ETV Bharat / sukhibhava

ಎಚ್ಚರ !.. ಹೆಚ್ಚು ಮಧುಮೇಹಿಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ: ಕರ್ನಾಟಕಕ್ಕೆ ಮೂರನೇ ಸ್ಥಾನ

author img

By

Published : Nov 14, 2022, 6:24 PM IST

Updated : Nov 14, 2022, 9:43 PM IST

ಮೊದಲನೆಯದಾಗಿ ಮಧುಮೇಹ ಹೆಚ್ಚಾಗಲು ವಂಶ ಪಾರಂಪರ್ಯ ಕಾರಣವಾದರೆ, ಬದಲಾದ ಆಹಾರ ಪದ್ಧತಿ ಎರಡನೇಯದಾಗಿದೆ. ಜನ ಸೇವಿಸುವ ಆಹಾರ ಹಿಂದೆ ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಆದರೆ, ಇಂದು ಹೋಟೆಲ್ ಹಾಗೂ ಕುರುಕಲು ತಿಂಡಿಗೆ ಜನ ಹೆಚ್ಚಾಗಿ ಮರೆಹೋಗಿದ್ದು, ಗುಣಮಟ್ಟದ ಆಹಾರ ಸೇವಿಸದೇ ಮಧುಮೇಹದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

India ranks second among diabetics
ಮಧುಮೇಹದ ಸಮಸ್ಯೆ

ಬೆಂಗಳೂರು: ಜಾಗತಿಕವಾಗಿ ಭಾರತ ಚೀನಾ ದೇಶದ ನಂತರ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ಎರಡನೇ ದೊಡ್ಡ ದೇಶವಾಗಿದೆ. ಭಾರತದಲ್ಲಿ ಕರ್ನಾಟಕ ಮಧುಮೇಹಿಗಳನ್ನು ಹೊಂದಿರುವ ಮೂರನೇ ಅತಿ ದೊಡ್ಡ ರಾಜ್ಯವಾಗಿದೆ.

ಗುಣಮಟ್ಟದ ಆಹಾರ ಸೇವಿಸಬೇಕು: ದಿನದಿಂದ ದಿನಕ್ಕೆ ಮಧುಮೇಹಿಗಳ ಸಂಖ್ಯೆ ದೇಶ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದ್ದರೆ, ಇದರ ನಿಯಂತ್ರಣಕ್ಕಾಗಿ ಸಾಕಷ್ಟು ಎಚ್ಚರಿಕೆ ಮೂಡುತ್ತಿದ್ದು ಜನ ಇದರ ಪಾಲನೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

ಮೊದಲನೆಯದಾಗಿ ಮಧುಮೇಹ ಹೆಚ್ಚಾಗಲು ವಂಶ ಪಾರಂಪರ್ಯ ಕಾರಣವಾದರೆ, ಬದಲಾದ ಆಹಾರ ಪದ್ಧತಿ ಎರಡನೇಯದಾಗಿದೆ. ಜನ ಸೇವಿಸುವ ಆಹಾರ ಹಿಂದೆ ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಆದರೆ, ಇಂದು ಹೋಟೆಲ್ ಹಾಗೂ ಕುರುಕಲು ತಿಂಡಿಗೆ ಜನ ಹೆಚ್ಚಾಗಿ ಮರೆಹೋಗಿದ್ದು, ಗುಣಮಟ್ಟದ ಆಹಾರ ಸೇವಿಸದೇ ಮಧುಮೇಹದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ವೈದ್ಯ ಲೋಕಕ್ಕೆ ದೊಡ್ಡ ಮಟ್ಟದ ಸವಾಲಾಗಿರುವ ಮಧುಮೇಹ ನಿಯಂತ್ರಣದ ವಿಚಾರವಾಗಿ ರಾಜ್ಯ ಸರ್ಕಾರ ಸಹ ಗಮನಹರಿಸಬೇಕು ಎಂದು ಕೆಲ ತಜ್ಞರು ಅಭಿಪ್ರಾಯಪಡುತ್ತಾರೆ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಇರುವಂತೆಯೇ ದೇಶದ ವಿವಿಧ ರಾಜ್ಯಗಳಲ್ಲಿ ಬಡವರಿಗೆ ಸರ್ಕಾರದಿಂದಲೇ ಅಕ್ಕಿ ವಿತರಿಸುವ ಕಾರ್ಯ ಆಗುತ್ತಿದೆ. ಪಡಿತರ ರೂಪದಲ್ಲಿ ನೀಡುವ ಅಕ್ಕಿಯನ್ನು ಸರ್ಕಾರಗಳು ವಿಪರೀತ ಪಾಲೀಶ್​ಗೆ ಒಳಪಡಿಸುತ್ತಿವೆ. ಇದರಿಂದಾಗಿ ಜನರಿಗೆ ಅಕ್ಕಿಯಲ್ಲಿ ಇರುವ ನಿಜವಾದ ಸತ್ವ ಸಿಗದೆ ಹೋಗುತ್ತಿದೆ.

