ETV Bharat / sukhibhava

ಮಕ್ಕಳ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಬೇಡಿ; ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರತ್ತೆ - ಕಠಿಣ ಶಿಸ್ತನ್ನು ಕೂಡ ಕೈಗೊಳ್ಳುತ್ತಾರೆ

ಮಕ್ಕಳನ್ನು ಅತಿಯಾಗಿ ದಂಡಿಸುವುದು ಅಥವಾ ಶಿಸ್ತು ಕ್ರಮ ಕೈಗೊಳ್ಳುವುದರಿಂದ ಮಗುವಿನ ಮಾನಸಿಕ ಆರೋಗ್ಯ ಅಪಾಯಕ್ಕೆ ಗುರಿಯಾಗುತ್ತದೆ.

Don't be too strict with children; It affects the child's mental health

author img

By

Published : Apr 5, 2023, 10:53 AM IST

ಮಕ್ಕಳು ಉತ್ತಮ ದಾರಿಯಲ್ಲಿ ಸಾಗಬೇಕು ಎಂಬ ಕಾರಣಕ್ಕೆ ಹಲವು ಬಾರಿ ಪೋಷಕರು ತುಂಬಾ ಕಟ್ಟು ನಿಟ್ಟಾಗುತ್ತಾರೆ. ಈ ವೇಳೆ, ಕೆಲವು ಕಠಿಣ ಶಿಸ್ತನ್ನು ಕೂಡ ಕೈಗೊಳ್ಳುತ್ತಾರೆ. ಈ ಕ್ರಮಗಳು ಅವರ ಮಾನಸಿಕ ಆರೋಗ್ಯದ ಸಮಸ್ಯೆ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಕೆಂಬ್ರಿಡ್ಜ್​ ಮತ್ತು ದುಬ್ಲಿನ್​ ವಿಶ್ವವಿದ್ಯಾಲಯದ ಈ ಅಧ್ಯಯನ ನಡೆಸಿದ್ದು, 7,500 ಐರಿಶ್​ ಮಕ್ಕಳನ್ನು ಈ ಅಧ್ಯಯನಕ್ಕೆ ಒಳಪಡಿಸಿದೆ. 3 ವರ್ಷದಲ್ಲಿ ಪೋಷಕರ ಕಟ್ಟುನಿಟ್ಟಿನ ಕ್ರಮಕ್ಕೆ ಒಳಗಾದ ಮಕ್ಕಳು ತಮ್ಮ ಸಹ ಗೆಳೆಯರಿಗಿಂತ 1.5 1.5 ಪಟ್ಟು ಹೆಚ್ಚಾಗಿ ಮಾನಸಿಕ ಆರೋಗ್ಯಕ್ಕೆ ಒಳಗಾಗುತ್ತಾರೆ. 9ನೇ ವಯಸ್ಸಿಗೆ ಅವರು ಸ್ಥಿತಿ ಅಪಾಯಕಾರಿ ಆಗುತ್ತದೆ.

ಈ ರೀತಿ ಮಾಡಬೇಡಿ: ಕಟ್ಟುನಿಟ್ಟಿನ ಪೋಷಕರು ದೈಹಿಕ ಅಥವಾ ಮಾನಸಿಕ ಪದೇ ಪದೇ ಶಿಸ್ತಿನ ಕ್ರಮಕ್ಕೆ ಮುಂದಾಗುತ್ತಾರೆ. ಉದಾಹರಣೆಗೆ ಮಕ್ಕಳ ಮೇಲೆ ಜೋರಾಗಿ ಕೂಗಾಡುವುದು, ದೈಹಿಕ ಹಲ್ಲೆ, ಮಕ್ಕಳು ದುರ್ವತನೆ ತೋರಿದಾಗ ಅವರನ್ನು ಪ್ರತ್ಯೇಕವಾಗಿರಿಸುವುದು, ಅವರ ಸ್ವಾಭಿಮಾನವನ್ನು ಹಾನಿಗೊಳಿಸುವುದು ಅಥವಾ ಪೋಷಕರ ಮನಸ್ಥಿತಿಗೆ ಅನುಗುಣವಾಗಿ ಮಕ್ಕಳನ್ನು ಶಿಕ್ಷಿಸುವುದು. ಮಕ್ಕಳ ಮಾನಸಿಕ ಆರೋಗ್ಯ ಲಕ್ಷಣವನ್ನು ಅವರ ಮೂರು, ಐದು ಮತ್ತು ಒಂಭತ್ತನೇ ವಯಸ್ಸಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಮಕ್ಕಳ ಆತಂಕ ಮತ್ತು ಸಾಮಾಜಿಕ ಹಿನ್ನಡೆ ಮತ್ತು ಆಕ್ರಮಣಕಾರಿ ನಡುವಳಿಕೆ ಮತ್ತು ಹೈಪರ್​ ಆಕ್ಟೀವ್​ ಮೇಲೆ ಅಧ್ಯಯನ ನಡೆಸಲಾಗಿದೆ.

