ETV Bharat / sukhibhava

ಸಮಗ್ರ ವಿಮಾ ಪಾಲಿಸಿ ಮತ್ತು ರೀಫಿಲ್.. ಆಸ್ಪತ್ರೆಗೆ ದಾಖಲಾದರೆ ಇದೇ ಸಂಜೀವಿನಿ

ವಿಮೆ ಮಾಡಿದ ಮಿತಿ ಮುಗಿದ ನಂತರ ಮಾತ್ರ ಮರುಸ್ಥಾಪನೆ ಸಾಧ್ಯ. ಉದಾಹರಣೆಗೆ, ಓರ್ವ ಪಾಲಿಸಿದಾರರು 5 ಲಕ್ಷ ರೂಪಾಯಿಗಳಿಗೆ ಪಾಲಿಸಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದರಲ್ಲಿ ಕೇವಲ 4 ಲಕ್ಷ ರೂಪಾಯಿಗಳನ್ನು ಆಸ್ಪತ್ರೆಗೆ ದಾಖಲಾಗಲು ಖರ್ಚು ಮಾಡುತ್ತಾರೆ. ಉಳಿದ 1 ಲಕ್ಷ ರೂಪಾಯಿಗಳನ್ನು ವಿಮಾದಾರರು ಪಾಲಿಸಿ ನಿಯಮಗಳನ್ನು ಅವಲಂಬಿಸಿ ರೀಫಿಲ್ ಮಾಡಿಸಬಹುದು. ರೀಫಿಲ್ ಪ್ರಯೋಜನವು ಆ ನಿರ್ದಿಷ್ಟ ಪಾಲಿಸಿಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ವರ್ಷಕ್ಕೆ ಮುಂದುವರೆಯಲ್ಲ.

author img

By

Published : Jul 4, 2022, 3:37 PM IST

Health insurance cover without a break
Health insurance cover without a break

ಈ ದಿನಗಳಲ್ಲಿ ಸಮಗ್ರ ಆರೋಗ್ಯ ವಿಮಾ ಪಾಲಿಸಿ ಪಡೆಯುವುದು ಕೇವಲ ಒಂದು ಆಯ್ಕೆಯಾಗಿರದೇ ಜೀವನದ ಅಗತ್ಯಗಳಲ್ಲೊಂದಾಗಿದೆ. ಅನಾರೋಗ್ಯದ ಕಾರಣದಿಂದ ನಿಮ್ಮ ಎಲ್ಲ ಉಳಿತಾಯಗಳು ಒಂದೇ ಏಟಿಗೆ ಹಾಳಾಗದಂತೆ ಈ ಪಾಲಿಸಿ ನಿಮ್ಮನ್ನು ರಕ್ಷಿಸುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಬದಲಾಗುತ್ತಿರುವ ವೈದ್ಯಕೀಯ ಅಗತ್ಯಗಳಿಗೆ ಸರಿಹೊಂದುವಂತೆ ವೈದ್ಯಕೀಯ ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಯಾವುದೇ ಅನಿರೀಕ್ಷಿತ ವೈದ್ಯಕೀಯ ತುರ್ತು ಏರ್ಪಟ್ಟಾಗ ಅದರ ನಂತರ ಆರ್ಥಿಕವಾಗಿ ಪುನಃ ಚೇತರಿಸಿಕೊಳ್ಳುವುದು ಹೇಗೆಂದು ತಿಳಿಯುವುದು ಅಗತ್ಯ.

