ETV Bharat / sukhibhava

ಕರುಳಿನ ಆರೋಗ್ಯ ಸುಧಾರಣೆ - ಸಕ್ಕರೆ ಅಂಶ ಇಳಿಕೆಗೆ ಗ್ರೀನ್ ಟೀ ಸಹಕಾರಿ: ಅಧ್ಯಯನದಿಂದ ಬಹಿರಂಗ - ಈಟಿವಿ ಭಾರತ ಕನ್ನಡ

ಮೂರನೇ ಒಂದರಷ್ಟು ಅಮೆರಿಕನ್ನರನ್ನು ಬಾಧಿಸುವ, ಮೆಟಾಬೋಲಿಕ್ ಸಿಂಡ್ರೋಮ್ ಎಂದು ಕರೆಯಲಾಗುವ ಆರೋಗ್ಯ ಸಮಸ್ಯೆಗಳನ್ನು, ಕರುಳಿನಲ್ಲಿ ಗ್ರೀನ್ ಟೀ ಯ ಉರಿಯೂತ ನಿರೋಧಕ ಗುಣಗಳಿಂದ ಶಮನ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.

Green tea extract improves gut health and lowers blood sugar level: Research
ಕರುಳಿನ ಆರೋಗ್ಯ ಸುಧಾರಣೆಗೆ, ಸಕ್ಕರೆ ಅಂಶ ಇಳಿಕೆಗೆ ಗ್ರೀನ್ ಟೀ ಸಹಕಾರಿ: ಅಧ್ಯಯನದಲ್ಲಿ ಬಹಿರಂಗ
author img

By

Published : Jul 27, 2022, 6:28 PM IST

ಹೃದಯನಾಳದ ಅನಾರೋಗ್ಯ ಹೊಂದಿರುವ ವ್ಯಕ್ತಿಗಳ ಮೇಲೆ ಇತ್ತೀಚೆಗೆ ನಡೆಸಿರುವ ಸಂಶೋಧನೆಗಳ ಪ್ರಕಾರ, ಅವರಿಗೆ ನಾಲ್ಕು ವಾರಗಳವರೆಗೆ ಗ್ರೀನ್ ಟೀ ಅಂಶಗಳನ್ನು ನೀಡಿದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದಿದ್ದು ಮತ್ತು ಉರಿಯೂತ ಕಡಿಮೆ ಮಾಡಿ, ಕರುಳಿನ ಆರೋಗ್ಯ ಸುಧಾರಿಸಿರುವುದು ಮತ್ತು ಕರುಳಿನ ಸೋರಿಕೆ ಕಡಿಮೆ ಮಾಡಿರುವುದು ಕಂಡು ಬಂದಿದೆ.

ಮೂರನೇ ಒಂದರಷ್ಟು ಅಮೆರಿಕನ್ನರನ್ನು ಬಾಧಿಸುವ, ಮೆಟಾಬೋಲಿಕ್ ಸಿಂಡ್ರೋಮ್ ಎಂದು ಕರೆಯಲಾಗುವ ಆರೋಗ್ಯ ಸಮಸ್ಯೆಗಳನ್ನು, ಕರುಳಿನಲ್ಲಿ ಗ್ರೀನ್ ಟೀ ಯ ಉರಿಯೂತ ನಿರೋಧಕ ಗುಣಗಳಿಂದ ಶಮನ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಗ್ರೀನ್ ಟೀ ಸೇವಿಸುವುದರಿಂದ ಉತ್ತಮ ಪ್ರಮಾಣದ ಕೊಲೆಸ್ಟರಾಲ್, ಗ್ಲುಕೋಸ್ ಮತ್ತು ಟ್ರೈಗ್ಲೀಸರಿನ್ ವೃದ್ಧಿಯಾಗುವ ಬಗ್ಗೆ ಅನೇಕ ಸಂಶೋಧನೆಗಳು ನಡೆದಿದ್ದರೂ ಕರುಳಿನ ಆರೋಗ್ಯ ಮೇಲೆ ಇದರ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆದಿರಲಿಲ್ಲ ಎಂದು ಹೇಳುತ್ತಾರೆ ರಿಚರ್ಡ್ ಬ್ರೂನೊ. ಇವರು ಓಹಿಯೊ ಸ್ಟೇಟ್ ಯುನಿವರ್ಸಿಟಿಯಲ್ಲಿ ಹಿರಿಯ ಬರಹಗಾರ ಮತ್ತು ಪೌಷ್ಟಿಕಾಂಶ ಪ್ರಾಧ್ಯಾಪಕರಾಗಿದ್ದಾರೆ.