ತಜ್ಞ ವೈದ್ಯೆ ಡಾ ಟಿ ಕಮಲಾ

ಪಾಲೀಶ್​ ಮಾಡಿದ ಅಕ್ಕಿ ಒಳ್ಳೆಯದಲ್ಲ: ಜನರಿಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿರುವ ಸರ್ಕಾರ ಅದರ ಸರಿಯಾದ ಲಾಭ ಜನರಿಗೆ ಸಿಗದಂತೆ ಮಾಡಿದೆ. ಸರ್ಕಾರ ನೀಡುವ ಅಕ್ಕಿ ಅತಿಯಾದ ಪಾಲೀಶ್​ಗೆ ಒಳಪಡುವುದರಿಂದ, ಜನ ಸತ್ವ ರಹಿತ ಅಕ್ಕಿ ಸೇವಿಸಿ ಮಧುಮೇಹ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಕ್ಕಿಯ ಬಳಕೆಯಿಂದ ಮಧುಮೇಹ ಹೆಚ್ಚುವ ಸಾಧ್ಯತೆ ಇರುತ್ತದೆ. ಆದರೆ, ಎಲ್ಲಾ ಅಕ್ಕಿಯ ಬಳಕೆ ಅಪಾಯಕಾರಿ ಅಲ್ಲ.

ಅತಿಯಾಗಿ ಪಾಲಿಶ್ ಮಾಡಿ ತೆಳುವಾಗಿಸಿದ ಬಿಳಿ ಅಕ್ಕಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮಧುಮೇಹ ಹೆಚ್ಚಳಕ್ಕೂ ಕಾರಣವಾಗಬಲ್ಲದು. ಜನ ಹುಟ್ಟಿನಿಂದಲೂ ಒಂದು ಆಹಾರ ಪದ್ಧತಿಗೆ ಹೊಂದಿಕೊಂಡಿರುತ್ತಾರೆ. ಅದನ್ನ ಬದಲಿಸುವ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ತಾವು ಸೇವಿಸುವ ಆಹಾರವನ್ನೇ ಸರಿಯಾದ ಹಾಗೂ ಗುಣಮಟ್ಟದ ರೀತಿಯಲ್ಲಿ ಸೇವಿಸುವಂತೆ ವೈದ್ಯರು ಈಚಿನ ದಿನಗಳಲ್ಲಿ ಜನರಿಗೆ ಸಲಹೆ ನೀಡುತ್ತಿದ್ದಾರೆ.

ಆರೋಗ್ಯ ಜಾಗೃತಿ: ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳಿಗೆ ಹಾಗೂ ರಾಗಿ ಸೇವನೆಗೆ ಸರ್ಕಾರ ನೀಡುತ್ತಿರುವ ಹೆಚ್ಚಿನ ಒತ್ತು ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಈ ಕಾರಣದಿಂದಲೂ ರಾಜ್ಯ ಮೂರನೇ ಸ್ಥಾನದಿಂದ ಇನ್ನೂ ಉತ್ತಮ ಗುಣಮಟ್ಟದತ್ತ ಸಾಗುವ ಅವಕಾಶ ಇದೆ. ಜನರಲ್ಲಿ ಮೂಡುತ್ತಿರುವ ಜಾಗೃತಿ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿ ಲಭಿಸುತ್ತಿದ್ದು, ರಾಜ್ಯದಲ್ಲಿಯೂ ಮಧುಮೇಹಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಬಹುದು ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಮಧುಮೇಹಿಗಳ ಸಂಖ್ಯೆ:ಮಧುಮೇಹ ನಿಯಂತ್ರಣಕ್ಕೆ ಸೂಕ್ತ ಮಾರ್ಗದರ್ಶನ ದೊರೆಯುತ್ತಿದ್ದು, ಸರ್ಕಾರ ಸಹ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮಧುಮೇಹದ ಜಾಗೃತಿ ಅಷ್ಟಾಗಿ ಆಗಿಲ್ಲ. ಈ ಭಾಗದತ್ತ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು ಗಮನ ಹರಿಸಿ ಜಾಗೃತಿ ಮೂಡಿಸುವತ್ತ ಒಲವು ತೋರಿಸಬೇಕು.

