ಡಯಾಬಿಟಿಸ್ ನಿಮ್ಮ ಅನೇಕ ನೆಚ್ಚಿನ ತಿಂಡಿಗಳಿಂದ ನಿಮ್ಮನ್ನು ದೂರ ಇಡುತ್ತದೆ. ಆದರೆ, ಆರೋಗ್ಯಕರ ಆಹಾರ ಶೈಲಿಯು ನಿಮ್ಮನ್ನು ಈ ಚಿಂತೆಯಿಂದ ಮುಕ್ತಿಗೊಳಿಸುತ್ತದೆ. ಇದಕ್ಕೆ ಅಗತ್ಯವಾದ ಡಯಟ್ ಪ್ಲಾನ್ ಮಾಡುವುದು ಅವಶ್ಯ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುವ ಜೊತೆ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆ ನಡೆಸುವುದು ಅವಶ್ಯ. ರಕ್ತದ ಸಕ್ಕರೆ ಮಟ್ಟದಲ್ಲಿ ಆಹಾರ ಸಾಕಷ್ಟು ಪ್ರಮುಖ ಪಾತ್ರವಹಿಸುತ್ತದೆ. ಡಯಾಬೀಟಿಸ್ ಹೊಂದಿರುವ ಜನರು ತಮ್ಮ ಡಯಟ್ ಪ್ಲಾನ್ ಜೊತೆ ಯಾವಾಗ ಮತ್ತು ಏನು ಊಟಮಾಡಬೇಕು ಎಂಬುದಕ್ಕೆ ಹೆಚ್ಚು ಗಮನಹರಿಸುತ್ತಾರೆ. ಡಯಾಬಿಟಿಸ್ ನಿರ್ವಹಣೆ ಮಾಡಲು ದೈನದಿಂದ ಆಹಾರ ಕ್ರಮದ ಬಗ್ಗೆ ಜಾಗರೂಕರಾಗಿರುವ ಜೊತೆ ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುತ್ತಿದ್ದೇವಾ ಎಂಬುದನ್ನು ನಿರ್ವಹಣೆ ಮಾಡಬೇಕಾಗುತ್ತದೆ.
ಪ್ರಮಾಣೀಕೃತ ಫಾಸ್ಟ್ ಅಂಡ್ ಅಪ್ ಆರೋಗ್ಯ ಮತ್ತು ಸ್ವಾಸ್ಥ್ಯ ತರಬೇತುದಾರರಾದ ಪ್ರತಿಭಾ ಶರ್ಮಾ ಕೆಲವು ರುಚಿಕರ ಪಾಕವಿಧಾನವನ್ನು ಹಂಚಿಕೊಂಡಿದ್ದು, ನಿಮ್ಮ ಡಯಟ್ ಪ್ಲಾನ್ ಮತ್ತು ಆರೋಗ್ಯಕ್ಕೆ ಇವು ಸಹಾಯ ಮಾಡುತ್ತದೆ.
ಮೆಕ್ಸಿಕನ್ ವೆಜಿಟೇಬಲ್ ಸಲಾಡ್
ಇದಕ್ಕೆ ಬೇಕಾಗುವ ಸಾಮಗ್ರಿಗಳು: ಎಕ್ಸ್ಟ್ರಾ ವರ್ಜಿನ್ ಆಯಿಲ್ 2 ಟಿ ಸ್ಪೂನ್, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಎರಡು ಜಜ್ಜಿದ ಬೆಳ್ಳುಳ್ಳಿ, ಓರೆಗಾನೊ 2 ಟಿ. ಸ್ಪೂನ್, ನಿಂಬೆ ರಸ 3 ಟಿ. ಸ್ಪೂನ್, ಜೀರಿಗೆ ಪುಡಿ ಮುಕ್ಕಾಲು ಚಮಚ, ಚಿಲ್ಲಿ ಫ್ಲೆಕ್ಸ್ ಕಾಲು ಚಮಚ,
ಸಲಾಡ್ಗೆ: ಲೆಟಿಸ್ 200 ಗ್ರಾಂ, ಟೊಮಟೋ 3 ರಿಂದ 4, ಕಾರ್ನ್ ಕಾಲು ಕಪ್, ಬೇಯಿಸಿದ ಕಿಡ್ನಿ ಬೀನ್ಸ್ ಅರ್ಧ ಕಪ್, ಬೆಲ್ ಪೆಪ್ಪರ್
ತಯಾರಿಸುವ ವಿಧಾನ ಹೀಗೆ.. ಪಾತ್ರೆಗೆ ಆಲಿವ್ ಆಯಿಲ್, ಕೊತ್ತಂಬರಿ, ಬೆಳ್ಳುಳ್ಳಿ, ಓರೆಗಾನ್, ನಿಂಬೆ ರಸ, ಜೀರಿಗೆ ಪುಡಿ ಮತ್ತು ಚಿಲ್ಲಿ ಫ್ಲೆಕ್ಸ್ ಅನ್ನು ಸೇರಿಸಿ ಅದನ್ನು ಚೆನ್ನಾಗಿ ಕಲಸಿ.
