ETV Bharat / sukhibhava

ಸಸ್ಯಾಹಾರಿಗಳಿಗೆ ಸ್ವಾದಿಷ್ಟ ಆಹಾರದ ಪಾಕ.. ಒಂದ್ಸಲ ಟ್ರೈ ಮಾಡಿ ರುಚಿ ನೋಡಿ - ಟಿಕ್ಕಾ ಮಸಾಲಾ ಗ್ರೇವಿ

ಮಾಂಸಾಹಾರಿಯಿಂದ ಸಸ್ಯಾಹಾರಿಗಳಾದರೆ ಅಂತಹ ರುಚಿಭರಿತ ಆಹಾರ ಮಿಸ್​ ಮಾಡಿಕೊಳ್ಳುತ್ತೇವೆ ಎಂಬ ಚಿಂತೆಯೇ. ಆ ಚಿಂತೆ ಬೇಡ, ನೀವು ಸಸ್ಯಾಹಾರಿಗಳಾಗಿಯೂ ಸ್ವಾದಿಷ್ಟ ಆಹಾರವನ್ನು ನಿಮ್ಮ ನಾಲಿಗೆ ಸವಿಯಲು ಇಲ್ಲಿದೆ ನೋಡಿ ರೆಸಿಪಿ...

3 vegan recipes worth trying
ಸಸ್ಯಾಹಾರಿಗಳಿಗೆ ಸ್ವಾಧಿಷ್ಟ ಆಹಾರದ ಪಾಕ
author img

By

Published : Oct 5, 2022, 7:14 PM IST

ಮಾಂಸ ರಹಿತ ಆಹಾರ ಸೇವನೆ ತೂಕ ಇಳಿಕೆಗೆ ಸಹಾಯ ಮಾಡುವುದಲ್ಲದೇ ಹೃದ್ರೋಗದ ವಿರುದ್ಧವೂ ರಕ್ಷಣೆ ನೀಡುತ್ತದೆ. ಇದರ ಜೊತೆಗೆ ಪರಿಸರ ಸಂರಕ್ಷಣೆಯಂತಹ ಪ್ರಯೋಜನಗಳೂ ಇವೆ. ಸಸ್ಯಾಹಾರಿಗಳು ಎದುರಿಸುತ್ತಿರುವ ಪ್ರಮುಖ ಸವಾಲು ಎಂದರೆ ಮಾಂಸಾಹಾರಿ ಪ್ರೋಟೀನ್ ಆಹಾರವನ್ನು ತ್ಯಜಿಸುವುದರಿಂದ ಅವುಗಳಿಂದ ದೊರೆಯುವ ಪ್ರೋಟೀನ್​ ಮುಂದೆ ಸರಿದೂಗಿಸಿಕೊಳ್ಳುವುದು ಹೇಗೆ ಎಂಬುದು. ಚಿಂತಿಸಬೇಡಿ...

3 vegan recipes worth trying
ವೆಗಾನ್ ಹ್ಯಾಮ್ ಮತ್ತು ಬೀನ್ ಸ್ಟ್ಯೂ

ಮಾಂಸಾಹಾರಿಗಳನ್ನೂ ಸಹ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಗಳನ್ನಾಗಿ ಮಾಡುವಂತಹ ಆರೋಗ್ಯಕರ ಪಾಕ ವಿಧಾನಗಳು ಇಲ್ಲಿವೆ. ನಿಮ್ಮ ನಿರ್ಧಾರದಿಂದಾಗಿ ಪಾಕಗಳಿಗಾಗಿ ನೀವು ಅಲೆದಾಡುತ್ತಿದ್ದರೆ, ನಿಲ್ಲಿ, ಬಾಣಸಿಗ ನಿಖಿಲ್​ ಬೇಂದ್ರೆ ಅವರು ಬಾಯಲ್ಲಿ ನೀರೂರಿಸುವಂತಹ ಆರೋಗ್ಯಕರ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ಸಸ್ಯಹಾರಿ ಹಾದಿಯಲ್ಲಿ ಸಾಗುತ್ತಿರುವ ನಿಮಗೆ ಇದು ಖಂಡಿತವಾಗಿಯೂ ಸಹಾಯ ಮಾಡುತ್ತವೆ.