ವಿಮಾ ಪಾಲಿಸಿ ರೀಫಿಲ್ ಮಾಡುವುದು: ಒಂದೊಮ್ಮೆ ನೀವು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಮತ್ತು ಅದಕ್ಕಾಗಿ ಪಾಲಿಸಿ ಮೊತ್ತವನ್ನು ಕ್ಲೈಮ್ ಮಾಡಿದ್ದರೆ, ವಿಮಾ ರಕ್ಷಣೆಯಿಲ್ಲದೆ ಮತ್ತೆ ಆಸ್ಪತ್ರೆಗೆ ಹೋಗುವುದು ಕಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ಜೇಬಿನಿಂದ ನೀವು ಹೆಚ್ಚುವರಿ ಹಣ ಖರ್ಚು ಮಾಡಬೇಕಾಗುತ್ತದೆ. ಇಂಥ ಸಂದರ್ಭ ಎದುರಾಗುವುದನ್ನು ತಪ್ಪಿಸಲು, ನೀವು ಆಸ್ಪತ್ರೆಯಿಂದ ಹೊರಬಂದ ನಂತರ ಪಾಲಿಸಿಯನ್ನು ರೀಫಿಲ್ ಮಾಡುವುದು ಉತ್ತಮ. ಇದನ್ನು ಮರುಸ್ಥಾಪನೆ ಅಥವಾ ರೀಫಿಲ್ ಬೆನೆಫಿಟ್ ಎಂದು ಕರೆಯಲಾಗುತ್ತದೆ. ವಿಮೆ ತೆಗೆದುಕೊಂಡ ಮೊತ್ತದ ಮಿತಿ ಮುಗಿದರೂ, ಪಾಲಿಸಿಯು ಮತ್ತೆ ತನ್ನ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಇದು ಈ ಯೋಜನೆಯ ದೊಡ್ಡ ಅನುಕೂಲವಾಗಿದೆ.

ಉದಾಹರಣೆಗೆ ನೋಡುವುದಾದರೆ, ಕುಮಾರ್ ಎಂಬುವರು 5 ಲಕ್ಷ ರೂಪಾಯಿಗಳ ವಿಮಾ ಪಾಲಿಸಿಯನ್ನು ಹೊಂದಿದ್ದಾರೆ ಮತ್ತು ಮೂರು ತಿಂಗಳ ನಂತರ ಕೆಲ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದಿಟ್ಟುಕೊಳ್ಳೋಣ. ಆದರೆ, ಈಗಾಗಲೇ ಅವರು 5 ಲಕ್ಷ ರೂಪಾಯಿಗಳ ಸಂಪೂರ್ಣ ವಿಮಾ ಮೊತ್ತವನ್ನು ಬಳಸಿದ್ದಾರೆ. ಇದರ ನಂತರ ಅವರು ಪಾಲಿಸಿ ನವೀಕರಿಸಲು ಇನ್ನೂ ಒಂಬತ್ತು ತಿಂಗಳು ಕಾಯಬೇಕಿದೆ. ಈ ನಡುವೆ ಮತ್ತೊಂದು ಕಾಯಿಲೆಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಈಗ 2 ಲಕ್ಷ ರೂಪಾಯಿ ಮೊತ್ತವನ್ನು ತಮ್ಮ ಜೇಬಿನಿಂದ ಕೊಡದೇ ಬೇರೆ ದಾರಿಯಿಲ್ಲ.

