ಯಾದಗಿರಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನೂತನ ಸಚಿವ ಶ್ರೀರಾಮುಲು ಹಾಗೂ ಪ್ರಭು ಚವ್ಹಾಣ ಪ್ರವಾಹ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.
ನೂತನ ಸಚಿವ ಶ್ರೀರಾಮುಲು ಹಾಗೂ ಪ್ರಭು ಚವ್ಹಾಣ ನೇತೃತ್ವದ ನಿಯೋಗ ಜಿಲ್ಲೆಗೆ ಆಗಮಿಸಿ ಸಂತ್ರಸ್ಥರ ಮನೆಗಳಿಗೆ ಭೇಟಿ ನೀಡಿದರು. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಹ ಸಂತ್ರಸ್ಥರ ಮನೆಗಳಿಗೆ ಭೇಟಿ ನೀಡಲು ಸೂಚಿಸಿದ್ದಾರೆ. ಹೀಗಾಗಿ ಸಂತ್ರಸ್ಥರು ಚಿಂತಿಸದಿರಿ. ನಿಮ್ಮಗೆಲ್ಲಾ ಒಳ್ಳೆಯದಾಗುತ್ತದೆ ಎಂದು ಕೊಳ್ಳೂರ ಗ್ರಾಮಸ್ಥರಿಗೆ ಹೇಳಿದರು.
ಬಳಿಕ ಸಂತ್ರಸ್ಥರಿಗೆ ಮನೆ ನೀಡುವಂತೆ ಹಾಗೂ ಪ್ರವಾಹದಲ್ಲಿ ಕೊಚ್ಚಿಕೊಂಡ ಹೋದ ಆಸ್ತಿ-ಪಾಸ್ತಿಗಳಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.