3 vegan recipes worth trying
ಗರಿಗರಿಯಾದ ಹೂಕೋಸು ವಿಂಗ್ಸ್​

1. ಪನೀರ್​ ಟಿಕ್ಕಾ ಮಸಾಲಾ - ಹಸಿವು ಹೆಚ್ಚಿಸುವ, ರುಚಿಕರ ಮತ್ತು ಆರೋಗ್ಯಕರ ಪಾಕವಿಧಾನ

ಬೇಕಾಗುವ ಸಾಮಾಗ್ರಿಗಳು: 2 ಬ್ಲಾಕ್ ಗಟ್ಟಿಯಾದ ಪನೀರ್​, 2 ಚಮಚ ತಂದೂರಿ ಟಿಕ್ಕಾ ಮಸಾಲಾ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2 ಚಮಚ ಎಣ್ಣೆ, 1 ಕೆಜಿ ಟೊಮೆಟೊ (ಸರಿಸುಮಾರು ಕತ್ತರಿಸಿದ), 100 ಗ್ರಾಂ ಗೋಡಂಬಿ, 20 ಗ್ರಾಂ ಬೆಳ್ಳುಳ್ಳಿ, 30 ಗ್ರಾಂ ಶುಂಠಿ, 3 ಲವಂಗ, 3 ಹಸಿರು ಏಲಕ್ಕಿ, 9 ಕರಿಮೆಣಸು, 500 ಮಿಲಿ ನೀರು, 2 ಈರುಳ್ಳಿ (ಸಣ್ಣದಾಗಿ ಕೊಚ್ಚಿದ), 2 tbsp ಶುಂಠಿ-ಬೆಳ್ಳುಳ್ಳಿ ಪೇಸ್ಟ್. ಇದೆಲ್ಲವನ್ನು ತಯಾರಾಗಿಟ್ಟುಕೊಂಡರೆ ಅರ್ಧ ಗಂಟೆಯಲ್ಲಿ ಪನೀರ್​ ಟಿಕ್ಕಾ ಮಸಾಲಾ ತಯಾರು.

3 vegan recipes worth trying
ಪನೀರ್​ ಟಿಕ್ಕಾ ಮಸಾಲಾ

ಮ್ಯಾರಿನೇಡ್ ಪನೀರ್​ ಟಿಕ್ಕಾ ತಯಾರಿಸುವ ವಿಧಾನ: ಪನೀರ್​ ಬ್ಲಾಕ್​ಗಳನ್ನು ಸರಿಸುಮಾರು 1-ಇಂಚಿನ ತುಂಡುಗಳಾಗಿ ಕತ್ತರಿಸಿ. ಮ್ಯಾರಿನೇಟ್ ಮಾಡಲು - ತಂದೂರಿ ಟಿಕ್ಕಾ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಎಣ್ಣೆಯನ್ನು ಪ್ರತ್ಯೇಕ ಬಟ್ಟಲಿನಲ್ಲಿ ಮಿಶ್ರಣ ಮಾಡಿ ಮತ್ತು ನಯವಾದ ಸ್ಥಿರತೆಯ ಪೇಸ್ಟ್ ರೂಪಿಸಲು ಚೆನ್ನಾಗಿ ಮಿಶ್ರಣ ಮಾಡಿ. ಪನೀರ್​ ಗೆ ಚೆನ್ನಾಗಿ ಮಿಶ್ರಣ ಲೇಪಿಸಿ ಮ್ಯಾರಿನೇಶನ್ ಮಾಡಿ, ಅದನ್ನು 2 ಗಂಟೆಗಳ ಕಾಲ ಶೈತ್ಯೀಕರಣಗೊಳಿಸಿ.