ಕೆಲ ವರ್ಷಗಳ ಹಿಂದೆ ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಕಡಿಮೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣ ಕಡಿಮೆಯಾಗಿದ್ದು, ಆಧುನಿಕತೆಯ ಸ್ಪರ್ಶ ಗ್ರಾಮೀಣ ಭಾಗಕ್ಕೂ ತಟ್ಟಿದೆ. ನಗರಕ್ಕೆ ಹೋಲಿಸಿದರೆ ಶೇಕಡಾ ಹತ್ತರಷ್ಟು ಮಾತ್ರ ಮಧುಮೇಹಿಗಳ ಸಂಖ್ಯೆ ಗ್ರಾಮೀಣ ಭಾಗದಲ್ಲಿ ಕಡಿಮೆ ಇದೆ. ದಿನದಿಂದ ದಿನಕ್ಕೆ ಇವರ ಸಂಖ್ಯೆ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದ್ದು, ಮುಂದೊಂದು ದಿನ ನಗರ ಪ್ರದೇಶಕ್ಕೆ ಸರಿಸಮನಾಗಿ ಬೆಳೆದು ನಿಂತರು ಅಚ್ಚರಿ ಇಲ್ಲ.

ಕೋವಿಡ್ ನಂತರ ಸಮಸ್ಯೆ ಹೆಚ್ಚಳ: ಜಗತ್ತನ್ನ ದೊಡ್ಡಮಟ್ಟದಲ್ಲಿ ಕಾಡಿದ ಕೋವಿಡ್ ಮಧುಮೇಹಿಗಳನ್ನು ಹೆಚ್ಚಿಸಲು ಸಹ ತನ್ನದೇ ಆದ ಕೊಡುಗೆ ನೀಡಿದೆ. ಒಂದೆಡೆ ಕೋವಿಡ್​ನ ಅಡ್ಡ ಪರಿಣಾಮ ಮಧುಮೇಹ ಹೆಚ್ಚಿಸಿದರೆ, ಇನ್ನೊಂದೆಡೆ ಕೋವಿಡ್ ಸಂದರ್ಭದಲ್ಲಿ ಜನ ಅನುಭವಿಸಿದ ನಿರಾಳತೆ ಹಾಗೂ ಅದನ್ನೇ ಈಗಲೂ ಮುಂದುವರಿಸಿಕೊಂಡು ಸಾಗಿರುವುದು ರೋಗಭಾದೆ ಹೆಚ್ಚಳವಾಗಲು ಕಾರಣವಾಗಿದೆ.

ಹಿಂದೆಲ್ಲ ಜನ ದಿನವಿಡೀ ಶ್ರಮಪಟ್ಟು ದುಡಿಯುತ್ತಿದ್ದರು ಹಾಗೂ ಶಾರೀರಿಕ ಚಟುವಟಿಕೆಯಲ್ಲಿ ತೊಡಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಆ ಪರಿಸ್ಥಿತಿ ಕಾಣುತ್ತಿಲ್ಲ ಜನ ಟಿವಿ ಹಾಗೂ ಮೊಬೈಲ್​​​​​ಗಳ ಬಳಕೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದು ಸಹ ಶರೀರದಲ್ಲಿ ವಿವಿಧ ಸಮಸ್ಯೆಗಳನ್ನ ಹುಟ್ಟುಹಾಕಲು ಕಾರಣವಾಗಿದೆ.