ಆದರೆ, ಕುಮಾರ್ ಅವರು ಪ್ರಥಮ ಬಾರಿಗೆ ಆಸ್ಪತ್ರೆಗೆ ದಾಖಲಾಗಿ ಮನೆಗೆ ಬಂದ ನಂತರ ತಮ್ಮ ಪಾಲಿಸಿಯನ್ನು ಮರುಸ್ಥಾಪಿಸಿದ್ದರೆ ಅಥವಾ ರೀಫಿಲ್ ಮಾಡಿದ್ದರೆ, ತಕ್ಷಣ ಅವರ ವಿಮಾ ಖಾತೆಗೆ 5 ಲಕ್ಷ ರೂ. ಸೇರ್ಪಡೆಯಾಗಿರುತ್ತಿತ್ತು. ಅವರು ಮತ್ತೊಮ್ಮೆ ಆಸ್ಪತ್ರೆಗೆ ಹೋಗಬೇಕಾದ ಸಂದರ್ಭ ಬಂದಾಗ ಅವರಿಗೆ ಹಣದ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಪಾಲಿಸಿಯನ್ನು ಹೀಗೆ ಎಷ್ಟು ಬಾರಿ ರೀಫಿಲ್ ಮಾಡಬಹುದು ಎಂಬುದು ಆಯಾ ವಿಮಾ ಕಂಪನಿ ಮತ್ತು ಆಯ್ಕೆಮಾಡಿದ ಪಾಲಿಸಿಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ಪಾಲಿಸಿಯನ್ನು ಪಡೆದುಕೊಳ್ಳುವ ಮೊದಲು ಪಾಲಿಸಿದಾರರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ನಿರ್ದಿಷ್ಟ ಪಾಲಿಸಿ ಅವಧಿಗೆ ಮಾತ್ರ ರೀಫಿಲ್ ಅನ್ವಯ: ವಿಮೆ ಮಾಡಿದ ಮಿತಿ ಮುಗಿದ ನಂತರ ಮಾತ್ರ ಮರುಸ್ಥಾಪನೆ ಸಾಧ್ಯ. ಉದಾಹರಣೆಗೆ, ಓರ್ವ ಪಾಲಿಸಿದಾರರು 5 ಲಕ್ಷ ರೂಪಾಯಿಗಳಿಗೆ ಪಾಲಿಸಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದರಲ್ಲಿ ಕೇವಲ 4 ಲಕ್ಷ ರೂಪಾಯಿಗಳನ್ನು ಆಸ್ಪತ್ರೆಗೆ ದಾಖಲಾಗಲು ಖರ್ಚು ಮಾಡುತ್ತಾರೆ. ಉಳಿದ 1 ಲಕ್ಷ ರೂಪಾಯಿಗಳನ್ನು ವಿಮಾದಾರರು ಪಾಲಿಸಿ ನಿಯಮಗಳನ್ನು ಅವಲಂಬಿಸಿ ರೀಫಿಲ್ ಮಾಡಿಸಬಹುದು. ರೀಫಿಲ್ ಪ್ರಯೋಜನವು ಆ ನಿರ್ದಿಷ್ಟ ಪಾಲಿಸಿಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ವರ್ಷಕ್ಕೆ ಮುಂದುವರೆಯಲ್ಲ.

ಪುನಃ ಅದೇ ಕಾಯಿಲೆಯ ಚಿಕಿತ್ಸೆಗೆ ವಿಮೆ ಸಿಗುತ್ತಾ? : ವಿಮಾ ಮೊತ್ತವನ್ನು ಮರುಪಾವತಿ ಮಾಡುವ ರೀಫಿಲ್ ನೀತಿಗಳ ಬಗ್ಗೆ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಪಾಲಿಸಿದಾರರು ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಬಿಲ್ ಪಾವತಿಗೆ ರೂ 5 ಲಕ್ಷ ರೂ. ವಿಮಾ ಮೊತ್ತವನ್ನು ಬಳಸಿದ್ದಾರೆ ಎಂದು ಭಾವಿಸೋಣ. ನಂತರ, ಪಾಲಿಸಿಯನ್ನು ಅದೇ ಮೌಲ್ಯಕ್ಕೆ ರೀಫಿಲ್ ಮಾಡಲಾಗಿದೆ ಎಂದಿಟ್ಟುಕೊಳ್ಳೋಣ.

ಈಗ, ಪಾಲಿಸಿದಾರನು ಅದೇ ಕಾಯಿಲೆಯೊಂದಿಗೆ ಮತ್ತೆ ಆಸ್ಪತ್ರೆಗೆ ಬಂದರೆ, ಪಾಲಿಸಿಯು ಚಿಕಿತ್ಸೆಯ ವೆಚ್ಚವನ್ನು ಭರಿಸುವುದಿಲ್ಲ. ಇದೇ ಕಾಯಿಲೆಯಿಂದ ಆಸ್ಪತ್ರೆಗೆ ಹೋದರೆ ಸಿಗುವುದು ಪರಿಹಾರ ಮಾತ್ರ. ಈಗ, ಕೆಲ ವಿಮಾ ಪಾಲಿಸಿಗಳು ಒಂದೇ ಕಾಯಿಲೆಗೆ ರೀಫಿಲ್ ಸೌಲಭ್ಯವನ್ನು ನೀಡುತ್ತಿವೆ. ಅಂತಹ ಪಾಲಿಸಿಗಳನ್ನು ಆಯ್ಕೆ ಮಾಡುವುದು ಉತ್ತಮ. ಈ ಎಲ್ಲ ಮಾಹಿತಿಯು ಪಾಲಿಸಿಯ ನೀತಿ ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಲಾಗುತ್ತದೆ.

