ETV Bharat / sukhibhava

ಮಹಿಳೆಯ ಮೆದುಳಿನಲ್ಲಿತ್ತು 8 ಸೆಂ. ಮೀ ಉದ್ದದ ಜೀವಂತ ಹುಳು.. ಪ್ರಪಂಚದಲ್ಲೇ ಮೊದಲ ಪ್ರಕರಣವಿದು!

ಇದು ಒಫಿಡಾಸ್ಕರಿಸ್ ರಾಬರ್ಟ್ಸಿ ಎಂಬುದು ವೃತ್ತಾಕಾರದ ಹುಳು ಆಗಿದ್ದು ಸಾಮಾನ್ಯವಾಗಿ ಹೆಬ್ಬಾವುಗಳಲ್ಲಿ ಕಂಡು ಬರುತ್ತದೆ.

author img

By ETV Bharat Karnataka Team

Published : Aug 29, 2023, 5:54 PM IST

Doctor find  8cm long warm in Australian women brain

ಆಸ್ಟೇಲಿಯಾದ ಮಹಿಳೆಯೊಬ್ಬರ ಮೆದುಳಿನಿಂದ 8 ಸೆಂ.ಮೀ ಉದ್ದದ ಜೀವಂತ ಹುಳುವನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿರುವ ಘಟನೆ ನಡೆದಿದ್ದು, ಪ್ರಪಂಚದಲ್ಲೇ ಈ ರೀತಿಯ ಪ್ರಕರಣ ಇದೇ ಮೊದಲಾಗಿದೆ. ಅಚ್ಚರಿ ಅಂಶ ಎಂದರೆ, ಶಸ್ತ್ರ ಚಿಕಿತ್ಸೆ ಬಳಿಕವೂ 8 ಸೆಂಟಿ ಮೀಟರ್​ ಉದ್ದದ ಈ ಹುಳು ಜೀವಂತವಾಗಿದ್ದು, ಇದರ ಕುರಿತು ತಿಳಿಯಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

64 ವರ್ಷದ ಮಹಿಳೆ ಮರೆಗುಳಿತ ಮತ್ತು ಖಿನ್ನತೆ ಸಮಸ್ಯೆಯನ್ನು ಅನುಭವಿಸುತ್ತಿರುವುದಾಗಿ ವೈದ್ಯರ ಸಂಪರ್ಕಿಸಿದ್ದಾರೆ. ಇದೇ ವೇಳೆ ಆಕೆ ಹೊಟ್ಟೆ ನೋವು, ಅತಿಸಾರ, ಕೆಮ್ಮು ಮತ್ತು ರಾತ್ರಿ ಬೆವರುವಿಕೆ ಸಮಸ್ಯೆ ಅನ್ನು ಅನುಭವಿಸುತ್ತಿದ್ದರು. ಈ ಸಮಸ್ಯೆಯಿಂದ 2021ರ ಜನವರಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

2022ರಲ್ಲಿ ಅವರ ಈ ಲಕ್ಷಣಗಳು ಖಿನ್ನತೆ ಮತ್ತು ಮರೆವು ಹೆಚ್ಚಾಯಿತು. ಇದರಿಂದ ಆಕೆಯನ್ನು ಇಲ್ಲಿನ ಕ್ಯಾನ್​ಬೆರ್ರಾ ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿ ಅವರು ಎಂಆರ್​ಐ ಸ್ಕ್ಯಾನ್​ಗೆ ಒಳಪಡಿಸಲಾಯಿತು. ಈ ವೇಳೆ ಮಿದುಳಿನ ಬಲ ಬದಿಯಲ್ಲಿ ಜೀವಂತ ಹುಳುಗಳು ಪತ್ತೆಯಾಯಿತು. ಇದು ವೈದ್ಯರನ್ನೇ ಅಚ್ಚರಿ ಗೊಳಿಸಿತು. ತಕ್ಷಣಕ್ಕೆ ಕ್ಯಾನ್​ಬೆರ್ರಾ ಆಸ್ಪತ್ರೆಯ ವೈದ್ಯರ ತಂಡ ಇದು ಯಾವ ರೀತಿಯ ಹುಳು ಅದನ್ನು ಹೇಗೆ ತೆಗೆಯಬೇಕು ಎಂಬುದನ್ನು ತಿಳಿಯಲು ತಕ್ಷಣಕ್ಕೆ ತಂಡ ರಚಿಸಿತು.

