ETV Bharat / sukhibhava

ಆ್ಯಂಟಿ ಬ್ಯಾಕ್ಟೀರಿಯಾ ಗುಣ ಹೊಂದಿದೆ ಗೋ ಮೂತ್ರ: ಐವಿಆರ್​ಐ ಅಧ್ಯಯನ - ರೋಗ ನಿವಾರಣೆ ಶಕ್ತಿ

ಗೋ ಮೂತ್ರದಲ್ಲಿ ಅನೇಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವಿದೆ ಎಂದು ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ.

Cow urine has anti-bacterial properties; IVRI study

author img

By

Published : May 8, 2023, 12:49 PM IST

ಬರೇಲಿ: ಗೋವಿನ ಮೂತ್ರ ಹಲವು ಔಷಧೀಯ ಗುಣಗಳನ್ನು ಹೊಂದಿದ್ದು, ಹಲವು ರೋಗ ನಿವಾರಣೆ ಶಕ್ತಿ ಇದಕ್ಕಿದೆ ಎಂದು ಪುರಾಣ ಕಾಲದಿಂದಲೂ ಹೇಳಲಾಗುತ್ತಿದೆ. ಆಯುರ್ವೇದಗಳಲ್ಲೂ ಗೋವಿನ ಬಳಕೆಯ ಪ್ರಯೋಜನವನ್ನು ಪಟ್ಟಿ ಮಾಡಲಾಗಿದೆ. ಇದೀಗ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ (IVRI) ಹೊಸ ಸಂಶೋಧನೆ ನಡೆಸಿದ್ದು, ಗೋ ಮೂತ್ರ ಮನುಷ್ಯರಿಗೆ ಸಿಕ್ಕ ವರದಾನ ಎಂದಿದೆ.

ಬರೇಲಿ ಮೂಲಕ ಐವಿಆರ್​ಐನ ಒಂಬತ್ತು ಸದಸ್ಯರ ತಂಡ ಅಧ್ಯಯನ ನಡೆಸಿದೆ. ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದ್ದು, ಗೋ ಮೂತ್ರದಲ್ಲಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಫಂಗಲ್​ ಗುಣ ಲಕ್ಷಣಗಳು ಹೆಚ್ಚಿದೆ ಎಂದು ಮಾಹಿತಿ ನೀಡಿದೆ.

ಎರಡು ಸ್ಥಳೀಯ ಹಸುವಿನ ತಳಿಯ ಮೂತ್ರವನ್ನು ಎಲ್ಲ ಋತುಮಾನದಲ್ಲಿ ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. ಅಧ್ಯಯನಕ್ಕೆ ಪಡೆಯಲಾದ ಸಾಹಿವಾಲ್​ ಮತ್ತು ತಾಪರ್ಕರ್​​ ತಳಿಗಳ ಮೂತ್ರವನ್ನು ಹೆಚ್ಚಿನ ಪರೀಕ್ಷೆ ನಡೆಸಲಾಗಿದೆ. ಅಲ್ಲದೇ, ಮೂತ್ರದಲ್ಲಿ ಬ್ಯಾಕ್ಟೀರಿಯ ಸಂಗ್ರಹಗೊಳ್ಳುವುದನ್ನು ತಡೆಯುವ ಉದ್ದೇಶದಿಂದ ಅಧ್ಯಯನಕ್ಕೆ ತಾಜಾ ಗೋ ಮೂತ್ರ ಬಳಕೆ ಮಾಡಲಾಗಿದೆ ಎಂದು 2018ರಿಂದ ಅಧ್ಯಯನದ ನೇತೃತ್ವ ವಹಿಸಿದ ಐವಿಆರ್​ಐ ಸಂಶೋಧಕ ರವಿ ಕಾಂತ್​ ಅಗರ್ವಾಲ್​ ತಿಳಿಸಿದ್ದಾರೆ.

