ETV Bharat / sukhibhava

ವ್ಯಾಯಾಮದಿಂದ ಪಾರ್ಕಿನ್ಸನ್​​​ ಅಭಿವೃದ್ಧಿ ಅಪಾಯ ಕಡಿಮೆ: ಅಧ್ಯಯನ

author img

By

Published : May 18, 2023, 11:55 AM IST

ವ್ಯಾಯಾಮ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಇದು ಆರಂಭಿಕ ಪಾರ್ಕಿನ್ಸನ್​ ರೋಗ ತಡೆಗೆ ಸಹಾಯಕ ಎಂದು ಅಧ್ಯಯನ ತಿಳಿಸಿದೆ.

Exercise reduces the risk of developing Parkinson's;
Exercise reduces the risk of developing Parkinson's

ಸೈಕ್ಲಿಂಗ್​, ವಾಕಿಂಗ್​, ಕ್ಲೀನಿಂಗ್​ ಮತ್ತು ಕ್ರೀಡೆಗಳಂತಹ ಸಾಮಾನ್ಯ ವ್ಯಾಯಾಮಗಳು ಪಾರ್ಕಿನ್ಸನ್​ ರೋಗವನ್ನು ತಡೆಯುವ ಸಾಧ್ಯತೆ ಹೊಂದಿರುತ್ತದೆ ಎಂದು ಅಮೆರಿಕನ್​ ಅಕಾಡೆಮಿ ಆಫ್​ ನ್ಯೂರಾಲಾಜಿ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಭಾಗಿಯಾದ ಮಹಿಳಾ ಭಾಗಿದಾರರು ವ್ಯಾಯಾಮ ಮಾಡದವರಿಗೆ ಹೋಲಿಸಿದರೆ, ವ್ಯಾಯಾಮ ಮಾಡಿದವರು ಶೇ 25ರಷ್ಟು ಕಡಿಮೆ ಪಾರ್ಕಿನ್ಸನ್​ ರೋಗ ಹೊಂದಿದ್ದಾರೆ. ವ್ಯಾಯಾಮವೂ ಪಾರ್ಕಿನ್ಸನ್​ ರೋಗ ಅಭಿವೃದ್ಧಿ ಅಪಾಯ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.

ವ್ಯಾಯಾಮವೂ ಕಡಿಮೆ ವೆಚ್ಚದಲ್ಲಿ ದೇಹದ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ. ಪಾರ್ಕಿನ್ಸನ್‌ ರೋಗಕ್ಕೆ ಯಾವುದೇ ಉಪಶಮನ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಪಾರ್ಕಿನ್ಸನ್ ಅಪಾಯ ಕಡಿಮೆ ಮಾಡುವಲ್ಲಿ ವ್ಯಾಯಾಮ ಸಂಬಂಧ ಹೊಂದಿದೆಯೇ ಎಂಬುದನ್ನು ಅಧ್ಯಯನ ನಡೆಸಲಾಗಿದೆ ಎಂದು ಲೇಖಕ ಅಲೆಕ್ಸಿಸ್​ ಎಲಬಸ್​ ತಿಳಿಸಿದ್ದಾರೆ. ತಮ್ಮ ಅಧ್ಯಯನ ಪಾರ್ಕಿನ್ಸನ್ ​ರೋಗ ನಿಯಂತ್ರಣಕ್ಕೆ ಮಧ್ಯಸ್ಥಿಕೆ ವಹಿಸುವಲ್ಲಿ ಫಲಿತಾಂಶ ಸಾಕ್ಷಿ ನೀಡಿದೆ. ಈ ಅಧ್ಯಯನಕ್ಕೆ 95,354 ಮಹಿಳಾ ಭಾಗಿದಾರರನ್ನು ಒಳಪಡಿಸಲಾಗಿದೆ. 49ವಯಸ್ಸಿನ ಸಾರಸಾರಿ ಮಹಿಳಾ ಶಿಕ್ಷಕರರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಇವರಿಗೆ ಪಾರ್ಕಿನ್ಸನ್ ​ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ.

