ಈಗಿನ ಪರಿಸ್ಥಿತಿಯಲ್ಲಿ ಮಕ್ಕಳು ಆನ್ಲೈನ್ ಮೂಲಕ ಶಿಕ್ಷಣ ಪಡೆದುಕೊಳ್ಳುತ್ತಿರುವುದರಿಂದ ಅವರ ಕಣ್ಣಿನ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ನಮ್ಮ ಮಕ್ಕಳ ಕಣ್ಣಿನ ಆರೋಗ್ಯದ ಕುರಿತು ಗಮನಹರಿಸಬೇಕಾಗಿರುವುದು ಅತ್ಯವಶಕವಾಗಿದೆ. ಇದರಿಂದ ಕಣ್ಣಿನ ಸಮಸ್ಯೆಗಳನ್ನು ತ್ವರಿತವಾಗಿ ಮತ್ತು ಸಮಯೋಜಿತವಾಗಿ ತಡೆಗಟ್ಟಬಹುದಾಗಿದೆ.ಈ ಕುರಿತು ನಮ್ಮ ಈಟಿವಿ ಭಾರತದ ಸುಖೀಭವದವರು ಡಾ. ಮಂಜು ಭಾಟೆ ಅವರೊಂದಿಗೆ ಮಾತನಾಡಿದ್ದಾರೆ. ಬನ್ನಿ ಅವರು ಏನ್ ಹೇಳಿದ್ದಾರೆ ನೋಡೋಣಾ.
ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಕಣ್ಣಿನ ತೊಂದರೆಗಳು ಯಾವುವು?
ಮಕ್ಕಳಲ್ಲಿ ವಕ್ರೀಕಾರಕ ದೋಷಗಳು ಸಾಮಾನ್ಯವಾಗಿದೆ (ಸಮೀಪದೃಷ್ಟಿ ಅಥವಾ ಅಸ್ಟಿಗ್ಮ್ಯಾಟಿಸಮ್ ಹೈಪರೋಪಿಯಾಕ್ಕಿಂತ ಸಾಮಾನ್ಯವಾಗಿದೆ). ಇದಲ್ಲದೆ ಅಲರ್ಜಿಕ್ ಕಾಂಜಂಕ್ಟಿವಿಟಿಸ್ ಸಾಕಷ್ಟು ಸಾಮಾನ್ಯವಾಗಿದೆ, ಅಲ್ಲದೇ ಇದು ಕಾಲಕ್ಕೆ ತಕ್ಕಂತೆ ಬರುತ್ತದೆ.
ಮಕ್ಕಳು ಯಾವಾಗ ತಮ್ಮ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಬೇಕು?
ಮಕ್ಕಳು ಪ್ರಿಸ್ಕೂಲ್ ಅಥವಾ ಶಿಶುವಿಹಾರದಲ್ಲಿ ಇರುವಾಗಲೇ ಅಂದರೆ 3-4 ವರ್ಷ ವಯಸ್ಸಿನಲ್ಲೇ ಪರೀಕ್ಷಿಸಿಕೊಂಡರೇ, ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆಹಚ್ಚಿ ಸಮಸ್ಯೆಯನ್ನು ನಿವಾರಿಸಬಹುದು. ಮಕ್ಕಳಲ್ಲಿ ಯಾವುದೇ ರೀತಿಯ ಕಣ್ಣಿನ ಸಮಸ್ಯೆ ಕಂಡುಬಂದರೇ, ತಕ್ಷಣ ಪೋಷಕರು ಅವರನ್ನು ಮಕ್ಕಳ ನೇತ್ರತಜ್ಞರ ಬಳಿ ಕರೆದುಕೊಂಡು ಹೋಗುವುದು ಸೂಕ್ತ.
ನಮ್ಮ ಕಣ್ಣುಗಳ ಮೇಲೆ ನಾವು ಹೇಗೆ ಕಾಳಜಿ ವಹಿಸಬೇಕು?
ಓದುವ / ಬರೆಯುವಾಗ ಚೆನ್ನಾಗಿ ಬೆಳಕಿರುವ ಕೋಣೆಯಲ್ಲಿ ಕೂಳಿತುಕೊಳ್ಳಬೇಕು. ಟಿವಿ , ಮೊಬೈಲ್ ಇವೆಲ್ಲಾವನ್ನು ಸೀಮಿತ ಅವಧಿಯವರೆಗೆ ಸರಿಯಾದ ರೀತಿಯಲ್ಲಿ ಬಳಸಬೇಕು.
ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಇದೆ ಎಂಬುದನ್ನು ಗೊತ್ತು ಮಾಡಿಕೊಳ್ಳುವುದು ಹೇಗೆ ?
