ETV Bharat / sukhibhava

Diabetes: ಕೆಲಸದ ಸ್ಥಳದಲ್ಲಿ ಮಧುಮೇಹ ನಿರ್ವಹಣೆಗೆ ಈ ನಿಯಮ ಪಾಲಿಸಿ.. - ಗುರಿಗಳ ಸಾಧನೆಯಲ್ಲಿ ಆರೋಗ್ಯ

ಕೆಲಸದ ಸ್ಥಳದಲ್ಲಿನ ಜಢ ಜೀವನಶೈಲಿ, ಅನಾರೋಗ್ಯಕರ ಆಹಾರಗಳು ಮಧುಮೇಹಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Follow this rule for managing diabetes in the workplace

author img

By

Published : Aug 22, 2023, 3:32 PM IST

ವೃತ್ತಿ ಜೀವನದ ಬೆಳವಣಿಗೆ ಮತ್ತು ಗುರಿಗಳ ಸಾಧನೆಯಲ್ಲಿ ಆರೋಗ್ಯ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯ ಎಂದಿಗೂ ನಿಮ್ಮ ವೃತ್ತಿಗೆ ತೊಡಕು ಆಗಬಾರದು. ಇನ್ನು ಇತ್ತೀಚನ ದಿನದಲ್ಲಿ ಹೆಚ್ಚಿನ ಜನರ ಮೇಲೆ ಕೆಲಸದ ಸ್ಥಳಗಳಲ್ಲೇ ತಮ್ಮ ಆರೋಗ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಮಧುಮೇಹ ಸಮಸ್ಯೆಗೆ ಸರಿಯಾದ ಯೋಜನೆ, ನಿಯಮಿತ ರಕ್ತದ ಸಕ್ಕರೆ ಮಟ್ಟ ಪರೀಕ್ಷೆ ನಡೆಸುವ ಮೂಲಕ ತಮ್ಮ ಕೆಲಸವನ್ನು ನಿಭಾಯಿಸಬೇಕಿದೆ.

ಭಾರತದಲ್ಲಿ ಪ್ರಸ್ತುತ 101 ಮಿಲಿಯನ್​ ಮಂದಿ ಮಧುಮೇಹದಿಂದ ಬಳಲುತ್ತಿದ್ದು, 2019ಕ್ಕೆ ಹೋಲಿಕೆ ಮಾಡಿದಾಗ ಈ ಸಂಖ್ಯೆ 77 ಮಿಲಿಯನ್​ ಹೆಚ್ಚಾಗಿದೆ. ಮಧುಮೇಹವೂ ದೀರ್ಘ ಜೀವನಶೈಲಿಯ ಪರಿಸ್ಥಿತಿಯಾಗಿದ್ದು, ಭವಿಷ್ಯದ ಆರೋಗ್ಯ ಅಪಾಯ ಎದುರಾಗದಂತೆ ಇದನ್ನು ನಿರ್ವಹಣೆ ಮಾಡಬೇಕಿದೆ. ಡೆಸ್ಕ್​ ಕೆಲಸ ಮಾಡುವವರಿಗೆ ಇದರ ನಿರ್ವಹಣೆ ಸವಾಲಿನಿಂದ ಕೂಡಿರುತ್ತದೆ. ದೀರ್ಘ ಕಾಲದ ಕುಳಿತುಕೊಳ್ಳದಂತೆ ಸೇರಿದಂತೆ ಇನ್ನಿತರ ಜೀವಶೈಲಿ ಬದಲಾವಣೆಯನ್ನು ಅವರಿಗೆ ಮಾಡಬೇಕಿದೆ. ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು. ಉತ್ತಮ ಆರೋಗ್ಯ ಸರಿಯಾದ ವೇಳಾಪಟ್ಟಿ ಅನುಸರಿಸುವುದು ನಿರ್ಣಾಯಕವಾಗಿದೆ ಎಂದು ಹೈದರಾಬಾದ್​ ಅಪೋಲೊ ಆಸ್ಪತ್ರೆಯ ವೈದ್ಯ ಡಾ ರವಿ ಶಂಕರ್​ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಕೆಲಸದ ಸ್ಥಳದಲ್ಲಿ ಈ ಕ್ರಮಗಳ ನಿರ್ವಹಣೆ ಅವಶ್ಯಕವಾಗಿದೆ

ಸೂಕ್ತ ಯೋಜನೆ: ಕೆಲಸದ ಪ್ರಯಾಣ ಶುರು ಮಾಡುವ ಮೊದಲೇ ನಿಮ್ಮ ಮಧುಮೇಹ ನಿರ್ವಹಣೆ ಕುರಿತು ಯೋಜನೆ ರೂಪಿಸಿ. ರಾತ್ರಿ ಉತ್ತಮ ನಿದ್ರೆ, ಬೆಳಗಿನ ಯೋಜನೆ, ತಿಂಡಿ ತಪ್ಪಿಸದಂತೆ ಡಯಟ್​ ಪ್ಲಾನ್​ ಸೇರಿದಂತೆ ಸಕ್ಕರೆ ಮಟ್ಟ ನಿರ್ವಹಣೆ ಮಾಡಿ.

