ಹೈದರಾಬಾದ್: ಔಷಧ ಮತ್ತು ಚಿಕಿತ್ಸೆಯ ಜೊತೆಗೆ, ಕೋವಿಡ್-19ನಿಂದ ಚೇತರಿಕೆಯಾಗುವ ಸಮಯದಲ್ಲಿ ಮತ್ತು ಚೇತರಿಕೆಯ ನಂತರದ (14 ದಿನಗಳ ಅವಧಿಯ ನಂತರ) ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಆಹಾರ ಸೇವಿಸುವುದ ಮತ್ತು ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸುವುದು ಉತ್ತಮವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಅಲ್ಲದೇ, ಉತ್ತಮ ಪೋಷಣೆ ಮತ್ತು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯವಶ್ಯಕ. ಈ ಕುರಿತು ಈ ಟಿವಿ ಭಾರತ ಸುಖಿಭವ ತಂಡವು ಮೆಡಿಸಿನ್ ಇತಿಹಾಸದ ಕುರಿತು ಪಿಎಚ್ಡಿ ಮಾಡಿರುವ ಡಾ.ಪಿ.ವಿ.ರಂಗನಾಯಕುಲು ಅವರೊಂದಿಗೆ ಮಾತುಕತೆ ನಡೆಸಿದೆ.
ಜ್ವರದಂತೆಯೇ, ಕೋವಿಡ್-19ನಲ್ಲಿಯೂ ವ್ಯಕ್ತಿ ಸೋಂಕಿಗೆ ಒಳಗಾದರೆ ಅದು ಅವನ/ಅವಳ ಹಸಿವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾ.ರಂಗನಾಯಕುಲು ತಿಳಿಸಿದ್ದಾರೆ. ಸೋಂಕಿತರಿಗೆ ಏನೂ ತಿನ್ನಬೇಕೆಂದು ಅನಿಸುವುದಿಲ್ಲ. ಆದ್ದರಿಂದ ಹೆಚ್ಚಿನ ಜೀವಸತ್ವಗಳು ಮತ್ತು ಖನಿಜಗಳನ್ನು ದ್ರವ ರೂಪದಲ್ಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ವಿಟಮಿನ್ ಸಿ, ಡಿ ಮತ್ತು ಸತು ಅಂಶಗಳು ವೈರಸ್ ವಿರುದ್ಧ ಹೋರಾಡಲು ಅತ್ಯಗತ್ಯ. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಇವುಗಳನ್ನೇ ಹೆಚ್ಚಾಗಿ ಶಿಫಾರಸು ಮಾಡುತ್ತಾರೆ. ಆದರೆ, ಕೆಲವು ನೈಸರ್ಗಿಕ ಆಹಾರ ಮೂಲಗಳು ಈ ಸೂಕ್ಷ್ಮ ಪೋಷಕಾಂಶಗಳನ್ನು ನೀಡುತ್ತದೆ.
ಕೋವಿಡ್-19 ಸೋಂಕಿಗೆ ಒಳಗಾದ ವ್ಯಕ್ತಿಗೆ ಆಹಾರ:
ಕೋವಿಡ್-19ನಿಂದ ಬಳಲುತ್ತಿರುವಾಗ ವ್ಯಕ್ತಿಯ ಹಸಿವು ಕಡಿಮೆಯಾಗುತ್ತದೆ. ಆದ್ದರಿಂದ ದ್ರವ ಆಹಾರದ ಬಗ್ಗೆ ಹೆಚ್ಚು ಗಮನಹರಿಸಿ. ಇದಲ್ಲದೇ, ಸೋರೆಕಾಯಿ, ಬಟಾಣಿ, ತರಕಾರಿ, ಬೇಳೆ, ರೊಟ್ಟಿ / ಚಪಾತಿಯಂತಹ ಹಗುರವಾದ ಮತ್ತು ಸುಲಭವಾಗಿ ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರವನ್ನು ಅವರಿಗೆ ನೀಡಬಹುದು.
ನಿಮ್ಮ ಸ್ಥಿತಿಗೆ ಅನುಗುಣವಾಗಿ ಆಹಾರ ಯೋಜನೆ ನೀಡಲು ನಿಮ್ಮ ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಬಹುದು. ಇದಲ್ಲದೆ, ತಾಜಾ ಆಹಾರ ಸೇವಿಸಿ. ಉಳಿದ ಅಥವಾ ಹಳೆಯ ಆಹಾರವನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಕಚ್ಚಾ ತರಕಾರಿಗಳು ಅಥವಾ ಸಿಹಿತಿಂಡಿಗಳ ಸೇವನೆಯನ್ನು ತಪ್ಪಿಸಲು ತಜ್ಞರು ಸಲಹೆ ನೀಡುತ್ತಾರೆ. ಸೀಮಿತ ಪ್ರಮಾಣದಲ್ಲಿ ಸಿಹಿ ಸೇವನೆ ಉತ್ತಮ.
