ETV Bharat / sukhibhava

ಕಡಿಮೆ ದರದಲ್ಲಿ ಸಿಗುವ ಆಹಾರಗಳಿಂದ ಸದೃಢ  ಆರೋಗ್ಯ: ಇಲ್ಲಿದೆ ಇಂಟ್ರೆಸ್ಟಿಂಗ್​ ಮಾಹಿತಿ - ಡಯಟ್​ ಆಹಾರಗಳು

ಜಗತ್ತು ಹೆಚ್ಚು ಆರೋಗ್ಯ ಪ್ರಜ್ಞೆ ಹೊಂದುತ್ತಿದ್ದಂತೆ ಮಾನವರು ತಾವು ಏನು ಸೇವಿಸುತ್ತಾರೆ ಮತ್ತು ಅದು ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹೆಚ್ಚು ಜಾಗೃತರಾಗುತ್ತಿದ್ದಾರೆ. ನಾವು ಸೇವಿಸುವ ಆಹಾರವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಕಡಿಮೆ ದರದ ಏಳು ಉತ್ತಮ ಆಹಾರಗಳು ಇಲ್ಲಿವೆ ನೋಡಿ...

underrated foods that are great for you  Diet food  Healthy food  underrated foods list  underrated foods news  ಕಡಿಮೆ ದರದ ಆಹಾರಗಳು  ಕಡಿಮೆ ದರದ ಆಹಾರಗಳ ಪಟ್ಟಿ  ಡಯಟ್​ ಆಹಾರಗಳು  ಕಡಿಮೆ ದರದ ಆಹಾರಗಳ ಸುದ್ದಿ
ಕಡಿಮೆ ದರದ ಆಹಾರಗಳು ಇಲ್ಲಿವೆ
author img

By

Published : Jun 8, 2022, 12:57 PM IST

ಪ್ರತಿಯೊಂದು ಆಹಾರವು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಅವು ಬಹುತೇಕ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಉತ್ತಮ ಪೌಷ್ಟಿಕಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಲು ಯಾವ ರೀತಿಯ ಆಹಾರ ಸೇವಿಸಬೇಕು ಮತ್ತು ಕಡಿಮೆ ದರದಲ್ಲಿ ಉತ್ತಮ ಆಹಾರಗಳು ಯಾವುವು ಎಂಬುದು ತಿಳಿಯೋದಾದರೆ,

ಫೋರ್ಟಿಫೈಡ್ ಉಪ್ಪು: ವೈದ್ಯರು ಸೂಚಿಸುವವರೆಗೂ ನಿಮ್ಮ ಆಹಾರದಲ್ಲಿ ಉಪ್ಪು ಸೇವನೆ ನಿಲ್ಲಿಸುವುದು ಕೆಟ್ಟ ಕಲ್ಪನೆ. ಫೋರ್ಟಿಫೈಡ್ ಉಪ್ಪು ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಗಾಯಗಳನ್ನು ವೇಗವಾಗಿ ಗುಣಪಡಿಸಲು ಮತ್ತು ಉಸಿರಾಟದ ಸಮಸ್ಯೆ ವಿರುದ್ಧ ಹೋರಾಡಲು ಈ ಉಪ್ಪು ನಮ್ಮೆಲ್ಲರಿಗೆ ಸಹಾಯ ಮಾಡುತ್ತದೆ.

ಕುಂಬಳಕಾಯಿ ಬೀಜ: ಕುಂಬಳಕಾಯಿ ಬೀಜಗಳು ರುಚಿಕರವಾದ ಅಡಕೆ ಪರಿಮಳವನ್ನು ಹೊಂದಿರುತ್ತವೆ ಮತ್ತು ಕ್ಯಾರೊಟಿನಾಯ್ಡ್‌ಗಳಿಂದ ತುಂಬಿರುತ್ತವೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಈ ಬೀಜಗಳು ನಮ್ಮ ಜ್ಞಾಪಕಶಕ್ತಿ, ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಮಲದ ಹೂವಿನ ಬೀಜಗಳು: ಇವು ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲವಾಗಿದೆ. ಅವು ಮಧ್ಯಮವಾಗಿ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಆದರೆ, ಅವು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಆಹಾರವಾಗಿರುವುದರಿಂದ ದೇಹದಲ್ಲಿ ನಿಧಾನವಾಗಿ ಜೀರ್ಣವಾಗುತ್ತವೆ. ನೀವು ನಿಯಮಿತವಾಗಿ ಕಮಲದ ಬೀಜ ಸೇವಿಸಿದರೆ ಸ್ನಾಯುಗಳು ಬಲವಾಗಿರುತ್ತವೆ ಮತ್ತು ನೀವು ಫಿಟ್ ಆಗಿ ಕಾಣುತ್ತೀರಿ. ಏಕೆಂದರೆ ಈ ಆಹಾರವು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್​ಗಳಲ್ಲಿ ಸಮೃದ್ಧವಾಗಿದೆ.

