ನಮ್ಮ ಬದಲಾದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಬ್ರೈನ್ ಸ್ಟ್ರೋಕ್‌ನಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ರೋಗಿಯ ದೇಹದ ಅರ್ಧಭಾಗದಲ್ಲಿ ಹಠಾತ್ ಆಗಿ ಪ್ರಜ್ಞೆ ಕಳೆದುಕೊಳ್ಳುವಂತಹ ಸ್ಥಿತಿ. ಪಾರ್ಶ್ವವಾಯು ಉಂಟಾದರೆ ನಮ್ಮ ಮೆದುಳಿನ ಮೇಲೆ ಹಾನಿ ಉಂಟು ಮಾಡುತ್ತದೆ. ದೇಹವನ್ನು ಮೆದುಳಿನ ನರಗಳು ಕಂಟ್ರೋಲ್ ಮಾಡುವ ಕಾರಣ ತನ್ನ ದೇಹಕ್ಕಾಗುತ್ತಿರುವ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಾಗದಂತಹ ಸ್ಥಿತಿಗೆ ತಲುಬಹುದು.
ಪಾರ್ಶ್ವವಾಯು ಉಂಟಾದಾಗ ರಕ್ತದ ಪೂರೈಕೆ ಸಮಾನವಾಗಿರುವುದಿಲ್ಲ. ರಕ್ತ ಪೂರೈಕೆಯ ಕೊರತೆಯಿಂದಾಗಿ, ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ತಲೆತಿರುಗುವಿಕೆ, ಮೂರ್ಛೆ ಮುಂತಾದ ಸಮಸ್ಯೆಗಳು ಅಥವಾ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕೆಲವೊಮ್ಮೆ ರಕ್ತದೊತ್ತಡ ತುಂಬಾ ಹೆಚ್ಚಾಗಿ ಜನರು ಸಾವನ್ನಪ್ಪುವ ಸಂಭವವೂ ಇರುತ್ತದೆ.
ವಿಶೇಷವಾಗಿ ಈ ಸಮಸ್ಯೆಯು 40 ಮತ್ತು 50 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವೃದ್ಧಾಪ್ಯದಲ್ಲಿ ಅಪಧಮನಿಗಳು ಕುಗ್ಗಲು ಪ್ರಾರಂಭಿಸುತ್ತವೆ. ಅಪಧಮನಿಗಳ ಕಿರಿದಾಗುವಿಕೆಯಿಂದಾಗಿ, ರಕ್ತದ ಪೂರೈಕೆಯು ಸಾಮಾನ್ಯದಂತೆ ಇರುವುದಿಲ್ಲ. ಅಂತಹ ಸಮಯದಲ್ಲಿ ಪಾರ್ಶ್ವವಾಯುಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಸರಿಯಾದ ಆಹಾರ ಕ್ರಮ ಅನುಸರಿಸುವುದು ಒಳ್ಳೆಯದು.
ಬ್ರೈನ್ ಸ್ಟ್ರೋಕ್ ಸಮಯದಲ್ಲಿ ಡಯಟ್ ಮಾಡುವುದು ಹೇಗೆ?: ಡಯಟೀಷಿಯನ್ ಡಾ ಸಾರಿಕಾ ಶ್ರೀವಾಸ್ತವ ಹೇಳುವ ಪ್ರಕಾರ ಸ್ಟ್ರೋಕ್‌ನಂತಹ ಸಮಸ್ಯೆ ಕಂಡುಬಂದರೆ, ಮೊದಲು ಆಪಲ್ ಸೈಡರ್ ವಿನೆಗರ್ ಅನ್ನು ನಮ್ಮ ಆಹಾರದಲ್ಲಿ ಸೇರಿಸಬೇಕು. ಇದು ರಕ್ತ ಹೆಪ್ಪುಗಟ್ಟುವಿಕೆ ತೆಗೆದುಹಾಕಲು ಸಹಾಯ ಮಾಡುತ್ತದೆ. ಮಿದುಳಿನ ಪಾರ್ಶ್ವವಾಯು ಸಮಯದಲ್ಲಿ ಪಥ್ಯದಲ್ಲಿರಬೇಕು.