40 ಜನರ ಮೇಲೆ ಪ್ರಯೋಗ: ಇವರ ತಂಡವು 40 ಜನರ ಮೇಲೆ ಕ್ಲಿನಿಕಲ್ ಟ್ರಯಲ್ಸ್​ ಮಾಡಿತ್ತು. 2019ರಲ್ಲಿ ನಡೆದ, ಕರುಳಿನ ಆರೋಗ್ಯ ಆಧರಿಸಿದ ಕಡಿಮೆ ಬೊಜ್ಜು ಮತ್ತು ಕಡಿಮೆ ಆರೋಗ್ಯದ ಅಪಾಯಗಳ ಕುರಿತಾಗಿ ಇಲಿಗಳಿಗೆ ಗ್ರೀನ್ ಟೀ ಅಂಶಗಳನ್ನು ನೀಡಿ ನಡೆಸಲಾದ ಸಂಶೋಧನೆಯ ಮುಂದುವರಿದ ಭಾಗ ಇದಾಗಿದೆ. ಹೊಸ ಅಧ್ಯಯನಗಳ ಪ್ರಕಾರ ಗ್ರೀನ್ ಟೀ ರಕ್ತದಲ್ಲಿನ ಸಕ್ಕರೆ ಮಟ್ಟ ಅಥವಾ ಗ್ಲುಕೋಸ್ ಮಟ್ಟ ಕಡಿಮೆ ಮಾಡಿದ್ದು ಕಂಡು ಬಂದಿದೆ. ಅಲ್ಲದೇ ಕರುಳಿನ ಉರಿಯೂತ ಕಡಿಮೆಯಾಗಿರುವುದು ಕಂಡು ಬಂದಿದ್ದು ಹೊಸ ಬೆಳವಣಿಗೆಯಾಗಿದೆ.

ಕರುಳಿನ ಉರಿಯೂತ ನಿಯಂತ್ರಣ ಸಾಧ್ಯ: ಇದರಿಂದ ತಿಳಿಯುವುದೇನೆಂದರೆ- ಒಂದು ತಿಂಗಳೊಳಗೆ ನಾವು ಮೆಟಬಾಲಿಕ್ ಸಿಂಡ್ರೋಮ್ ಹೊಂದಿರುವ ಜನರಲ್ಲಿ ಮತ್ತು ಆರೋಗ್ಯವಂತ ಜನರಲ್ಲಿ ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡಲು ಸಾಧ್ಯವಾಗಿದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಕಡಿಮೆ ಮಾಡುವುದು, ಸೋರುವ ಕರುಳಿನ ಸಮಸ್ಯೆ ಕಡಿಮೆ ಮಾಡುವುದು ಮತ್ತು ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಸಾಧ್ಯ ಎಂದು ಬ್ರೂನೋ ಹೇಳಿದರು.

ಮೆಟಬಾಲಿಕ್ ಸಿಂಡ್ರೋಮ್ ಹೊಂದಿರುವ ಪ್ರತಿ ಐದು ಜನರಲ್ಲಿ ಮೂವರು ಹೃದಯ ಬೇನೆ, ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರುವ ಸಾಧ್ಯತೆಗಳಿರುತ್ತವೆ ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ಇದನ್ನು ಓದಿ:ಲೈಂಗಿಕ ಸಂಪರ್ಕದಿಂದ ಮಂಕಿಪಾಕ್ಸ್ ಹರಡುತ್ತದಾ? ಇಲ್ಲಿದೆ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.