ಸಂಸ್ಥೆಯ ಸಂಶೋಧನೆ ಅನುಸಾರ, ಕ್ರಾಸ್​ ಬ್ರೀಡ್​​ ತಳಿಗಳಿಗೆ ಹೋಲಿಸಿದಾಗ ಸಾಹಿವಾಲ್​ ಮತ್ತು ತಾಪರ್ಕರ್​ ತಳಿಗಳ ಗೋ ಮೂತ್ರದಲ್ಲಿ ಹೆಚ್ಚಿನ ಆ್ಯಂಟಿ ಬ್ಯಾಕ್ಟೀರಿಯಾ ಗುಣ ಹೊಂದಿದೆ. ಕೋಲಿ, ಸಾಲ್ಮೊನೆಲ್ಲ ಜಾತಿಗಳು, ಸ್ಯೂಡೋಮೊನಾಸ್, ಎರುಗಿನೋಸಾ ಮತ್ತು ಗ್ರಾಂ-ಪಾಸಿಟಿವ್ ಬ್ಯಾಕ್ಟೀರಿಯಾಗಳಾದ ಲಿಸ್ಟೇರಿಯಾ ಮೊನೊಸೈಟೋಜೆನ್ಸ್, ಬ್ಯಾಸಿಲಸ್ ಸೆರಿಯಸ್, ಸ್ಟ್ಯಾಫಿಲೋಕೊಕಸ್ ಔರೆಸ್ ಮುಂತಾದ ಬ್ಯಾಕ್ಟೀರಿಯಾಗಳ ವಿರುದ್ಧ ಗೋಮೂತ್ರ ಹೋರಾಡುವ ಸಾಮರ್ಥ್ಯ ಹೊಂದಿದೆ. ಗೋ ಮೂತ್ರವೂ ಐಈಸ್ಟ್​​ಗಳ ವಿರುದ್ಧ ಆ್ಯಂಟಿ ಫಂಗಲ್​ ಪರಿಣಾಮ ಹೊಂದಿದೆ ಎಂದು ಸಂಶೋಧನೆ ತೋರಿಸಿದೆ ಎಂದು ಅಧ್ಯಯನ ಬಹಿರಂಗಪಡಿಸಿದೆ.

ಹಿಂದಿನ ಅಧ್ಯಯನದ ವ್ಯಾಖ್ಯಾನ: ಇದೇ ಸಂಶೋಧನಾ ಸಂಸ್ಥೆ ಈ ಹಿಂದೆ ಪ್ರಕಟಿಸಿದ ವರದಿಯಲ್ಲಿ ಗೋ ಮೂತ್ರವನ್ನು ನೇರವಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿತ್ತು. ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿಯಾಗಿದೆ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಸಂಬಂಧ ಸಂಸ್ಥೆಯ ಭೋಜ್ ರಾಜ್ ಸಿಂಗ್ ನೇತೃತ್ವದಲ್ಲಿ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದಾರೆ. ಆರೋಗ್ಯವಂತ ಹಸುಗಳು ಮತ್ತು ಗೂಳಿ, ಮಾನವನ ಮೂತ್ರದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ಕನಿಷ್ಠ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದು, ಇವು ಎಸ್ಚೆರಿಚಿಯಾ ಕೋಲಿಯನ್ನು ಹೊಂದಿದೆ. ಇದು ಹೊಟ್ಟೆಯಲ್ಲಿ ಸೋಂಕು ಉಂಟು ಮಾಡುತ್ತದೆ ಎಂದು ಸಂಶೋಧನೆ ತಿಳಿಸಿತು.

ಗೋ ಮೂತ್ರಗಳನ್ನು ನೇರವಾಗಿ ಮಾನವನ ಬಳಕೆಗೆ ಅಧ್ಯಯನ ಶಿಫಾರಸು ಮಾಡುವುದಿಲ್ಲ. ಕೆಲವರು ಭಟ್ಟಿ ಇಳಿಸಿದ ಮೂತ್ರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಇಲ್ಲ ಎಂದು ಹೇಳುತ್ತಾರೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕಿದೆ ಎಂದು ತಂಡ ಹೇಳಿದೆ.

ಇದನ್ನೂ ಓದಿ: ಹೊಸ ಅಧ್ಯಯನದಿಂದ ಭಾರತದಲ್ಲಿ ಟೈಪ್​ 2 ಮಧುಮೇಹದ ಚಿಕಿತ್ಸೆ ಸುಧಾರಣೆ: ಲ್ಯಾನ್ಸೆಟ್​ ಜರ್ನಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.