2018ರಲ್ಲಿ 14.1 (ಅಂದಾಜು 1.41 ಕೋಟಿ) ಮಿಲಿಯನ್ ಜನರು ಅನುಸರಿಸುವ ಕಳಪೆ ಆಹಾರ ಪದ್ದತಿಯೂ ಟೈಪ್ 2 ಡಯಾಬಿಟೀಸ್ಗೆ ಕಾರಣವಾಗಿದೆ. ಜಾಗತಿಕವಾಗಿ ಇದು ಶೇ 70ರಷ್ಟು ಪ್ರತಿನಿಧಿಸುತ್ತದೆ ಎಂದು ಅಧ್ಯಯನ ಹೇಳುತ್ತದೆ. ಜಗತ್ತಿನ ಶೇ 30ರಷ್ಟು ಜನಸಂಖ್ಯೆ ಹೊಂದಿರುವ ದೇಶಗಳಾದ ಭಾರತ, ನೈಜೀರಿಯಾ ಮತ್ತು ಇಥಿಯೋಪಿಯಾದಲ್ಲಿ ಟೈಪ್ 2 ಡಯಾಬಿಟೀಸ್ಗೆ ಅನಾರೋಗ್ಯಕರ ಆಹಾರ ಪದ್ಧತಿ ಸಂಬಂಧ ಹೊಂದಿದೆ.
ಈ ಕುರಿತು ಜರ್ನಲ್ ನೇಚರ್ ಮೆಡಿಸಿನ್ ಸಂಶೋಧನಾತ್ಮಕ ವರದಿ ಪ್ರಕಟಿಸಿದೆ. 1990 ಮತ್ತು 2018ರ ದತ್ತಾಂಶವನ್ನು ವಿಶ್ಲೇಷಿಸಿದಾಗ ಜಾಗತಿಕ ಪ್ರದೇಶದಲ್ಲಿ ಆಹಾರ ಪದ್ದತಿ ಟೈಪ್ 2 ಡಯಾಬಿಟೀಸ್ಗೆ ಕಾರಣ ಎಂಬುದನ್ನು ತೋರಿಸಿದೆ. 11 ಆಹಾರ ಪದ್ದತಿಗಳನ್ನು ಗಮನಿಸಿದಾಗ 3 ಆಹಾರಗಳು ಅತಿ ಹೆಚ್ಚಿನ ಕೊಡುಗೆ ನೀಡಿರುವುದು ಗೊತ್ತಾಗಿದೆ. ಅವುಗಳೆಂದರೆ, ಅಧಿಕ ಅನ್ನ ಮತ್ತು ಗೋಧಿ ಬಳಕೆ, ಧಾನ್ಯಗಳ ಬಳಕೆ ಮತ್ತು ಅತಿಯಾದ ಮಾಂಸದ ಬಳಕೆ ಆಗಿದೆ.
ಅಧಿಕ ಜ್ಯೂಸ್ ಸೇವನೆ, ಪಿಷ್ಟವಿಲ್ಲದ ಹಣ್ಣು, ಒಣಹಣ್ಣು ಅಥವಾ ಬೀಜ ಕೂಡ ಪರಿಣಾಮ ಬೀರುತ್ತಿದೆ ಎಂಬುದು ಕೂಡಾ ಇತ್ತೀಚಿನ ಸಂಶೋಧನೆಯಲ್ಲಿ ತಿಳಿದುಬಂದಿದೆ. ಕಳಪೆ ಕಾರ್ಬೋಹೈಡ್ರೇಟ್ ಗುಣಮಟ್ಟವೂ ಆಹಾರ ಪದ್ಧತಿ ಟೈಪ್ 2 ಡಯಾಬಿಟೀಸ್ಗೆ ಜಾಗತಿಕವಾಗಿ ಕಾರಣವಾಗಿದೆ ಎಂದು ಅಮೆರಿಕದ ಟುಫ್ಟಸ್ ಯುನಿವರ್ಸಿಟಿ ತಿಳಿಸಿದೆ.