ಬಿಸಿ ಬಿಸಿಯಾದ ಆಹಾರವನ್ನು ಸೇವಿಸಬೇಕು. ನಾವು ಸೇವಿಸುವ ಆಹಾರದಲ್ಲಿ ಆದಷ್ಟು ದಾಲ್ಚಿನ್ನಿ, ಶುಂಠಿ ಮತ್ತು ಹಸಿ ಅರಿಶಿನ ಇರುವಂತೆ ನೋಡಿಕೊಳ್ಳಬೇಕು. ಇವುಗಳು ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅವುಗಳ ಜೊತೆಗೆ ನಮ್ಮ ಆಹಾರದಲ್ಲಿ ಸೋರೆಕಾಯಿ ಮತ್ತು ಸೂಪ್ ಸೇರಿಸುವುದು ಕೂಡ ಉತ್ತಮ. ಬಹುಧಾನ್ಯಗಳ ಆಹಾರ ಹಾಗೂ ಕಷಾಯಗಳಿಗೂ ಆಹಾರದಲ್ಲಿ ಪ್ರಾಮುಖ್ಯತೆ ನೀಡಿ.
ಪಾರ್ಶ್ವವಾಯುಗೆ ಒಳಪಟ್ಟವರು ಯಾವ ಆಹಾರ ಸೇವಿಸಬಾರದು: ಸ್ಟ್ರೋಕ್‌ನಂತಹ ಸಮಸ್ಯೆ ಇದ್ದಾಗ ಪಾಲಕ್ ಸೊಪ್ಪನ್ನು ಸೇವಿಸಲೇಬಾರದು ಎನ್ನುತ್ತಾರೆ ಡಯೆಟಿಷಿಯನ್ ಡಾ ಸಾರಿಕಾ ಶ್ರೀವಾಸ್ತವ್. ಇದು ಸ್ಟ್ರೋಕ್ ಅನ್ನು ಹೆಚ್ಚಿಸುತ್ತದೆ. ಅಂತಹ ಸಮಯದಲ್ಲಿ ಬೆರ್ರಿಸ್ ಬಳಸಬಹುದು. ಇದು ಪಾರ್ಶ್ವವಾಯು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಪಾರ್ಶ್ವವಾಯುಗೆ ತುತ್ತಾದ ಸಮಯದಲ್ಲಿ ವಿಶೇಷವಾಗಿ ರೋಗಿಗಳಿಗೆ ಆಹಾರದಲ್ಲಿ ಬಿಸಿ ಪದಾರ್ಥಗಳನ್ನು ನೀಡಬೇಕು.
ಆಹಾರದಲ್ಲಿ ಕರಿದ ಮತ್ತು ಮೆಣಸಿನಕಾಯಿ ಮಸಾಲೆಯುಕ್ತ ಆಹಾರಪದಾರ್ಥ ನೀಡಬಾರದು. ಸಂಪೂರ್ಣವಾಗಿ ಅಂತಹ ಆಹಾರಗಳನ್ನು ಸಂಪೂರ್ಣವಾಗಿ ದೂರವಿಡಿ. ರಕ್ತದೊತ್ತಡವನ್ನು ಹೆಚ್ಚಿಸಬಹುದಾದ ಎಲ್ಲಾ ಆಹಾರಗಳ ಸೇವನೆ ನಿಲ್ಲಿಸಬೇಕು. ಉಪ್ಪಿನ ಬಳಕೆ ಸಹ ಕಡಿಮೆ ಮಾಡಬೇಕು. ರಕ್ತದೊತ್ತಡ ಹೆಚ್ಚಾಗುತ್ತಿದ್ದರೆ, ಸೋಡಿಯಂ ಹೊಂದಿರುವ ಎಲ್ಲ ವಸ್ತುಗಳನ್ನು ನಿಲ್ಲಿಸಬೇಕು ಮತ್ತು ಪೊಟ್ಯಾಸಿಯಮ್ ಹೊಂದಿರುವ ವಸ್ತುಗಳನ್ನು ಆಹಾರದಲ್ಲಿ ಸೇರಿಸಬೇಕು. ಪಪ್ಪಾಯಿ, ಕ್ಯಾರೆಟ್, ಸೋರೆಕಾಯಿ ಪಾರ್ಶ್ವವಾಯು ಕಡಿಮೆ ಮಾಡಲು ಸಹಾಯಕ.
ಇದನ್ನೂ ಓದಿ: ಮಕ್ಕಳ ಮೆದುಳನ್ನು ಚುರುಕಾಗಿಸುತ್ತೆ ವಾಲ್ನಟ್; ಅಧ್ಯಯನದಿಂದ ಹೊರಬಿತ್ತು ಉಪಯುಕ್ತ ಮಾಹಿತಿ