ETV Bharat / state

ಪತ್ನಿಯೊಂದಿಗೆ ಅನೈತಿಕ ಸಂಬಂಧವಿದ್ದ ಯುವಕನನ್ನು ಕೊಲೆಗೈದ ಪತಿ: ಬೈಕ್​ ಅಪಘಾತದಲ್ಲಿ ವ್ಯಕ್ತಿ ಸಾವು - Yadgiri Crime News

ವಿವಿಧ ಪ್ರಕರಣಗಳಡಿ ಯಾದಗಿರಿಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ಕೊಲೆಗೀಡಾದರೆ ಮತ್ತೋರ್ವ ಬೈಕ್​ ಮತ್ತು ಲಾರಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

YDR crime news
YDR crime news
author img

By

Published : Sep 5, 2022, 7:25 PM IST

ಯಾದಗಿರಿ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನೊಬ್ಬನನ್ನು ಆಕೆಯ ಪತಿಯೇ ಕೊಲೆ ಮಾಡಿರುವ ಘಟನೆ ಯಾದಗಿರಿ ತಾಲೂಕಿನ ಕಡೇಚೂರ್ ಬಳಿ ಭಾನುವಾರ ನಡೆದಿದೆ. ಸಿದ್ದಪ್ಪ(25) ಕೊಲೆಯಾದ ಯುವಕ. ನಾಗರಾಜ್ ಕೊಲೆ ಮಾಡಿದ ಆರೋಪಿ. ಘಟನೆಯು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಶಹಾಪುರ‌ ತಾಲೂಕಿನ ಬೋಳಾರಿ ನಿವಾಸಿಯಾಗಿರುವ ಸಿದ್ದಪ್ಪ ಮತ್ತು ನಾಗರಾಜ್​ ಪತ್ನಿ ಬೆಂಗಳೂರಿನಲ್ಲಿ ಒಂದೇ ಕಡೆ ಕೆಲಸ ಮಾಡುವಾಗ ಪರಿಚಯವಾಗಿದ್ದರು. ಈ ಪರಿಚಯ ಅನೈತಿಕ ಸಂಬಂಧಕ್ಕೆ ಕಾರಣವಾಗಿತ್ತು. 2 ವರ್ಷದ ಬಳಿಕ ಇವರ ಸಂಬಂಧ ತಿಳಿದ ನಾಗರಾಜ್ ಯುವಕ ಸಿದ್ದಪ್ಪನನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ . ಈ ಬಗ್ಗೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ - ಲಾರಿ ನಡುವೆ ಡಿಕ್ಕಿ: ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಇಂಡಸ್ಟ್ರಿಯಲ್ ಏರಿಯಾದ ಬಿಜಾಪುರ್ - ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಯಾದಗಿರಿ ತಾಲೂಕಿನ ಮಿಯಾಸ್ಪುರ್ ಗ್ರಾಮದ ಭೀಮೇಶ್ ಮೃತ ಬೈಕ್ ಸವಾರ ಎಂದು ತಿಳಿದು ಬಂದಿದೆ.

ಬೈಕ್​ಗೆ ಡಿಕ್ಕಿ ಹೊಡೆಯಲು ಲಾರಿ ಚಾಲಕನ ಅತಿ ವೇಗವೇ ಈ ದುರ್ಘಟನೆಗೆ ಕಾರಣವಾಗಿದೆ ಎಂದು ಸ್ಥಳದಲ್ಲಿದ್ದವರ ಆರೋಪವಾಗಿದೆ. ಅಪಘಾತದ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ:3 ಡೋಸ್​ ಲಸಿಕೆ ಪಡೆದ ಬಾಲಕಿ ರೇಬಿಸ್​ಗೆ ಬಲಿ.. ವ್ಯಾಕ್ಸಿನ್​ ಗುಣಮಟ್ಟದ ಮೇಲೆ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.