ETV Bharat / state

ಜನರ, ಶಾಸಕರ ಮನಸ್ಸು ಗೆದ್ದಿದ್ರೆ ಹೆಚ್​​ಡಿಕೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ: ಶಾಸಕ ರಾಜುಗೌಡ - ಹೆಚ್​​ಡಿಕೆ ವಿರುದ್ಧ ಶಾಸಕ ರಾಜುಗೌಡ ಹೇಳಿಕೆ

ಭಯೋತ್ಪಾದಕರ, ನಕ್ಸಲ್​ರ ಫೋನ್ ಟ್ಯಾಪ್ ಮಾಡಬೇಕಿತ್ತು. ಆದ್ರೆ ರಾಜಕೀಯ ಸ್ವಾರ್ಥಕ್ಕಾಗಿ ತಮ್ಮದೇ ಸಮುದಾಯದ ಪ್ರಸನ್ನಾಂದಪುರಿ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಿಸಿರುವದು ಸರಿಯಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಕುರಿತು ಶಾಸಕ ರಾಜುಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಸುರಪುರ ಶಾಸಕ ರಾಜುಗೌಡ
author img

By

Published : Nov 4, 2019, 7:47 PM IST

ಯಾದಗಿರಿ: ಹೆಚ್ ಡಿ ಕುಮಾರಸ್ವಾಮಿಯವರು ಜನರ, ಶಾಸಕರ ಮನಸ್ಸು ಗೆದ್ದಿದ್ರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಸುರಪುರ ಶಾಸಕ ರಾಜುಗೌಡ ಅಭಿಪ್ರಾಯಪಟ್ಟಿದ್ದಾರೆ.

ಸುರಪುರ ಶಾಸಕ ರಾಜುಗೌಡ

ಸಮ್ಮಿಶ್ರ ಸರ್ಕಾರದ ಕಾಲಾವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಟ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್​​ಡಿಕೆ ಫೋನ್ ಟ್ಯಾಪ್ ಮಾಡಿಸುವ ಬದಲು ಜನರ ಸಮಸ್ಯೆಗಳನ್ನ ಟ್ಯಾಪ್ ಮಾಡಬೇಕಿತ್ತು. ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಕದ್ದಾಲಿಕೆ ಮಾಡಿದ್ದಾರೆ. ಆದರೂ ಸರ್ಕಾರ ಉಳಿಯಲಿಲ್ಲ. ಉಪ್ಪು ತಿಂದವರು‌ ನೀರು ಕುಡಿಯಲೇಬೇಕು. ಸಿಬಿಐ ತನಿಖೆಯಿಂದ ಸತ್ಯ ಬೆಳಕಿಗೆ ಬರುತ್ತದೆ ಎಂದರು.

ಅಂದಿನ ಸಮ್ಮಿಶ್ರ ಸರ್ಕಾರ ಭಯೋತ್ಪಾದಕರ, ನಕ್ಸಲ್​ರ ಫೋನ್ ಟ್ಯಾಪ್ ಮಾಡಬೇಕಿತ್ತು. ಆದ್ರೆ ರಾಜಕೀಯ ಸ್ವಾರ್ಥಕ್ಕಾಗಿ ತಮ್ಮದೇ ಸಮುದಾಯದ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.

