ್ರ ಮತ್ತು ಹಾರ್ಶಿಸ್​ ಅವರ ಕೊಕೊ ಪೌಡರ್​ ಮತ್ತು ಡ್ರೊಸ್ಟೆ, ಟಾರ್ಗೆಟ್​ನ ಸೆಮಿ ಸ್ವೀಟ್​ ಚಾಕೊಲೆಟ್​ ಚಿಪ್ಸ್​​ ಮತ್ತು ಟ್ರೇಡರ್ಸ್​​ ಜೋ ಅವರ ಚಾಕೊಲೆಟ್​ ಮಿಶ್ರಣದಲ್ಲಿ, ನೆಸ್ಲೆ ಮತ್ತು ಸ್ಟಾರ್​ಬಕ್ಸ್​ ಉತ್ಪನದಲ್ಲಿ ಅಧಿಕ ಮಟ್ಟದ ಲೋಹದ ಅಂಶ ದೊರೆತಿದೆ ಎಂದು ಗ್ರಾಹಕ ವರದಿ ಫಲಿತಾಂಶಗಳು ಹೇಳಿವೆ.

ನೆಸ್ಲೆ ಒಡೆತನದ ಪೆರುಜಿನಾದ ಡಾರ್ಕ್​ ಚಾಕೊಲೆಟ್​ನಲ್ಲಿ ಅಧಿಕ ಮಟ್ಟದ ಸೀಸ ಮತ್ತು ಎವೊಲ್ವೆಡ್​​ನಲ್ಲಿ ಕ್ಯಾಡ್ಮಿಯಂ ಅಂಶ ಪತ್ತೆಯಾಗಿದೆ. ಗ್ರಾಹಕರ ವರದಿ ಲೇಖನಕ್ಕೆ ಪ್ರತಿಕ್ರಿಯಿಸಿರುವ ಎನ್​ಸಿಎ, ಚಾಕೊಲೆಟ್​ ಮತ್ತು ಕೊಕೊಗಳು ತಿನ್ನಲು ಸುರಕ್ಷಿತವಾಗಿದ್ದು, ಇವುಗಳನ್ನು ಶತಮಾನಗಳಿಂದಲೂ ಆಹ್ಲಾದಿಸಲಾಗುತ್ತಿದೆ ಎಂದಿದೆ. ಆಹಾರ ಸುರಕ್ಷತೆ ಮತ್ತು ಉತ್ಪಾದನೆ ಗುಣಮಟ್ಟ ನಮ್ಮ ಪ್ರಮುಖ ಆದ್ಯತೆ ಆಗಿದೆ. ನಾವು ಸಾಮಾಜಿಕ ಜವಾಬ್ದಾರಿ ಮತ್ತು ಸಮರ್ಪಣೆಯ ಪಾರ್ಯದರ್ಶಕತೆ ಹೊಂದಿದ್ದೇವೆ ಎಂದು ಅಮೆರಿಕದ ಚಾಕೊಲೆಟ್​ ಉದ್ಯಮದ ವ್ಯಾಪಾರ ಸಂಘಟನೆ ತಿಳಿಸಿದೆ.

ಎವೊಲ್ವಡ್​ ಚಾಕೊಲೇಟ್​ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ಗ್ರಾಹಕರ ಸುರಕ್ಷತೆ ಹಿನ್ನೆಲೆಯಲ್ಲಿ ನಿಯಮಿತವಾಗಿ ಕಚ್ಛಾ ಪದಾರ್ಥಗಳ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದೆ. ನೆಸ್ಲೆ ವಕ್ತಾರರು ಮಾತನಾಡಿ, ಈ ವರದಿಗಳನ್ನು ಗಮನಿಸುತ್ತಿದ್ದೇವೆ. ಪರೀಕ್ಷೆಯಲ್ಲಿ ಸಿಕ್ಕಿರುವ ಅಂಶಗಳನ್ನು ಕಡಿಮೆ ಮಾಡುವುದಾಗಿಯೂ ತಿಳಿಸಿದೆ. ಟಾರ್ಗೆಟ್​​ ವಕ್ತಾರರು, ತಮ್ಮ ಉತ್ಪನ್ನಗಳು ಸುರಕ್ಷತಾ ಅಗತ್ಯತೆ ಹೊಂದಿವೆ ಎಂದು ತಿಳಿಸಿದ್ದಾರೆ.

ಗ್ರಾಹಕರ ವರದಿ ಗುಂಪುಗಳು ಕ್ಯಾಲಿಫೋರ್ನಿಯಾ ಗುಣಮಟ್ಟದ ಅನುಸಾರ ಅನುಮತಿ ನೀಡುವ ಅಧಿಕ ಲೋಹದ ಡೋಸ್‌ನ ಮಟ್ಟದ ಅನುಸಾರ ಈ ಮಾಪನ ಮಾಡಿದೆ. ಅಮೆರಿಕದ ಫುಡ್​ ಆ್ಯಂಡ್​ ಡ್ರಗ್​ ಆಡ್ಮಿನಿಸ್ಟ್ರೇಷನ್​​, ಕೆಲವು ಆಹಾರಗಳಲ್ಲಿನ ಎರಡು ಲೋಹಗಳ ಪ್ರಮಾಣಕ್ಕೆ ಮಾತ್ರ ಮಿತಿ ಹೊಂದಿದೆ. (ಐಎಎನ್​ಎಸ್​)

ಇದನ್ನೂ ಓದಿ: ಒತ್ತಡದಿಂದ ಬಳಲುತ್ತಿದ್ದೀರಾ? ಹಾಗಾದ್ರೆ 'ನಿಮಗಾಗಿ' ನಿಮ್ಮಿಷ್ಟದ ಅಡುಗೆ ಮಾಡಿ ತಿನ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.