ಓದುವ ಕೆಲಸದ ನೆಪದಲ್ಲಿ ರಾತ್ರಿಯಿಡಿ ಎಚ್ಚರವಿದ್ದು, ಬೆಳಗ್ಗೆ ತಡವಾಗಿ ಏಳುವುದು.. ಮನೆಯಲ್ಲಿ ಎಲ್ಲವನ್ನು ತಯಾರಿ ಮಾಡಿ ಆಫೀಸ್ಗೆ ಹೋಗುವ ಗಡಿಬಿಡಿ... ಡಯಟ್ ಈ ರೀತಿ ಹಲವು ನೆಪದಲ್ಲಿ ಬೆಳಗಿನ ಹೊತ್ತಿನ ತಿಂಡಿಯನ್ನು ಅನೇಕ ಮಂದಿ ತಪ್ಪಿಸುತ್ತಾರೆ. ಆದರೆ, ಈ ರೀತಿ ಬೆಳಗಿನ ತಿಂಡಿ ತಪ್ಪಿಸುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅನೇಕರಿಗೆ ಅರಿವು ಇರುವುದಿಲ್ಲ. ದೈನಂದಿನ ಜೀವನದಲ್ಲಿ ಬೆಳಗಿನ ತಿಂಡಿ ಅತ್ಯಂತ ಮಹತ್ವದ ಪಾತ್ರವನ್ನು ಹೊಂದಿದೆ. ಇದೇ ಕಾರಣಕ್ಕೆ ಬೆಳಗಿನ ತಿಂಡಿಯನ್ನು ತಪ್ಪಿಸದೇ ತಿನ್ನಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಕಾಲೇಜ್ ಇರಲಿ ಅಥವಾ ಕಚೇರಿ ಇರಲಿ... ಪ್ರತಿಯೊಬ್ಬರು ದಿನವೀಡಿ ಕ್ರಿಯಾಶೀಲವಾಗಿರಬೇಕು. ಇದಕ್ಕೆ ಬೇಕಾಗುವ ಶಕ್ತಿಯನ್ನು ನಮಗೆ ಬೆಳಗಿನ ತಿಂಡಿ ನೀಡುತ್ತದೆ. ಇದೇ ಕಾರಣಕ್ಕೆ ಬೆಳಗಿನ ತಿಂಡಿಯನ್ನು ತಪ್ಪಿಸಬಾರದು ಮತ್ತು ನಿರ್ಲಕ್ಷಿಸಲಾರದು. ನಿಮ್ಮ ಮಿದುಳು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದರೆ ಬೆಳಗಿನ ಹೊತ್ತು ನಿಮ್ಮ ಹೊಟ್ಟೆಯನ್ನು ಸಂಪೂರ್ಣವಾಗಿ ತುಂಬಿಸಬೇಕು. ಇದರಿಂದ ಇಡೀ ದಿನ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ.
ಅನೇಕ ಯುವತಿಯರು ಬೆಳಗಿನ ಹೊತ್ತು ತಿಂಡಿ ತಿನ್ನದೇ ಇದ್ದರೆ, ತೂಕ ನಷ್ಟ ಮಾಡಬಹುದು ಎಂದು ಯೋಜಿಸುತ್ತಾರೆ. ಆದರೆ, ಅಧ್ಯಯನ ಹೇಳುವಂತೆ ಇದು ತಪ್ಪು. ಬೆಳಗಿನ ಹೊತ್ತು ಪೋಷಕಾಂಶಭರಿತ ಆಹಾರಗಳನ್ನು ಸೇವಿಸುವುದರಿಂದ ತೂಕ ನಿಯಂತ್ರಣದಲ್ಲಿ ಇಡಲು ಸಹಾಯ ಆಗುತ್ತದೆ. ಡಯಟ್ನಲ್ಲಿ ಧಾನ್ಯ, ಪ್ರೋಟಿನ್, ಹಣ್ಣು ಮತ್ತು ತರಕಾರಿಯಂತಹ ಸಮೃದ್ಧ ಆಹಾರಗಳನ್ನು ಆಯ್ಕೆ ಮಾಡಿದಾಗ ದೇಹಕ್ಕೆ ಅಗತ್ಯವಾದ ವಿಟಮಿನ್, ಪೋಷಕಾಂಶ ಮತ್ತು ಮಿನರಲ್ಸ್ ಲಭ್ಯವಾಗುತ್ತದೆ.
ನಿಯಮಿತವಾಗಿ ತಿಂಡಿ ತಿನ್ನುವುದರಿಂದ ದೇಹದ ಸಕ್ಕರೆ ಗುಣಮಟ್ಟ ಕಡಿಮೆಯಾಗುತ್ತದೆ. ಸರಿಯಾದ ಸಮಯಕ್ಕೆ ತಿನ್ನುವ ಅಭ್ಯಾಸದಿಂದ ದೇಹದ ಚಯಾಪಚಯ ದರ ಅಭಿವೃದ್ಧಿಯಾಗುತ್ತದೆ. ಅನೇಕ ಮಂದಿ ಬೆಳಗಿನ ಹೊತ್ತು ಆಲಸ್ಯ ಅನುಭವಿಸುತ್ತಾರೆ. ಅನೇಕ ಮಂದಿ ಇದಕ್ಕೆ ಹಾರ್ಮೋನ್ ಕಾರಣವನ್ನು ನೀಡುತ್ತಾರೆ. ಸರಿಯಾಗಿ ತಿಂಡಿ ತಿನ್ನದೇ ಇರುವುದು ನಿಮ್ಮ ಭಾವನೆಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದನ್ನು ನಿಯಂತ್ರಿಸಲು ಬೆಳಗಿನ ಹೊತ್ತು ಅವಶ್ಯವಾಗಿ ತಿಂಡಿ ತಿನ್ನಬೇಕು. ಸರಿಯಾದ ಸಮಯದಲ್ಲಿ ಎಚ್ಚರವಾಗುವುದು ಸರಿಯಾದ ಸಮಯಕ್ಕೆ ತಿಂಡಿಯಲ್ಲಿ ಹಣ್ಣು, ನಟ್ಸ್ ಮತ್ತು ಹಾಲು ಸೇವನೆಯಿಂದ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ರೋಗಗಳು ದೂರವಾಗುತ್ತದೆ.
ಇದನ್ನೂ ಓದಿ: ಸಂಪೂರ್ಣ ಧಾನ್ಯಕ್ಕಿಂತ ಜೋಳದಲ್ಲಿದೆ ಹಲವು ಪ್ರಯೋಜನ; ಅಧ್ಯಯನ