ನರ ವಿಜ್ಞಾನಿಗಳು, ರಿಂಗ್ಲಿಂಗ್​ ವಾರ್ಮ್ (ಸುಳಿಯುವ ಹುಳು) ಎಂದು ಆಲೋಚಿಸಿದಾಗಿ ಸೋಂಕಿನ ರೋಗ ವೈದ್ಯರಾದ ಡಾ ಸಂಜಯ್ ಸೆನನಯಕೆ​ ತಿಳಿಸಿದರು. ನ್ಯೂರೋಸರ್ಜನ್​ಗಳು ನಿಯಮಿತವಾಗಿ ಮೆದುಳಿನ ಸೋಂಕಿನ ಪ್ರಕರಣವನ್ನು ಎದುರಿಸುತ್ತಾರೆ. ಆದರೆ ಈ ರೀತಿಯ ಪ್ರಕರಣಗಳು ಜೀವಮಾನದಲ್ಲಿ ಒಂದಾಗಿದ್ದು, ಯಾರೂ ಕೂಡ ಈ ರೀತಿ ನಿರೀಕ್ಷೆ ಮಾಡಿರುವುದಿಲ್ಲ ಎಂದಿದ್ದಾರೆ.

ಇನ್ನು, ಈ ಜೀವಂತ ಹುಳುವಿನ ಕುರಿತು ಹೆಚ್ಚಿನ ಅಧ್ಯಯನಕ್ಕೆ ಕ್ಯಾನ್​ಬೆರ್ರಾ ಆಸ್ಪತ್ರೆ ವೈದ್ಯರು, ಅದನ್ನು ಸಿಎಸ್​ಐಆರ್​ಒ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಹುಳು ಒಫಿಡಾಸ್ಕರಿಸ್ ರಾಬರ್ಟ್ಸಿ ಆಗಿದೆ ಎಂದು ಸೆನನಯಕೆ ತಿಳಿಸಿದರು.

ಒಫಿಡಾಸ್ಕರಿಸ್ ರಾಬರ್ಟ್ಸಿ ಎಂಬುದು ವೃತ್ತಾಕಾರದ ಹುಳು ಆಗಿದ್ದು ಸಾಮಾನ್ಯವಾಗಿ ಹೆಬ್ಬಾವುಗಳಲ್ಲಿ ಕಂಡು ಬರುತ್ತದೆ. ಮಹಿಳೆಯ ಮೆದುಳಿನಲ್ಲಿ ಈ ಹುಳು ಹೇಗೆ ಪತ್ತೆಯಾಯ್ತು ಎಂಬುದರ ಬಗ್ಗೆ ವೈದ್ಯರಿಗೂ ಖಾತ್ರಿ ಇಲ್ಲ. ಆಕೆ ಹಾವಿನ ಮಲದಿಂದ ಕಲುಷಿತಗೊಂಡ ಹುಲ್ಲನ್ನು ಸೇವಿಸಿದರ ಪರಿಣಾಮದಿಂದ ಇದು ಉತ್ಪತ್ತಿ ಆಗಿರಬಹುದು ಎಂದು ಆಲೋಚಿಸಿದ್ದಾರೆ. ಮಹಿಳೆ ಕೂಡ ಹೆಬ್ಬಾವುಗಳ ಸಾಮಾನ್ಯವಾಗಿ ಓಡಾಡುವ ಹುಲ್ಲು ಪ್ರದೇಶದಲ್ಲಿ ಇದ್ದು, ಇಲ್ಲಿನ ಹುಲ್ಲುಗಳನ್ನು ಅಡುಗೆಗೆ ಬಳಕೆ ಮಾಡುತ್ತಾರೆ.

ಈ ರೀತಿಯ ಸೋಂಕು ಕಂಡು ಬಂದಿರುವ ವಿಶ್ವದ ಮೊದಲ ಪ್ರಕರಣ ಇದಾಗಿದೆ. ಈ ರೀತಿಯ ಒಫಿಡಾಸ್ಕರಿಸ್​​ ರಾಬರ್ಟ್ಸಿ ಸಸ್ತನಿಗಳು ಮಾನವರಲ್ಲಿ ಪತ್ತೆಯಾದ ವರದಿಗಳು ಇದುವರೆಗೂ ಕಂಡು ಬಂದಿರಲಿಲ್ಲ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.

ಮಹಿಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆರು ತಿಂಗಳು ಆದ ಬಳಿಕ ಮಹಿಳೆಯ ಮರೆವು ಮತ್ತು ಖಿನ್ನತೆಯಲ್ಲಿ ಸುಧಾರಣೆ ಕಂಡಿದೆಯಾದರೂ ಅದು ಸಂಪೂರ್ಣವಾಗಿ ಗುಣಮುಖವಾಗಿಲ್ಲ ಎಂದಿದ್ದಾರೆ ವೈದ್ಯರು. (IANS)

ಇದನ್ನೂ ಓದಿ: ಸೊಳ್ಳೆ ಕಡಿತದಿಂದ ಹೈರಾಣಾಗಿದ್ದೀರಾ? ಹಾಗಾದರೆ ಈ ರೀತಿಯಾಗಿ ನೈಸರ್ಗಿಕ ಪರಿಹಾರ ಕಂಡುಕೊಳ್ಳಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.