ಕುರುಕಲು ಬಗ್ಗೆ ಇರಲಿ ಗಮನ: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ಅನೇಕ ಬಾರಿ ಬಾಯಿ ಮೆಲುಕು ಹಾಕುವುದು ಸಾಮಾನ್ಯ. ಈ ವೇಳೆ ಅನಾರೋಗ್ಯಕರ ಆಹಾರವೇ ಹೆಚ್ಚು ಸೇವನೆ ಮಾಡುತ್ತೇವೆ ಈ ಹಿನ್ನಲೆ ಆರೋಗ್ಯಕರ ಆಹಾರಗಳಿಗೆ ಒತ್ತು ನೀಡಿ. ಹಣ್ಣು, ಸಲಾಡ್​, ನಟ್ಸ್​, ಯೋಗರ್ಟ್​ಗಳ ಸೇವನೆ ಮಾಡುವುದು ಉತ್ತ. ಜೊತೆಗೆ ದೇಹವನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಿ ಜೊತೆಗೆ ಸಕ್ಕರೆ ಮತ್ತು ಕೆಫೆನ್​ ಪಾನೀಯ ಸೇವಿಸುವಾಗ ಹೆಚ್ಚಿನ ಗಮನವಹಿಸುವುದು ಅವಶ್ಯ

ಆರೋಗ್ಯಕರ ಆಹಾರ ಸಮಯ: ಮಧ್ಯಾಹ್ನದ ಹೊತ್ತು ಹೊರಗಿನ ಆಹಾರಕ್ಕೆ ಹೆಚ್ಚು ಅವಲಂಬನೆಗೆ ಆಗದೇ, ಮನೆಯ ಆರೋಗ್ಯಯುತ ಆಹಾರದ ಆಯ್ಕೆ ಮಾಡಿಕೊಳ್ಳಿ. ಮಧುಮೇಹಿ ಸ್ನೇಹಿ ಆಹಾರಗಳಾದ ತರಕಾರಿ, ಬೇಳೆ ಕಾಳು, ತೆಳು ಪ್ರೋಟಿನ್​ ಆಹಾರ ಮತ್ತು ಕಡಿಮೆ ಕಾರ್ಬೋಹೈಡ್ರೇಟ್​ ಇರುವ ಹಣ್ಣು ಇರುವಂತೆ ನೋಡಿಕೊಳ್ಳಿ.

ಜೊತೆಗೆ ಆಹಾರದ ಆಯ್ಕೆಯಲ್ಲಿ ಸಮತೋಲನ ಕಾಯ್ದುಕೊಳ್ಳಿ. ಕಂಟಿನ್ಯೂಸ್​ ಗ್ಲುಕೋಸ್​ ಮಾನಿಟರಿಂಗ್​ (ಸಿಜಿಎಂ) ಸಾಧನಗಳು ನಿಮ್ಮ ಗ್ಲುಕೋಸ್​ ಮಟ್ಟ ಟ್ರಾಕ್​ ಮಾಡಲು ಸಹಾಯ ಆಗುತ್ತದೆ.

ಔಷಧ ದಿನಚರಿ ಪಾಲನೆ: ಮಧುಮೇಹದ ನಿರ್ವಹಣೆಗೆ ಪ್ರತಿನಿತ್ಯದ ಔಷಧಗಳ ಸೇವನೆ ಕೂಡ ಅತಿ ಮುಖ್ಯವಾಗಿದೆ. ಇದು ಗ್ಲೇಸೆಮಿಕ್​ ನಿಯಂತ್ರಸುವಲ್ಲಿ ಸಹಾಯ ಮಾಡುತ್ತದೆ.

ಜಢತ್ವದ ಜೀವನ ಶೈಲಿ ಬೇಡ: ಅನೇಕ ಕೆಲಸಗಳು ಜಢ ಜೀವನಶೈಲಿಯನ್ನು ಹೊಂದಿರುತ್ತದೆ. ದೈಹಿಕ ಚಟುವಟಿಕೆಗಳು ಮಾತ್ರ ಮಧುಮೇಹ ನಿರ್ವಹಣೆ ಮಾಡಲು ಸಹಾಯ ಆಗುತ್ತದೆ. ಈ ಹಿನ್ನೆಲೆ ದೀರ್ಘ ಕಾಲ ಡೆಸ್ಕ್​ನಲ್ಲಿ ಕೂರುವ ಬದಲು ಕಚೇರಿಯಲ್ಲೇ ಸಣ್ಣ ಅವಧಿ ವಾಕ್​ ರೂಢಿಸಿಕೊಳ್ಳಿ. ಊಟದ ಬಳಿಕ ನಡಿಗೆಯಂತಹ ಕೆಲವು ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಿ.

ಒತ್ತಡ ನಿರ್ವಹಣೆ: ಮಧುಮೇಹಿಗಳಲ್ಲಿ ಒತ್ತಡ ಹೆಚ್ಚಿದಂತೆ ಗ್ಲುಕೋಸ್​ ಮಟ್ಟ ಬದಲಾಗುತ್ತದೆ. ಈ ವೇಳೆ ಸಕ್ಕರೆ ಮಟ್ಟ ನಿರ್ವಹಣೆ ಕೂಡ ಕಷ್ಟವಾಗುತ್ತದೆ. ಈ ಹಿನ್ನೆಲೆ ಒತ್ತಡ ನಿರ್ವಹಣೆ ಮಾಡುವುದು ಅತಿ ಮುಖ್ಯವಾಗಿದೆ.

ಇದನ್ನೂ ಓದಿ: World Pre-Diabetes Day: ಪೂರ್ವ ಮಧುಮೇಹ ಎಂದರೇನು? ಇದರ ಲಕ್ಷಣ - ತಡೆಗಟ್ಟುವಿಕೆ ಬಗ್ಗೆ ಇರಲಿ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.