ಸುರಪುರ : ಆಸ್ತಿಗಾಗಿ ಅಕ್ಕನ ಗಂಡನನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ.
ಮಾಲಗತ್ತಿ ಗ್ರಾಮದ ರಂಗಯ್ಯ ಗುತ್ತೇದಾರ್ (49 ವರ್ಷ) ಕೊಲೆಯಾದ ದುರ್ದೈವಿ. ರಂಗಯ್ಯನ ಮಗಳನ್ನೇ ಮದುವೆಯಾದ ಶರಣಗೌಡ ಗುತ್ತೇದಾರ್ ಎಂಬ ವ್ಯಕ್ತಿ, ತನ್ನ ಅಕ್ಕನನ್ನು ಮದುವೆ ಮಾಡಿಕೊಟ್ಟಿದ್ದ ರಂಗಯ್ಯ ಎಂಬುವರಿಗೆ ಹಿಂಬದಿಯಿಂದ ಕ್ರಷರ್ ವಾಹನದಲ್ಲಿ ಗುದ್ದಿಸಿದ್ದಾನೆ.
ಪರಿಣಾಮ ರಂಗಯ್ಯ ಕೆಳಗೆ ಬಿದ್ದಿದ್ದು, ಆರೋಪಿ ಮಾರಕಾಸ್ತ್ರದಿಂದ ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಆರೋಪಿ ಶರಣಗೌಡ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಕೆಂಬಾವಿ ಪಿಎಸ್ಐ ಸುದರ್ಶನ್ ರೆಡ್ಡಿ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಲಖನೌ ವಿವಿಗೆ ನಾಳೆ ನೂರು ವರ್ಷ.. ಪ್ರಧಾನಿಯಿಂದ ಸ್ಮರಣಾರ್ಥ ನಾಣ್ಯ, ಸ್ಟ್ಯಾಂಪ್ ಬಿಡುಗಡೆ