ETV Bharat / sukhibhava

ಕಹಿ ಬೇವನ್ನೂ ಬಿಡದ ಶಿಲೀಂಧ್ರ..ಮರದ ಚಿಗುರಿಗೆ ದಾಳಿ ಮಾಡಿ ಕೊಲ್ಲುವ ಡೈಬ್ಯಾಕ್​

ಬೇವಿನ ಎಸಳು ತಿಂದರೆ ಬಾಯಿ ಕಹಿಯೋ ಕಹಿ. ಅಂತಹ ಕಹಿಯನ್ನೂ ಬಿಟ್ಟಿಲ್ಲ ಶಿಲೀಂಧ್ರಗಳು. ಇತ್ತೀಚೆಗೆ ಬೇವಿನ ಮರದ ಕೊಂಬೆಗಳು ಸುಟ್ಟ ಮಾದರಿಯಲ್ಲಿ ಗೋಚರಿಸುತ್ತಿವೆ. ಇದು ಶಿಲೀಂಧ್ರದ ದಾಳಿಯಿಂದಾಗಿ ಮರಗಳು ಸಾಯುವ ಹಂತಕ್ಕೂ ತಲುಪಿವೆ.

dieback-disease-hits-neem-trees
ಕಹಿಬೇವನ್ನೂ ಬಿಡದ ಶಿಲೀಂಧ್ರ
author img

By

Published : Dec 24, 2022, 10:05 AM IST

ಹೈದರಾಬಾದ್: ಬೇವಿನ ಅಂಶವನ್ನು ಔಷಧಿಯಾಗಿ ಬಳಸುತ್ತೇವೆ. ಬ್ಯಾಕ್ಟೀರಿಯಾ ವಿರೋಧಿ, ಆ್ಯಂಟಿಫಂಗಲ್​ನಂತಹ ಗುಣಲಕ್ಷಣ ಇದರಲ್ಲಿದೆ. ಆದರೆ, ಇದೇ ಬೇವಿನ ಮರಗಳಿಗೆ ಕೀಟ ಮತ್ತು ರೋಗ ಬಾಧೆ ತಪ್ಪಿಲ್ಲ ಎಂಬುದು ಅಚ್ಚರಿಯ ಸಂಗತಿ. ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಲ್ಲಿ ಕೆಲವು ವರ್ಷಗಳಿಂದ ಬೇವಿನ ಚಿಗುರು ಒಣಗಿ ಮರಗಳು ಸಾಯುತ್ತಿವೆ.

ಬೇವಿನ ಮರಗಳಿಗೆ ಅಪಾಯವನ್ನುಂಟು ಮಾಡುವ ರೋಗವನ್ನು ಡೈಬ್ಯಾಕ್ ಎಂದು ಗುರುತಿಸಲಾಗಿದೆ. ಈ ವರ್ಷ ಹಲವು ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಇದು ಕಾಣಿಸಿಕೊಂಡಿದೆ. ಡೈಬ್ಯಾಕ್ ರೋಗ ಎಲೆಗಳು, ಕೊಂಬೆಗಳು ಮತ್ತು ಚಿಗುರಿನ ಮೇಲೆ ದಾಳಿ ಮಾಡಿ, ಅದು ಮರದ 100 ಪ್ರತಿಶತದಷ್ಟು ಮರದ ಬೆಳವಣಿಗೆಯನ್ನು ಕುಂದಿಸುತ್ತದೆ ಎಂದು ತೆಲಂಗಾಣದ ಅರಣ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಜಗದೀಶ್ ಬತ್ತುಲಾ ಹೇಳಿದರು.

1990 ರ ದಶಕದಲ್ಲಿ ಉತ್ತರಾಖಂಡದ ಡೆಹ್ರಾಡೂನ್ ಬಳಿ ದೇಶದಲ್ಲಿಯೇ ಮೊದಲ ಬಾರಿಗೆ ಡೈಬ್ಯಾಕ್ ರೋಗ ವರದಿಯಾಗಿತ್ತು. ಬಳಿಕ ಅದು ವ್ಯಾಪಿಸಿ 2019 ರಲ್ಲಿ ತೆಲಂಗಾಣದಲ್ಲಿ ಮೊದಲ ಬಾರಿಗೆ ಅಡಿ ಇಟ್ಟಿತು. ಮೂರು ವರ್ಷಗಳ ಹಿಂದೆ ಪತ್ತೆಯಾಗಿದ್ದ ಡೈಬ್ಯಾಕ್​ ರೋಗ ಬಳಿಕ ಕ್ಷೀಣಿಸಿತ್ತು. ಈ ವರ್ಷ ಮತ್ತೆ ಕಾಣಿಸಿಕೊಂಡಿದೆ. ಇದು ಮುಖ್ಯವಾಗಿ ಫೋಮೊಪ್ಸಿಸ್ ಅಜಾಡಿರಾಕ್ಟೆ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮಳೆಗಾಲದ ವೇಲೆ ಮರಗಳು ಚಿಗುರಿಕೊಳ್ಳುತ್ತವೆ. ಬಳಿಕ ಶಿಲೀಂಧ್ರಗಳು ದಾಳಿ ಮಾಡಿ ಮಳೆಗಾಲದ ಕೊನೆಯ ಭಾಗ ಮತ್ತು ಚಳಿಗಾಲದ ಆರಂಭದಲ್ಲಿ ಕ್ರಮೇಣ ತೀವ್ರಗೊಳ್ಳುತ್ತದೆ. ಡೈಬ್ಯಾಕ್ ಅಲ್ಲದೇ, ಕೀಟಗಳ ಸಂಯೋಜಿತ ದಾಳಿಯಿಂದಾಗಿ ಮರಗಳು ಸಾವಿಗೀಡಾಗುತ್ತವೆ ಎಂದು ಅಧ್ಯಯನಕಾರರು ತಿಳಿಸಿದರು.

ಬೇವು ರೋಗ ನಿರೋಧಕವಾಗಿದ್ದರೂ, ಅದೇ ಹಾನಿಗೀಡಾಗಿದೆ. ಕೆಲ ನಿಯಂತ್ರಣ ಕ್ರಮಗಳಿಂದ ಈ ರೋಗವನ್ನು ತಡೆಯಬಹುದು. ಶಿಲೀಂಧ್ರ ಕಾಣಿಸಿಕೊಂಡ ರೆಂಬೆಯನ್ನು ಮುರಿದು ಔಷಧ ಸಿಂಪಡಣೆ ಮಾಡಬೇಕು. ಅಲ್ಲದೇ, ಬಾಧಿತ ಮರದ ಸುತ್ತಲೂ ಗುಂಡಿಯನ್ನು ಅಗೆದು ಅದರಲ್ಲಿ ಶಿಲೀಂಧ್ರನಾಶಕ ಮತ್ತು ಕೀಟನಾಶಕವನ್ನು ಬೆರೆಸಿದ ನೀರನ್ನು ಸುರಿಯಬೇಕು. ಆದಾಗ್ಯೂ ಈ ಶಿಲೀಂಧ್ರ ಗಾಳಿಯಲ್ಲಿ ಹರಡುವುದರಿಂದ ಪೀಡಿತ ಮರಗಳಿಗೆ ಚಿಕಿತ್ಸೆಯನ್ನು ನಿರಂತರವಾಗಿ ನೀಡಬೇಕಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಓದಿ: ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಕಾರ್ಬೆವಾಕ್ಸ್ ಬೂಸ್ಟರ್ ಪರಿಣಾಮಕಾರಿ: ಎಐಜಿ ಆಸ್ಪತ್ರೆಗಳ ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.