ಏನು ಮಾಡಬೇಕು?: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮಧುಮೇಹ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಯುವಕರು ದೇಹ ದಂಡನೆಗೆ ಹೆಚ್ಚಿನ ಗಮನ ಹರಿಸಬೇಕು. ವಾಯು ವಿಹಾರ ಹಾಗೂ ಜಾಗಿಂಗ್ ಗೆ ತಮ್ಮ ಶರೀರವನ್ನು ಹೋಗಿಸಬೇಕು. ಓಟ, ಸೈಕಲ್ ಚಾಲನೆ ಇಲ್ಲವೇ ಈಜುವುದು ಆರೋಗ್ಯವನ್ನು ವೃದ್ಧಿಸಲು ಸಹಕಾರಿ ಆಗಲಿದೆ.

ಏನನ್ನೂ ಮಾಡದೇ ಇರುವುದಕ್ಕಿಂತ ಏನನ್ನಾದರೂ ಮಾಡುವುದು ಉತ್ತಮ ಎಂಬ ಮಾತಿನಂತೆ ಜನ ತಮ್ಮ ದೇಹ ದಂಡನೆಗೆ ಕನಿಷ್ಠ ಮಟ್ಟದ ಪ್ರಯತ್ನವನ್ನಾದರೂ ಮಾಡಬೇಕು. ಉದ್ಯೋಗ ನಿರತಾರಿಗೆ ಸಾಕಷ್ಟು ಕಾಲಾವಕಾಶ ಸಿಗುವುದಿಲ್ಲ. ಆದರೆ, ಆರೋಗ್ಯದ ದೃಷ್ಟಿಯಿಂದ ಒಂದಿಷ್ಟು ಸಮಯವನ್ನು ವಾಯುವಿಹಾರ ಇಲ್ಲವೇ ಇತರೆ ದೇಹ ದಂಡನೆಗೆ ಮೀಸಲಿಡಬೇಕು. ಉತ್ತಮ ಗಾಳಿ ಸಿಗುವ ಸ್ಥಳದಲ್ಲಿ ಒಂದಿಷ್ಟು ವಿಹರಿಸುವುದು ಉತ್ತಮ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಉದ್ಯೋಗ ಅದರಲ್ಲಿಯೂ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಕನಿಷ್ಠ ಅರ್ಧಗಂಟೆಗೊಮ್ಮೆ ನಾಲ್ಕರಿಂದ ಐದು ನಿಮಿಷ ಎದ್ದು ಓಡಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶದಲ್ಲಿ ಜನಪ್ರಿಯವಾಗಿರುವ ರಾಸಾಯನಿಕ ಮಿಶ್ರಿತ ತಂಪು ಪಾನೀಯ ಸೇವನೆ ಸಹ ಮಧುಮೇಹ ಬರಲು ಕಾರಣವಾಗಿದೆ. ಈ ರೀತಿಯ ಲಘು ಪಾನೀಯಗಳ ಬದಲು ಎಳನೀರು, ಹಣ್ಣಿನ ಜ್ಯೂಸ್, ಲಿಂಬು ಶರಬತ್ತುಗಳಿಗೆ ಮೊರೆ ಹೋಗುವುದು ಉತ್ತಮ.

2 ಎರಡು ಲೀಟರ್​ ನೀರು ಸೇವಿಸಿ: ದಿನಕ್ಕೆ ಕನಿಷ್ಠ ಎರಡು ಲೀಟರ್ ನೀರನ್ನ ಸೇವಿಸುವುದರಿಂದ ಸಹ ಮಧುಮೇಹವನ್ನು ಒಂದಿಷ್ಟು ದೂರ ಇರಿಸಬಹುದು. ಇಂದು ಉದ್ಯೋಗ ನಿರತ ಮಹಿಳೆಯರಿಗೆ ವಿವಿಧ ಕಾರಣಗಳಿಂದ ಮೂತ್ರವನ್ನು ಕಟ್ಟಿಕೊಂಡು ಇರುವ ಪರಿಸ್ಥಿತಿ ಎದುರಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ಅಲ್ಲದೆ ಅತ್ಯಂತ ಪ್ರಮುಖವಾಗಿ ಗರ್ಭಿಣಿಯರಲ್ಲಿ ಮಧುಮೇಹ ಕಂಡು ಬರುವುದು ಸಾಮಾನ್ಯ. ಹೆರಿಗೆ ನಂತರವೂ ವರ್ಷಕ್ಕೊಮ್ಮೆ ಮಧುಮೇಹ ತಪಾಸಣೆಗೆ ಮಹಿಳೆಯರು ಒಳಗಾಗುವುದು ಅತಿ ಅವಶ್ಯಕ.

