ETV Bharat / sukhibhava

ಬೋರ್ಡ್​ ಗೇಮ್​ಗಳಿಂದ ಮಕ್ಕಳ ಗಣಿತ ಕಲಿಕೆ ಸಾಮರ್ಥ್ಯ ಅಭಿವೃದ್ಧಿ: ಅಧ್ಯಯನ - ಒಥೆಲೊದಂತಹ ಬೋರ್ಡ್​​ ಆಟಗಳನ್ನು ಆಡುವುದು ಸಹಜ

ಈ ಆಟಗಳು ​ಸಂಕೀರ್ಣ ಗಣಿತದ ಕೌಶಲ್ಯ ನಿವಾರಣೆ ಮಾಡುವಲ್ಲಿ ಸಾಮರ್ಥ್ಯದಾಯಕ ​ತಂತ್ರಗಾರಿಕೆ ಪರಿಣಾಮವನ್ನು ರೂಪಿಸುತ್ತದೆ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ.

Development of children's math learning ability through board games; Study

author img

By

Published : Jul 8, 2023, 4:59 PM IST

ಬೆಂಗಳೂರು: ರಜೆ ಬಂದಾಗ ಅತಿ ಹೆಚ್ಚಿನ ಮಕ್ಕಳು ಮನೆಯೊಳಗೆ ಕುಳಿತು ಹಾವು ಏಣಿ, ಮೊನೊಪೊಲಿ, ಒಥೆಲೊದಂತಹ ಬೋರ್ಡ್​​ ಆಟಗಳನ್ನು ಆಡುವುದು ಸಹಜ. ಇಂತಹ ಸಂಖ್ಯೆ ಆಧಾರಿತ ಬೋರ್ಡ್ ಆಟಗಳನ್ನು ಎಳೆಯ ವಯಸ್ಸಿನಲ್ಲಿ ಆಡುವುದರಿಂದ ಮಕ್ಕಳು ಗಣಿತ ಕಲಿಕೆಗೆ ಸಹಾಯವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಬೋರ್ಡ್​ ಗೇಮ್​ಗಳು ಮಕ್ಕಳ ಓದುವಿಕೆ ಮತ್ತು ಅಕ್ಷರಾಭ್ಯಾಸ, ಕಲಿಕೆಯಂತಹ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂಬುದು ಈಗಾಗಲೇ ತಿಳಿದಿದೆ. ಇದೀಗ ಪೀರ್​ ರಿವ್ಯೂಡ್​​ ಜರ್ನಲ್​ ಅರ್ಲಿ ಇಯರ್ಸ್​​ನಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು, ಮೂರರಿಂದ 9ನೇ ವಯಸ್ಸಿನಲ್ಲಿ ಆಡುವ ಸಂಖ್ಯಾಧಾರಿತದ ಬೋರ್ಡ್​​ ಗೇಮ್​ಗಳು ಏಣಿಕೆ, ಸಂಕಲನದಂತಹ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದಿದೆ.

ಇಂತಹ ಬೋರ್ಡ್​ ಆಟಗಳಿಂದ ಮಕ್ಕಳು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ವಾರದಲ್ಲಿ ಕೆಲವು ಸಮಯಗಳ ಕಾಲ ಶಿಕ್ಷಕರು ಅಥವಾ ಕಲಿತ ವಯಸ್ಕರು ಅವರು ಅವರಿಗೆ ತರಬೇತಿ ನೀಡಿ ಮೇಲ್ವಿಚಾರಣೆ ನಡೆಸಲಾಗಿದೆ. ಈ ವೇಳೆ, ಬೋರ್ಡ್​ ಗೇಮ್​ಗಳು ಸಣ್ಣ ಮಕ್ಕಳಲ್ಲಿ ಗಣಿತದ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಅಧ್ಯಯನ ಪ್ರಮುಖ ಲೇಖಕರಾದ ಚಿಲಿಯ ಡಾ ಜೈಮ್ ಬಲ್ಲಾಡೇರ್ಸ್ ತಿಳಿಸಿದ್ದಾರೆ. ಈ ಆಟಗಳು ​ಸಂಕೀರ್ಣ ಗಣಿತದ ಕೌಶಲ್ಯ ನಿವಾರಣೆ ಮಾಡುವಲ್ಲಿ ಸಾಮರ್ಥ್ಯದಾಯಕ ​ತಂತ್ರಗಾರಿಕೆ ಪರಿಣಾಮವನ್ನು ರೂಪಿಸುತ್ತದೆ. ಗಣಿತದ ಕೌಶಲ್ಯಗಳು ಅಥವಾ ಇತರ ಡೊಮೇನ್‌ಗಳಿಗೆ ಸಂಬಂಧಿಸಿದ ಕಲಿಕೆಗೆ ಬೋರ್ಡ್ ಆಟಗಳನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು ಎಂದಿದ್ದಾರೆ.