ಒಲೆ ಮೊದಲೇ 200 C ನಷ್ಟು ಕಾಯಿಸಿಡಿ, ರೆಫ್ರಿಜಿರೇಟರ್​ನಿಂದ ಮ್ಯಾರಿನೇಡ್​​ ಮಾಡಿದ ಪನೀರ್​ ತೆಗೆದು ಅವುಗಳನ್ನು ಲೋಹದ ಮತ್ತು ಮರದ ಕಡ್ಡಿಗಳಲ್ಲಿ ಓರೆಯಾಗಿ ಹಾಕಿಡಿ. ಬೇಕಿಂಗ್ ಟ್ರೇ ತೆಗೆದುಕೊಂಡು ಮೇಲ್ಮೈ ಚೆನ್ನಾಗಿ ಗ್ರೀಸ್ ಮಾಡಿ. ಸ್ಕೀವರ್​ಗಳನ್ನು ಟ್ರೇ ಮೇಲೆ ಇರಿಸಿ ಮತ್ತು ಸುಟ್ಟು ಕ್ರಸ್ಟ್ ರೂಪುಗೊಳ್ಳುವವರೆಗೆ 10 ರಿಂದ 15 ನಿಮಿಷಗಳ ಕಾಲ ಅದನ್ನು ಓವೆನ್​ನಲ್ಲೇ ಇಡಿ. ಸುಂದರವಾಗಿ ಸುಟ್ಟ ಪನೀರ್​ನ್ನು ಹೊರತೆಗೆಯಿರಿ ಮತ್ತು ಅದನ್ನು ತಣ್ಣಗಾಗಲು ಬಿಡಿ.

ಟಿಕ್ಕಾ ಮಸಾಲಾ ಗ್ರೇವಿ ಮಾಡುವ ವಿಧಾನ: ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಗೋಡಂಬಿ ಮತ್ತು ಸಂಪೂರ್ಣ ಮಸಾಲೆಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ, ನೀರು ಹಾಕಿ ಪಾತ್ರೆಯನ್ನು ಮಧ್ಯಮ ಉರಿಯಲ್ಲಿ ಇರಿಸಿ. ಗೋಡಂಬಿ ಸಂಪೂರ್ಣವಾಗಿ ಮೃದುವಾಗುವವರೆಗೆ ಕುದಿಯಲು ಬಿಡಿ. ಗೋಡಂಬಿ ಸಂಪೂರ್ಣವಾಗಿ ಮೃದುವಾದ ನಂತರ, ಸ್ಟೌವ್​ನಿಂದ ಪಾತ್ರೆಯನ್ನು ತೆಗೆದಿರಿಸಿ, ಅದನ್ನು ತಣ್ಣಗಾಗಲು ಬಿಡಿ. ಸಂಪೂರ್ಣವಾಗಿ ತಣ್ಣಗಾಗಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಮಿಶ್ರಣ ಸಂಪೂರ್ಣ ತಣ್ಣಗಾದ ಅದನ್ನು ಅಗತ್ಯವಿದ್ದಷ್ಟು ನೀರು ಸದೇರಿಸಿ ನಯವಾವಾಗಿ ರುಬ್ಬಿ ಮಿಶ್ರಣ ತಯಾರಿಸಿಕೊಳ್ಳಿ. ಅದು ಸಂಪೂರ್ಣವಾಗಿ ಮಿಶ್ರಣವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ಸವಿಯಲು ಅಹಿತಕರವಾಗಬಹುದು.

