ETV Bharat / international

'ಅಮೆರಿಕದಲ್ಲಿ ಪ್ರಜಾಪ್ರಭುತ್ವ ಕಾಪಾಡಬಲ್ಲ ಏಕೈಕ ಅಭ್ಯರ್ಥಿ ಟ್ರಂಪ್': ಎಲೋನ್ ಮಸ್ಕ್ ಪ್ರತಿಪಾದನೆ - 2024 US Presidential election

ಡೊನಾಲ್ಡ್​ ಟ್ರಂಪ್ ಮಾತ್ರ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಕಾಪಾಡಬಲ್ಲರು ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.

author img

By ETV Bharat Karnataka Team

Published : 2 hours ago

ಟ್ರಂಪ್ ಅವರೊಂದಿಗೆ ಎಲೋನ್ ಮಸ್ಕ್
ಟ್ರಂಪ್ ಅವರೊಂದಿಗೆ ಎಲೋನ್ ಮಸ್ಕ್ (APTN)

ವಾಶಿಂಗ್ಟನ್: ಬಿಲಿಯನೇರ್​ ಟೆಕ್ ಉದ್ಯಮಿ ಎಲೋನ್ ಮಸ್ಕ್ ಶನಿವಾರ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಮುಂಬರುವ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್​ ಟ್ರಂಪ್ ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಬಲ್ಲ ಏಕೈಕ ಅಭ್ಯರ್ಥಿಯಾಗಿದ್ದಾರೆ ಎಂದು ಅವರು ತೀಕ್ಷ್ಣವಾಗಿ ಪ್ರತಿಪಾದಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ ಅನ್ನು ಖರೀದಿಸಿರುವ, ಸ್ಪೇಸ್ಎಕ್ಸ್ ಮತ್ತು ಟೆಸ್ಲಾ ಸಿಇಒ ಆಗಿರುವ ಮಸ್ಕ್ ಪೆನ್ಸಿಲ್ವೇನಿಯಾದ ಬಟ್ಲರ್​ನಲ್ಲಿ ಟ್ರಂಪ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇದೇ ಪೆನ್ಸಿಲ್ವೇನಿಯಾದಲ್ಲಿ ಜುಲೈನಲ್ಲಿ ಮಾಜಿ ಅಧ್ಯಕ್ಷ ಟ್ರಂಪ್​ ಅವರನ್ನು ಕೊಲ್ಲುವ ಯತ್ನ ಮಾಡಲಾಗಿತ್ತು ಹಾಗೂ ಅವರು ಅದರಲ್ಲಿ ಪಾರಾಗಿದ್ದರು ಎಂಬುದು ಗಮನಾರ್ಹ.

ಟ್ರಂಪ್ ಗೆಲ್ಲದಿದ್ದರೆ ಇದು ಅಮೆರಿಕದಲ್ಲಿ ಕೊನೆಯ ಚುನಾವಣೆಯಾಗಲಿದೆ ಎಂದು ಮಸ್ಕ್ ಎಚ್ಚರಿಸಿದರು. ಟ್ರಂಪ್ ಅವರ ಪ್ರಚಾರದ "ಮೇಕ್ ಅಮೆರಿಕ ಗ್ರೇಟ್ ಎಗೇನ್" ಎಂಬ ಘೋಷಣೆಯನ್ನು ಹೊಂದಿರುವ ಕಪ್ಪು ಟೋಪಿಯನ್ನು ಮಸ್ಕ್ ಈ ಸಂದರ್ಭದಲ್ಲಿ ಧರಿಸಿದ್ದು ಗಮನ ಸೆಳೆಯುವಂತಿತ್ತು.

"ನಾನು ಕೇವಲ MAGA ಅಲ್ಲ, ನಾನೊಬ್ಬ ಡಾರ್ಕ್​ MAGA" ಎಂದು ಅವರು ಹೇಳಿದರು. ಮೇಕ್ ಅಮೆರಿಕ ಗ್ರೇಟ್ ಎಗೇನ್ ಎಂಬುದರ ಸಂಕ್ಷಿಪ್ತ ರೂಪ MAGA ಆಗಿದೆ.