Intro:ಹೆಚ್ ಡಿ ಕುಮಾರಸ್ವಾಮಿ ಜನರ ಹೃದಯ, ಶಾಸಕರ ಹೃದಯ ಗೆದ್ದಿದ್ರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಅಂತ ಯಾದಗಿರಿಯಲ್ಲಿಂದು ಶಾಸಕ ರಾಜು ಗೌಡ ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ವಿರುದ್ದ ಆಕ್ರೋಶ ವ್ಯಕ್ತಪಡೆಸಿದ್ದಾರೆ. ಸಮ್ಮಿಶ್ರ ಸರ್ಕಾರದ ಕಾಲಾವಧಿಯಲ್ಲಿ ನಡೆದ ಫೋನ್ ಟ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಡಿಕೆ ಫೋನ್ ಟ್ಯಾಪ್ ಮಾಡಿಸುವ ಬದಲು ಜನರ ಸಮಸ್ಯೆಗಳನ್ನ ಟ್ಯಾಪ್ ಮಾಡ್ಬೇಕಿತ್ತು ಅಂತ ಮಾಧ್ಯಮಗಳ ಎದರುಗಡೆ ಹೆಚ್ ಡಿ ಕೆ ವಿರುದ್ದ ಕಿಡಿ ಕಾರಿದ್ದರೆ..ಮೈತ್ರಿ ಸರಕಾರದಲ್ಲಿ ಪ್ರಸನ್ನಾಂದಪುರಿ ಸ್ವಾಮಿಜಿ ಫೋನ್ ಕದ್ದಾಲಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕ ರಾಜುಗೌಡ, ಭಯೋತ್ಪಾದಕರ, ನಕ್ಸಲ್ ರ ಫೋನ್ ಟ್ಯಾಪ್ ಮಾಡಬೇಕಿತ್ತು ಅದರ ಬದಲು ಹೆಚ್ ಡಿಕೆ ಸ್ವಾಮಿಗಳ ಫೋನ್ ಕದ್ದಾಲಿಕೆ ಮಾಡಿಸಿರುವದು ಸರಿಯಲ್ಲ ಅಂತ ತಿಳಿಸಿದ್ದಾರೆ.

Body:ಸರಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ‌ಫೋನ್ ಕದ್ದಾಲಿಕೆ ಮಾಡಿದ್ದಾರೆ, ರಾಜಕೀಯ, ಸ್ವಾರ್ಥಕ್ಕಾಗಿ ಸ್ವಾಮೀಜಿ ಗಳ ಫೋನ್ ಕದ್ದಾಲಿಕೆ ಮಾಡಿದ್ದು ಸರಿಯಲ್ಲ, ಉಪ್ಪು ತಿಂದವರು‌ ನೀರು ಕುಡಿಯಲೇ ಬೇಕು, ಸಿಬಿಐ ತನೆಖೆಯಿಂದ ಸತ್ಯ ಬೆಳಕಿಗೆ ಬರುತ್ತದೆ ಅಂತ ತಿಳಿಸಿದರು. ಕುಮಾರಸ್ವಾಮಿಗಳು ತಮ್ಮ ಸಮುದಾಯದ ಸ್ವಾಮಿಗಳದ್ದೆ ಫೋನ್ ಕದ್ದಾಲಿಕೆ ಮಾಡಿದ್ದಾರೆ, ಇನ್ನು ಬೇರೆ ಸಮುದಾಯದ ಸ್ವಾಮಿಗಳ ಫೋನ್ ಟ್ಯಾಪ್ ಮಾಡದೆ ಇರುತ್ತಾರಾ..?? ಅಂತ ಹೆಚ್ಡಿ ಕೆ ಬಗ್ಗೆ‌ ಅನುಮಾ ವ್ಯಕ್ತಪಡೆಸಿದ್ದಾರೆ..

Conclusion:ಕುಮಾರಸ್ವಾಮಿ ರಾಜಕೀಯ ಬೇಕಾದ್ರೆ ಮಾಡಲಿ, ಆದರೆ ಫೋನ್ ಕದ್ದಾಲಿಕೆ ಮಾಡಿದ್ದು ಸರಿಯಲ್ಲ ಪೋನ್ ಕದ್ದಾಲಿಕೆ ಮಾಡಿದರೂ ಕುಮಾರಸ್ವಾಮಿ ಸರಕಾರ ಉಳಿಯಲಿಲ್ಲ ಅಂತ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಡಿಕೆ ವಿರುದ್ದ ಸುರಪುರ ಶಾಸಕ ರಾಜುಗೌಡ ಹರಿಹಾಯ್ದರು....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.