ಪನೀರ್​ ಟಿಕ್ಕಾ ಮಸಾಲಾ ತಯಾರಿ ವಿಧಾನ: ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ. ನೀರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಪೇಸ್ಟ್ ಸೇರಿಸಿದ ನಂತರ ಅದು ಬೇಯುವವರೆಗೆ ಎರಡು ನಿಮಿಷಗಳ ಕಾಲ ಕೈಯ್ಯಾಡಿಸುತ್ತಲೇ ಇರಿ. ಪೇಸ್ಟ್ನ ಹಸಿ ವಾಸನೆ ಹೋಗಿ ಬೆಂದಿದೆ ಎಂದಾಗ ತಂದೂರಿ ಟಿಕ್ಕಾ ಮಸಾಲವನ್ನು ಸೇರಿಸಿ, 1-2 ನಿಮಿಷಗಳ ಕಾಲ ಬೆರೆಸಿ, ಮತ್ತು ಮಸಾಲೆಯ ರುಚಿಕರವಾದ ಪರಿಮಳ ಘಮ್ಮೆನ್ನುತ್ತದೆ.

ಆಗ ಮಿಶ್ರಿತ ಗ್ರೇವಿಯನ್ನು ಸೇರಿಸಿ ಮತ್ತು ಆ ಸಾಸ್​ನಿಂದ್​ ಎಣ್ಣೆ ಹೊರಹೋಗುವವರೆಗೆ 10 ರಿಂದ 15 ನಿಮಿಷಗಳ ಕಾಲ ಕಡಿಮೆ ಶಾಖದಲ್ಲಿ ಕೈಯ್ಯಾಡಿಸುತ್ತಾ ಇರಿ. ಗ್ರೇವಿ ದಪ್ಪವಾಗಿದ್ದರೆ, ಸ್ವಲ್ಪ ನೀರನ್ನು ಸೇರಿಸಿ ಮತ್ತು ನೀರು ಕುದಿಯುವವರೆಗೆ ಬೇಯಿಸಬಹುದು. ಪಾಕ ಬೆಂದಿದೆಯೇ ಎಂದು ರುಚಿ ನೋಡಿ ತಿಳಿದುಕೊಳ್ಳಿ. ಬೆಂದಿಲ್ಲ ಎಂದರೆ ಮತ್ತೆ 5 ನಿಮಿಷಗಳ ಕಾಲ ಕುದಿಯಲು ಬಿಡಿ. ಗ್ರೇವಿ ಸಂಪೂರ್ಣವಾಗಿ ಬೇಯಿಸಿದ ನಂತರ, ಮ್ಯಾರಿನೇಡ್ ಮಾಡಿಟ್ಟ ಪನೀರ್​ ಪೀಸ್​ಗಳನ್ನು ಗ್ರೇವಿಗೆ ಸೇರಿಸಿ. ಈ ಪಾಕವನ್ನು ರುಚಿಕರವಾದ ಬಟರ್​ ನಾನ್ ಮತ್ತು ಬಿಳಿ ಬಾಸ್ಮತಿ ರೈಸ್​ನೊಂದಿಗೆ ಸವಿಯಲು ರುಚಿಯಾಗಿರುತ್ತದೆ.

ದೊರೆಯುವ ಪೌಷ್ಠಿಕಾಂಶ: 200 ಗ್ರಾಂನಷ್ಟು ಈ ಆಹಾರದಿಂದ, 294 ಕೆ.ಕೆ.ಎಲ್ ಕ್ಯಾಲೋರಿಗಳು, 27 ಗ್ರಾಂ ಕಾರ್ಬೋಹೈಡ್ರೇಟ್ಸ್​, 8 ಗ್ರಾಂ ಪ್ರೋಟೀನ್, 19 ಗ್ರಾಂ ಕೊಬ್ಬು, 3 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, 4 ಗ್ರಾಂ ಪಾಲ್ಯುನ್​ಸ್ಟ್ಯಾಚ್ಯುರೇಟೆಡ್ ಕೊಬ್ಬು, 10 ಗ್ರಾಂ ಮೊನೊಸಾಚುರೇಟೆಡ್ ಕೊಬ್ಬು, 1 ಗ್ರಾಂ ಟ್ರಾನ್ಸ್ ಕೊಬ್ಬು, 90 ಸೋಡಿಯಂ, 30 ಗ್ರಾಂ ಪೊಟಾಸ್ಸಿಯಂ, 6 ಗ್ರಾಂ ಫೈಬರ್, 11 ಗ್ರಾಂ ಸಕ್ಕರೆ, 2086 ಐಯು ವಿಟಮಿನ್ ಎ, 41 ಮಿಗ್ರಾಂ ವಿಟಮಿನ್ ಸಿ, 69 ಮಿಗ್ರಾಂ ಕ್ಯಾಲ್ಸಿಯಂ, 3 ಮಿಗ್ರಾಂ ಕಬ್ಬಿಣಾಂಶ ನಮ್ಮ ಪಾಲಾಗುತ್ತದೆ.