ಅಧ್ಯಯನಕಾರರು 6 ಪ್ರಶ್ನಾವಳಿಗಳು ಮತ್ತು ದೈಹಿಕ ಚಟುವಟಿಕೆಗಳೊಂದಿಗೆ ಸಂಶೋಧನೆ ನಡೆಸಿದ್ದಾರೆ. ಅವರು ಎಷ್ಟು ದೂರ ನಡೆದರು, ದಿನಕ್ಕೆ ಎಷ್ಟು ಮೆಟ್ಟಿಲು ಹತ್ತಿದರು, ಗೃಹ ಚಟುವಟಿಕೆಯಲ್ಲಿ ಎಷ್ಟು ಕಾಲ ಕಳೆದರು ಮತ್ತು ಗಾರ್ಡನಿಂಗ್​, ಕ್ರೀಡೆಯಂತಹ ಸುಧಾರಿತ ಚಟುವಟಿಕೆಯಲ್ಲಿ ಭಾಗಿಯಾದರು ಎಂದು ಅಧ್ಯಯನ ನಡೆಸಲಾಗಿದೆ. 24 ಸಾವಿರ ಮಂದಿಯ ನಾಲ್ಕು ಗುಂಪುಗಳನ್ನು ಮಾಡಿ ಅವರನ್ನು ಅಧ್ಯಯನ ನಡೆಸಲಾಗಿದೆ.

ಅತಿ ಹೆಚ್ಚು ವ್ಯಾಯಾಮ ಮಾಡಿದ ತಂಡದಲ್ಲಿ ಪಾರ್ಕಿನ್ಸನ್​ ರೋಗ ಅಭಿವೃದ್ಧಿ ದರ ದೈಹಿಕ ಚಟುವಟಿಕೆಗೆ ಒಳಗಾಗದವರಿಗೆ ಹೋಲಿಕೆ ಮಾಡಿದಾಗ ಶೇ 25ರಷ್ಟು ಕಡಿಮೆಯಾಗಿದೆ. ಈ ದೈಹಿಕ ಚಟುವಟಿಕೆಗಳನ್ನು 10 ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. ಪಾರ್ಕಿನ್ಸನ್ ​ರೋಗ ಬರುವ 15 ಅಥವಾ 20 ವರ್ಷದ ಮುಂಚೆ ಅವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಫಲಿತಾಂಶದಲ್ಲಿ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗ ಸಮಸ್ಯೆಗಳು ಮತ್ತು ಡಯಟ್​ ಅನ್ನು ಕೂಡ ಸರಿದೂಗಿಸಲಾಗಿದೆ.

ರೋಗನಿರ್ಣಯ ಪತ್ತೆಯಾಗುವ 10 ವರ್ಷಗಳ ಮೊದಲು, ಪಾರ್ಕಿನ್ಸನ್ ಕಾಯಿಲೆ ಇರುವವರಲ್ಲಿ ದೈಹಿಕ ಚಟುವಟಿಕೆಯು ಪಾರ್ಕಿನ್ಸನ್ ಕಾಯಿಲೆಯ ಆರಂಭಿಕ ರೋಗಲಕ್ಷಣಗಳಿಂದಾಗಿ ಪಾರ್ಕಿನ್ಸನ್ ಕಾಯಿಲೆ ಇಲ್ಲದವರಿಗಿಂತ ವೇಗವಾಗಿ ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹೆಚ್ಚು ವ್ಯಾಯಾಮ ಮಾಡುವ ಮಹಿಳಾ ಭಾಗಿದಾರರಲ್ಲಿ ಪಾರ್ಕಿನ್ಸನ್ ಕಾಯಿಲೆಯ ಬೆಳವಣಿಗೆಯ ದರವನ್ನು ಕಡಿಮೆ ಹೊಂದಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಪಾರ್ಕಿನ್ಸನ್ ಕಾಯಿಲೆಯ ಆರಂಭಿಕ ರೋಗಲಕ್ಷಣಗಳು ಈ ಸಂಶೋಧನೆಗಳನ್ನು ವಿವರಿಸಲು ಅಸಂಭವವೆಂದು ನಾವು ತೋರಿಸಿದ್ದೇವೆ ಮತ್ತು ಬದಲಿಗೆ ವ್ಯಾಯಾಮವು ಪ್ರಯೋಜನಕಾರಿ ಮತ್ತು ಈ ರೋಗವನ್ನು ವಿಳಂಬಗೊಳಿಸಲು ಅಥವಾ ತಡೆಯಲು ಸಹಾಯ ಮಾಡಬಹುದು. ನಮ್ಮ ಫಲಿತಾಂಶವೂ ವ್ಯಾಯಾಮದ ಕಾರ್ಯಕ್ರಮಗಳು ಪಾರ್ಕಿನ್ಸನ್ ರೋಗ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಬೆಂಬಲಿಸುತ್ತಿದೆ. ಸಾಮಾನ್ಯ ಜನಸಂಖ್ಯೆಯಲ್ಲಿ ದೀರ್ಘ ಕಾಲದ ಅಧ್ಯಯನ ಈ ಫಲಿತಾಂಶದಲ್ಲಿ ಭಿನ್ನತೆ ಮೂಡಿಸಬಹುದು ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ: ಬೆನ್ನು, ಭುಜ ನೋವಿಗೆ ಕಾರಣ ಕೆಟ್ಟ ಭಂಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.