ಮಸ್ಕ್ ಇದೇ ಮೊದಲ ಬಾರಿಗೆ ಟ್ರಂಪ್ ಅವರ ಟ್ರೇಡ್ ಮಾರ್ಕ್ ಶೈಲಿಯ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ ಮತ್ತು ಈ ಮೂಲಕ ತೀವ್ರ ಪೈಪೋಟಿಯ ಅಧ್ಯಕ್ಷೀಯ ಚುನಾವಣೆಯ ಅಂತಿಮ ಹಂತದಲ್ಲಿ ಇಬ್ಬರ ನಡುವೆ ಬೆಳೆಯುತ್ತಿರುವ ಗೆಳೆತನವನ್ನು ಪ್ರದರ್ಶಿಸಿದ್ದಾರೆ. ಮಸ್ಕ್ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ಅವರ ಬೆಂಬಲಕ್ಕಾಗಿ ಸೂಪರ್ ಪಿಎಸಿಯನ್ನು ರಚಿಸಿದ್ದಾರೆ. ಪ್ರಚಾರದ ಕೊನೆಯ ತಿಂಗಳುಗಳಲ್ಲಿ ಮತಗಳನ್ನು ಸೆಳೆಯಲು ಚುನಾವಣಾ ಪ್ರಚಾರಕ್ಕಾಗಿ ರಿಪಬ್ಲಿಕನ್ ಪಕ್ಷವು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದೆ.

ಶನಿವಾರ ಬೃಹತ್ ಜನಸಮೂಹವನ್ನುದ್ದೇಶಿಸಿ ಮಾತನಾಡಿದ ಮಸ್ಕ್, ಟ್ರಂಪ್ ಅವರನ್ನು ವಾಕ್ ಸ್ವಾತಂತ್ರ್ಯದ ಚಾಂಪಿಯನ್ ಎಂದು ಬಣ್ಣಿಸಿದರು. "ಡೆಮಾಕ್ರಟ್​ಗಳು ನಿಮ್ಮ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಿದ್ದಾರೆ, ಅವರು ಶಸ್ತ್ರಾಸ್ತ್ರಗಳನ್ನು ಹೊಂದುವ ನಿಮ್ಮ ಹಕ್ಕನ್ನು ಕಸಿದುಕೊಳ್ಳಲು ಬಯಸುತ್ತಾರೆ, ಅವರು ಮತ ಚಲಾಯಿಸುವ ನಿಮ್ಮ ಹಕ್ಕನ್ನು ಕೂಡ ಕಸಿದುಕೊಳ್ಳಲು ಬಯಸುತ್ತಾರೆ" ಎಂದು ಮಸ್ಕ್ ಆರೋಪಿಸಿದರು.

2024 ರ ಅಧ್ಯಕ್ಷೀಯ ಚುನಾವಣೆಯು ನವೆಂಬರ್ 5 ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಯು 2025 ರ ಜನವರಿಯಿಂದ ನಾಲ್ಕು ವರ್ಷಗಳ ಕಾಲ ಯುಎಸ್​ ಅಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ.

ಇದನ್ನೂ ಓದಿ : 'ನಮಗೆ ಬೆಂಬಲ ನೀಡಿ, ನೀಡದಿರಿ ನಾವು ಯುದ್ಧ ಗೆದ್ದು ನಾಗರಿಕತೆಯನ್ನು ರಕ್ಷಿಸುತ್ತೇವೆ': ಇಸ್ರೇಲ್ ಪ್ರಧಾನಿ ನೆತನ್ಯಾಹು - Israel PM Netanyahu

ETV Bharat Logo

Copyright © 2024 Ushodaya Enterprises Pvt. Ltd., All Rights Reserved.