ಗರಿಗರಿಯಾದ ಹೂಕೋಸು ವಿಂಗ್ಸ್​ - ಕೊರಿಯನ್ BBQ ಸಾಸ್‌ನಲ್ಲಿ ಅದ್ದಿದ ಸಂಪೂರ್ಣ ಬೆಂದ ಹೂಕೋಸು ಸವಿ:

3 vegan recipes worth trying
ಗರಿಗರಿಯಾದ ಹೂಕೋಸು ವಿಂಗ್ಸ್​

ಬೇಕಾಗುವ ಪದಾರ್ಥಗಳು: 1 ಹೂಕೋಸು (ದೊಡ್ಡ ಹೂಗೊಂಚಲುಗಳಾಗಿ ಕತ್ತರಿಸಿ), 1 ಕಪ್ ಅಕ್ಕಿ ಹಿಟ್ಟು, 1/2 ಕಪ್ ಕಾರ್ನ್​ ಸ್ಟಾರ್ಚ್, 1/2 ಕಪ್ 00 ಪಿಜ್ಜಾ ಹಿಟ್ಟು (ಸ್ಥಳೀಯವಾಗಿ ಲಭ್ಯವಿಲ್ಲದಿದ್ದರೆ Amazon ನಿಂದ ಖರೀದಿಸಿ), 1 ಕಪ್ ನೀರು (ಅಗತ್ಯವಿದ್ದಲ್ಲಿ ಇನ್ನಷ್ಟು ಸೇರಿಸಿ) , ಉಪ್ಪು ಮತ್ತು ಮೆಣಸು (ರುಚಿಗೆ), ಹುರಿಯಲು ಎಣ್ಣೆ, ಬಾಂಬ್ ಬೇ ಮಸಾಲೆ (ರುಚಿಗೆ ತಕ್ಕಂತೆ ಸೇರಿಸಿ ), ಕೊರಿಯನ್ BBQ ಸಾಸ್.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಉಪ್ಪುಸಹಿತ ನೀರನ್ನು ಕುದಿಸಿ, ಹೂಕೋಸು ಹೂಗಳನ್ನು ಸೇರಿಸಿ ಮತ್ತು 5 ರಿಂದ 6 ನಿಮಿಷಗಳ ಕಾಲ ನೀರಿನಲ್ಲಿ ಬೇಯಿಸಿ. ಅದು ಮೆತ್ತಗಾಗದಂತೆ ನೋಡಿಕೊಳ್ಳಿ. ಹೂಕೋಸು ಬೇಯಿಸಿದ ನಂತರ, ಅದನ್ನು ಟ್ರೇಗೆ ವರ್ಗಾಯಿಸಿ ಮತ್ತು ಅದು ಸಂಪೂರ್ಣವಾಗಿ ತಣ್ಣಗಾಗುವವರೆಗೆ ರೆಫ್ರಿಜರೇಟರ್ನಲ್ಲಿ ಇರಿಸಿ. ಹಿಟ್ಟಿಗಾಗಿ - ಒಂದು ಬಟ್ಟಲಿನಲ್ಲಿ, ಅಕ್ಕಿ ಹಿಟ್ಟು, ಕಾರ್ನ್​ ಸ್ಟ್ಯಾರ್ಚ್​, 00" ಹಿಟ್ಟು, ಮತ್ತು ಉಪ್ಪು ಮತ್ತು ಕಾಳುಮೆಣಸನ್ನು ನೀರಿನೊಂದಿಗೆ ಬೆರೆಸಿ ಹಿಟ್ಟನ್ನು ತಯಾರಿಸಿ. ಹಿಟ್ಟಿನ ಉಂಡೆಗಳಿಲ್ಲದೆ, ಚೆನ್ನಾಗಿ ಮಿಶ್ರಣವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಹಿಟ್ಟಿನ ಸ್ಥಿರತೆ ದಪ್ಪವಾಗಿರಬೇಕು. ಹೂಕೋಸನ್ನು ಹಿಟ್ಟಿನಲ್ಲಿ ಅದ್ದಿ ನಂತರ ಪಾಂಕೊ ಕ್ರಂಬ್ಸ್‌ನಲ್ಲಿ ಹೊರಳಿಸಿ, ಎಣ್ಣೆಯನ್ನು ಬಿಸಿ ಮಾಡಿ ಮತ್ತು ಹೂಕೋಸುಗಳನ್ನು ಮಧ್ಯಮ ಬಿಸಿಯಲ್ಲಿ ಗೋಲ್ಡನ್ ಬಣ್ಣ ಮತ್ತು ಗರಿಗರಿಯಾಗುವವರೆಗೆ ಫ್ರೈ ಮಾಡಿ. ಕರಿದ ಹೂಕೋಸಿನ ಮೇಲೆ ಬಾಂಬ್ ಬೇ ಮಸಾಲೆ ಸಿಂಪಡಿಸಿ, ಕೊರಿಯನ್ BBQ ಸಾಸ್‌ನೊಂದಿಗೆ ಡಿಪ್​ ಮಾಡಿ ಸವಿಯಬಹುದು.