ಚಿಕ್ಕ ಮಕ್ಕಳಲ್ಲಿ ಕಲಿಕೆಯನ್ನು ಉತ್ತೇಜಿಸುವಲ್ಲಿ ಭೌತಿಕ ಬೋರ್ಡ್ ಆಟಗಳ ಪರಿಣಾಮಗಳ ಪ್ರಮಾಣವನ್ನು ತನಿಖೆ ಮಾಡಲು ಸಂಶೋಧಕರು ಹೊರಟರು. ಮೂರರಿಂದ ಒಂಬತ್ತು ವರ್ಷ ವಯಸ್ಸಿನ ಮಕ್ಕಳನ್ನು ಈ ಅಧ್ಯಯನಕ್ಕೆ ಒಳಗಾಗಿಸಲಾಗಿದೆ. ಒಟ್ಟು 2000ರ ಮಕ್ಕಳು ಈ ಅಧ್ಯಯನದಲ್ಲಿ ಭಾಗಿಯಾಗಿದ್ದು, ಅವರ ಮೇಲೆ ನಡೆಸಲಾಗದ 19 ಅಧ್ಯಯನಗಳ ವಿಮರ್ಶೆಯ ಮೇಲೆ ಈ ಸಂಶೋಧನೆ ನಡೆಸಲಾಗಿದೆ. ಒಂದು ಅಧ್ಯಯನವನ್ನು ಹೊರತುಪಡಿಸಿ ಎಲ್ಲ ಬೋರ್ಡ್ ಆಟಗಳು ಮತ್ತು ಗಣಿತದ ಕೌಶಲ್ಯಗಳ ನಡುವಿನ ಸಂಬಂಧವನ್ನು ಕೇಂದ್ರೀಕರಿಸಿದೆ.

ಅಧ್ಯಯನದಲ್ಲಿ ಭಾಗವಹಿಸುವ ಎಲ್ಲ ಮಕ್ಕಳು ವಿಶೇಷ ಬೋರ್ಡ್ ಆಟದ ಅವಧಿಗಳನ್ನು ಪಡೆದರು. ಇದು ವಾರಕ್ಕೆ ಎರಡು ಬಾರಿ ಸರಾಸರಿ 20 ನಿಮಿಷಗಳ ಕಾಲ ಒಂದೂವರೆ ತಿಂಗಳುಗಳ ಈ ಆಟಗಳನ್ನು ನಡೆಸಲಾಗಿದೆ. ಈ ಅವಧಿಗಳನ್ನು ತರಬೇತಿಯಲ್ಲಿ ವಯಸ್ಕರಲ್ಲಿ ಶಿಕ್ಷಕರು, ಚಿಕಿತ್ಸಕರು ಅಥವಾ ಪೋಷಕರು ಸೇರಿದ್ದಾರೆ. ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾರ್ಯಗಳನ್ನು ವಿಶ್ಲೇಷಿಸಿದ ನಂತರ ಗಣಿತ ಕೌಶಲ್ಯಗಳು ಗಮನಾರ್ಹವಾಗಿ ಸುಧಾರಿಸಿದೆ ಎಂದು ಫಲಿತಾಂಶಗಳು ತೋರಿಸಿವೆ.

ಸುಮಾರು 32ರಷ್ಟು ಪ್ರಕರಣಗಳಲ್ಲಿ, ಬೋರ್ಡ್​ ಆಟದಲ್ಲಿ ಭಾಗಿಯಾದ ಮಕ್ಕಳು ಇತರ ಮಕ್ಕಳಿಗಿಂದ ಭಾಷೆ ಅಥವಾ ಕಲಿಕೆಯಲ್ಲಿ ಉತ್ತಮ ಫಲಿತಾಂಶವನ್ನು ಹೊಂದಿದ್ದಾರೆ ಈ ಆಟಗಳು ಇತರ ಅರಿವಿನ ಮತ್ತು ಅಭಿವೃದ್ಧಿ ಕೌಶಲ್ಯಗಳ ಮೇಲೆ ಬೀರಬಹುದಾದ ಪರಿಣಾಮಗಳನ್ನು ಅನ್ವೇಷಿಸಲು ಭವಿಷ್ಯದ ಅಧ್ಯಯನಗಳನ್ನು ವಿನ್ಯಾಸಗೊಳಿಸಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲ್ಯದಲ್ಲಿ ಮಿದುಳಿನ ಬೆಳವಣಿಗೆ ಕುಂಠಿತಕ್ಕೆ ಬಡತನ ಕಾರಣ: ಓದುವಿಕೆಯೇ ಇದಕ್ಕೆ ಔಷಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.