ETV Bharat / sukhibhava

ರಸ್ತೆ ಮಾಲಿನ್ಯದಿಂದಾಗಿಯೂ ರಕ್ತದೊತ್ತಡ ಹೆಚ್ಚುವ ಸಾಧ್ಯತೆ; ಸಂಶೋಧನೆಯಲ್ಲಿ ಬಯಲು - ಟ್ರಾಫಿಕ್​ ಮಾಲಿನ್ಯದ ಶಬ್ಧಗಳಿಗೆ ಒಳಗೊಳ್ಳುವುದರಿಂದ

ಸದಾ ಟ್ರಾಫಿಕ್​ ಮಾಲಿನ್ಯದ ಶಬ್ದಗಳಿಗೆ ಒಳಗೊಳ್ಳುವುದರಿಂದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.

blood-pressure-may-increase-due-to-road-pollution

author img

By

Published : Mar 25, 2023, 1:18 PM IST

ಚೀನಾ: ಗಿಜಿಗುಡುವ ವಾಹನಗಳು ಓಡಾಡುವ ರಸ್ತೆಯ ಪಕ್ಕದಲ್ಲಿ ಮನೆ ಇದ್ದು, ಸದಾ ಎಂಜಿನ್​, ಹಾರ್ನ್​ಗಳ ಸದ್ದು ಕೇಳುತ್ತಿದ್ದರೆ ಇದರಿಂದ ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಇದೆ ಎಂದು ಸಂಶೋಧನೆ ತಿಳಿಸಿದೆ. ಜೆಎಸಿಸಿ: ಅಡ್ವಾನ್ಸ್​ ಕನ್ಫರ್ಮ್​ಡ್​ ದ ಟ್ರೂಥ್​ ಜರ್ನಲ್​ನಲ್ಲಿ ಈ ಕುರಿತು ಪ್ರಕಟವಾಗಿದೆ. ರಸ್ತೆ ಸಂಚಾರದ ಶಬ್ದ ಮತ್ತು ಅಧಿಕ ರಕ್ತದೊತ್ತಡದ ನಡುವಿನ ಸಂಬಂಧವು ದೃಢವಾಗಿದೆ ಎಂಬುದು ಅಧ್ಯಯನ ತೋರಿಸಿದೆ ಎಂದು ಅಸಿಸ್ಟಂಟ್​ ಪ್ರೊಫೆಸರ್​ ಜಿಂಗ್​ ಹುಂಗ್​ ತಿಳಿಸಿದ್ದಾರೆ.

ಅಧ್ಯಯನಕ್ಕೆ ಬಯೋ ಬ್ಯಾಂಕ್​ ಡೇಟಾ ಬಳಕೆ: ಈ ಹಿಂದಿನ ಅಧ್ಯಯನಗಳು ಕೂಡ ಕ್ರಾಸ್​ ಸೆಕ್ಷನ್​ ಆಗಿದ್ದವು. ಟ್ರಾಫಿಕ್ ಶಬ್ದ ಮತ್ತು ಅಧಿಕ ರಕ್ತದೊತ್ತಡವು ಸಂಬಂಧ ಹೊಂದಿದೆ. ಆದರೆ, ಈ ಸಾಂದರ್ಭಿಕ ಸಂಬಂಧವನ್ನು ತೋರಿಸಲು ವಿಫಲವಾಗಿದೆ. ಈ ಅಧ್ಯಯನಕ್ಕೆ ಬ್ರಿಟನ್​ ಬಯೋ ಬ್ಯಾಂಕ್​ ಡೇಟಾವನ್ನು ಬಳಸಿಕೊಂಡು ಅಧ್ಯಯನ ನಡೆಸಲಾಗಿದೆ.

ಶಬ್ಧಗಳಿಂದ ರಕ್ತದೊತ್ತಡ ಅಗತ್ಯ: 40 ವರ್ಷದಿಂದ 69 ವಯೋಮಾನದವರೆಗಿನ 2,40,000 ರೂ ಅನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅಧ್ಯಯನದ ಆರಂಭದಲ್ಲಿ ಇವರಲ್ಲಿ ಯಾವುದೇ ರಕ್ತದೊತ್ತಡ ಇರಲಿಲ್ಲ. ಅಧ್ಯಯನಕ್ಕೆ ಒಳಗೊಂಡವರು ರಸ್ತೆ ಪಕ್ಕದಲ್ಲಿ ನಿವಾಸ ಮಾಡುತ್ತಿದ್ದು, ಈ ಸಂಚಾರ ಶಬ್ದಗಳು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಮಾಡೆಲಿಂಗ್​ ಸಾಧನದ ಮೂಲಕ ಅಧ್ಯಯನ ನಡೆಸಲಾಗಿದೆ.