ಕತ್ತರಿಸಿದ ಲೆಟಿಸ್, ಟೊಮಟೋ, ಬೆಲ್ ಪೆಪ್ಪರ್, ಕಾರ್ನ್ ಮತ್ತು ಬೇಯಿಸಿದ ಕಿಡ್ನಿ ಬೀನ್ಸ್ ಅನ್ನು ಅದಕ್ಕೆ ಮಿಕ್ಸ್ ಮಾಡಿದರೆ ಮೆಕ್ಸಿಕನ್ ಸಲಾಡ್ ಸಿದ್ದ.
ಸ್ಟೈರ್ ಫ್ರೈ ತೋಫು
ಬೇಕಾಗುವ ಸಾಮಗ್ರಿಗಳು: ಆಲಿವ್ ಆಯಿಲ್ 2 ಟಿ.ಸ್ಪೂನ್, ತೋಫು 2 ಟಿ.ಸ್ಪೂನ್ ಸೋಯಾ ಸಾಸ್ 2 ಟಿ ಸ್ಪೂನ್, ಬ್ರಕೋಲಿ 1 ಕಪ್, ಮಶ್ರೂಮ್ 8 ರಿಂದ 10, ಎಳ್ಳು 2 ಸ್ಪೂನ್, ಬೇಯಿಸಿದ ಬ್ರೋನ್ ರೈಸ್ 120 ಗ್ರಾಂ,
ಮಾಡುವ ವಿಧಾನವಿದು.. ಪಾತ್ರೆಗೆ ಆಲಿವ್ ಆಯಿಲ್ ಹಾಕಿ ಅದಕ್ಕೆ ತೋಫು ಅನ್ನು ಸೇರಿಸಿ ಅದನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ ಬಳಿಕ ಸೋಯಾ ಸಾಸ್ ಹಾಕಿ ಒಂದು ನಿಮಿಷ ಬಾಡಿಸಿ, ಅದಕ್ಕೆ ಈಗ ಬ್ರಕೋಲಿ, ಮಶ್ರೂಮ್ ಮತ್ತಷ್ಟು ಸೋಯಾ ಸಾಸ್ ಆಗಿ ಕೆಲವು ನಿಮಿಷ ಚೆನ್ನಾಗಿ ಬಾಡಿಸಿ. ಬಳಿಕ ಎಳ್ಳಿನ ಬೀಜ ಹಾಕಿದರೆ ರುಚಿಕರವಾದ ತೋಫು ಸಿದ್ದ.
ಜೋಚ್ಚಿನಿ ಬಾಸಿಲ್ ನ್ಯೂಡಲ್ಸ್
ಬೇಕಾಗುವ ಸಾಮಗ್ರಿಗಳು: ಜೋಚ್ಚಿನಿ (ಚೀನೀಕಾಯಿ) - 2 , ಆಲಿವ್ ಆಯಿಲ್ 2 ಟಿ.ಸ್ಪೂನ್, ಬೆಳ್ಳುಳ್ಳಿ ಒಂದು ಗಡ್ಡೆ, ಟೊಮಟೋ 1, ಚಿಲ್ಲಿ ಫ್ಲೆಕ್ಸ್ ಕಾಲು ಟಿ ಸ್ಪೂನ್, ರುಚಿಗೆ ಉಪ್ಪು ಮತ್ತು ಮೆಣಸು, ಒಂದು ಕಪ್ ತಾಜಾ ತುಳಸಿ
ಮಾಡುವ ಬಗೆ ಹೀಗಿದೆ..: ಪಾತ್ರೆಯಲ್ಲಿ ಆಲಿವ್ ಆಯಿಲ್ ಕಾದ ಬಳಿಕ ಅದಕ್ಕೆ ಜೋಚ್ಚಿನಿ ಆಗಿ ಬಾಡಿಸಿ, ಬಳಿಕ ಅದಕ್ಕೆ ಬೆಳ್ಳುಳಿ, ಟೊಮಟೋ ಹಾಕಿ ಒಂದು ನಿಮಿಷ ಹುರಿಯಿರಿ, ದಿಕ್ಕೆ ಚಿಲ್ಲಿ ಫ್ಲೆಕ್ಸ್, ಉಪ್ಪುಮ ಮೆಣ್ಣಸು ಹಾಕು ಕಡೆಯಲ್ಲಿ ಅದಕ್ಕೆ ತುಳಸಿ ಹಾಕಿ ಮಿಕ್ಸ್ ಮಾಡಿ.
