ETV Bharat / sukhibhava

ಇಂದು ಅಕ್ಷಯ ತೃತೀಯ; ಚಿನ್ನ ಖರೀದಿಗೆ ಶುಭ ಸಮಯ ಇದು - ಯಶಸ್ಸು ಮತ್ತು ಅವಕಾಶಗಳ ಸಂಕೇತ

ಈ ದಿನವನ್ನು ಮಂಗಳಕರ ದಿನ ಎಂದು ಪರಿಗಣಿಸಿದ್ದು, ಇಂದು ಚಿನ್ನ ಮತ್ತು ಬೆಳ್ಳಿಯಂತಹ ಲೋಹದ ವಸ್ತುಗಳನ್ನು ಕೊಳ್ಳುವುದರಿಂದ ಕೂಡ ಸಂಪತ್ತು ಹೆಚ್ಚುತ್ತದೆ.

Akshay Tritiya today; This is an auspicious time to buy gold

author img

By

Published : Apr 22, 2023, 12:20 PM IST

ನವದೆಹಲಿ: ಅಕ್ಷಯ ತೃತೀಯ ಹಿಂದೂ ಮತ್ತು ಜೈನರಿಗೆ ಪವಿತ್ರ ದಿನ. ಈ ದಿನವನ್ನು ಅದೃಷ್ಟ, ಯಶಸ್ಸು ಮತ್ತು ಅವಕಾಶಗಳ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಅಕ್ಷಯ ತೃತೀಯವನ್ನು ಪ್ರಾರ್ಥನೆ ಮತ್ತು ಆಧಾತ್ಮಿಕತೆ ಮೂಲಕ ಆಚರಣೆ ಮಾಡಲಾಗುವುದು. ವ್ಯಾಪಾರ - ವ್ಯವಹಾರ ಮಾಡಲು, ಹೂಡಿಕೆ ಮಾಡಲು ಮತ್ತು ಚಿನ್ನ ಅಥವಾ ಭೂಮಿಕೊಳ್ಳಲು ಅತ್ಯುತ್ತಮ ದಿನ ಎಂದು ಪರಿಗಣಿಸಲಾಗುವುದು.

ಸಂಸ್ಕೃತದಲ್ಲಿ ಅಕ್ಷಯ ಎಂದರೆ ವೃದ್ದಿಯಾಗುವುದು ಅಥವಾ ಬರಿದು ಆಗದೇ ಇರುವುದು ಎಂದು ಅರ್ಥ. ಈ ದಿನ ಆರಂಭ ಮಾಡುವ ಯಾವುದೇ ಕೆಲಸ ಅಥವಾ ಖರೀದಿಯಿಂದ ಅದು ದೀರ್ಘ ವೃದ್ಧಿಯಾಗುತ್ತದೆ. ಅಡಚಣೆ ಉಂಟಾಗುವುದಿಲ್ಲ ಮತ್ತು ಇದರಿಂದ ಅದ್ಭುತ ಯಶಸ್ಸು ಮತ್ತು ಅವಕಾಶಗಳು ಎದುರಾಗುತ್ತದೆ ಎಂಬ ನಂಬಿಕೆ ಇದೆ.

ಅಕ್ಷಯ ತೃತೀಯ ಇತಿಹಾಸ ಮತ್ತು ಮಹತ್ವ: ವೈಶಾಖ ಮಾಸ ಶುಕ್ಲಾ ಪಕ್ಷದ ಮೂರನೇ ದಿನವನ್ನು ಅಕ್ಷಯ ತೃತೀಯ ದಿನವನ್ನಾಗಿ ಆಚರಣೆ ಮಾಡಲಾಗುವುದು. ಗ್ರೆಗೋರಿಯನ್​ ಕ್ಯಾಲೆಂಡರ್​ ಅನುಸಾರ, ಈ ದಿನ ಏಪ್ರಿಲ್​ ಅಥವಾ ಮೇ ಅಲ್ಲಿ ಬರುತ್ತದೆ. ಈ ದಿನ ಸೂರ್ಯ ಮತ್ತು ಚಂದ್ರರು ಅತ್ಯುತ್ತಮ ಜೋಡಣೆಯಲ್ಲಿ ಇರುತ್ತಾರೆ.

