ETV Bharat / sukhibhava

ಬಾಲ್ಯದಲ್ಲಿನ ಬೊಜ್ಜು ಕಾಲನಂತರದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಲಿದೆ... ಅಧ್ಯಯನ

ಬಾಲ್ಯ ಮತ್ತು ಪ್ರೌಢವಸ್ಥೆಯಲ್ಲಿನ ಬೊಜ್ಜು ವಯಸ್ಕರರಾದ ಬಳಿಕ ನರಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆ ಅಪಾಯ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.

author img

By

Published : Mar 3, 2023, 4:54 PM IST

childhood-obesity-is-a-risk-factor-for-blood-clots-later-in-life-study

ಸ್ವೀಡನ್​: ಬಾಲ್ಯದಲ್ಲಿ ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ನಂತರದ ಜೀವನದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಗುಟ್ಟೇನ್​ಬರ್ಗಗ್​ ಯುನಿವರ್ಸಿಟಿ ಅಧ್ಯಯನ ನಡೆಸಿದ್ದು, ಈ ಸಂಬಂಧ 37,000 ಪುರುಷರ ಪೂರ್ವ ಬಿಎಂಐ ಇತಿಹಾಸವನ್ನು ಕಲೆ ಹಾಕಲಾಗಿದೆ.

ಬೊಜ್ಜು ಮತ್ತು ರಕ್ತದ ಹೆಪ್ಪುಗಟ್ಟುವಿಕೆ ನಡುವಿನ ಸಂಬಂಧ ಈಗಾಗಲೇ ಇದೆ. ಆದಾಗ್ಯೂ, ಬಾಲ್ಯ ಮತ್ತು ಪ್ರೌಢಾವಸ್ಥೆಯಲ್ಲಿ ಹೆಚ್ಚಿದ ಬಿಎಂಐ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಇಲ್ಲಿಯವರೆಗೆ ಅಸ್ಪಷ್ಟವಾಗಿದೆ. ಆರಂಭಿಕ ಜೀವನದಲ್ಲಿ ಬಿಎಂಐ ಮತ್ತು ನಂತರದ ಥ್ರಂಬಿ (ರಕ್ತ ಹೆಪ್ಪುಗಟ್ಟುವಿಕೆ) ನಡುವಿನ ಸಂಪರ್ಕವನ್ನು ಸ್ಪಷ್ಟಪಡಿಸುವುದು ಅಧ್ಯಯನದ ಉದ್ದೇಶವಾಗಿದೆ. ಥ್ರಂಬಿ ಸಾಮಾನ್ಯವಾಗಿ ಕಾಲಿನಲ್ಲಿ ಉಂಟಾಗುತ್ತದೆ. ಬಳಿಕ ಇದು ಮೀನು ಖಂಡದ ರಕ್ತನಾಳದಲ್ಲಿ ಶುರುವಾಗುತ್ತದೆ. ಊತ, ನೋವು ಮತ್ತು ರೆಡ್​ನೆಸ್​ ಸಾಮಾನ್ಯ ಲಕ್ಷಣವಾಗಿದೆ. ಈ ಹೆಪ್ಪುಗಟ್ಟುವಿಕೆ ವಿರಳವಾಗಿದ್ದು, ಅಪಾಯಕಾರಿ. ಈ ರಕ್ತಪ್ರವಾಹ ಶ್ವಾಸಕೋಶಕ್ಕೆ ಹರಡಿದರೆ ಪಲ್ಮನರಿ ಎಂಬಾಲಿಸಮ್ ಉಂಟಾಗಿ ಜೀವಕ್ಕೆ ಅಪಾಯವಾಗಬಹುದು.

37 ಸಾವಿರ ಜನರ ಅಧ್ಯಯನ: 1945 ರಿಂದ 1961ರ ನಡುವೆ ಜನಿಸಿದ ಸ್ವೀಡನ್​ನ 37,627 ಪುರುಷರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇದು ಅವರ ಎತ್ತರ, ತೂಕ ಮತ್ತು ಬಿಎಂಐಗಳ ದಾಖಲೆ ಪಡೆಯಲಾಯಿತು. ಮೊದಲನೇ ಗುಂಪಿನಲ್ಲಿ 8 ವರ್ಷದೊಳಗೆ ಶಾಲೆಯಲ್ಲಿನ ಆರೋಗ್ಯ ಕಾಳಜಿ ಸೇವೆ ಮತ್ತು ಎರಡನೇ ಗುಂಪಿನಲ್ಲಿ 20ವರ್ಷದೊಳಗೆ ಸೇನಾ ಸೇವೆಯಲ್ಲಿ ವೈದ್ಯಕೀಯ ಪರೀಕ್ಷೆ ದಾಖಲಾಗಿದೆ. ಜೊತೆಗೆ 62ನೇ ವಯಸ್ಸಿನವರೆಗೆ ರಕ್ತ ಹೆಪ್ಪುಗಟ್ಟುವಿಕೆ ದಾಖಲೆ ದತ್ತಾಂಶವನ್ನು ಪಡೆಯಲಾಗಿದೆ.