ದೊರೆಯುವ ಪೋಷಕಾಂಶ: 50 ಗ್ರಾಂ ಕರಿದ ಹೂಸಿನಲ್ಲಿ 973 ಕೆ.ಕೆ.ಎಲ್ ಕ್ಯಾಲೋರಿಗಳು, 215 ಗ್ರಾಂ ಕಾರ್ಬೋಹೈಡ್ರೇಟ್​ಗಳು, 21 ಗ್ರಾಂ ಪ್ರೋಟೀನ್, 4 ಗ್ರಾಂ ಕೊಬ್ಬು, 1 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, 1 ಗ್ರಾಂ ಪಾಲ್ಯುನ್​ಸ್ಯಾಚ್ಯುರೇಟೆಡ್​ ಕೊಬ್ಬು, 1 ಗ್ರಾಂ ಮೊನೊಸಾಚುರೇಟೆಡ್ ಕೊಬ್ಬು, 190 ಮಿಗ್ರಾಂ ಸೋಡಿಯಂ, 1843 ಮಿಗ್ರಾಂ ಪೊಟ್ಯಾಸಿಯಮ್, 16 ಗ್ರಾಂ ಫೈಬರ್​, 11 ಗ್ರಾಂ ಶುಗರ್​, 277 ಮಿಗ್ರಾಂ ವಿಟಮಿನ್ ಸಿ, 151 ಮಿಗ್ರಾಂ ಕ್ಯಾಲ್ಸಿಯಂ, 3 ಮಿಗ್ರಾಂ ಕಬ್ಬಿಣಾಂಶ.