ಮಗುವಿನಲ್ಲಿ ಹಲವಾರು ರೀತಿಯ ಕಣ್ಣಿನ ತೊಂದರೆಗಳು ಉಂಟಾಗಬಹುದು, ಸೋಂಕು ಅಥವಾ ಕಾಂಜಂಕ್ಟಿವಿಟಿಸ್ ಮುಂತಾದವುಗಳು ಕಣ್ಣಿನ ತೊಂದರೆಗೆ ಕಾರಣವಾಗುತ್ತವೆ. ಕಣ್ಣಿನ ಸಮಸ್ಯೆ ಕುರಿತು ಮಗು ಹೇಳುವವರೆಗೆ ಅಥವಾ ಅದನ್ನು ಶಿಕ್ಷಕರು ಗುರುತಿಸುವವರೆಗೆ ಸಮಸ್ಯೆ ತಿಳಿಯುವುದು ತುಂಬಾ ಕಷ್ಟ. ಮಗು ವಸ್ತುಗಳನ್ನು ಅಥವಾ ಪುಸ್ತಕಗಳನ್ನು ತುಂಬಾ ಹತ್ತಿರ ಇಟ್ಟುಕೊಂಡು ನೋಡುವುದು, ಆಗಾಗ ಕಣ್ಣುಗಳನ್ನು ಉಜ್ಜುವುದು, ಟಿವಿಯನ್ನು ನೋಡುವಾಗ ಕಣ್ಣುಗಳ ಮೂಲೆಯ ಮೂಲಕ ನೋಡುವುದು ಇವೆಲ್ಲಾ ಕಣ್ಣಿನ ಸಮಸ್ಯೆಯ ಲಕ್ಷಣಗಳಾಗಿವೆ.
ಕಣ್ಣಿನ ಸಮಸ್ಯೆಗಳನ್ನು ಪತ್ತೆಹಚ್ಚುವಲ್ಲಿ ಪೋಷಕರು/ಶಿಕ್ಷಕರ ಪಾತ್ರವೇನು ?
ಮಕ್ಕಳ ಕಣ್ಣಿನ ಸಮಸ್ಯೆಯನ್ನು ಪತ್ತೆಹಚ್ಚುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ನಾವು ಮೇಲೆ ಹೇಳಿದ ಪಾಯಿಂಟರ್‌ಗಳನ್ನು ಪೋಷಕರು ಮತ್ತು ಶಿಕ್ಷಕರು ಗಮನಿಸಿ, ಜಾಗರೂಕರಾಗಿರಬೇಕು. ಸಣ್ಣದೊಂದು ಅನುಮಾನ ಬಂದರೂ ದೃಷ್ಟಿ ತಪಾಸಣೆ ಮಾಡುವುದು ಸೂಕ್ತ.
ಕಣ್ಣಿನ ತೊಂದರೆಗಳನ್ನು ತಡೆಯಲು ಆಹಾರದಲ್ಲಿನ ಮಾರ್ಪಾಡುಗಳು ಸಹಾಯ ಮಾಡುತ್ತವೆಯೇ ?
ಮಗುವಿನ ಅಪೌಷ್ಟಿಕತೆ ಕಣ್ಣಿನ ತೊಂದರೆಗೆ ಕಾರಣವಾಗಬಹುದು. ಸಮತೋಲಿತ ಮತ್ತು ಆರೋಗ್ಯಕರ ಆಹಾರವು ಅತ್ಯವಶಕವಾಗಿದೆ. ಕಣ್ಣುಗಳಿಗಾಗಿಯೇ ಯಾವುದೇ ವಿಶೇಷ ಆಹಾರಗಳು ಇಲ್ಲ. ಮಗುವಿಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಿದ್ರೆ ಎಲ್ಲ ಕಣ್ಣಿನ ತೊಂದರೆಗಳನ್ನು ದೂರ ಮಾಡಬಹುದಾಗಿದೆ.
ಕೋವಿಡ್ 10 ಅನಾರೋಗ್ಯದ ಸಮಯದಲ್ಲಿ ಕಣ್ಣಿನ ತೊಂದರೆಗಳು ಹೆಚ್ಚಾಗುತ್ತವೆಯೇ?
ಕೊರೊನಾ ಲಾಕ್ಡೌನ್ ಸಮಯದಲ್ಲಿ ಮಕ್ಕಳು ಹೆಚ್ಚು ಮೊಬೈಲ್, ವಿಡಿಯೋ ಗೇಮ್ಗಳಲ್ಲೇ ಕಾಲ ಕಳೆಯುತ್ತಿರುವುದರಿಂದ ಕಣ್ಣಿನ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು ಇದೆ.
ಕಣ್ಣಿನ ಸೋಂಕನ್ನು ತಡೆಗಟ್ಟಲು ಮಕ್ಕಳಿಗೆ ಸಾಮಾನ್ಯ ಮಾರ್ಗಸೂಚಿಗಳು
ಇದು ಯಾವ ರೀತಿಯ ಸೋಂಕಿನ ಮೇಲೆ ಅವಲಂಬಿತವಾಗಿರುತ್ತದೆ ಎಂದರೇ, ಬಹುಶಃ ವೈರಲ್ ಕಾಂಜಂಕ್ಟಿವಿಟಿಸ್ನಂತಹ ಕಣ್ಣಿನ ಸೋಂಕನ್ನು ಹೊಂದಿರುವ ಯಾರೊಂದಿಗೂ ಸಂಪರ್ಕವನ್ನು ತಪ್ಪಿಸುವುದು ಉತ್ತಮ.