ಥ್ರಂಬಸ್​ ಅಪಾಯ: 8 ಮತ್ತು 20ನೇ ವಯಸ್ಸಿನವರ ಬಿಎಂಐ ನರಗಳ ರಕ್ತ ಹೆಪ್ಪುಗಟ್ಟುವಿಕೆಗೆ ಸಂಪರ್ಕ ಹೊಂದಿದೆ ಎಂದು ಜರ್ನಲ್​ ಆಫ್​ ಇಂಟರ್ನಲ್​ ಮೆಡಿಸಿನ್​ ಪ್ರಕಟಿಸಿದೆ. ಇದು ಕಾಲಿನ ನರ ಅಥವಾ ಶ್ವಾಸಕೋಶದ ಪಲ್ಮನರಿ ಎಂಬಾಲಿಸ್​ಗೆ ಪರಿಣಾಮ ಬೀರುತ್ತದೆ.

ಬಾಲ್ಯ ಮತ್ತು ಹದಿ ವಯಸ್ಸಿನ, ಎರಡು ಗುಂಪುಗಳು ಸಿರೆಯ ಥ್ರಂಬಿಯ ಅಪಾಯವನ್ನು ಗಮನಾರ್ಹವಾಗಿ ಏರಿಕೆ ಎಂದು ಕಂಡುಬಂದಿದೆ. ಮೊದಲನೆಯದು ಬಾಲ್ಯದಲ್ಲಿ ಮತ್ತು ಯುವ ವಯಸ್ಕರಲ್ಲಿ ಅಧಿಕ ತೂಕ ಹೊಂದಿರುವ ವ್ಯಕ್ತಿಗಳು, ಆದರೆ ಎರಡನೆಯದು ಬಾಲ್ಯದಲ್ಲಿ ಸಾಮಾನ್ಯ ತೂಕ ಹೊಂದಿರುವವರು ಮತ್ತು ಪ್ರೌಢಾವಸ್ಥೆಯಲ್ಲಿ ಮಾತ್ರ ಅಧಿಕ ತೂಕವನ್ನು ಹೊಂದಿರುವವರು.

ಬಾಲ್ಯ ಮತ್ತು ಪ್ರೌಢವಸ್ಥೆ ಎರಡರಲ್ಲಿ ಅಧಿಕ ತೂಕ ನಂತರದ ಜೀವನದಲ್ಲಿ ನರಗಳಲ್ಲಿನ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಾಗಿ ಹೊಂದುವ ಸಾಧ್ಯತೆ ಇದೆ. ಬಾಲ್ಯದಲ್ಲಿನ ಅಧಿಕ ತೂಕಕ್ಕಿಂತ ಪ್ರೌಢವಸ್ಥೆಯಲ್ಲಿನ ಅಧಿಕ ತೂಕವು ವಯಸ್ಕರಾದ ಬಳಿಕ ಹೆಚ್ಚಿನ ಪರಿಣಾಮವನ್ನು ಹೊಂದಿದೆ ಎಂದು ಅಧ್ಯಯನದಲ್ಲಿ ತಿಳಿದುಕೊಳ್ಳಲಾಗಿದೆ. ಬಾಲ್ಯ ಮತ್ತು ಪ್ರೌಢವಸ್ಥೆ ಎರಡರಲ್ಲೂ ಅಧಿಕ ತೂಕ ನಂತರ ಜೀವನದಲ್ಲಿ ನರಗಳಲ್ಲಿನ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೊಂದಿದೆ. ಬಾಲ್ಯದಲ್ಲಿನ ಅಧಿಕ ತೂಕಕ್ಕಿಂತ ಪ್ರೌಢವಸ್ಥೆಯಲ್ಲಿನ ಅಧಿಕ ತೂಕವು ವಯಸ್ಕರಾದ ಬಳಿಕ ಹೆಚ್ಚಿನ ಪರಿಣಾಮವನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.

ಬಾಲ್ಯ ಮತ್ತು ಫ್ರೌಢವಸ್ಥೆಯಲ್ಲಿನ ಅರ್ಥೇರಿಯಲ್​​ ಥ್ರಂಬಿ ಹೆಚ್ಚಿನ ಅಪಾಯ ಹೊಂದಿದೆ. ರಕ್ತನಾಳದಲ್ಲಿ ಶೇಖರಣೆಗೊಳ್ಳುವ ಬೊಜ್ಜು ಮತ್ತು ಏರಿಳಿತದಿಂದ ರಕ್ತ ನಾಳದಲ್ಲಿ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಆದಾಗ್ಯೂ ಈ ಸಂಬಂಧ ಸ್ಪಷ್ಟನೆ ಹೆಚ್ಚಿನ ಅಧ್ಯಯನ ಅವಶ್ಯಕತೆ ಇದೆ. ನಿಯಂತ್ರಣ ಗುಂಪಿನ ಮೇಲೆ ಈ ಅಧ್ಯಯನ ಹೊಂದಿದ್ದು, 8 ರಿಂದ 20 ವರ್ಷದ ಸಾಮಾನ್ಯ ತೂಕ ಹೊಂದಿರುವ ವ್ಯಕ್ತಿಗಳನ್ನು ಈ ಸಂಶೋಧನೆ ಒಳಗೊಂಡಿದೆ.

ಇದನ್ನೂ ಓದಿ: ಆತಂಕದಿಂದಿರುವ ಗರ್ಭಿಣಿಯರಲ್ಲಿ ಜೈವಿಕ ಪ್ರತಿರಕ್ಷಣಾ ವ್ಯವಸ್ಥೆ ವಿಭಿನ್ನತೆ ಹೊಂದಿರುತ್ತೆ..ಅಧ್ಯಯನದಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.