ಭಾರತೀಯರು ಎಚ್ಚರವಾಗಿರಬೇಕು: ಸಾಗರ್ ಆಸ್ಪತ್ರೆ ಮಧುಮೇಹ ಎಂಡೋಕ್ರೈನಾಲಜಿ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಹಾಗೂ ತಜ್ಞ ವೈದ್ಯೆ ಡಾ.ಟಿ. ಕಮಲಾ ಪ್ರಕಾರ, ಭಾರತೀಯರು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಮಧುಮೇಹಕ್ಕೆ ತುತ್ತಾಗಲು ಇಲ್ಲಿನ ಪರಿಸ್ಥಿತಿ ಸಹ ಕಾರಣ. ವಿದೇಶಿಯರಿಗೆ ಹೋಲಿಸಿದರೆ ಭಾರತೀಯರಲ್ಲಿ ಮಧುಮೇಹ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು.

ಮಧುಮೇಹ ಅತಿ ಹೆಚ್ಚು ಸಂಖ್ಯೆಯ ಸಾವಿಗೆ ಕಾರಣವಾಗುತ್ತಿದೆ. ಮಧುಮೇಹ ಸರಿಯಾಗಿ ನಿಯಂತ್ರಣಕ್ಕೆ ಬಾರದಿದ್ದರೆ ಇತರ ಸಮಸ್ಯೆಗಳಾದ ಹೃದಯ ರೋಗ, ಪಾರ್ಶ್ವ ವಾಯು, ಕಿಡ್ನಿ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಹಲವು ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ತಾಯಿಯಲ್ಲಿನ ಮಧುಮೇಹವು ಭ್ರೂಣಕ್ಕೆ ಶಾಶ್ವತ ಹಾನಿ ಉಂಟುಮಾಡಬಹುದು: ಅಧ್ಯಯನ

ನಮ್ಮ ದೇಶದ ನಾಗರಿಕರ ದೇಹ ರಚನೆ ವಿಶಿಷ್ಟವಾಗಿದ್ದು ಶರೀರದಲ್ಲಿ ಮಧುಮೇಹ ಸಮಸ್ಯೆ ಇರುವುದು ತಪಾಸಣೆಯಿಂದ ಮಾತ್ರ ತಿಳಿದು ಬರುತ್ತದೆ. ಬೊಜ್ಜಿನ ಸಮಸ್ಯೆ ಹೆಚ್ಚಿರುವವರಲ್ಲಿ ಮಧುಮೇಹ ಕಾಡಬಹುದು ಎಂಬ ಅನುಮಾನ ಸಹ ಸರಿಯಲ್ಲ. ಸಣ್ಣಗಿರುವವರಲ್ಲಿ ಸಹ ಮಧುಮೇಹ ಹೆಚ್ಚಾಗಿ ಕಾಡುತ್ತದೆ.

ವಂಶಪಾರಂಪರ್ಯ ಮಧುಮೇಹ ಹಿನ್ನೆಲೆ ಉಳ್ಳವರು ಅತ್ಯಂತ ಚಿಕ್ಕ ವಯಸ್ಸಿನಿಂದಲೂ ತಪಾಸಣೆಗೆ ಒಳಗಾಗುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಜಾಗೃತಿ ಸಹ ಹೆಚ್ಚಾಗುತ್ತಿದ್ದು, ಜೊತೆಗೆ ಮಧುಮೇಹಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಸಾರ್ವಜನಿಕರು ತಮ್ಮಲ್ಲಿ ಜಾಗೃತಿ ಮೂಡಿಸಿಕೊಳ್ಳಬೇಕು ಹಾಗೂ ಅದೇ ರೀತಿ ಆಸ್ಪತ್ರೆಗಳು ಮತ್ತು ಸರ್ಕಾರದ ಪಾತ್ರವೂ ಜನಜಾಗೃತಿ ಮೂಡಿಸುವಲ್ಲಿ ವಿಶೇಷವಾಗಿದೆ ಎನ್ನುತ್ತಾರೆ.

Last Updated : Nov 14, 2022, 9:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.