ಬೆಂಗಳೂರು: ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡಿರುವ 5 ಕೋಟಿ ರೂ.ಗೂ ಅಧಿಕ ಮೌಲ್ಯದ ಅಮಾನ್ಯಗೊಂಡ ಹಳೆಯ ನೋಟುಗಳು ಬೆಂಗಳೂರು ಪೊಲೀಸರ ಬಳಿ ಇವೆ. ಈ ನೋಟುಗಳ ವಿಲೇವಾರಿ ಅಥವಾ ವಿನಿಮಯಕ್ಕೆ ಅಡ್ಡಿ ಉಂಟಾದ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಲು ಪೊಲೀಸರು ಮುಂದಾಗಿದ್ದಾರೆ.
ಜಪ್ತಿಯಾಗಿರುವ 5 ಕೋಟಿಗೂ ಅಧಿಕ ಮೌಲ್ಯದ ಅಮಾನ್ಯಗೊಂಡ ಹಳೆಯ ನೋಟುಗಳ ವಿಲೇವಾರಿಗೆ ನ್ಯಾಯಾಲಯದ ಅನುಮತಿ ಕೋರಲು ಪೊಲೀಸರು ಮುಂದಾಗಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹ ಸ್ವೀಕರಿಸದ ಹಳೆಯ 500 ಹಾಗೂ 1000 ರೂ. ಮುಖಬೆಲೆಯ 5 ಕೋಟಿಗೂ ಅಧಿಕ ಮೌಲ್ಯದ ಹಣವನ್ನು ವಿಲೇವಾರಿ ಮಾಡಲು ಅನುಮತಿ ನೀಡುವಂತೆ ನ್ಯಾಯಾಲಯದ ಮೊರೆ ಹೋಗಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ಬೆಂಗಳೂರೂ ಪೊಲೀಸರ ಬಳಿ 5 ಕೋಟಿ ಮೌಲ್ಯದ ಅಮಾನ್ಯಗೊಂಡ ನೋಟುಗಳು: ಕೇಂದ್ರ ಸರ್ಕಾರ 2016ರಲ್ಲಿ 500 ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿತ್ತು. ಆದರೆ ವಿವಿಧ ಪ್ರಕರಣಗಳಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ಅಮಾನ್ಯಗೊಂಡ ಹಳೆಯ ನೋಟುಗಳು ಬೆಂಗಳೂರು ಪೊಲೀಸರ ಬಳಿಯಿದೆ. ಈ ನೋಟುಗಳು ನಿಷೇಧಗೊಂಡಿರುವುದರಿಂದ ಈ ಹಣವನ್ನು ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ನೋಟುಗಳ ವಿನಿಮಯಕ್ಕೆ ನೀಡಿದ್ದ ಗಡುವು ಸಹ ಮುಗಿದಿರುವುದರಿಂದ ರಿಸರ್ವ್ ಬ್ಯಾಂಕ್ ಸಹ ಈ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದ ಈ ಹಣವನ್ನ ವಿಲೇವಾರಿ ಮಾಡುವುದು ಹೇಗೆ ಎಂಬ ಪ್ರಶ್ನೆ ಪೊಲೀಸರ ಮುಂದೆ ಉದ್ಭವವಾಗಿದೆ. ಹೀಗಾಗಿಯೇ ನೋಟುಗಳ ವಿಲೇವಾರಿಗೆ ನ್ಯಾಯಾಲಯದ ಅನುಮತಿಯನ್ನು ಪೊಲೀಸರು ಕೇಳಲಿದ್ದಾರೆ.
ಹಳೆ ನೋಟು ವಿಲೇವಾರಿಗೆ ಕೋರ್ಟ್ ಅನುಮತಿಗೆ ಮುಂದಾದ ಪೊಲೀಸರು: ಹಳೆಯ ನೋಟುಗಳ ವಿಲೇವಾರಿಗೆ ನ್ಯಾಯಾಲಯದ ಅನುಮತಿ ಕೇಳಲಿದ್ದೇವೆ. ಅನುಮತಿ ಪಡೆದ ಬಳಿಕ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳ ಅನ್ವಯ ವಿಲೇವಾರಿ ಅಥವಾ ವಿನಿಮಯ ಮಾಡಲಾಗುತ್ತದೆ ಎಂದು ಈಟಿವಿ ಭಾರತಕ್ಕೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಭಾರಿ ಮಳೆಗೆ ಅಪಾರ್ಟ್ಮೆಂಟ್ ಕಂಪೌಂಡ್ ಕುಸಿತ, 20ಕ್ಕೂ ಹೆಚ್ಚು ಬೈಕ್ಗಳು ಜಖಂ - Bengaluru Rain