ETV Bharat / sukhibhava

ಶೀಘ್ರದಲ್ಲೇ ಮಾನವರಲ್ಲಿ ಕೃತಕ ಗರ್ಭ ಪ್ರಯೋಗ! ಏವಿದು?

author img

By ETV Bharat Karnataka Team

Published : Sep 21, 2023, 1:14 PM IST

ಕೃತಕ ಗರ್ಭ ಎಂದರೆ ಇಲ್ಲಿ ಭ್ರೂಣವನ್ನು ಯಾರೂ ತಯಾರು ಮಾಡುವುದಿಲ್ಲ. ಅವಧಿ ಪೂರ್ವವಾಗಿ ಜನಿಸಿದ ಮಕ್ಕಳಿಗೆ ಕೃತಕ ಗರ್ಭದ ಮೂಲಕ ಬೆಳವಣಿಗೆಗೆ ಆರೈಕೆ ನೀಡುವ ಕೆಲಸ ನಡೆಯುತ್ತದೆ.

artificial womb experiment seeking FDA approval

ನ್ಯೂಯಾರ್ಕ್​: 2017ರಲ್ಲಿ ಮೊದಲ ಬಾರಿಗೆ ಅಮೆರಿಕದ ಸಂಶೋಧಕರು ಕೃತಕ ಗರ್ಭದ ಪ್ರಯೋಗ ನಡೆಸಿದ್ದರು. ಇದೀಗ ಈ ಪ್ರಯೋಗವನ್ನು ಮಾನವರಲ್ಲಿ ನಡೆಸುವ ಸಂಬಂಧ ಫುಡ್​ ಅಂಡ್​ ಡ್ರಗ್​ ಆಡ್ಮಿನಿಸ್ಟ್ರೇಷನ್​ (ಎಫ್​ಡಿಎ) ಅನುಮತಿ ಕೇಳಿದ್ದಾರೆ. ಅವಧಿಪೂರ್ವ ಜನನವಾಗುವ ಮಕ್ಕಳ ಸಾವು ಮತ್ತು ಅಂಗವೈಕಲ್ಯತೆಯನ್ನು ಕೃತಕ ಗರ್ಭಗಳು ತಡೆಯಲಿದ್ದು, ಗರ್ಭಾಶಯವನ್ನು ಅನುಕರಿಸುವ ವ್ಯವಸ್ಥೆಯ ಈ ಪ್ರಯೋಗವನ್ನು ನಿಯಂತ್ರಕರು ಪರಿಗಣಿಸುವ ನಿರೀಕ್ಷೆ ಇದೆ.

ವಿಶ್ವ ಆರೋಗ್ಯ ಸಂಸ್ಥೆಯ ಅನುಸಾರ, ಐದು ವರ್ಷದೊಳಗಿನ ಮಕ್ಕಳ ಸಾವು ಮತ್ತು ಅಂಗವೈಕಲ್ಯತೆಯಲ್ಲಿನ ಪ್ರಮುಖ ಕಾರಣಗಳಲ್ಲಿ ಒಂದು, ಅವಧಿ ಪೂರ್ವವಾಗಿ ಮಕ್ಕಳ ಜನನ. 2020ರಲ್ಲಿ 13.4 ಮಿಲಿಯನ್​ ಮಕ್ಕಳು ಅವಧಿ ಪೂರ್ವ ಜನಿಸಿವೆ.

2017ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಚಿಲ್ಡ್ರನ್​ ಹಾಸ್ಪಿಟನ್​ ಆಫ್​ ಪಿಲಡೆಲ್ಫೀಯಾದ ವಿಜ್ಞಾನಿಗಳು ಸ್ಟೇರಿಲೈಡ್ಸ್​​ ಬ್ಯಾಗ್​​ನಲ್ಲಿ ಫ್ಲುಯಿಡ್​(ದ್ರವ) ತುಂಬಿ 28 ದಿನಗಳ ಕಾಲ ಕುರಿ ಮರಿ ಭ್ರೂಣವನ್ನು ಅಭಿವೃದ್ಧಿಪಡಿಸಿದರು. ಜೊತೆಗೆ ಅದರ ಹೊಕ್ಕಳು ಬಳ್ಳಿಯ ಟಿಶ್ಯೂ ಸಂಪರ್ಕಿತ ಟ್ಯೂಬ್​ನಿಂದ ಆಮ್ನಿಯೋಟಿಕ್ ಫ್ಲುಯಿಡ್​​, ಔಷಧಿ ಮತ್ತು ಆಕ್ಸಿಜನ್​ ಅನ್ನು ನೀಡಲಾಗುತ್ತಿತ್ತು. ಈ ಪ್ರಯೋಗದಲ್ಲಿ ಕುರಿಮರಿ ಶ್ವಾಸಕೋಶ, ಜಿಐ ಟ್ರಾಕ್ಟ್​​ ಮತ್ತು ಮಿದುಳು ಸಕಾರಾತ್ಮಕ ಬೆಳವಣಿಗೆ ಕಂಡಿತು.