ಈ ದಿನವನ್ನು ಅಖಾ ತೀಜ್​ ಎಂದು ಕೂಡ ಕರೆಯುತ್ತೇವೆ. ಈ ವರ್ಷ ಏಪ್ರಿಲ್​ 22ರಂದು ಆಚರಿಸಲಾಗುತ್ತದೆ. ಈ ದಿನ ಮಾಡಿದ ಕಾರ್ಯಗಳು ದೈವಿಕ ಶಕ್ತಿಗಳ ಆಶೀರ್ವಾದ ಮತ್ತು ಪ್ರಯೋಜನಕಾರಿ ಆಗಿರುತ್ತದೆ. ಈ ದಿನದಂದು ಚಿನ್ನ ಮತ್ತು ಬೆಳ್ಳಿಯಂತಹ ಲೋಹದ ವಸ್ತುಗಳನ್ನು ತರುವುದರಿಂದ ಕೂಡ ಸಂಪತ್ತು ಹೆಚ್ಚುತ್ತದೆ. ಇದು ಮಂಗಳಕಾರ ದಿನ ಎಂದು ಪರಿಗಣಿಸಲಾಗಿದೆ. ಈ ದಿನ ತ್ರೇತಾಯುಗದ ಪ್ರಾರಂಭದ ದಿನ ಎಂದು ಕೂಡ ಪುರಾಣದಲ್ಲಿ ತಿಳಿಸಲಾಗಿದೆ.

ಅಕ್ಷಯ ತೃತೀಯದಂದು ಚಿನ್ನದ ಖರೀದಿ: ಅಕ್ಷಯ ತೃತೀಯ ಏಪ್ರಿಲ್​ 22ರಂದು ಶನಿವಾರ ಬೆಳಗ್ಗೆ 7.49ರಿಂದ ಪ್ರಾರಂಭವಾಗಿ ಏಪ್ರಿಲ್​ 23ರಂದು 7. 47ರವತೆ ಇರುತ್ತದೆ. ಚಿನ್ನವನ್ನು ಶುಭ, ಸಂಪತ್ತು, ಅಮೂಲ್ಯ ಆಸ್ತಿ ಎಂದು ಪರಿಗಣಿಸಿರುವ ಹಿನ್ನಲೆ ಈ ದಿನದಂದು ಚಿನ್ನ ಖರೀದಿ ಮಾಡಿದರೆ ಸಂಪತ್ತಿ ಕಡಿಮೆಯಾಗುವುದಿಲ್ಲ ಎಂಬ ನಂಬಿಕೆ ಇದೆ. ಅಷ್ಟೆ ಅಲ್ಲದೇ, ಈ ದಿನದಂದು ಸಂಪತ್ತಿನ ಅಧಿದೇವತೆಯಾದ ಕುಬೇರನ್ನು ಆರಾಧಿಸುವುದರಿಂದಲೂ ಯಶಸ್ಸು, ಸಂಪತ್ತು ಹೆಚ್ಚುತ್ತದೆ. ಚಿನ್ನದ ಹೊರತಾಗಿ ಬೆಳ್ಳಿಯ ಲೋಹವನ್ನು ಕೂಡ ಖರೀದಿಸಬಹುದಾಗಿದೆ.

ಅಕ್ಷಯ ತೃತೀಯ ಮಹತ್ವ: ಈ ದಿನದಂದು ವಿಷ್ಣು ಪರಶುರಾಮದ ಅವತಾರ ಎತ್ತಿದನು ಎಂಬ ನಂಬಿಕೆ ಇದೆ. ಅಲ್ಲದೇ ವನವಾಸದಲ್ಲಿದ್ದಾಗ ದ್ರೌಪದಿಗೆ ಆಹಾರ ಕೊರತೆ ಬಾರದಂತೆ ಅಕ್ಷಯವಾಗಲು ಈ ದಿನ ಅಕ್ಷಯ ಪಾತ್ರೆಯನ್ನು ಕೃಷ್ಣನು ನೀಡಿದನು ಎಂಬ ನಂಬಿಕೆ ಇದೆ. ಈ ದಿನವನ್ನು ವಿಷ್ಣುವನ್ನು ಪೂಜಿಸುವುದರಿಂದ ಒಳಿತಾಗಲಿದೆ ಎಂಬ ನಂಬಿಕೆ ಇದೆ. ವಿಷ್ಣುವಿಗೆ ಅಕ್ಷತೆ, ಅರಿಶಿಣ, ಕುಂಕುಮ ಸೇರಿದಂತೆ ಹಾಲಿನ ನೈವೇದ್ಯಗಳನ್ನು ಅರ್ಪಿಸಲಾಗುವುದು. ಇದರಿಂದ ವಿಷ್ಣುವಿನ ಆಶೀರ್ವಾದ ಕೂಡ ಸಿಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಕೈ ಸುಡುತ್ತಲೇ ಇದೆ ಬಂಗಾರ... ಚಿನ್ನದ ದರ 440 ರೂ., ಬೆಳ್ಳಿ ದರ 850 ರೂ. ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.