ಭಾರತದಲ್ಲಿ ಅನಾದಿಕಾಲದಿಂದಲೂ ತೆಂಗಿನಕಾಯಿಯನ್ನು ಬಳಸಲಾಗುತ್ತಿದ್ದು, ಈಗಲೂ ಮುಂದುವರಿದಿದೆ. ಕೊಬ್ಬರಿ ಎಣ್ಣೆ ದಶಕಗಳಿಂದ ಸೌಂದರ್ಯ ವರ್ಧಕಗಳಲ್ಲಿ ಅಗ್ರಗಣ್ಯವಾಗಿದೆ. ಕೂದಲಿನ ಪೋಷಣೆಗೆ ಕೊಬ್ಬರಿ ಎಣ್ಣೆ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಅನ್ನೋದರ ವರದಿ ಇಲ್ಲಿದೆ.
ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು?
ಕೊಬ್ಬರಿ ಎಣ್ಣೆಯು ಮಳೆ, ಬಿಸಿಲು, ಮಾಲಿನ್ಯದಿಂದ ಕೂದಲಿಗೆ ಆಗುವ ಹಾನಿಯಿಂದ ರಕ್ಷಿಸುತ್ತದೆ. ನೀವು ಶಾಂಪು ಬಳಸಿ ಕೂದಲನ್ನು ತೊಳೆದಾಗಲೂ ಬೇರುಗಳ ಮೂಲಕ ರಕ್ಷಣೆ ಮುಂದುವರಿಯುತ್ತದೆ. ಕೂದಲನ್ನು ಆರೋಗ್ಯಕರವಾಗಿ, ಹೊಳೆಯುವಂತೆ ಮಾಡುವಲ್ಲಿ ಕೊಬ್ಬರಿ ಎಣ್ಣೆ ಪಾತ್ರ ಮಹತ್ವದ್ದು.
ಕೆಲವರು ನನಗೆ ಆಯಿಲ್ ಏರ್(ಎಣ್ಣೆಯುಕ್ತ ಕೂದಲು) ಇದೆ. ಹಾಗಾಗಿ ನಾನು ಎಣ್ಣೆ ಹಚ್ಚುವ ಅಗತ್ಯವಿಲ್ಲ ಎಂದುಕೊಳ್ತಾರೆ. ಆದರೆ, ಈ ರೀತಿಯ ಭಾವನೆ ತಪ್ಪು. ನೈಸರ್ಗಿಕ ಮೇದೋಗ್ರಂಥಿಯು ಕೊಬ್ಬರಿ ಎಣ್ಣೆ ಹಚ್ಚುವುದಕ್ಕಿಂತ ಭಿನ್ನವಾಗಿದೆ. ಏಕೆಂದರೆ, ಉರಿಯೂತದ ಕ್ರಿಯೆಯ ಕಾರಣದಿಂದ ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ. ಆಯಿಲ್ ಏರ್ ಹೊಂದಿರುವವರ ಕೊಬ್ಬರಿ ಎಣ್ಣೆ ಹಚ್ಚುವುದು ಅವಶ್ಯಕವಾಗಿದೆ.
ಇತರೆ ಎಣ್ಣೆಗಳಿಗಿಂತ ಕೊಬ್ಬರಿ ಎಣ್ಣೆ ಹೇಗೆ ಭಿನ್ನ?
ಕೊಬ್ಬರಿ ಎಣ್ಣೆ ಕೂದಲನ್ನು ಪೋಷಿಸುತ್ತದೆ. ಕೂದಲು ಮೃದುವಾಗಿ, ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ನೈಸರ್ಗಿಕ ಬ್ಯಾಕ್ಟೀರಿಯಾ ನಿರ್ವಹಿಸಲು ಈ ಎಣ್ಣೆ ಸಹಕಾರಿಯಾಗಿದೆ. ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ ಶಿಲೀಂಧ್ರ ವಿರೋಧಿ, ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ನೆತ್ತಿಯು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆ ಹಚ್ಚಿದ ಬಳಿಕ ಕೂದಲನ್ನು ತೊಳೆದರೂ ತೇವಾಂಶವಿರುತ್ತದೆ. ಈ ಮೂಲಕ ಕೂದಲಿಗೆ ಬೇಕಾದ ಪೌಷ್ಠಿಕತೆಯನ್ನು ಕೊಬ್ಬರಿ ಎಣ್ಣೆ ಒದಗಿಸುತ್ತದೆ.
ಶುಂಠಿ, ಅರಿಶಿನ ಆರೋಗ್ಯಕ್ಕೆ ಒಳ್ಳೆಯದು. ಅದೇ ರೀತಿ ಕೊಬ್ಬರಿ ಎಣ್ಣೆ ಕೂದಲಿಗೆ, ಚರ್ಮಕ್ಕೆ ಅಲೋವೆರಾ ಮುಖ್ಯ. ನೀವು ಉತ್ತಮವಾದ ಆಹಾರ ಸೇವಿಸುವುದರ ಜತೆಗೆ ಚೆನ್ನಾಗಿ ನಿದ್ರೆ ಮಾಡಬೇಕು.
ತಲೆಗೆ ಎಣ್ಣೆ ಹಚ್ಚುವ ಮುನ್ನ ಈ ಕ್ರಮಗಳನ್ನು ಅನುಸರಿಸಿ.
- ಮೊದಲಿಗೆ ಎರಡು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ
- ಮೆಂತ್ಯ, ಸಾಸಿವೆ, ಕರಿಬೇವು ತಲಾ ಅರ್ಧ ಚಮಚ
- ಒಂದು ಚಮಚ ಜೇನು ತುಪ್ಪ, 1 ಚಮಚ ಆಪಲ್ ಸೈಡರ್ ವಿನೆಗರ್ ಮಿಕ್ಸ್ ರೆಡಿ ಮಾಡಿಟ್ಟುಕೊಳ್ಳಿ.
ಮೆಂತ್ಯ, ಸಾಸಿವೆ, ಕರಿಬೇವು ಮಿಶ್ರಿತ ಕೊಬ್ಬರಿ ಎಣ್ಣೆಯನ್ನು ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಬಿಸಿ ಮಾಡಿ, ನಂತರ ಅದನ್ನು ಬೇರೊಂದು ಬಟ್ಟಲಿಗೆ ಹಾಕಿ. ಅದಕ್ಕೆ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ. ಬಳಿಕ ನಿಧಾನವಾಗಿ ಕೂದಲಿನ ಬುಡಕ್ಕೆ ಹಚ್ಚಿ. ಕೂದಲನ್ನು ಸಡಿಲವಾಗಿ ಕಟ್ಟಿ, 20 ನಿಮಿಷಗಳ ಕಾಲ ಬಿಡಿ. ಬಳಿಕ ಶಾಂಪೂ ಬಳಸಿ, ಬೆಚ್ಚಗಿನ ನೀರಿನಿಂದ ತೊಳೆಯಿರಿ.