ಹೈದರಾಬಾದ್: ಸಮೀಪ ದೃಷ್ಟಿ ದೋಷ ಹೊಂದಿರುವ ರೋಗಿಗಳಲ್ಲಿ ದೀರ್ಘಕಾಲೀನ ದೃಷ್ಟಿ ಹೀನತೆ ಅಪಾಯವನ್ನು ಹೊಂದಬಹುದು. ಈ ಹಿನ್ನೆಲೆ ಇಂತಹ ಅಪಾಯವನ್ನು ಮುಂಚಿತವಾಗಿ ಕಂಡುಹಿಡಿದು ಈ ಬಗ್ಗೆ ಎಚ್ಚರಿಕೆ ನೀಡುವ ಹೊಸ ಕೃತಕ ಬುದ್ಧಿಮತ್ತೆ (ಎಐ) ಮಾದರಿಯನ್ನು ಜಪಾನಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಟೋಕಿಯೋ ವೈದ್ಯಕೀಯ ಮತ್ತು ದಂತ ವಿಶ್ವವಿದ್ಯಾನಿಯಲದ ತಂಡವು ಈ ಅವಿಷ್ಕಾರ ಮಾಡಿದೆ. ಈ ಸಾಧನವೂ ಯಂತ್ರ ಕಲಿಕೆ ಮಾದರಿಯ ದೀರ್ಘಾವಧಿಯ ದೃಷ್ಟಿ ಹೀನತೆಯ ಅಪಾಯವನ್ನು ಊಹಿಸಲು ಸಹಾಯ ಮಾಡುತ್ತದೆ.
ಏನಿದು ದೃಷ್ಟಿ ಹೀನತೆ ಸಮಸ್ಯೆ: ಸಮೀಪ ದೃಷ್ಟಿದೋಷ ಹೊಂದಿರುವವರು ಹತ್ತಿರದ ವಸ್ತುಗಳನ್ನು ಸರಿಯಾಗಿ ನೋಡುವ ಸಾಮರ್ಥ್ಯವನ್ನು ಹೊಂದಿದ್ದರು, ದೂರದ ವಸ್ತುಗಳನ್ನು ನೋಡಲಾರರು. ಇದನ್ನು ಕನ್ನಡ, ಕಾಂಟಾಕ್ಟ್ ಲೆನ್ಸ್ ಮತ್ತು ಸರ್ಜರಿ ಮೂಲಕ ಸರಿಪಡಿಸಬಹುದಾಗಿದೆ. ಆದರೆ. ಗಂಭೀರ ಪರಿಣಾಮದ ಸಮೀಪ ದೃಷ್ಟಿ ದೋಷ ಹೊಂದಿರುವವರು ಕಾಲ ಕ್ರಮೇಣವಾಗಿ ದೃಷ್ಟಿ ಹೀನತೆ ಹೊಂದಬಹುದಾಗಿದೆ.
ಈ ರೀತಿ ದೀರ್ಘ ಕಾಲದ ದೃಷ್ಟಿಯನ್ನು ಕಳೆದುಕೊಳ್ಳುವ ಸಮಸ್ಯೆಯಿಂದ ಜಾಗತಿಕವಾಗಿ ಅನೇಕ ಮಂದಿ ಬಳಲುತ್ತಿದ್ದಾರೆ. ಇದರಿಂದ ಅವರು ಆರ್ಥಿಕ ಮತ್ತು ದೈಹಿಕವಾಗಿ ಕುಗ್ಗಿ ಬೇರೆಯವರ ಮೇಲೆ ಅವಲಂಬನೆಗೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. 2019ರಲ್ಲಿ ಈ ಸಮಸ್ಯೆಯಿಂದ 9.45 ಬಿಲಿಯನ್ ಡಾಲರ್ ಜಾಗತಿಕ ಉತ್ಪಾದಕತೆ ಮೇಲೆ ಪರಿಣಾಮ ಬೀರಿದೆ.
ಈ ಪರೀಕ್ಷೆಯಲ್ಲಿ ರೋಗಿಯ ವಯಸ್ಸು, ಕಾರ್ಮಿಯಲ್ ಸುತ್ತಳತೆ, ಮತ್ತು ಪ್ರಸ್ತುತ ದೃಷ್ಟಿ ಮಟ್ಟವನ್ನು ದಾಖಲಿಸಲಾಗುವುದು. ಯಂತ್ರ ಕಲಿಕೆ ಮಾದರಿಯ ಈ ಸಾಧನವೂ ಮುಂದಿನ ಐದು ವರ್ಷಗಳಲ್ಲಿ ದೃಷ್ಟಿ ಯಾವ ಪ್ರಮಾಣದಲ್ಲಿ ಕುಸಿಯುತ್ತದೆ ಎಂಬುದನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಯಂತ್ರ ಕಲಿಕೆಯು ದತ್ತಾಂಶದಿಂದ ರೋಗಿ ದೃಷ್ಟಿಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಾಫ್ಟ್‌ವೇರ್ ಅನ್ನು ಸಕ್ರಿಯಗೊಳಿಸಲಾಗುವುದು.
ಸಮೀಪ ದೃಷ್ಟಿ ದೋಷದ ಬದಲಾವಣೆ ಮತ್ತು ತೊಂದರೆ ಪತ್ತೆ ಮಾಡುವಲ್ಲಿ ಈ ಯಂತ್ರ ಕಲಿಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿದಿದ್ದೇವೆ. ಈ ಅಧ್ಯಯನದಲ್ಲಿ, ನಾವು ವಿಭಿನ್ನವಾದದ್ದನ್ನು ತನಿಖೆ ಮಾಡಲು ಬಯಸಿದ್ದೇವೆ ಎಂದು ಅಧ್ಯಯನದ ಪ್ರಮುಖ ಲೇಖಕ ಯಿನಿಂಗ್ ವಾಂಗ್ ತಿಳಿಸಿದ್ದಾರೆ.
ಈ ಅಧ್ಯಯನವನ್ನು ಇತ್ತೀಚಿಗೆ ಜಾಮಾ ಅಪ್ತೊಮಾಲೊಜಿಯಲ್ಲಿ ಪ್ರಕಟಿಸಲಾಗಿದೆ. ದೃಷ್ಟಿ ದೋಷ ಸಮಸ್ಯೆ ಅನುಭವಿಸುತ್ತಿರುವ ಟಿಡಿಎಂಯುನ 967 ರೋಗಿಗಳನ್ನು 3 ರಿಂದ 5 ವರ್ಷಗಳ ಕಾಲ ಗಮನಿಸಲಾಗಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಹೆಚ್ಚುತ್ತಿದೆ ಕಿವಿ ಸೋಂಕಿನ ಪ್ರಕರಣ; ಮುಂಜಾಗ್ರತೆ ಅಗತ್ಯ