ಇಟಾಲಿಯನ್ ವೆಜಿಟೇಬಲ್ ಮೈನ್ಸ್ಟೋನ್ ಸೂಪ್
ಬೇಕಾಗುವ ಸಾಮಾಗ್ರಿ: ಆಲಿವ್ ಆಯಿಲ್ 2 ಟಿ. ಸ್ಪೂನ್, ಕತ್ತರಿಸಿದ ಈರುಳ್ಳಿ 1, ಕ್ಯಾರೆಟ್ 1, ಮುಡಿಯಷ್ಟು ಸೆಲರಿ, ಟೊಮಟೋ ಪೇಸ್ಟ್ 2 ಟಿಸ್ಪೂನ್, ರುಚಿಗೆ ಉಪ್ಪು, ಕರಿ ಮೆಣಸು, ಬೆಳ್ಳುಳಿ, ಓರೆಗಾನೊ 1 ಟಿ. ಸ್ಪೂನ್, ಕಸೂರಿ ಮೆಂಥಿ ಕಾಲು ಟಿ. ಸ್ಪೀನ್, ಬೇ ಲೀಫ್ (ಪಾಲಾವ್ ಎಲೆ) ಚಿಲ್ಲಿ ಫ್ಲೇಕ್ಸ್ ಕಾಲು ಟಿ ಸ್ಪೂನ್
ಮಾಡುವ ವಿಧಾನ ಹೀಗೆ..:
ಪಾತ್ರೆಯಲ್ಲಿ ಆಲಿವ್ ಆಯಿಲ್ ಬಿಸಿ ಮಾಡಿ ಅದಕ್ಕೆ ಈರುಳ್ಳಿ, ಕ್ಯಾರೆಟ್, ಸೆಲರಿ, ಟಮೊಟೋ ಪೇಸ್ಟ್ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ 7 ರಿಂದ 10 ನಿಮಿಷ ಹುರಿಯಿರಿ. ಅದಕ್ಕೆ ಬೆಳ್ಳುಳ್ಳಿ, ಓರೆಗಾನ್, ಮತ್ತು ಕಸೂರಿ ಮೇಥಿ ಹಾಕಿ ಬಾಡಿಸಿ, ಮತ್ತಷ್ಟು ಉಪ್ಪು, ಪಾಲವ್ ಎಲೆ ಮತ್ತು ಚಿಲ್ಲಿ ಫ್ಲೆಕ್ಸ್ ಸೆರಿಸಿ ಬಳಿಕ ಕರಿಮಣಸು ಹಾಕಿ ಬಿಸಿಯಲ್ಲಿಯೇ ಸರ್ವ್ ಮಾಡಿ.
ಈ ಪೌಷ್ಟಿಕ ಮತ್ತು ರುಚಿಕರ ಆಹಾರಗಳನ್ನು ನಿಮ್ಮ ರಾತ್ರಿ ಊಟಕ್ಕೆ ತಯಾರು ಮಾಡಬಹುದಾಗಿದ್ದು ಇದು ಡಯಾಬೀಟಿಕ್ ಸ್ನೇಹಿ ಪಾಕ ವಿಧಾನಗಳಾಗಿವೆ. ವಿಶೇಷ ಎಂದರೆ ಡಯಾಬೀಟಿಸ್ ಇಲ್ಲದ ಕುಟುಂಬ ಸದಸ್ಯರು ಈ ಸ್ವಾದಿಷ್ಟ ಆಹಾರವನ್ನು ಇಷ್ಟಪಡುತ್ತಾರೆ.
ಇದನ್ನೂ ಓದಿ: ದೀರ್ಘಕಾಲದ ಮದ್ಯಪಾನ ಸೇವನೆ ಕೋವಿಡ್ 19 ತೀವ್ರತೆಗೆ ಕಾರಣ