ETV Bharat / sukhibhava

ಗರ್ಭಿಣಿಯರಿಗೆ ಆರಂಭಿಕ ಗರ್ಭಾವಸ್ಥೆಯಲ್ಲಿ ವಾಂತಿಯಾಗುವುದೇಕೆ? - ಗರ್ಭಾವಸ್ಥೆಯಲ್ಲಿನ ವಾಂತಿ ಸಮಸ್ಯೆ

Early days of pregnancy: ಗರ್ಭಾವಸ್ಥೆ ಸಂದರ್ಭದಲ್ಲಿ ಮಹಿಳೆಯರಲ್ಲಿ ಈ ರೀತಿ ಆರೋಗ್ಯ ವ್ಯತ್ಯಯವಾಗುವುದು ಏಕೆ? ಇದರ ಹಿಂದಿನ ಹಾರ್ಮೋನ್​ಗಳ ಚಿಕಿತ್ಸೆ ಕುರಿತು ಇದೀಗ ವ್ಯಾಪಕ ಅಧ್ಯಯನ ನಡೆಸಲಾಗಿದೆ.

gdf15-hormone-is-the-response-for-pregnancy-vomiting

author img

By ETV Bharat Karnataka Team

Published : Dec 26, 2023, 12:09 PM IST

ಹೈದರಾಬಾದ್​: ತಾಯ್ತನ ಎಂಬುದು ಹೊಸ ಜೀವದ ಸೃಷ್ಟಿಯಾದರೂ ಈ ಪ್ರಯಾಣದ ಅವಧಿ ಪ್ರತಿ ಮಹಿಳೆಯರಲ್ಲೂ ವಿಭಿನ್ನ ಅನುಭವ ನೀಡುತ್ತದೆ. ಆರಂಭಿಕ ಅವಧಿಯ ಗರ್ಭಾವಸ್ಥೆಯಲ್ಲಿ ಅನೇಕ ಮಹಿಳೆಯರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಯದಲ್ಲಿ ವಾಂತಿ, ತಲೆ ಸುತ್ತುವಿಕೆ ಅನುಭವ ಸಹಜ. ಕೆಲವರಲ್ಲಿ ಇದು ತೀವ್ರಮಟ್ಟದಲ್ಲಿ ಇರುತ್ತದೆ. ಇದನ್ನು ಹೈಪರೆಮೆಸಿಸ್ ಗ್ರಾವಿಡಾರಮ್ (ಎಚ್​ಜಿ) ಎಂದು ಕರೆಯಲಾಗುವುದು.

ಈ ಸಮಯದಲ್ಲಿ ಮಹಿಳೆಯು, ತೂಕ ಮತ್ತು ದೇಹದ ನೀರಿನ ನಷ್ಟವನ್ನು ಅನುಭವಿಸುತ್ತಾಳೆ. ಕೆಲವರು ಈ ಸ್ಥಿತಿಯಿಂದ ಆಸ್ಪತ್ರೆಗೂ ದಾಖಲಾಗುತ್ತಾರೆ. ಗರ್ಭಾವಸ್ಥೆ ವೇಳೆಯಲ್ಲಿ ಮಹಿಳೆಯರಲ್ಲಿ ಈ ರೀತಿ ಆರೋಗ್ಯ ವ್ಯತ್ಯಾಯವಾಗುವುದು ಯಾಕೆ? ಎಂಬ ಕುರಿತು ಅದರಲ್ಲೂ ವಿಶೇಷವಾಗಿ ಈ ಸಮಯದಲ್ಲಿ ಈ ಪರಿಸ್ಥಿತಿಗೆ ಕಾರಣವಾಗುವ ಜಿಡಿಎಫ್​ 15 ಹಾರ್ಮೋನ್​ಗಳ ಅಧ್ಯಯನವನ್ನು ವಿವಿಧ ದೇಶದಲ್ಲಿ ಸಂಶೋಧಕರು ನಡೆಸಿದ್ದಾರೆ