ಕೋವಿಡ್-19ನಿಂದ ಚೇತರಿಸಿಕೊಂಡ ಬಳಿಕ ಆಹಾರ: (14 ದಿನಗಳ ಅವಧಿಯ ನಂತರ)
14 ದಿನಗಳ ಕ್ವಾರಂಟೈನ್ ಅವಧಿ ಮುಗಿದ ನಂತರ ರೋಗಿಯ ಹಸಿವು ಹೆಚ್ಚಾಗುತ್ತದೆ ಎಂದು ಡಾ.ರಂಗನಾಯಕುಲು ಹೇಳುತ್ತಾರೆ. ಆದ್ದರಿಂದ, ಒಬ್ಬ ವ್ಯಕ್ತಿಯು ತಾವು ತಿನ್ನಬಹುದಾದದ್ದಕ್ಕಿಂತ ಹೆಚ್ಚಿನದನ್ನು ಸೇವಿಸಬಹುದು ಮತ್ತು ಇದು ಒಂದು ವಾರ ಅಥವಾ 10 ದಿನಗಳವರೆಗೆ ಮುಂದುವರಿಯಬಹುದು. ಈ ಅವಧಿಯಲ್ಲಿ, ಅವನು / ಅವಳು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಬೇಕು.
ಪ್ರೋಟೀನ್ ಭರಿತ ಆಹಾರಕ್ಕಾಗಿ, ಸಸ್ಯಾಹಾರಿಗಳು ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಪನೀರ್ ಜೊತೆಗೆ ಅಣಬೆಗಳು, ಬೀಜಗಳು ಮತ್ತು ಸೋಯಾವನ್ನು ಸೇವಿಸಬಹುದು. ಮಾಂಸಾಹಾರಿಗಳು ಮೊಟ್ಟೆ, ಮಾಂಸ, ಕೋಳಿ ಇತ್ಯಾದಿಗಳನ್ನು ಸೇವಿಸಬಹುದು. ಇದು ಶ್ವಾಸಕೋಶದ ಅಂಗಾಂಶಗಳ ಚೇತರಿಕೆಗೆ ಸಹಾಯ ಮಾಡುತ್ತದೆ ಮತ್ತು ಈ ಆಹಾರಗಳಿಲ್ಲದೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕಷ್ಟವಾಗಬಹುದು.
ಬೇರೆ ಏನನ್ನು ನೆನಪಿಟ್ಟುಕೊಳ್ಳಬೇಕು?
ಕೊರೊನಾದಿಂದ ಚೇತರಿಕೆಯಾದ ನಂತರ ಅನೇಕ ಜನರು ಆಗಾಗ ಸುಸ್ತಾಗುತ್ತಿರುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ತಜ್ಞರು ಹೇಳುವಂತೆ ಸರಿಯಾದ ಆಹಾರದ ಜೊತೆಗೆ ದೈಹಿಕ ವ್ಯಾಯಾಮವನ್ನು ಮರೆಯದಿರಿ. ಕೋವಿಡ್-19ನಿಂದ ಚೇತರಿಸಿಕೊಂಡ ನಂತರ, ಕೆಲವು ಉಸಿರಾಟದ ವ್ಯಾಯಾಮಗಳ ಜೊತೆಗೆ ಲಘು ವ್ಯಾಯಾಮ ಅಥವಾ ಸರಳ ಚಲನೆಯನ್ನು ಮಾತ್ರ ಅಭ್ಯಾಸ ಮಾಡಬಹುದು.
ಹಣ್ಣುಗಳು ಮತ್ತು ತರಕಾರಿಗಳನ್ನು ಸಾಕಷ್ಟು ತಿನ್ನಿರಿ. ತಣ್ಣನೆಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಸಕ್ಕರೆ ಅಥವಾ ಸಿಹಿತಿಂಡಿಗಳನ್ನು ಹೆಚ್ಚು ಸೇವಿಸಬೇಡಿ.
ವಿಶ್ವ ಆರೋಗ್ಯ ಸಂಸ್ಥೆ ಸಾಕಷ್ಟು ನಾರಿನ ಪದಾರ್ಥಗಳ ಸೇವನೆಯನ್ನು ಶಿಫಾರಸು ಮಾಡುತ್ತದೆ. ಎಲ್ಲಾ ತರಕಾರಿಗಳು, ಹಣ್ಣು, ಬೇಳೆಕಾಳುಗಳುಗಳಲ್ಲಿ ಫೈಬರ್ ಅಂಶವಿರುತ್ತವೆ.
ದಿನವಿಡೀ ನಿಮಗೆ ಸಾಧ್ಯವಾದಷ್ಟು ನೀರು ಕುಡಿಯಿರಿ. ನೀವು ಕೋವಿಡ್19ನಿಂದ ಚೇತರಿಸಿಕೊಂಡ ನಂತರವೂ ನಿಮ್ಮ ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಲುವುದು ಬಹಳ ಮುಖ್ಯ. ಸಿಹಿಗೊಳಿಸಿದ ಪಾನೀಯಗಳು ಅಥವಾ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಿ. ಬದಲಾಗಿ, ನೀವು ತೆಂಗಿನಕಾಯಿ ನೀರು ಅಥವಾ ಎಳನೀರು ಸೇವಿಸಬಹುದು. ಇದು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದ್ದರಿಂದ, ಆರೋಗ್ಯಕರ ಮತ್ತು ಸಮತೋಲಿತ ಆಹಾರ ಮತ್ತು ಸರಿಯಾದ ಜಲಸಂಚಯನದಿಂದ, ಚೇತರಿಕೆ ಉತ್ತಮ ಮತ್ತು ವೇಗವಾಗಿರುತ್ತದೆ.