3. ವೆಗಾನ್ ಹ್ಯಾಮ್ ಮತ್ತು ಬೀನ್ ಸ್ಟ್ಯೂ - ತ್ವರಿತ ರುಚಿಕರವಾದ, ಆರೋಗ್ಯಕರ ಊಟ

3 vegan recipes worth trying
ವೆಗಾನ್ ಹ್ಯಾಮ್ ಮತ್ತು ಬೀನ್ ಸ್ಟ್ಯೂ

ಬೇಕಾಗುವ ಪದಾರ್ಥಗಳು: 2 tbsp ರೆಡೊರೊ ಆಲಿವ್ ಎಣ್ಣೆ, 4 ಲವಂಗ, ಬೆಳ್ಳುಳ್ಳಿ (ಕೊಚ್ಚಿದ), 1 ಈರುಳ್ಳಿ (ಸಣ್ಣದಾಗಿ ಕೊಚ್ಚಿದ), 1 ಬೇ ಎಲೆ, 1/2 ಕಪ್ ಸೆಲರಿ (ಸಣ್ಣದಾಗಿ ಕೊಚ್ಚಿದ), 1 ಟೀಸ್ಪೂನ್ ಮಿಶ್ರ ಗಿಡಮೂಲಿಕೆಗಳು, 1 ದೊಡ್ಡ ಆಲೂಗೆಡ್ಡೆ, 2 ಕ್ಯಾನ್‌ ಕಿಡ್ನಿ ಬೀನ್ಸ್ (ಸ್ಟ್ರೈನ್ಡ್), ಸಸ್ಯಾಹಾರಿ ಮಾಂಸದ 2 ಪ್ಯಾಕೆಟ್‌ಗಳು, 1 ಕ್ಯಾನ್ ಸಿಪ್ಪೆ ಸುಲಿದ ಟೊಮೆಟೊಗಳ ಜ್ಯೂಸ್‌, 1 tbsp ಸಸ್ಯಾಹಾರಿ ಚಿಕನ್ ಬೌಲನ್ ಪೌಡರ್ (ಸ್ಥಳೀಯವಾಗಿ ಲಭ್ಯವಿಲ್ಲದಿದ್ದರೆ Amazon ನಿಂದ ಖರೀದಿಸಿ), 3 ಕಪ್ ನೀರು, 1 tbsp ತಾಜಾ ಕೊತ್ತಂಬರಿ ಎಲೆಗಳು (ಸಣ್ಣದಾಗಿ ಕೊಚ್ಚಿದ).

ತಯಾರಿಸುವ ವಿಧಾನ: ದೊಡ್ಡ ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ, ಕೊಚ್ಚಿದ ಬೆಳ್ಳುಳ್ಳಿ, ನುಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಸುವಾಸನೆಯ ಬೇ ಎಲೆ ಸೇರಿಸಿ ಹದ ಬೇಯುವ ತನಕ 2 ನಿಮಿಷ ಬೇಯಿಸಿ. ಪರಿಮಳವನ್ನು ಹೆಚ್ಚಿಸಲು ಸೆಲರಿ ಸೇರಿಸಿ. ಸೆಲರಿ ಮಿಶ್ರಣ ಮಾಡಿದ ನಂತರ, ಮಿಶ್ರ ಗಿಡಮೂಲಿಕೆಗಳನ್ನು ಸೇರಿಸಿ ಮತ್ತು ಎರಡು ನಿಮಿಷ ಬೇಯಿಸಿ. ಚೌಕವಾಗಿರುವ ಆಲೂಗಡ್ಡೆ, ಸೋಸಿದ ಕಿಡ್ನಿ ಬೀನ್ಸ್ ಮತ್ತು ಸಸ್ಯಾಹಾರಿ ಮಾಂಸವನ್ನು ಸೇರಿಸಿ.