ಜಿಡಿಎಫ್​ 15 ಹಾರ್ಮೋನ್​ ದೇಹದಲ್ಲಿ ಕಡಿಮೆ ಮಟ್ಟದಲ್ಲಿ ಇರುತ್ತದೆ. ಇದರ ಮಟ್ಟ ಗರ್ಭಾವಸ್ಥೆಯಲ್ಲಿ ಪ್ಲೆಸೆಂಟಾದಲ್ಲಿ ಹೆಚ್ಚಾಗುತ್ತದೆ. ಇದು ಗರ್ಭಿಣಿಯರಲ್ಲಿ ಮಾರ್ನಿಂಗ್​ ಸಿಕ್​ನೆಸ್​​ ಅಂದರೆ, ಬೆಳಗಿನ ಸಮಯದಲ್ಲಿ ತಲೆ ಸುತ್ತುವಿಕೆ, ವಾಂತಿಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ಇದು ಪ್ರತಿ ಮಹಿಳೆಯರಲ್ಲಿ ಒಂದೇ ರೀತಿಯಾಗಿ ಕಾಣುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಜಿಡಿಎಫ್​ ಹೆಚ್ಚಿನ ಮಟ್ಟದಲ್ಲಿರುವ ಮಹಿಳೆಯರಲ್ಲಿ ಮಾರ್ನಿಂಗ್​ ಸಿಕ್​ನೆಸ್​ ಹೆಚ್ಚಿರುತ್ತದೆ. ಇದರ ಆಧಾರದ ಮೇಲೆ ಸಂಶೋಧಕರು ಚಿಕಿತ್ಸೆಯನ್ನು ಕಂಡು ಹಿಂದಿದ್ದಾರೆ. ಇಲಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಗರ್ಭಧಾರಣೆಗೆ ಮುನ್ನ ನೀಡಿದ ಜಿಡಿಎಫ್​15 ಜೊತೆಗಿನ ಔಷಧಗಳು ಉತ್ತಮ ಫಲಿತಾಂಶ ನೀಡಿದೆ. ಆ್ಯಂಟಿಬಾಡಿ ಥೆರಪಿ ಈ ಹಾರ್ಮೋನ್​ ಅಡ್ಡಗಟ್ಟುತ್ತದೆ.

ವೈದ್ಯರ ಶಿಫಾರಸು ಏನು?; ಆಹಾರದ ಪ್ಯಾಕೇಜ್, ಕಾಸ್ಮೆಟಿಕ್​ ಮತ್ತು ಇತರ ದೈನಂದಿನ ವಸ್ತುಗಳಲ್ಲಿ ಪರ್​ ಅಂಡ್​​ ಪಾಲಿಫ್ಲೋರೊಅಲ್ಕೈಲ್ (ಪಿಎಫ್​ಎ) ರಾಸಾಯನಿಕಗಳು ಕಂಡು ಬರುತ್ತದೆ. ಇವುಗಳ ಸೇವನೆ ಹುಟ್ಟುವ ಮಕ್ಕಳಲ್ಲಿ ಗಂಭೀರ ಪರಿಣಾಮಕ್ಕೆ ಕಾರಣವಾಗುತ್ತದೆ. ಅವಧಿ ಪೂರ್ವಕ ಮಗುವಿನ ಜನನಕ್ಕೂ ಇದು ಕಾರಣವಾಗುತ್ತದೆ. ಈ ಹಿನ್ನಲೆ ಇವುಗಳ ಸೇವನೆ ಈ ಅವಧಿಯಲ್ಲಿ ಮಾಡದಿರುವುದು ಒಳ್ಳೆಯದು ಎಂದು ಸಂಶೋಧಕರು ಶಿಫಾರಸು ಮಾಡಿದ್ದಾರೆ.

ಮಕ್ಕಳ ಮೇಲೆ ಬೀರುವ ಪರಿಣಾಮಗಳೇನು?: ಇದು ಹದಿಹರೆಯದ ಮಕ್ಕಳಲ್ಲಿ ಮೂಳೆಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನ ಪತ್ತೆ ಮಾಡಿದೆ. ಪಿಎಫ್​ಎ ಎಂಬುದು ಕೊಳೆಯುವುದಿಲ್ಲ. ಇದೇ ಕಾರಣಕ್ಕೆ ಇದನ್ನು ಅಜೀವ ರಾಸಾಯನಿಕ ಎಂದು ಕರೆಯಲಾಗುವುದು. ಹಿಂದಿನ ಅಧ್ಯಯನದಲ್ಲಿ ಪತ್ತೆಯಾದಂತೆ ಇದು ಬಂಜೆತನ ಮತ್ತು ಕ್ಯಾನ್ಸರ್​​ ಅಪಾಯಕ್ಕೆ ಕಾರಣವಾಗುತ್ತದೆ. ಇದು ಮಕ್ಕಳಲ್ಲಿ ಮೂಳೆಗಳ ಸಾಂದ್ರತೆ ಕಡಿಮೆಯಾಗಲು ಮತ್ತು ಅಸ್ಥಿರಂದ್ರತೆಯಂತಹ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎಂಬ ಅಂಶವೂ ಅಧ್ಯಯನದ ವೇಳೆ ಪತ್ತೆಯಾಗಿದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿನ ಒತ್ತಡವು ಹುಟ್ಟುವ ಮಕ್ಕಳ ಮೇಲೆ ಬೀರುತ್ತೆ ಪರಿಣಾಮ; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.