ಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಆಚರಿಸಲ್ಪಡುವ ಗಣೇಶ ಚತುರ್ಥಿ ಹಬ್ಬದಲ್ಲಿ ನ್ಯೆವೇದ್ಯ ರೂಪದಲ್ಲಿ ಪೇಡ ಮೋದಕವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಪೇಡ ಮೋದಕ ರುಚಿಯಲ್ಲಿ ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಈ ಪೇಡ ಮೋದಕವನ್ನು ಸುಲಭವಾಗಿ ಹೇಗೆ ಮಾಡಬಹುದು ಎಂದು ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
- 3 ಚಮಚ ಬೆಣ್ಣೆ
- ಹಾಲಿನ ಪುಡಿ -1 ಕಪ್
- ಹಾಲು1/4 ಕಪ್
- ಕಂಡೆನ್ಸ್ಡ್ ಮಿಲ್ಕ್ 3/4 ಕಪ್
- ಸಕ್ಕರೆ 1/4
- ಏಲಕ್ಕಿ ಪುಡಿ-2 ಚಮಚ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ.
ಮಾಡುವ ವಿಧಾನ: ಒಂದು ಪಾತ್ರೆ ತೆಗೆದುಕೊಂಡು, ಅದನ್ನು ಒಲೆ ಮೇಲೆ ಇಟ್ಟು ಪಾಕ ಬರುವಂತೆ ಈ ಮಿಶ್ರಣವನ್ನು ಮಿಕ್ಸ್ ಮಾಡುತ್ತಿರಿ. ವಿಶ್ರಣ ಗಟ್ಟಿ ಆಗುವ ತನಕ ಅದನ್ನು ಮಿಕ್ಸ್ ಮಾಡಿ. ಮಿಶ್ರಣ ಗಟ್ಟಿಯಾದ ನಂತರ ತುಪ್ಪ ಹಾಕಿ, ನಂತರ ಮೋದಕ ಮಾಡುವ ಅಚ್ಚಿನ ಮೇಲೆ ಹಾಕಿ, ಅದನ್ನು ಪ್ರೆಸ್ ಮಾಡಿ.