ಚೆನ್ನಾಗಿ ಬೆರೆಸಿ ಆದ್ದರಿಂದ ಎಲ್ಲಾ ಆಲೂಗಡ್ಡೆ, ಬೀನ್ಸ್ ಮತ್ತು ಮಾಂಸವನ್ನು ಸಂಪೂರ್ಣವಾಗಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಬೇಯಲು ಬಿಡಿ. ನಂತರ ಸಿಪ್ಪೆ ಸುಲಿದ ಟೊಮೆಟೊಗಳ ರಸ, ಚಿಕನ್ ಬೌಲನ್ ಪುಡಿ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 10 ರಿಂದ 12 ನಿಮಿಷಗಳ ಕಾಲ ನಿಧಾನವಾದ ಶಾಖದಲ್ಲಿ ಕುದಿಯಲು ಬಿಡಿ. ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಸ್ವಲ್ಪ ಬೆಚ್ಚಗಿನ ಸುಟ್ಟ ಬ್ರೆಡ್‌ನೊಂದಿಗೆ ಸ್ಟ್ಯೂ ಅನ್ನು ಆನಂದಿಸಿ!

ಪೌಷ್ಠಿಕಾಂಶಗಳು: 200 ಗ್ರಾಂ ಆಹಾರದಲ್ಲಿ, 90 ಕೆ.ಕೆ.ಎಲ್ ಕ್ಯಾಲೋರಿಗಳು, 20 ಗ್ರಾಂ ಕಾರ್ಬೋಹೈಡ್ರೇಟ್​ಗಳು, 3 ಗ್ರಾಂ ಪ್ರೋಟೀನ್, 1 ಗ್ರಾಂ ಕೊಬ್ಬು, 1 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, 1 ಗ್ರಾಂ ಪಾಲ್ಯುನ್​ಸಾಚುರೇಟೆಡ್ ಕೊಬ್ಬು, 1 ಗ್ರಾಂ ಮೊನೊಸಾಚುರೇಟೆಡ್ ಕೊಬ್ಬು, 1 ಮಿಗ್ರಾಂ ಕೊಲೆಸ್ಟ್ರಾಲ್, 29ಗ್ರಾಂ ಸೋಡಿಯಂ, 478 ಗ್ರಾಂ ಪೊಟ್ಯಾಷಿಯಂ, 3 ಗ್ರಾಂ ಫೈಬರ್​, 2 ಗ್ರಾಂ ಸಕ್ಕರೆ, 70 ಐಯು ವಿಟಮಿನ್ ಎ, 22 ಮಿಗ್ರಾಂ ವಿಟಮಿನ್ ಸಿ, 34 ಮಿಗ್ರಾಂ ಕ್ಯಾಲ್ಸಿಯಂ, 1 ಮಿಗ್ರಾಂ ಕಬ್ಬಿಣಾಂಶ ನಿಮ್ಮ ಪಾಲಾಗುತ್ತದೆ.

ಉತ್ತಮ ಯೋಜಿತ ಮತ್ತು ಸಮತೋಲಿತ ಸಸ್ಯಾಹಾರಿ ಆಹಾರವು ಸಾಕಷ್ಟು ಪೋಷಣೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆದ್ದರಿಂದ, ನೀವು ಸಸ್ಯಾಹಾರಿಯಾಗುವುದರಿಂದ ರುಚಿಕರವಾದ ಆಹಾರಗಳಿಂದ ವಂಚಿತರಾಗಬೇಕು ಎಂದು ಚಿಂತಿಸಬೇಕಿಲ್ಲ. ಸಸ್ಯಾಹಾರಿಯಾಗಿಯೂ ಆಹಾರದ ರುಚಿಯನ್ನು ಸವಿಯಲು ನಿಮಗೆ ಹಲವಾರು ಅವಕಾಶಗಳಿವೆ.

ಇದನ್ನೂ ಓದಿ: ಇಷ್ಟವಿಲ್ಲದ ಆಹಾರ ಹೊಟ್ಟೆಯಲ್ಲೇ ತಿರಸ್ಕರಿಸುವ ಭ್ರೂಣ..ಅಮ್ಮ ತಿನ್ನಬೇಕು ಕಂದ ಮೆಚ್ಚುವ ಊಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.