ಶೇ 10ರಷ್ಟು ಮಕ್ಕಳು ದುರ್ಬಲ ಮಾನಸಿಕ ಹೊಂದಿದ್ದು, ಹೆಚ್ಚಿನ ಅಪಾಯ ಹೊಂದಿರುವುದು ಪತ್ತೆಯಾಗಿದೆ. ಪೋಷಕರ ಶಿಸ್ತಿನ ಕ್ರಮಕ್ಕೆ ಒಳಗಾದ ಮಕ್ಕಳು ಗುಂಪುಗಳ ಮಧ್ಯೆ ಬೀಳುತ್ತಾರೆ. ಪ್ರಮುಖವಾಗಿ ಪೋಷಕರ ಶೈಲಿಯು ಮಾನಸಿಕ ಆರೋಗ್ಯದ ಫಲಿತಾಂಶಗಳನ್ನು ಸಂಪೂರ್ಣವಾಗಿ ನಿರ್ಧರಿಸುವುದಿಲ್ಲ ಎಂದು ಅಧ್ಯಯನವು ಸ್ಪಷ್ಟಪಡಿಸುತ್ತದೆ. ಮಕ್ಕಳ ಮಾನಸಿಕ ಆರೋಗ್ಯವು ಲಿಂಗ, ದೈಹಿಕ ಆರೋಗ್ಯ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿಂದ ರೂಪುಗೊಂಡಿದೆ.

ಮಗುವಿಗೆ ಬೇಕಿದೆ ಬೆಂಬಲ: ಮಾನಸಿಕ ಆರೋಗ್ಯ ವೃತ್ತಿಪರರು, ಶಿಕ್ಷಕರು ಮತ್ತು ಇತರ ವೈದ್ಯರು ದುರ್ಬಲ ಮಾನಸಿಕ ಆರೋಗ್ಯದ ಲಕ್ಷಣಗಳನ್ನು ತೋರಿಸುವ ಮಗುವಿನ ಮೇಲೆ ಪೋಷಕರು ಅವರ ಪ್ರಭಾವದ ಬಗ್ಗೆ ಎಚ್ಚರದಿಂದಿರಬೇಕು ಎಂದು ಸಂಶೋಧಕರು ವಾದಿಸುತ್ತಾರೆ. ಈಗಾಗಲೇ ಅಪಾಯುದಲ್ಲಿರುವ ಮಕ್ಕಳಿಗೆ ಪೋಷಕರು ಹೆಚ್ಚುವರಿ ಬೆಂಬಲವನ್ನು ನೀಡುವ ಮೂಲಕ ಅವರ ಸಮಸ್ಯೆ ತಡೆಗಟ್ಟಬಹುದು ಎಂದ ಸಂಶೋಧಕರು ತಿಳಿಸಿದ್ದಾರೆ.

10 ಮಕ್ಕಳಲ್ಲಿ ಒಬ್ಬರು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ಅಪಾಯದ ವರ್ಗದಲ್ಲಿದ್ದಾರೆ ಎಂಬ ಅಂಶವು ಕಳವಳಕಾರಿಯಾಗಿದೆ. ಈ ಹಿನ್ನೆಲೆ ಪೋಷಕರ ಪಾತ್ರದ ಮಹತ್ವ ತಿಳಿದಿರಬೇಕು. ಪೋಷಕರು ಮಕ್ಕಳ ನಡವಳಿಕೆಗೆ ಮಿತಿ ಹೇರಬಾರದು. ಪದೇ ಪದೇ ಶಿಸ್ತು ಕ್ರಮ ನಡೆಸುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಪೋಷಕರು ರಕ್ಷಣಾತ್ಮಕ ಮತ್ತು ಸಕಾರಾತ್ಮಕ ಪಾಲನೆಯನ್ನು ನೀಡುವ ಮೂಲಕ ಬೆಂಬಲ ನೀಡಬೇಕು ಎಂದು ಸಂಶೋಧನೆ ಒತ್ತಿ ಹೇಳುತ್ತದೆ.

ಇದನ್ನೂ ಓದಿ: ಮಕ್ಕಳ ಜೊತೆ ಪೋಷಕರು ಹೇಗಿರಬೇಕು... ಸಂದರ್ಶನದಲ್ಲಿ ವೇದಾಪ್ರದಾ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.