ಹೈದರಾಬಾದ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಇತ್ತೀಚೆಗೆ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾವನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿರುವ ಭಾರತ ಇದೀಗ ಟಿ20 ಸರಣಿ ಮೇಲೂ ಕಣ್ಣಿಟ್ಟಿದೆ. ಮತ್ತೊಂದೆಡೆ ಟೆಸ್ಟ್ನಲ್ಲಿ ಮುಖಭಂಗ ಅನುಭವಿಸಿರುವ ಬಾಂಗ್ಲಾ ಈ ಸರಣಿ ಗೆದ್ದು ದಾಖಲೆ ಬರೆಯಲು ಯೋಜನೆ ರೂಪಿಸಿಕೊಂಡಿದೆ. ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ನಿಜ್ಮುಲ್ ಶಾಂಟೋ ಬಾಂಗ್ಲಾ ನಾಯಕತ್ವ ವಹಿಸಿಕೊಂಡಿದ್ದಾರೆ.
ಹೆಡ್ ಟು ಹೆಡ್: ಭಾರತ-ಬಾಂಗ್ಲಾ ತಂಡಗಳು ಇದುವರೆಗೆ ಒಟ್ಟು 13 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 12 ಪಂದ್ಯಗಳಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದೆ. ಬಾಂಗ್ಲಾದೇಶ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಬಾಂಗ್ಲಾ ವಿರುದ್ಧ ತನ್ನ ಪ್ರಾಬಲ್ಯವನ್ನು ಮುಂದುವರೆಸಲು ಬಯಸುತ್ತದೆ.
ಸ್ಥಳ: ಮಾಧವರಾವ್ ಸಿಂಧ್ಯಾ ಕ್ರಿಕೆಟ್ ಮೈದಾನ, ಗ್ವಾಲಿಯರ್
ಪಂದ್ಯ ಆರಂಭ: ಸಂಜೆ 7:30ಕ್ಕೆ
ನೇರಪ್ರಸಾರ: ಈ ಪಂದ್ಯದವನ್ನು ಟಿವಿಯಲ್ಲಿ Sports18-1 (HD & SD) ಮತ್ತು Colors Cineplex (HD & SD) ಇಲ್ಲಿ ನೇರಪ್ರಸಾರ ಆಗಲಿದ್ದು, ಜಿಯೋ ಸಿನಿಮಾದಲ್ಲಿ ಲೈವ್ಸ್ಟ್ರೀಮಿಂಗ್ ಆಗಲಿದೆ.
ಸಂಭಾವ್ಯ ತಂಡ-ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.
ಬಾಂಗ್ಲಾದೇಶ: ಲಿಟನ್ ದಾಸ್, ತಂಜೀದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತೌಹೀದ್ ಹೃದಯೋಯ್, ಮಹಮ್ಮದುಲ್ಲಾ, ಝೆಕರ್ ಅಲಿ, ಮೆಹದಿ ಹಸನ್ ಮಿರಾಜ್, ರಿಶಾದ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ತಂಝೀಮ್ ಹಸನ್ ಸಾಕಿಬ್.
ಇದನ್ನೂ ಓದಿ: ರೋಹಿತ್, ಧೋನಿ ಇಬ್ಬರಲ್ಲಿ ಯಾರು ಬೆಸ್ಟ್ ಕ್ಯಾಪ್ಟನ್?: ಶಿವಂ ದುಬೆ ಕೊಟ್ಟ ಸ್ಮಾರ್ಟ್ ಉತ್ತರ ಇದು! - Shivam Dube