ಸುರಪುರ: ಸುರಪುರ ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಮನೆಯ ಬಳಿಯ ಚರಂಡಿ ನೀರಲ್ಲಿ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ.
ಆಲ್ದಾಳ ಗ್ರಾಮದ ಮಾನಪ್ಪ ಹುಲ್ಕಲ್ ಸೂರಮ್ಮ ಹುಲ್ಕಲ್ ಎಂಬ ದಂಪತಿ ಯಲ್ಲಾಲಿಂಗ ಎಂಬ ಒಂದು ವರ್ಷ ಮೂರು ತಿಂಗಳಿನ ಮಗು ಆಟವಾಡುತ್ತಾ ಹೋಗಿ ಚರಂಡಿ ನೀರಲ್ಲಿ ಬಿದ್ದಿದ್ದು ಪೋಷಕರು ನೋಡದೇ ಇದ್ದುದರಿಂದ ಕೆಲ ಸಮಯ ನೀರಲ್ಲೇ ಇದೆ.
ನಂತರ ನೋಡಿ ಮಗುವನ್ನು ಸುರಪುರ ಆಸ್ಪತ್ರೆಗೆ ಕರೆತಂದರೂ, ಮಗು ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದೆ. ಮುದ್ದಾದ ಮಗುವನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಎಲ್ಲರ ಕಣ್ಣಲ್ಲು ನೀರು ತರಿಸಿತು.