ಮತ್ತೊಂದು ಪ್ರಮುಖ ನಿಬಂಧನೆಯನ್ನು ಗಮನಿಸುವುದಾದರೆ- ಆಸ್ಪತ್ರೆಗೆ ದಾಖಲಾದ ನಂತರ ಬಿಲ್ 6 ಲಕ್ಷ ರೂ. ಆಗಿದೆ ಎಂದಿಟ್ಟುಕೊಳ್ಳೋಣ. ಆದರೆ, ಪಾಲಿಸಿ ಮೌಲ್ಯ ಕೇವಲ 5 ಲಕ್ಷ ರೂ. ಆಗಿದೆ ಎಂದಾಗ, ಅಂಥ ಸಂದರ್ಭಗಳಲ್ಲಿ ಸಹ ಪಾಲಿಸಿ ರೀಫಿಲ್ ಸಾಧ್ಯವಿದೆ. ಅದೇನೇ ಇದ್ದರೂ, ಬಿಲ್ ಕ್ಲಿಯರ್ ಮಾಡಲು ಪಾಲಿಸಿದಾರರು 5 ಲಕ್ಷ ರೂ. ಜೊತೆಗೆ 1 ಲಕ್ಷ ರೂ. ಪಾವತಿಸಲೇಬೇಕು. ಅದರ ನಂತರ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಲಾಗುತ್ತದೆ.

ಫ್ಯಾಮಿಲಿ ಫ್ಲೋಟರ್​ಗೂ ಅನ್ವಯ: ವೈಯಕ್ತಿಕ ಪಾಲಿಸಿದಾರರ ಹೊರತಾಗಿ, ಫ್ಯಾಮಿಲಿ ಫ್ಲೋಟರ್ ಪಾಲಿಸಿಯನ್ನು ಪಡೆದಿರುವ ಪಾಲಿಸಿದಾರರು (ಕುಟುಂಬದ ಎಲ್ಲಾ ಸದಸ್ಯರಿಗೆ) ಸಹ ರೀಫಿಲ್ ಪ್ರಯೋಜನಗಳನ್ನು ಪಡೆಯಬಹುದು. ವಿಶೇಷವಾಗಿ, ಫ್ಯಾಮಿಲಿ ಫ್ಲೋಟರ್ ಪಾಲಿಸಿಯನ್ನು ತೆಗೆದುಕೊಂಡಾಗ, ರೀಫಿಲ್ ಸೌಲಭ್ಯವು ಹೆಚ್ಚಿನ ಆದ್ಯತೆ ಪಡೆಯುತ್ತದೆ.

ಉದಾಹರಣೆಗೆ, ಒಂದು ಕುಟುಂಬದ ಒಬ್ಬ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದರೆ ಮತ್ತು ಸಂಪೂರ್ಣ ವಿಮಾ ಮೊತ್ತವನ್ನು ಖಾಲಿಮಾಡಿದರೆ, ಕುಟುಂಬದ ಉಳಿದ ಸದಸ್ಯರು ವಿಮಾ ಸುರಕ್ಷೆಯಿಂದ ವಂಚಿತರಾಗುತ್ತಾರೆ. ಅಂಥ ಸಂದರ್ಭಗಳಲ್ಲಿ, ಕುಟುಂಬಕ್ಕೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲು ರೀಫಿಲ್ ಸೌಲಭ್ಯ ಅನುಕೂಲವಾಗಿದೆ. ಅಲ್ಲದೆ, ಕಾಲಕಾಲಕ್ಕೆ ವಿಮಾ ಪಾಲಿಸಿಯನ್ನು ಪರೀಕ್ಷಿಸಲು ಮರೆಯಬೇಡಿ ಎಂದು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್‌ನ ಹೆಲ್ತ್ ಅಡ್ಮಿನಿಸ್ಟ್ರೇಷನ್ ಟೀಮ್ ಹೆಡ್ ಭಾಸ್ಕರ್ ನೆರೂಕರ್ ಹೇಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.