ಓದಿ: ಎತ್ತರವಿದ್ದರೆ ಚರ್ಮದ ಸೋಂಕು, ನರ ದೌರ್ಬಲ್ಯದ ಅಪಾಯ ಹೆಚ್ಚು: ಅಧ್ಯಯನ

ಕಡಲೆಕಾಯಿ: ಶೇಂಗಾ ಬೀಜಗಳು ಹಲವಾರು ರೀತಿಯಲ್ಲಿ ಆರೋಗ್ಯಕರವಾಗಿವೆ. ಇದರ ಪ್ರಯೋಜನಗಳನ್ನು ಪಡೆಯಲು ಪ್ರತಿ ಎರಡು ಮೂರು ದಿನಕ್ಕೊಮ್ಮೆ ಹತ್ತರಿಂದ ಹದಿನೈದು ಬೀಜಗಳನ್ನು ಸೇವಿಸಿದರೂ ಸಾಕಾಗುತ್ತದೆ. ಕಡಲೆಕಾಯಿ ಉತ್ತಮ ಗುಣಮಟ್ಟದ ಪ್ರೋಟೀನ್‌ನ ಅಗ್ಗದ ಮೂಲವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಮೂವತ್ತು ಗ್ರಾಂಗಳು ನಿಮಗೆ ಸುಮಾರು 160 ಕ್ಯಾಲೊರಿಗಳನ್ನು ಮತ್ತು ಏಳು ಗ್ರಾಂ ಪ್ರೊಟೀನ್ ನೀಡುತ್ತದೆ. ಕಡಲೆಕಾಯಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವಯಸ್ಸಾಗುವುದನ್ನು ವಿಳಂಬಗೊಳಿಸುತ್ತದೆ.

ವಾಟರ್​ ಚೆಸ್ಟ್‌ನಟ್‌: ವಾಟರ್​ ಚೆಸ್ಟ್​ನಟ್​ ಇದೊಂದು ಪಿಷ್ಟ ರೂಪದ ತರಕಾರಿ. ಇದನ್ನು ಚಳಿಗಾಲದಲ್ಲಿ ತಿನ್ನಲು ತುಂಬ ಚೆನ್ನಾಗಿರುತ್ತದೆ. ಇದು ತಿನ್ನಲು ಎಷ್ಟು ರುಚಿಕರವಾಗಿರತ್ತದೆಯೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು. ಇದರ ಸೇವನೆಯಿಂದ ಅದೆಷ್ಟೋ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ವಾಟರ್​ ಚೆಸ್ಟ್​​ನಟ್​ನಲ್ಲಿ ಕಡಿಮೆ ಕ್ಯಾಲೊರಿ ಇದ್ದು ಇದು ಪ್ರೊಟೀನ್, ಪೊಟಾಶಿಯಮ್, ಕಾಪರ್, ವಿಟಮಿನ್ ಬಿ6 ಮತ್ತು ರೈಬೊಪ್ಲೊವಿನ್ ನಂತಹ ಪೋಷಕ ತತ್ವಗಳನ್ನು ಒಳಗೊಂಡಿದೆ.

ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದೆ. ಇದು ಹೆಚ್ಚಿನ ಸಮಯದ ತನಕ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹಾಗಾಗಿ ಬೇಗ ಹಸಿವಾಗುವುದಿಲ್ಲ. ಇದರಿಂದ ತೂಕ ಕೂಡ ಇಳಿಯುತ್ತದೆ. ಈ ಹಣ್ಣು ವ್ಯಕ್ತಿಯ ಬ್ಲಡ್ ಪ್ರೆಶರ್ ಮತ್ತು ಕೊಲಾಸ್ಟ್ರಾಲ್​ನ ಪ್ರಮಾಣವನ್ನು ಸುಸ್ಥಿತಿಯಲ್ಲಿಡುತ್ತದೆ. ಇದರಲ್ಲಿರುವ ಪೊಟಾಷಿಯಂ ಹಾರ್ಟ್​​ ಅಟ್ಯಾಕ್ ಆಗುವ ಸಂಭವವನ್ನು ಕಡಿಮೆ ಮಾಡುತ್ತದೆ. ವಾಟರ್​ ಚೆಸ್ಟ್​​ನಟ್ ಅನ್ನು ತಿನ್ನುವುದರಿಂದ ದಣಿವು, ನಿಶ್ಶಕ್ತಿ ಸೇರಿದಂತೆ ಮುಂತಾದ ತೊಂದರೆಗಳು ದೂರವಾಗುತ್ತದೆ.

ಸಟ್ಟು: ಸಟ್ಟು (ಹುರಿದ ಬೇಳೆ ಹಿಟ್ಟು) ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಉತ್ತಮ ಗುಣಮಟ್ಟದ ಪ್ರೋಟೀನ್‌ನ ಅದ್ಭುತ ಮೂಲವಾಗಿದೆ. ಬಹಳಷ್ಟು ಫೈಬರ್ ಹೊಂದಿದ್ದು, ಅದರಲ್ಲಿ ಹೆಚ್ಚಿನದು ಕರಗದ ಫೈಬರ್ ಆಗಿದೆ. ಇದು ನಮ್ಮ ಕರುಳಿಗೆ ಉತ್ತಮವಾಗಿದೆ ಮತ್ತು ಹೊಟ್ಟೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಗ್ಯಾಸ್, ಅಸಿಡಿಟಿ ಮತ್ತು ಮಲಬದ್ಧತೆಯಿಂದ ಬಳಲುತ್ತಿರುವವರಿಗೂ ಇದು ಅದ್ಭುತ ಆಹಾರವಾಗಿದೆ.

ಆಮ್ಲ: ಆಮ್ಲವನ್ನು ವಿಟಮಿನ್ ಸಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದಲ್ಲದೆ, ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಕಾರ್ಬೋಹೈಡ್ರೇಟ್, ಆಂಟಿ - ಆಕ್ಸಿಡೆಂಟ್ ಗಳು ಮತ್ತು ಫೈಬರ್‌ನ ಗುಣಲಕ್ಷಣಗಳು ಆಮ್ಲದಲ್ಲಿ ಕಂಡುಬರುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆಮ್ಲ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು, ದೇಹವನ್ನು ಅನೇಕ ಸೋಂಕುಗಳಿಂದ ದೂರವಿಡಬಹುದು ಮತ್ತು ತೂಕವನ್ನು ಕಡಿಮೆ ಮಾಡಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.