ಈ ದತ್ತಾಂಶವನ್ನು 8.1 ವರ್ಷದಲ್ಲಿ ಅಧ್ಯಯನ ನಡೆಸಲಾಗಿದ್ದು, ಇವರಲ್ಲಿ ಎಷ್ಟು ಜನರಲ್ಲಿ ಅಧಿಕ ರಕ್ತದೊತ್ತಡ ಅಭಿವೃದ್ಧಿ ಆಗಿರುವುದು ಕಾಣಬಹುದಾಗಿದೆ. ರಸ್ತೆ ಟ್ರಾಫಿಕ್​ ಪಕ್ಕದಲ್ಲಿ ವಾಸಿಸುವ ಜನರಲ್ಲಿ ರಕ್ತದೊತ್ತಡ ಹೆಚ್ಚಿರುವುದು ಕಂಡು ಬಂದಿದೆ.

ಸಾರಜನಕ ಡೈ ಆಕ್ಸೈಡ್​ನಿಂದಲೂ ಮಾಲಿನ್ಯ: ಸೂಕ್ಷ್ಮ ಕಣಗಳು ಮತ್ತು ಸಾರಜನಕ ಡೈಆಕ್ಸೈಡ್‌ಗೆ ಒಡ್ಡಿಕೊಳ್ಳುವುದರಿಂದಲೂ ಈ ರಕ್ತದ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ಟ್ರಾಫಿಕ್ ಶಬ್ದ ಮತ್ತು ವಾಯು ಮಾಲಿನ್ಯ ಎರಡಕ್ಕೂ ಹೆಚ್ಚಿನ ಮಾನ್ಯತೆ ಹೊಂದಿರುವ ಜನರು ಅಧಿಕ ರಕ್ತದೊತ್ತಡದ ಅಪಾಯವನ್ನು ಹೊಂದಿದ್ದರು.

ರಸ್ತೆ ಟ್ರಾಫಿಕ್​ ಮಾಲಿನ್ಯ ಮತ್ತು ಟ್ರಾಫಿಕ್​ ಸಮಸ್ಯೆ ಆಧಾರಿತದ ವಾಯು ಮಾಲಿನ್ಯ ನಮ್ಮ ಸುತ್ತಲೂ ಇದೆ. ಪರಿಸರಕ್ಕಿಂತ ಹೆಚ್ಚಾಗಿ ರಸ್ತೆ ಸಂಚಾರ ಶಬ್ದದ ಸ್ವತಂತ್ರ ಪರಿಣಾಮಗಳನ್ನು ಅನ್ವೇಷಿಸುವುದು ಅತ್ಯಗತ್ಯವಾಗಿದೆ. ರಸ್ತೆ ಸಂಚಾರ ಶಬ್ದಕ್ಕೆ ಒಡ್ಡಿಕೊಳ್ಳುವುದು. ರಕ್ತದೊತ್ತಡಕ್ಕೆ ಹಾನಿಕಾರಕವಾಗಿದೆ ಎಂದು ಅವರು ದೃಢಪಡಿಸುತ್ತಾರೆ. ಈ ಹಿನ್ನೆಲೆ ನಿಶ್ಯಬ್ದ ವಾಹನಗಳಲ್ಲಿ ಸುಧಾರಿತ ತಂತ್ರಜ್ಞಾನದ ಮೂಲಕ ಈ ಟ್ರಾಫಿಕ್​ ಶಬ್ದದ ಮಾಲಿನ್ಯ ಕಡಿಮೆ ಮಾಡಬಹುದು ಆಗಿದೆ. ಇದು ಆರೋಗ್ಯದ ಮೇಲೆ ಕೂಡ ಪ್ರತಿಕೂಲ ಪರಿಣಾಮ ಬೀರುತ್ತದೆ.

ಈ ರಕ್ತದೊತ್ತಡವನ್ನು ಮೌನ ರೋಗ ಎಂದು ಕರೆಯಲಾಗುತ್ತದೆ. ಏಕೆಂದರೆ, ಈ ರೋಗವನ್ನು ಹೊಂದಿದ್ದೇವೆ ಎಂಬುದೇ ಗೊತ್ತಾಗುವುದಿಲ್ಲ. ಈ ಬಗ್ಗೆ ಗುಣ ಲಕ್ಷಣಗಳಾಗಲೀ ಅಥವಾ ಸೂಚನೆಗಳೇ ಇರುವುದಿಲ್ಲ. ಇದು ದೇಹವನ್ನು ಹಾನಿಗೊಳಿಸುತ್ತಾ, ಕೆಲವೊಮ್ಮೆ ಹೃದಯ ಸಂಬಂಧಿ ರೋಗಗಳಿಗೂ ಕಾರಣವಾಗಬಹುದು. ಈ ಹಿನ್ನೆಲೆ ಈ ಸಂಬಂಧ ಎಚ್ಚರವಹಿಸುವುದು ಅವಶ್ಯವಾಗಿರುತ್ತದೆ.

ಇದನ್ನೂ ಓದಿ: 'ಹೆಚ್ಚು ಫಿಟ್​ ಆಗಿರುವ ಪುರುಷರಲ್ಲಿ ಹೃದ್ರೋಗದ ಅಪಾಯ ಕಡಿಮೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.