ಟೈಪ್ 2 ಡಯಾಬಿಟೀಸ್ ದೇಹದ ಇನ್ಸುಲಿನ್ ಜೀವಕೋಶಗಳ ಪ್ರತಿರೋಧದಿಂದ ಇರುತ್ತದೆ. ಇದು ಹಾರ್ಮೋನ್ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ. 1990 ಮತ್ತು 2018ರ ನಡುವೆ 184 ದೇಶಗಳಲ್ಲಿ ಟೈಪ್ 2 ಡಯಾಬಿಟೀಸ್ ಪ್ರಕರಣಗಳು ಹೆಚ್ಚಾಗಿವೆ. ಇದು ವ್ಯಕ್ತಿಯ ಆರೋಗ್ಯ ರಕ್ಷಣಾ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಗ್ಲೋಬಲ್ ಡಯಾಟರಿ ಡಾಟಾಬೇಸ್ ಮಾದರಿಯಲ್ಲಿ ಈ ಸಂಶೋಧನೆ ನಡೆದಿದೆ. ಜಾಗತಿಕವಾಗಿ ಟೈಪ್ 2 ಡಯಾಬಿಟೀಸ್ ಹೆಚ್ಚಳವಾಗುತ್ತಿದೆ. ದತ್ತಾಂಶದ ಪ್ರಕಾಣ ಆಹಾರದ ಆಯ್ಕೆ ಮೇಲೆ ಸ್ಥೂಲಕಾಯ ಮತ್ತು ಟೈಪ್ 2 ಡಯಾಬಿಟೀಸ್ ಪರಿಣಾಮ ಬೀರುತ್ತದೆ. ಕಳಪೆ ಆಹಾರ ಪದ್ಧತಿ ಪುರುಷ ಮತ್ತು ಮಹಿಳೆಯರಲ್ಲಿ ಟೈಪ್ 2 ಡಯಾಬಿಟೀಸ್ಗೆ ಕಾರಣವಾಗಿದೆ. ಅಲ್ಲದೇ ಕಡಿಮೆ ವಯಸ್ಸಿನವರಲ್ಲೂ ಇದು ಪತ್ತೆಯಾಗುತ್ತದೆ.
ಪ್ರಾದೇಶಿಕವಾಗಿ, ಕೇಂದ್ರ ಮತ್ತು ಪೂರ್ವ ಯುರೋಪ್ ಮತ್ತು ಏಷ್ಯಾದ ಮಧ್ಯಭಾಗ ವಿಶೇಷವಾಗಿ ಪೋಲೆಂಡ್, ರಷ್ಯಾದಲ್ಲಿ ಹೆಚ್ಚಾಗಿ ಕೆಂಪು ಮಾಂಸ, ಸಂಸ್ಕರಿಸಿದ ಮಾಂಸ ಮತ್ತು ಆಲೂಗಡ್ಡೆ ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ವಿಶೇಷವಾಗಿ ಕೊಲಂಬಿಯಾ ಮತ್ತು ಮೆಕ್ಸಿಕೊದಲ್ಲಿ ಹೆಚ್ಚಿನ ಸಕ್ಕರೆ ಬೆೆರೆಸಿದ ಜ್ಯೂಸ್, ಸಂಸ್ಕರಿಸಿದ ಆಹಾರ, ಧಾನ್ಯಗಳು ಪರಿಣಾಮ ಹೊಂದಿದೆ. ದಕ್ಷಿಣ ಏಷ್ಯಾ ಮತ್ತು ಸಬ್ ಸಹರನ್ ಆಫ್ರಿಕಾದಲ್ಲಿ ಟೈಪ್ 2 ಡಯಾಬಿಟೀಸ್ ಕಡಿಮೆ ಕಾಣಬಹುದು.
ಟೈಪ್ 2 ಡಯಾಬಿಟೀಸ್ ಜನರ ಆರೋಗ್ಯ, ಆರ್ಥಿಕತೆ, ಉತ್ಪಾದನೆ, ಆರೋಗ್ಯ ಕಾಳಜಿ ವ್ಯವಸ್ಥೆ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಲೇಖಕ ಮೇಘನ್ ಒ ಹಾರ್ನ್ ತಿಳಿಸಿದ್ದಾರೆ. ಈ ಅಧ್ಯಯನವು ಆರೋಗ್ಯಯುತ ಆಹಾರ ಪದ್ದತಿ ಆಯ್ಕೆಗೆ ಒತ್ತು ನೀಡುತ್ತದೆ.
ಇದನ್ನೂ ಓದಿ: ರಕ್ತದ ಸಕ್ಕರೆ ಅಣುಗಳ ಮೂಲಕ ಅಲ್ಝೈಮರ್ ಸಮಸ್ಯೆ ಪತ್ತೆ ಮಾಡಬಹುದು; ಅಧ್ಯಯನದಲ್ಲಿ ಬಹಿರಂಗ