ಇದೀಗ ಸಿಎಚ್​ಒಪಿ ತಂಡ ಇದನ್ನು ಮನುಷ್ಯರ ಮೇಲೆ ಪ್ರಯೋಗ ನಡೆಸಲು ಅನುಮತಿ ಕೋರಿದೆ. ಇದಕ್ಕಾಗಿ ಎಕ್ಸ್​ಟ್ರಾ- ಯುಟೆರಿನೆ ಎನ್ವರ್ನಮೆಂಟ್​ ಫಾರ್​ ನ್ಯೂಬಾರ್ನ್​ ಡೆವೆಲಪ್ಮೆಂಟ್​​ ಅಥವಾ ಎಕ್ಸೆಟೆಂಡ್​ ಎಂಬ ಸಾಧನವನ್ನೂ ಕೂಡ ಪರೀಕ್ಷೆಗೆ ಒಳಪಡಿಸಿದ್ದಾರೆ.

ಏನಿದು ಕೃತಕ ಗರ್ಭ?: ಈ ತಂತ್ರಜ್ಞಾನವೂ ಶಿಶು ಭ್ರೂಣದ ಆರಂಭದಿಂದಲೂ ಕೃತಕವಾಗಿ ಜನ್ಮದ ಅಭಿವೃದ್ಧಿಯನ್ನು ಉದ್ದೇಶಿಸಿಲ್ಲ. ಬದಲಾಗಿ ಇದು ನೈಸರ್ಗಿಕ ಭ್ರೂಣದಿಂದ ಅಭಿವೃದ್ಧಿಯಾದ ಮಕ್ಕಳು ಅದರಲ್ಲೂ ಅವಧಿಪೂರ್ವ ಜನನವಾಗುವ ಮಕ್ಕಳ ಬದುಕಿ ಉಳಿಯುವ ಪ್ರಮಾಣವನ್ನು ಹೆಚ್ಚಿಸುತ್ತದೆ ಎಮದು ವರದಿ ತಿಳಿಸಿದೆ.

ಒಂದು ವೇಳೆ ಇದು ಯಶಸ್ವಿಯಾದರೆ, ಅಂತಿಮವಾಗಿ ಅವಧಿಪೂರ್ವವಾಗಿ ಜನಿಸುವ ಮಕ್ಕಳ ಅಪಾಯವನ್ನು ಮುಂಚೆಯೇ ಊಹೆ ಮಾಡಿ ಅವುಗಳನ್ನು ವೆಂಟಿಲೇಟರ್​​ಗೆ ಹಾಕುವ ಬದಲು ಈ ರೀತಿ ಕೃತಕ ಗರ್ಭದಲ್ಲಿ ಆರೈಕೆ ನಡೆಸಬಹುದು ಎಂದು 2017ರ ವಿಡಿಯೋದಲ್ಲಿ ಸಿಎಚ್​ಒಪ್ ಸರ್ಜನ್​ ಆಗಿರುವ ಅಲನ್​ ಫ್ಲೆಕ್​ ತಿಳಿಸಿದ್ದಾರೆ.

ಎಫ್‌ಡಿಎಯ ಸ್ವತಂತ್ರ ಸಲಹೆಗಾರರ ​​ಸಭೆಯು ನಿಯಂತ್ರಕ ಮತ್ತು ನೈತಿಕ ಪರಿಗಣನೆಗಳನ್ನು ಚರ್ಚಿಸುವ ಗುರಿಯನ್ನು ಹೊಂದಿದೆ. ಹಾಗೆಯೇ ತಂತ್ರಜ್ಞಾನಕ್ಕಾಗಿ ಮಾನವ ಪ್ರಯೋಗಗಳು ಹೇಗಿರಬಹುದು ಎಂದು ನೋಡಲಿದೆ. ಇದು ನಿಜವಾಗಿಯು ದೊಡ್ಡ ಹೆಜ್ಜೆಯಾಗಿದ್ದು, ಇದಕ್ಕಾಗಿ ಬಹಳ ಕಾದಿದ್ದೇವೆ ಎಂದು ನ್ಯೂಯಾರ್ಕ್​ ನಗರದ ಕೊಲಂಬಿಯಾ ಯುನಿವರ್ಸಿಟಿ ಮೆಡಿಕಲ್​ ಸೆಂಟರ್​ನ ತಜ್ಞ ಕೆಲ್ಲೆ ವರ್ನರ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಅವಧಿಗೆ ಮುನ್ನ ತಾಯಿಗೆ ಹೆರಿಗೆ: 700 ಗ್ರಾಂ ತೂಕದ ಮಗು ಜನನ, ತಾಯಿ ಗರ್ಭದಂತೆ ವಾತಾವರಣ ಸೃಷ್ಟಿಸಿ ಗದಗ ವೈದ್ಯರಿಂದ ಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.